ಕಡಂಗ ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನ

ಕಡಂಗ: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಇವರ ವತಿಯಿಂದ ಕಡಂಗ ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನವನ್ನು ಪಟ್ಟಣದ ಮುಖ್ಯರಸ್ತೆಯಲ್ಲಿ ನಿರ್ವಹಿಸಾಲಾಯಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಈ ಸಂದರ್ಭದಲ್ಲಿ ಮಾತನಾಡಿದ ವಿರಾಜಪೇಟೆ ಠಾಣಾಧಿಕಾರಿ ವಾಣಿ ಶ್ರೀ ತಮ್ಮ ತಮ್ಮ ವಾಹನಗಳ ಎಲ್ಲಾ ರಿತಿಯ ದಾಖಲೆಗಳು ಸ್ಪಷ್ಟವಾಗಿ ಇಟ್ಟುಕೊಳ್ಳಿ ಇನ್ಸೂರೆನ್ಸ್ ಮತ್ತು ಆರ್ ಸಿ ಬುಕ್ ಗಳು ಕಡ್ಡಾಯವಾಗಿ ಸರಿಪಡಿಸಿಕೊಳ್ಳಬೇಕು , ಬೈಕ್ ಸವಾರರು ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಹಾಕಿ ಸಂಚಾರ ನಿಯಮವನ್ನು ಪಾಲಿಸಿ ಸಂಚಾರ ಮಾಡಬೇಕಾಗಿದೆ ಮತ್ತು ಕಾರುಗಳಲ್ಲಿ ಚಾಲಕರು ಮುಂದಿನ ಸೀಟಿನಲ್ಲಿ ಕುಳಿತು ಕೊಳ್ಳುತ್ತಿರುವರು ಬೆಲ್ಟ್ಗಳನ್ನು ಕಡ್ಡಾಯವಾಗಿ ಧರಿಸಿ ವಾಹನ ಸಂಚಾರ ಮಾಡಬೇಕಾಗಿದೆ, ಎಲ್ಲಾ ರೀತಿಯ ಅಪಘಾತಗಳಿಂದ ರಕ್ಷಣೆ ಹೊಂದಲು ಚಾಲಕರು ಸಂಚಾರ ನಿಯಮವನ್ನು ಪಾಲಿಸಬೇಕಾಗಿದೆ ಎಂದು ನುಡಿದರು.

ಅದೇ ರೀತಿ ಕಡ0ಗ ಭಾಗದಲ್ಲಿರುವ ವಿದ್ಯಾರ್ಥಿಗಳು 18 ವರ್ಷಗಳಿಂದ ಕೆಳಗಡೆ ಇರುವ ವಿದ್ಯಾರ್ಥಿಗಳು ಅತಿ ವೇಗದಲ್ಲಿ ಬೈಕ್ ನಲ್ಲಿ ಸಂಚರಿಸುವುದು ಕಂಡುಬಂದಿದ್ದು ರಸ್ತೆ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿ ವಾಹನಗಳನ್ನು ಓಡಿಸುತ್ತಿರುವುದು, ದ್ವಿಚಕ್ರ ವಾಹನದಲ್ಲಿ ಮೂವರನ್ನು ಕುಳಿತುಕೊಂಡು ಸಂಚಾರ ಮಾಡುತ್ತಿದ್ದು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಅವರ ಪೋಷಕರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿಗಳಾದ ಕಿರಣ್ ಕುಮಾರ್ ಸರ್, ಸಂದೀಪ್ ಸರ್ಮೂರ್ತಿ ಸರ್,ಅನಿತ ಮೇಡಂ, ಮತ್ತು ಮಹಿಳಾ ಅಧಿಕಾರಿಗಳು ಊರಿನ ಪ್ರಮುಖರಾದ ಸೌಕತ್, ರಜಾಕ್ ಬೋಪಣ್ಣ, ತಮ್ಮು, ಜಲಾಲ್ ಜುನೈದ್, ನವೀನ, ಮತ್ತು ಗ್ರಾಮಸ್ಥರು ಆಟೋ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

0 0 votes
Article Rating
Subscribe
Notify of
guest
0 Comments
Inline Feedbacks
View all comments