ಚೆಯ್ಯ0ಡಾಣೆ ಜ 11. ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಎಡಪಾಲದಲ್ಲಿ ನಡೆಯಿತು.
ಶಾಖೆಯ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಶಮೀಮುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಳಿಕ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿರವರ ನೇತೃತ್ವದಲ್ಲಿ 2024 -26 ರ ಅವಧಿಯ ಹೊಸ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಮೀಮುದ್ದೀನ್ ಎಂ.ಎ,ಪ್ರಧಾನ ಕಾರ್ಯದರ್ಶಿಯಾಗಿ ಜಲೀಲ್ ಕುರಿಕಡೆ,ಕೋಶಾಧಿಕಾರಿಯಾಗಿ ಶರಫುದ್ದೀನ್, ಕಾರ್ಯದರ್ಶಿಯಾಗಿ ಶಕೀಲ್,ಉಪಾಧ್ಯಕ್ಷರುಗಳಾಗಿ ಶಬೀರ್ ಫೈಝಿ, ಹಾರಿಸ್ ಕೆ.ಯು, ಜಂಟಿ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಸಿನಾನ್, ಮೊಹಮ್ಮದ್ ಝಇನ್ ರವರನ್ನು ಆಯ್ಕೆ ಮಾಡಲಾಯಿತು.
ಕ್ಲಸ್ಟರ್ ಮತ್ತು ವಲಯ ಕೌನ್ಸಿಲರ್ ಗಳಾಗಿ ಹನೀಫ್ ಫೈಝಿ, ಹಾರಿಸ್ ಬಾಖವಿ, ರಾಫಿ ಕೆ.ಕೆ, ಜಬ್ಬಾರ್ ಫೈಝಿ, ಫಯಾಜ್ ಸಿ.ಯು, ಸಯೀದ್ ಫೈಝಿ, ಶಾಫಿ ಫೈಝಿ, ಅಜ್ಮಲ್ ಪಿ.ಎ ರವರನ್ನು ಆಯ್ಕೆ ಮಾಡಲಾಯಿತು.
ತ್ವಲಬಾ ವಿಂಗ್ ಉಸ್ತುವಾರಿ ಯಾಗಿ ಜಮಾಲ್ ಸಿ.ಎ, ಇಬಾದ್ ವಿಂಗ್ ಉಸ್ತುವಾರಿ ಯಾಗಿ ಸಿದ್ದೀಕ್ ಕೆ.ಎಂ, ಸಹಜಾರಿ ಉಸ್ತುವಾರಿಯಾಗಿ ನಿಜಾಮುದ್ದೀನ್ ಕೆ.ಯು, ವಿಖಾಯ ಉಸ್ತುವಾರಿಯಾಗಿ ಅಸ್ಲಮ್, ಸ್ವರ್ಗಲಯ ಉಸ್ತುವಾರಿಯಾಗಿ ಸಫ್ವಾನ್ , ಮೀಡಿಯಾ ವಿಂಗ್ ಉಸ್ತುವಾರಿಯಾಗಿ ಶಬೀರ್ ಹೆಚ್.ಎಲ್, ಹಾಗೂ ಟ್ರೆಂಡ್ ಉಸ್ತುವಾರಿಯಾಗಿ ಇಷ್ಫಾಕ್ ಡಿ.ಐ ರವರನ್ನು ಸರ್ವಾನುಮತದಿಂದ ಆಯ್ಕೆಯನ್ನು ಮಾಡಲಾಯಿತು.
Congratulations and all the best one and all