“ಮುದ್ದಂಡ ಕಪ್ ಹಾಕಿ ನಮ್ಮೆ-2025” ಪೂರ್ವಭಾವಿ ತಯಾರಿಯಲ್ಲಿ ತೊಡಗಿರುವ ಕುಟುಂಬಸ್ಥರು

Reading Time: 3 minutes

ಮುಂದಿನ ವರ್ಷ 2025 ರಲ್ಲಿ ನಡೆಯಲಿರುವ ಕೊಡವ ಕುಟುಂಬಗಳ ನಡುವಿನ 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಹಾಕಿ ಹಬ್ಬಕ್ಕೆ ಮುದ್ದಂಡ ಕುಟುಂಬಸ್ಥರು ಪೂರ್ವಭಾವಿ ತಯಾರಿಯಲ್ಲಿ ತೊಡಗಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡವ ಹಾಕಿ ಅಕಾಡೆಮಿ 26 ವರ್ಷಗಳ ಹಿಂದೆ ಕೊಡವ ಹಾಕಿ ಹಬ್ಬದ ಜನಕ ದಿ. ಪಾಂಡಂಡ ಕುಟ್ಟಣಿ ಅವರ ನೇತೃತ್ವದಲ್ಲಿ 1997 ರಲ್ಲಿ ಸ್ಥಾಪಿತಗೊಂಡಿತು. ಅಂದಿನಿಂದ ಇಂದಿನವರೆಗೆ ಕೊಡವ ಕುಟುಂಬಗಳ ನಡುವಿನ ವಿಶ್ವದಾಖಲೆಯ ಹಾಕಿ ಹಬ್ಬ ಆಯೋಜಿಸುತ್ತಾ ಬರುತ್ತಿದೆ. ಮುಂದಿನ ವರ್ಷ 2025 ರಲ್ಲಿ 25ನೇ ಹಾಕಿ ಹಬ್ಬವನ್ನು ಮುದ್ದಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ.

ಇತ್ತೀಚೆಗೆ ಜನಪ್ರತಿನಿಧಿಗಳನ್ನು ಭೇಟಿಯಾದ ಮುದ್ದಂಡ ಕುಟುಂಬದ ಪ್ರಮುಖರು ಹಾಕಿ ಉತ್ಸವದ ಯಶಸ್ಸಿಗಾಗಿ ಸಹಕಾರ ಕೋರಿದರು. ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರುಗಳನ್ನು ಭೇಟಿಯಾದ ಮುದ್ದಂಡ ಕುಟುಂಬಸ್ಥರ ನಿಯೋಗ 2025ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯುವ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಮುದ್ದಂಡ ಕುಟುಂಬದ ಅಧ್ಯಕ್ಷ ಮುದ್ದಂಡ ಡಾಲಿ ತಿಮ್ಮಯ್ಯ, ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಗೌರವಾಧ್ಯಕ್ಷ ಮುದ್ದಂಡ ಬಿ.ದೇವಯ್ಯ, ಕಾರ್ಯದರ್ಶಿ ಮುದ್ದಂಡ ಆದ್ಯ ತಿಮ್ಮಯ್ಯ, ಉಪಾಧ್ಯಕ್ಷ ಮುದ್ದಂಡ ಡೀನ್ ಬೋಪಣ್ಣ, ಮುದ್ದಂಡ ಅಶೋಕ್, ಜಂಟಿ ಕಾರ್ಯದರ್ಶಿ ಮುದ್ದಂಡ ರಂಜಿತ್ ಪೊನ್ನಪ್ಪ, ಮುದ್ದಂಡ ಕುಶಾಲಪ್ಪ, ಮುದ್ದಂಡ ರಾಯ್, ಮುದ್ದಂಡ ಕಿರಣ್ ಪೂಣಚ್ಚ, ಮುದ್ದಂಡ ಆದರ್ಶ್, ಮುದ್ದಂಡ ಬನ್ಸಿ ಬೋಪಣ್ಣ ಮತ್ತಿತರರು ನಿಯೋಗದಲ್ಲಿದ್ದರು.

2024ರ ಮೇ ತಿಂಗಳಿನಲ್ಲಿ ಮಡಿಕೇರಿ ನಗರದ ಕರವಲೆ ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯದಲ್ಲಿ ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿ ಹಾಕಿ ಹಬ್ಬದ ಯಶಸ್ಸಿಗಾಗಿ ಪ್ರಾರ್ಥಿಸಿದರು. 2025 ರಲ್ಲಿ ಹಾಕಿ ಹಬ್ಬ ನಡೆಸಲು ಮುದ್ದಂಡ ಕುಟುಂಬಕ್ಕೆ ಕೊಡವ ಹಾಕಿ ಅಕಾಡೆಮಿ ಅಧಿಕೃತವಾಗಿ ಹಕ್ಕೋಲೆ (ಹಕ್ಕುಪತ್ರ) ನೀಡುವ ಮೂಲಕ ಶುಭ ಹಾರೈಸಿತು.

ಪಾಂಡಂಡ ಕುಟ್ಟಣ್ಣಿ ಹಾಗೂ ಅವರ ಸಹೋದರ ಕಾಶಿಯವರಿಂದ ಕೊಡವ ಹಾಕಿ ಉತ್ಸವ ಆರಂಭವಾಯಿತು. 1997 ರಲ್ಲಿ ಕರಡದಲ್ಲಿ ಪಾಂಡಂಡ ಕುಟುಂಬ ಮೊದಲ ಬಾರಿಗೆ ಆಯೋಜಿಸಿದ್ದ ಹಾಕಿಹಬ್ಬದಲ್ಲಿ 60 ತಂಡಗಳು ಪಾಲ್ಗೊಂಡಿದ್ದವು. 2025 ರಲ್ಲಿ ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ಹಾಕಿ ಹಬ್ಬ “ಮುದ್ದಂಡ ಹಾಕಿ ಹಬ್ಬ” ನಡೆಯಲಿದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x