ಸಾಂಸ್ಕೃತಿಕ ನಗರಿ ಹಾಗೂ ಶೈಕ್ಷಣಿಕ ಕೇಂದ್ರ ಎಂದೇ ವಿಶ್ವಾದ್ಯಂತ ಹೆಸರಾಗಿರುವ ಮೈಸೂರಿನಲ್ಲಿ “ಡ್ರೀಮ್ಸ್ ಇಂಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಮೈಸೂರಿನಲ್ಲಿ ಮೊದಲ ಬಾರಿಗೆ ಶೈಕ್ಷಣಿಕ ಮೇಳವನ್ನು ಆಯೋಜಿಸುತ್ತಿದೆ.
2024ರ ನವೆಂಬರ್ 15, 16,17, ರಂದು ಮೂರು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒಂದೇ ಸೂರಿನಡಿ ನೂರಾರು ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಸೌಲಭ್ಯಗಳ ಭರಪೂರ ಮಾಹಿತಿ, ಅನನ್ಯ ಕಲಿಕೆಯ ವಿಧಾನಗಳು ಮತ್ತು ಶೈಕ್ಷಣಿಕ ಆವಿಷ್ಕಾರಗಳನ್ನು ಪ್ರದರ್ಶಿಸುವ 120 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಟ್ಟುಗೂಡಿಸುತ್ತಿದೆ.
ಪರ್ಯಾಯ ಕಲಿಕೆಯ ತಂತ್ರಗಳು , ಜಾಗತಿಕ ಶೈಕ್ಷಣಿಕ ಸಲಹೆಗಾರರ ಅನ್ವೇಷಣೆ, ಸಂವಾದಾತ್ಮಕ ಕಾರ್ಯಾಗಾರಗಳು, ಸೆಮಿನಾರ್‌ಗಳು, ಕರಕುಶಲ ಕಾರ್ಯಾಗಾರಗಳು, ಬೊಂಬೆ ಪ್ರದರ್ಶನಗಳು, ರಂಗಭೂಮಿ ನಾಟಕಗಳು, ಮಕ್ಕಳಿಗಾಗಿ ವಿಶೇಷ ಚಿತ್ರಕಲೆ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಉತ್ತೇಜಕ ಚಟುವಟಿಕೆಗಳು ಈ ಶೈಕ್ಷಣಿಕ ಮೇಳದಲ್ಲಿ ಒಳಗೊಂಡಿದೆ.
ಈ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಶಿಕ್ಷಣ ಸಂಸ್ಥೆಗಳು ಮೊ: 7090000811 / 12 / 13 / 14 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.