ತಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿನಂ. 37) ಮೂರ್ನಾಡು 31ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ

Reading Time: 7 minutes

ತಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿನಂ. 37) ಮೂರ್ನಾಡು 31ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಯುಧ ಪೂಜಾ ಸಮಾರಂಭವನ್ನು ಈ ವರ್ಷವೂ ಅತೀ ವಿಜೃಂಭಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಸಮಸ್ತ ಸಾರ್ವಜನಿಕರನ್ನು ಸಂತೋಷಪಡಿಸುವ ಉದ್ದೇಶದಿಂದ ದಿನಾಂಕ 11-10-2024ನೇ ಶುಕ್ರವಾರ ದಿವಸ ಅಪರಾಹ್ನ 2-00 ಗಂಟೆಗೆ ಅಲಂಕೃತ ವಾಹನಗಳಿಗೆ ಪೂಜಾ ಕಾರ್ಯಕ್ರಮ ನಂತರ 3-00 ಗಂಟೆಗೆ ಅಲಂಕೃತ ವಾಹನಗಳ ಮೆರವಣಿಗೆ

ರಸಿಕ ಆರ್ಟ್ಸ್ ಬೊಂಬೆ ಬಳಗ (ವಿಟ್ಲ) ರವರ ವಾದ್ಯಗೋಷ್ಠಿಯೊಂದಿಗೆ

ಸಂಜೆ 6-00 ಗಂಟೆಗೆ ಪಾಂಡಾಣೆ ಮೈದಾನದಲ್ಲಿ ನಿರ್ಮಿಸಿರುವ ಅಲಂಕೃತ ವೇದಿಕೆ ಮೇಲೆ ಅತಿಥಿಗಳ ಆಗಮನ,

ಸಂಜೆ 7-00 ರಿಂದ 8-00 ಗಂಟೆವರೆಗೆ ಮುಖ್ಯ ಅತಿಥಿಗಳಿಂದ ಆಯುಧ ಪೂಜೆಯ ವಿಶೇಷ ಭಾಷಣ ಮತ್ತು ಅಲಂಕೃತ ವಾಹನಗಳಿಗೆ ಬಹುಮಾನ ವಿತರಣೆ

ರಾತ್ರಿ 8-00 ಗಂಟೆಯಿಂದ ಆಗಮಿಸಿರುವಂತಹ ನಮ್ಮ ನೆಚ್ಚಿನ ಹಿತೈಷಿಗಳನ್ನು ಮತ್ತು ಈ ನಾಡಿನ ಸಮಸ್ತ ಜನರ ಮನ ತಣಿಸಲು

ಭದ್ರಾವತಿ ಬ್ರದರ್ಸ್ ಆರ್ಕೆಸ್ಟ್ರಾ ಮತ್ತು ಇವೆಂಟ್ಸ್ ನಡೆಯಲಿದೆ ಆದುದರಿಂದ ತಾವುಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.

ರಾತ್ರಿ 7-30 ಗಂಟೆಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.

ನೀವೂ ಬನ್ನಿ : ನಿಮ್ಮವರನ್ನೂ ಕರೆತನ್ನಿ

ಸರ್ವರಿಗೂ ಆದರದ ಸುಸ್ವಾಗತ.

ಇಂತಿ ವಿಶ್ವಾಸಿಗಳು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ) ಮೂರ್ನಾಡು.

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ. ನಂ. 37)

ಮೂರ್ನಾಡು, ಕೊಡಗು.

ಇದರ 2023-2024ನೇ ಸಾಲಿನ ಆಡಳಿತ ಮಂದಲ್ಲಿ ವರದಿ. 

  • ಸಂಘದಲ್ಲಿ 80 ಸದಸ್ಯರು ಇದ್ದು ಇವರಲ್ಲಿ 21 ನಿರ್ದೇಶಕರು, ಅಧ್ಯಕ್ಷರು, ಉಪಾಧ್ಯಕ್ಷರು ಗೌ।। ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿಯಾಗಿರುತ್ತಾರೆ.
  • ಈ ಒಂದು ಆಯುಧ ಪೂಜಾ ಸಮಾರಂಭಕ್ಕೆ ಪ್ರತಿಯೊಬ್ಬ ಸದಸ್ಯರಿಂದ 1,600/- ರೂಪಾಯಿ ವಾರ್ಷಿಕ ವಂತಿಗೆ ತೆಗೆದುಕೊಂಡಿರುತ್ತೇವೆ.
  • 2024ನೇ ಸಾಲಿನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸರಕಾರಿ ಪ್ರಾಥಮಿಕ ಶಾಲೆಯ ಆವರಣ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು ಇದರ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿರುತ್ತೇವೆ.
  • 2023-2024ನೇ ಸಾಲಿನಲ್ಲಿ ಸಂಘದ ಸದಸ್ಯರ ಅನಾರೋಗ್ಯದ ನಿಮಿತ್ತ ಹಾಗೂ ಮರಣಪಟ್ಟ ಸದಸ್ಯರ ಕುಟುಂಬಕ್ಕೆ ಸಂಘದಿಂದ ಹಾಗೂ ಸಂಘದ ಸದಸ್ಯರ ಸಹಾಯಧನವಾಗಿ ಒಟ್ಟು ಮೊತ್ತ 1,07,000-00 ರೂಪಾಯಿಗಳನ್ನು ನೀಡಿರುತ್ತೇವೆ.
  • ಮೂರ್ನಾಡು ಗ್ರಾಮ ಪಂಚಾಯಿತಿಯ ಮಾಹಿತಿಯ ಮೇರೆಗೆ ಸದಸ್ಯರು
  • ಮಡಿಕೇರಿಯ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ತೆರಳಿ ರಕ್ತದಾನವನ್ನು ಮಾಡಿರುತ್ತೇವೆ.
  • ಹಾಗೇ ನಮ್ಮ ಸಂಘದ ವತಿಯಿಂದ ಇನ್ನೂ ಹತ್ತು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುತ್ತೇವೆ.

 

ವಿ. ಸೂ.:- ಸಂಘದ ಸದಸ್ಯರಲ್ಲಿ ಹಾಗೂ ಮೂರ್ನಾಡಿನ ನಾಗರೀಕ ಬಾಂಧವರಲ್ಲಿ ಮನವಿ ಆಯುಧ ಪೂಜೆಗೆ ಅಲಂಕೃತ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದು ಮತ್ತು ಅಲಂಕೃತ ವಾಹನಗಳ ಮತ್ತು ಅಂಗಡಿಗಳ ಅಲಂಕಾರ ನೈಜತೆಯಿಂದ ಕೂಡಿರಬೇಕು. ಸೈಕಲ್ ಮತ್ತು 2, 3, 4, 6 ಚಕ್ರ ವಾಹನಗಳು ಅಲಂಕೃತವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸಂಘದ ಸದಸ್ಯರ ಹಾಗೂ ಸಾರ್ವಜನಿಕರ ಆಯ್ಕೆಯಾದ ವಾಹನಗಳಿಗೆ. ಆಯ್ಕೆಯಾದ ಅಲಂಕೃತ ಅಂಗಡಿಗಳಿಗೆ ಬಹುಮಾನ ವಿತರಿಸಲಾಗುವುದು.

ಅಲಂಕೃತ ವಾಹನಗಳು ಮಧ್ಯಾಹ್ನ 3-00 ಗಂಟೆಗೆ ಪಾಂಡಾಣೆ ಮೈದಾನದಲ್ಲಿ ಬಂದು ಸೇರಬೇಕು. ಅಲಂಕೃತ ಅಂಗಡಿಗಳು 3-00 ಗಂಟೆಗೆ ಸರಿಯಾಗಿ ಅಲಂಕೃತವಾಗಿರಬೇಕು ಇಲ್ಲವಾದಲ್ಲಿ ಬಹುಮಾನಕ್ಕೆ ಅರ್ಹವಾಗುವುದಿಲ್ಲ.

ಸಾರ್ವಜನಿಕರಿಂದ ಧನಸಹಾಯವನ್ನು ಹೃತ್ತೂರ್ವಕವಾಗಿ ಸ್ವೀಕರಿಸಲಾಗುವುದು.

  • ಕರವಂಡ ಕೆ. ಸಜನ್ ಗಣಪತಿ, ಅಧ್ಯಕ್ಷರು, 8088888753
  • ಅಶ್ವಥ್ ರೈ, ಬಿ. ಬಿ. ಉಪಾಧ್ಯಕ್ಷರು, 9535623949
  • ಎನ್. ಎನ್. ಶರಣು,  ಕಾರ್ಯದರ್ಶಿ, 7019146881
  • ಜಯಂತ್. ಹೆಚ್.ಹಚ್, ಖಜಾಂಜಿ, 9900585118

ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ.ನಂ. 37) ಮೂರ್ನಾಡು, ಕೊಡಗು

31ನೇ ವರ್ಷದ ಅದ್ಧೂರಿ ಆಯುಧ ಪೂಜಾ ಸಮಾರಂಭ

ದಿನಾಂಕ: 11-10-2024ನೇ

ಶುಕ್ರವಾರ ಸಮಯ: ಸಂಜೆ 6.00 ಗಂಟೆಗೆ

ಸ್ಥಳ : ಮೂರ್ನಾಡು ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಿದ ಭವ್ಯ ಅಲಂಕೃತ ವೇದಿಕೆಯಲ್ಲಿ

ಸಭಾ ಕಾರ್ಯಕ್ರಮ ಸಂಜೆ 6.00 ಗಂಟೆಗೆ

ಅಧ್ಯಕ್ಷತೆ : ಶ್ರೀ ಕರವಂಡ ಸಜನ್ ಗಣಪತಿ ಅಧ್ಯಕ್ಷರು, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ)

ಮುಖ್ಯ ಅತಿಥಿಗಳು:

  • ಶ್ರೀ ಪ್ರತಾಪ್ ಸಿಂಹ, ಮಾಜಿ ಸಂಸದರು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರ
  • ಶ್ರೀ ಕುಶನ್ ರೈ ಬಿ. ಎಸ್. : ಅಧ್ಯಕ್ಷರು, ಕಾಂತೂರು ಮೂರ್ನಾಡು, ಗ್ರಾಮ ಪಂಚಾಯಿತಿ
  • ಶ್ರೀ ಚಂದ್ರಮೌಳಿ, ಅಭಿವೃದ್ಧಿ ಅಧಿಕಾರಿ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ
  • ಡಾ|| ಗೌರವ್‌ ಆಯ್ಯಪ್ಪ ಮಕ್ಕಳ ವೈದ್ಯರು, ಆಶೀರ್ವಾದ್ ಆಸ್ಪತ್ರೆ, ವಿರಾಜಪೇಟೆ
  • ಶ್ರೀಮತಿ ರೇಖಾ ಬಾಲು ಬಿ. ಎಸ್. ಉಪಾಧ್ಯಕ್ಷರು, ಕಾಂತೂರು ಮೂರ್ನಡು ಗ್ರಾಮ ಪಂಚಾಯಿತಿ
  • ಶ್ರೀ ಕೋಳುಮಾಡಂಡ ಮಣಿ ಚಂಗಪ್ಪ, ಪಿ. ಡಬ್ಲ್ಯುಡಿ, ಇಲಾಖೆ, ಮೂರ್ನಾಡು
  • ಶ್ರೀ ಅರುಣ್ ರೈ, ಬಿ.ಎಸ್. ಅಧ್ಯಕ್ಷರು, ಹಿಂದೂ ರುದ್ರಭೂಮಿ ಸಮಿತಿ, ಕಾಂತೂರು, ಮೂರ್ನಾಡು.
  • ಶ್ರೀ ಎನ್. ಕೆ. ಕುಂಜ್‌ರಾಮ, ಗೌರವ ಅಧ್ಯಕ್ಷರು, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ (ರಿ) ಮೂರ್ನಾಡು
  • ಶ್ರೀ ಕೆ. ಬಾಬು, ಅಧ್ಯಕ್ಷರು, ಹಿಂದೂ ಮಲಯಾಳಿ ಸಂಘ, ಮೂರ್ನಾಡು
  • ಶ್ರೀ ಚಂದ್ರಶೇಖ‌ರ್ ರೈ. ಬಿ. ಕೆ. ಅಧ್ಯಕ್ಷರು, ಬಂಟರ ಸಂಘ, ಮೂರ್ನಾಡು
  • ಶ್ರೀ ಮುಂಡಂಡ ಪವಿ ಸೋಮಣ್ಣ ಅಧ್ಯಕ್ಷರು, ಸ್ಪೋರ್ಟ್ಸ್ ಕ್ಲಬ್ ಲಿ.. ಮೂರ್ನಾಡು
  • ಶ್ರೀ ಮುಕ್ಕಾಟರ ರವಿ ಚೀಯಣ್ಣ ಅಧ್ಯಕ್ಷರು, ಜ್ಞಾನಜ್ಯೋತಿ ವಿದ್ಯಾಸಂಸ್ಥೆ (6) ಕೋಡಂಬೂರು, ಮೂರ್ನಾಡು
  • ಶ್ರೀ ಕೆ. ಎ. ಅಬ್ದುಲ್ ಮಜೀದ್ ಅಧ್ಯಕ್ಷರು, ಮುಸ್ಲಿಂ ಜಮಆತ್, ಮೂರ್ನಾಡು
  • ಶ್ರೀಮತಿ ಪುಷ್ಪಾವತಿ ಬಿ. ಎನ್. ಮುಖ್ಯೋಪಾಧ್ಯಾಯರು, ಪಿ.ಎಂ.ಶ್ರೀ ಮಾದರಿ ಪ್ರಾಶಾಲೆ, ಮೂರ್ನಾಡು
  • ಶ್ರೀ ಪಾಣತ್ತಲೆ ಟಿ. ಹರೀಶ್ ಅಧ್ಯಕ್ಷರು, ಗೌಡ ಸಮಾಜ, ಮೂರ್ನಾಡು
  • ಶ್ರೀಮತಿ ಬೊಟ್ಟೋಳಂಡ ಕಾವೇರಮ್ಮ ನಾಣಯ್ಯ ನಿವೃತ್ತ ಆರೋಗ್ಯ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೂರ್ನಾಡು.
  • ಶ್ರೀ ಕಂಬೀರಂಡ ಸತೀಶ್ ಮುತ್ತಪ್ಪ ಅಧ್ಯಕ್ಷರು, ಶ್ರೀ ಅಯ್ಯಪ್ಪ ಯುವಕ ಮಂಡಳಿ, ಮೂರ್ನಾಡು
  • ಶ್ರೀ ಬಡುವಂಡ ಅರುಣ್‌ ಅಪ್ಪಚ್ಚು ಅಧ್ಯಕ್ಷರು, ಚೇಂಬ‌ರ್ ಆಫ್ ಕಾಮರ್ಸ್, ಮೂರ್ನಾಡು
  • ಕ್ಯಾಪ್ಟನ್ ಹೊಸೊತ್ತು ಚಿಣ್ಣಪ್ಪ ಮಾಜಿ ಸೈನಿಕರು ಹಾಗೂ ಫೀ.ಮಾ. ಕಾರ್ಯಪ್ಪ  ರಾಜ್ಯ ಪ್ರಶಸ್ತಿ ವಿಜೇತರು ಮರಗೋಡು
  • ಶ್ರೀ ಚೆಯ್ಯಂಡ ರಘು ತಿಮ್ಮಯ್ಯ ಶಿಕ್ಷಣ ಶಿಕ್ಷಕರು, ಕಣ್ಣ ಬಲಮುರಿ : ನಿವೃತ್ತ ದೈಹಿಕೆ ಶಿಕ್ಷಣ ಹೊದ್ದೂರು ಗ್ರಾಮ
  • ಶ್ರೀ ಸದಾಶಿವ ಕೆ. ಎಂ. ನಿವೃತ್ತ ಪೊಲೀಸ್ ಉಪ ನಿರೀಕ್ಷಕರು, ಮೂರ್ನಾಡು

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments