ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಬಿ.ಶೆಟ್ಟಿಗೇರಿ(Gram Panchayat: B. Shettigeri)
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಕೊಲ್ಲಿರ ಉತ್ತಪ್ಪ ಬೋಪ್ಪಣ್ಣ ಅವರು “ನಾನು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆ ಎಂದರೆ ನಮ್ಮ ತಂದೆಯವರಾದ ಕೊಲ್ಲಿರ ಉತ್ತಪ್ಪನವರು. ನಮ್ಮ ತಂದೆಯವರು ಅಂದಿನ ರಾಜಕೀಯ ಧುರೀಣರುಗಳಾದ ಕೊಡಗು ಜಿಲ್ಲಾ ಪರಿಷತ್‌ನ ಮೊದಲ ಅಧ್ಯಕ್ಷರಾದ ಜೆ.ಕರುಂಬಯ್ಯ, ಎ.ಕೆ.ಸುಬ್ಬಯ್ಯ, ಸಿ.ಕೆ.ಸೋಮಯ್ಯ ಮುಂತಾದವರ ಒಡನಾಡಿಗಳಾಗಿದ್ದರು. ಆ ಸಮಯದಲ್ಲಿ ನಮ್ಮ ತಂದೆಯವರು ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು. 2002ರಲ್ಲಿ ನಮ್ಮ ತಂದೆಯವರು ತೀರಿಕೊಂಡ ನಂತರ ನನ್ನನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಸಮಿತಿ ಸದಸ್ಯರಾಗಿ ಪಕ್ಷದ ಹಿರಿಯರು ನೇಮಕ ಮಾಡಿದ್ದರು. 2003ರ ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಟ್ಟಂಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದೆ. 2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕುಟ್ಟಂದಿ-ಕೊಂಗಾಣ ವಾರ್ಡ್‌ನಿಂದ ಗೆಲುವನ್ನು ಸಾಧಿಸಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಸದಸ್ಯನಾಗಿ ಆಯ್ಕೆಗೊಂಡೆ. 2023ರಲ್ಲಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದೇನೆ.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 30 ರಿಂದ 40 ಕುಟುಂಬಗಳ ಮನೆಗಳಲ್ಲಿರುವ ಕುಡಿಯುವ ನೀರಿನ ಬಾವಿಗಳಿಗೆ ರಿಂಗ್ ಗಳನ್ನು ಅಳವಡಿಸಿ ಕೊಡಲಾಗಿದೆ. ನರೇಗಾದಿಂದ 35 ಲಕ್ಷದಷ್ಟು ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ಪೂರೈಸಲಾಗಿದೆ. ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕುಟ್ಟಂದಿ ಗ್ರಾಮದ ಸಮುದಾಯ ಭವನದಲ್ಲಿ 5 ಲಕ್ಷ ವೆಚ್ಚದಲ್ಲಿ ಜಿಮ್ ಕೇಂದ್ರ ಪ್ರಾರಂಭಿಸಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿರುವ 4 ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಸಂಪರ್ಕ, ಕೊಳವೆ ಬಾವಿಗಳನ್ನು ತೋಡಿ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ್ ಬೀದಿ ದೀಪಗಳ ಅಳವಡಿಕೆ, ವಿದ್ಯುತ್ ಸಂಪರ್ಕದ ವ್ಯವಸ್ಥೆ ಹಾಗೂ ಸಮುದಾಯ ಶೌಚಾಲಯಗಳ ನಿರ್ಮಾಣವನ್ನು ಮಾಡಿಕೊಡಲಾಗಿದೆ.
ಅಮೃತ ಸರೋವರ ಯೊಜನೆಯಡಿಯಲ್ಲಿ ಬಿ.ಶೆಟ್ಟಿಗೇರಿಯಲ್ಲಿರುವ ಭದ್ರಕಾಳಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಅಲ್ಲಿ ಧ್ವಜ ಸ್ಥಂಭ, ವಿಹಾರಕ್ಕೆ ಬರುವವರು ಕುಳಿತು ಕೊಳ್ಳಲು ಬೆಂಚ್, ಇಂಟರ್ ಲಾಕ್ ಅಳವಡಿಕೆ ಹಾಗೂ ಸುತ್ತಲು ಗಿಡ-ಮರಗಳನ್ನು ನೆಡಲಾಗಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ. ಕೆರೆಯಲ್ಲಿ ಈ ಬಾರಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ತಂದು ಬಿಡಲಾಗಿದೆ.
ಕುಟ್ಟಂದಿ ಗ್ರಾಮದಲ್ಲಿ 15 ಕುಟುಂಬಗಳ ಐನ್ ಮನೆಗಳಿಗೆ ಹೋಗುವ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿಯೊಂದು ಮನೆಗಳಿಗೆ ವೈಯಕ್ತಿಕ ಶೌಚಾಲಯಗಳು ಹಾಗೂ ಇಂಗು ಗುಂಡಿಗಳನ್ನು ನಿರ್ಮಿಸಿಕೊಡಲಾಗಿದೆ.
ಬಿ.ಶೆಟ್ಟಿಗೇರಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ, 1.50 ಲಕ್ಷ ವೆಚ್ಚದಲ್ಲಿ ಮಳೆ ನೀರು ಕೊಯ್ಲು ಕಾಮಗಾರಿ ಹಾಗೂ 1.50 ಲಕ್ಷ ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ ಕಾಮಗಾರಿಗಳನ್ನು ಪೂರೈಸಲಾಗಿದೆ. ಕುಟ್ಟಂದಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1.50 ಲಕ್ಷ ವೆಚ್ಚದಲ್ಲಿ ಅಂಗವಿಕಲ ಸ್ನೇಹಿ ಶೌಚಾಲಗಳ ನಿರ್ಮಾಣ, 50 ಸಾವಿರ ವೆಚ್ಚದಲ್ಲಿ ತೆರೆದ ಬಾವಿ ದುರಸ್ತಿ ಕಾಮಗಾರಿ ಹಾಗೂ 1 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಮಾಡಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿಗೆ ಘಟಕವೊಂದನ್ನು ನಿರ್ಮಿಸಲಾಗಿದೆ. ಅದರಲ್ಲಿ 5 ಲಕ್ಷ ವೆಚ್ಚದಲ್ಲಿ ಕಟ್ಟಡ, 5ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, 5 ಲಕ್ಷ ವೆಚ್ಚದಲ್ಲಿ ಕಸ ಸಂಗ್ರಹದ ವಾಹನ ಖರೀದಿ ಹಾಘು 5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಒಟ್ಟು 20 ಲಕ್ಷದಷ್ಟು ಕಾಮಗಾರಿಗಳನ್ನು ಪೂರೈಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿನ 5 ಅಂಗನವಾಡಿಗಳಿಗೆ ತಡೆಗೋಡೆ ನಿರ್ಮಾಣ, ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದ್ದು ಹಾಗೆ ಎಲ್ಲಾ ರೀತಿಯ ಮೂಲ ಶೌಕರ್ಯಗಳನ್ನು ಮಾಡಿಕೊಡಲಾಗಿದೆ.
ಶಾಸಕ ಪೊನ್ನಣ್ಣನವರ ಶಾಕರ ಅನುಧಾನದಿಂದ ಬಿ.ಶೆಟ್ಟಿಗೇರಿ ಮತ್ತು ಕೊಂಗಾಣ ಮುಖ್ಯ ರಸ್ತೆಯನ್ನು 1 ಕೋಟಿ 20 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿದೆ. ಕುಟ್ಟಂದಿ ಮತ್ತು ಗುಡ್ಡೆನಾಡು ರಸ್ತೆಯನ್ನು 50ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ಪೂರ್ಣಗೊಳಿಸಲಾಗಿದೆ. ಬಿ.ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇವಾಲಯಗಳ ರಸ್ತೆ ಅಭಿವೃದ್ಧಿಗಾಗಿ ಒಟ್ಟು 20 ಲಕ್ಷದಷ್ಟು ವಿನಿಯೋಗಿಸಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.
ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯದ ಅಭಿವೃದ್ಧಿಗೆ 2 ಲಕ್ಷ ರೂಗಳು, ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಕಚೇರಿ ಮೇಲ್ಬಾಗ ಸೋಲಾರ್ ರೋಪ್ ಅಳವಡಿಕೆಗೆ 3,65,000, ಗ್ರಾಮ ಪಂಚಾಯಿತಿ ಕಚೇರಿ ಅಭಿವೃದ್ಧಿಗೆ ಮೂರು ಲಕ್ಷ ರೂಗಳು, ಗ್ರಾಮ ಪಂಚಾಯತ್ ಮುಂಭಾಗ ಉದ್ಯಾನವನ ನಿರ್ಮಿಸಲು ಎರಡು ಲಕ್ಷದ 50,000, ಮೂರು ವರ್ಷದಲ್ಲಿ ಉದ್ಯೋಗ ಖಾತ್ರಿಯಲ್ಲಿ ಒಂದು ಕೋಟಿ 50 ಲಕ್ಷ ರೂಗಳ ಕಾಮಗಾರಿ, ಪಂಚಾಯಿತಿ ನಿಧಿಯಲ್ಲಿ 20 ಲಕ್ಷ ರೂಗಳ ಕಾಮಗಾರಿ, 15 ನೇ ಹಣಕಾಸು ಯೋಜನೆಯಲ್ಲಿ 75 ಲಕ್ಷ ರೂಗಳ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.
ಶೇಕಡ 90% ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕುತ್ತುನಾಡು-ಬೇರಳಿನಾಡು ಶಾಲೆಯು ಬೀಳುವ ಹಂತದಲ್ಲಿದ್ದು, ಅದನ್ನು ದುರಸ್ಥಿ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದಿಂದ 30 ಲಕ್ಷದಷ್ಟು ಹಣವನ್ನು ಹೊಂದಿಸಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಕಾಮಗಾರಿಯು ಪ್ರಗತಿಯ ಹಂತದಲ್ಲಿದೆ.
ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯು ಕೊಡಗಿನಲ್ಲಿ ಚಿಕ್ಕ ಪಂಚಾಯಿತಿಯಾದರೂ ಗ್ರೇಡ್-1 ಪಂಚಾಯಿತಿಗಳಿಗಿಂತ ಕಮ್ಮಿ ಎನಿಸದೆ ಅಭಿವೃದ್ಧಿಯನ್ನು ಕಾಣುತ್ತಿದೆ. ಒಟ್ಟಿನಲ್ಲಿ ನಮ್ಮ ಗ್ರಾಮದ ಸರ್ವಾಂಗಿಣ ಅಭಿವೃದ್ದಿಯತ್ತ ನನ್ನ ಪ್ರಯತ್ನ ಸಾಗಿದೆ. ನನ್ನ ಈ ಎಲ್ಲಾ ಕಾರ್ಯಗಳಿಗೆ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಕೊಲ್ಲಿರ ಬೋಪ್ಪಣ್ಣನವರು ಕೊಡುಗೈ ದಾನಿಗಳಾಗಿದ್ದಾರೆ. ಸರಿ ಸುಮಾರು 6 ರಿಂದ 7 ಲಕ್ಷದಷ್ಟು ತಮ್ಮ ಸ್ವಂತ ಹಣದಿಂದ ಉದಾರ ಕೊಡುಗೆಗಳನ್ನು ನೀಡಿದ್ದಾರೆ. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಆಡಳಿತ ಕಚೇರಿ ಆವರದಲ್ಲಿ ತಮ್ಮ ಸ್ವಂತ ಹಣದಿಂದ ಉದ್ಯಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಪ್ರತಿ ತಿಂಗಳು ದೊರೆಯುವ ತಮ್ಮ ಪಂಚಾಯಿತಿಯ ಗೌರವಧನದಲ್ಲಿ ಸರಕಾರಿ ಹಾಗೂ ಕೆಲವೊಂದು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಪರಿಕರಗಳನ್ನು ಉದಾರವಾಗಿ ನೀಡುತ್ತಿದ್ದಾರೆ.
ಕೊಲ್ಲಿರ ಬೋಪ್ಪಣ್ಣನವರು ರಾಜಕೀಯ ಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕುಟ್ಟಂದಿ ಸಾಂಸ್ಕೃತಿಕ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜ ಕ್ಲಬ್‌ನ ನಿರ್ದೇಶಕರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಹಲವಾರು ದೇವಾಲಯಗಳ ಹಾಗೂ ಉತ್ಸವ ಸಮಿತಿಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿ ಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕೆಇಬಿ ಪ್ರೌಢಶಾಲೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಕ್ರೀಡಾಕೂಟಗಳಿಗೆ ತಮ್ಮ ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ.
ಕೊಲ್ಲಿರ ಉತ್ತಪ್ಪ ಬೋಪ್ಪಣ್ಣರವರ ಕುಟುಂಬ ಪರಿಚಯ:
ಕೊಲ್ಲಿರ ಬೋಪ್ಪಣ್ಣನವರ ತಂದೆ; ದಿವಂಗತ ಕೊಲ್ಲಿರ ಉತ್ತಪ್ಪ. ತಾಯಿ; ಕಾವೇರಮ್ಮ. ಪತ್ನಿ: ನಿರ್ಮಲಾನಮಿತಾ ಗೃಹಿಣಿಯಾಗಿದ್ದಾರೆ. ಹಿರಿಯ ಮಗ: ರಜತ್‌ನಾಣಯ್ಯ CA ವ್ಯಾಸಾಂಗ ನಿರತರಾಗಿದ್ದಾರೆ. ಮಗಳು: ನಿಕ್ಷಿತ್‌ಬೊಳ್ಳಮ್ಮ ಕಾನೂನು ಪದವಿ ವ್ಯಾಸಂಗ ನಿರತರಾಗಿದ್ದಾರೆ.
ಕೊಲ್ಲಿರ ಬೋಪ್ಪಣ್ಣನವರು ಪ್ರಸ್ತುತ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಟ್ಟಂದಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 15-07-2024