ಶ್ರೀ ರಾಮನ ನೆನೆಯಿರಿ….

Reading Time: 2 minutes

ಶ್ರೀ ರಾಮನ ನೆನೆಯಿರಿ..🙏

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ರಾಮ ಎನ್ನಲು ಭಯ ಬೇಡ ನಿನಗೆ..
ರಾಮ ಎಂದರೆ ಭಯವಿಲ್ಲ ಎನಗೆ
ಹನುಮನಿರುವನು ಜೊತೆಯಲ್ಲಿ ನಮಗೆ
ಸೀತೆ ಕೊಡುವಳು ಭರವಸೆಯ ಬಾಳ್ಗೆ.

ಹರೆ ರಾಮ್ ಹರೇ ರಾಮ್
ರಾಮ ರಾಮ ಹರೆ ಹರೇ…
ಹರೆ ಹನುಮ್ ಹರೇ ಹನುಮ್
ಹನುಮ ಹನುಮ ಹರೆ ಹರೇ…

ರಾಮ ಲಲ್ಲನಿಗೆ ಆರತಿ ಎತ್ತಿರಿ..
ಲಕ್ಷ್ಮಣ ಸಹೋದರನಿಗೆ ಉಘೇ ಎನ್ನಿರಿ
ರಾಮ ಸ್ಮರಣೆಯ ಮನದಲ್ಲಿ ಮಾಡಿರಿ
ಶ್ರೀರಾಮನ ನೆನೆದರೆ ಭಯವಿಲ್ಲ ನೋಡಿ.

ಹರೆ ರಾಮ್ ಹರೇ ರಾಮ್
ರಾಮ ರಾಮ ಹರೆ ಹರೇ…
ಹರೆ ಹನುಮ್ ಹರೇ ಹನುಮ್
ಹನುಮ ಹನುಮ ಹರೆ ಹರೇ…

ಜಯ ಹನುಮ ಜ್ಞಾನ ಗುಣ ಸಾಗರ..
ರಾಮದೂತ ಅತುಲಿತ ಬಲಧಾಮಾ
ಅಂಜನಿ ಪುತ್ರ ಪವನಸುತ ನಾಮಾ
ಮಹಾವೀರ ವಿಕ್ರಮ ಭಜರಂಗಿ ಹನುಮಾ.

ಹರೆ ರಾಮ್ ಹರೇ ರಾಮ್
ರಾಮ ರಾಮ ಹರೆ ಹರೇ…
ಹರೆ ಹನುಮ್ ಹರೇ ಹನುಮ್
ಹನುಮ ಹನುಮ ಹರೆ ಹರೇ…

ಲಂಕಕ್ಕೆ ಹೊರಟಿತು ಕಪಿಸೇನೆ ಅಂದು..
ಅಯೋಧ್ಯೆಗೆ ಹೊರಟಿದೆ ರಾಮಸೇನೆ ಇಂದು
ರಾಮ ಎನ್ನಲು ಭಯ ಬೇಡ ನಿನಗೆ
ರಾಮ ಎಂದರೆ ಭಯವಿಲ್ಲ ಎನಗೆ.

ಹರೆ ರಾಮ್ ಹರೇ ರಾಮ್
ರಾಮ ರಾಮ ಹರೆ ಹರೇ…
ಹರೆ ಹನುಮ್ ಹರೇ ಹನುಮ್
ಹನುಮ ಹನುಮ ಹರೆ ಹರೇ…

✍️ಚಮ್ಮಟೀರ ಪ್ರವೀಣ್ ಉತ್ತಪ್ಪ
📲9880967573

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.