ಚೆಯ್ಯಂಡಾಣೆ, ಫೆ 7. ಕೇರಳ ರಾಜ್ಯದ ಪಯ್ಯವೂರ್ ಈಶ್ವರ ದೇವಸ್ಥಾನದ ವಾರ್ಷಿಕ ಹಬ್ಬವು ಇದೇ ತಿಂಗಳು ದಿನಾಂಕ 12.02.2024 ರಿಂದ 23.02.2024 ವರೆಗೆ ನಡೆಯಲಿದೆ.
ಈ ವಾರ್ಷಿಕ ಹಬ್ಬಕ್ಕೆ ತಕ್ಕ ಮುಖ್ಯಸ್ಥರಾದ ಬೋವ್ವೆರಿಯಂಡ ಮತ್ತು ಮುಂಡಿಯ್ಯೊಳಂಡ ಕುಟುಂಬಸ್ಥರು ದಿನಾಂಕ 10.02.2024 ರ ಶನಿವಾರ ದಂದು ಬೆಳಿಗ್ಗೆ ಚೇಲವಾರ ಕಬ್ಬೆ ಬೆಟ್ಟದ ಮೂಲಕ ಕಾಲು ನಡಿಗೆಯಲ್ಲಿ ಕೇರಳದ ಪಯ್ಯವೂರ್ ಈಶ್ವರ ದೇವಸ್ಥಾನಕ್ಕೆ ಎತ್ತು ಪೋರಾಟ ಮೂಲಕ ಅಕ್ಕಿ ತಲುಪಿಸಳಿದ್ದು ಸೋಮವಾರ ಬೆಳಿಗ್ಗೆ ಅಕ್ಕಿಯನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ದಿನಾಂಕ 21.02.2024 ರಂದು ನಾಡಿನ ಭಕ್ತರು ಎತ್ತು ಪೋರಾಟದ ಮೂಲಕ ದೇವರ ಸನ್ನಿದಾನದಲ್ಲಿ ಅಕ್ಕಿಯನ್ನು ಸಮರ್ಪಣೆ ಮಾಡಲಿದ್ದು ಅಂದಿನಿಂದ ಎಂಟು, ಒಂಬತ್ತು ಮತ್ತು ಹತ್ತನೇ ಉತ್ಸವವೂ ನಡೆಯಲಿದ್ದು ನಾಡಿನ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸಬೇಕಾಗಿ ದೇವಸ್ಥಾನದ ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.