ನಾಪೋಕ್ಲು: ಎಮ್ಮೆಮಾಡು ಯುಎಇ ಆನಿವಾಸಿ ಒಕ್ಕೂಟದ 5ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದುಬೈನಲ್ಲಿ ನಡೆಯಿತು.
ದುಬೈಯ ದೇರ ಲಂಡನ್ ಹೋಟೆಲ್ ನಲ್ಲಿ ಜಲೀಲ್ ನಿಝಾಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2024-25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸಿ.ಎಚ್. ಹಂಸ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎ. ಸೈದು, ಉಪಾಧ್ಯಕ್ಷರಾಗಿ ಸಿ.ಎ. ಉಸ್ಮಾನ್, ಸಹಕಾರ್ಯದರ್ಶಿಯಾಗಿ ಸಿ.ಎ. ಹಾರಿಫ್, ಕೋಶಾಧಿಕಾರಿಯಾಗಿ ಎನ್.ಎ. ಗಫೂರ್,ಸಲಹಾ ಸಮಿತಿ ಸದಸ್ಯರಾಗಿ ಜಲೀಲ್ ನಿಝಾಮಿ,ಶಫೀಕ್ ಹಿಶಾಮಿ, ನಾಸಿರ್ ಸಅದಿ, ಸಮಿತಿ ಸದಸ್ಯರಾಗಿ ಬಿ.ಯು. ಹಂಸ, ಝುಬೈರ್ ಕೂರುಳಿ,ಆಲಿಕ್ಕ,ಸಲಾಂ ಹಿಮಮಿ, ಶಬೀರ್ ನೆರೂಟ್,ಹಫೀಲ್ ಚಂಬರಂಡ,ಅಶ್ರಫ್ ಮಾಹಿಂಬರೆ,ಮೂಸ ಪರಂಬು,ಝಕರಿಯ, ಹಾರಿಸ್, ಅಶ್ರಫ್ ಕೂರುಳಿ,ನೌಶಾದ್ ಮಂದಾಲ್,ಕೆ. ಎಂ. ಜುನೈದ್,ನೌಹರ್,ಕೆ.ಯು. ಉಬೈದ್ ಇವರನ್ನು ನೂತನ ಸಮಿತಿಗೆ ಆಯ್ಕೆಮಾಡಲಾಯಿತು. ಈ ಸಂದರ್ಭ ಸಭೆಯಲ್ಲಿ ದುಬೈನಲ್ಲಿರುವ ಎಮ್ಮೆಮಾಡುವಿನ ಗಣ್ಯ ವ್ಯಕ್ತಿಗಳು ಮತ್ತಿತರರು ಹಾಜರಿದ್ದರು.