NALKURSIRANGALA ನಾಕೂರು ಶಿರಂಗಾಲ

Reading Time: 6 minutes

ನಾಕೂರು ಶಿರಂಗಾಲ - NALKURSIRANGALA

ಈ ಗ್ರಾಮ ಪಂಚಾಯಿತಿ ನಾಕೂರು ಶಿರಂಗಾಲ, ಕಾನ್ ಬೈಲು ಬೈಚನಹಳ್ಳಿ ಹಾಗೂ ಹೇರೂರು ಮಳೂರು ಎಂಬ ಮುಖ್ಯ ಗ್ರಾಮಗಳನ್ನು ಹೊಂದಿರುತ್ತದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲಾ ಕೇಂದ್ರದಿಂದ 23 ಕಿ. ಮೀ. ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 33 ಕಿ. ಮೀ. ಸುಣಟಿಕೊಪ್ಪ ಹೋಬಳಿ ಕೇಂದ್ರದಿಂದ 8 ಕಿ. ಮೀ. ಅಂತರದಲ್ಲಿರುತ್ತದೆ. ಹಾಗೂ ಬಿ.ಎಂ ರಾಜ್ಯ ಹೆದ್ದಾರಿ ರಸ್ತೆಯಿಂದ 6 ಕಿ. ಮೀ ಅಂತರದಲ್ಲಿದೆ. ಈ ಗ್ರಾಮ ಪಂಚಾಯಿತಿಯು ಪೂರ್ವಕ್ಕೆ ಹಾರಂಗಿ ಆಣೆಕಟ್ಟು ಪಶ್ಚಿಮಕ್ಕೆ ಹರದೂರು ಗ್ರಾಮ ಪಂಚಾಯಿತಿ ಉತ್ತರಕ್ಕೆ ಹಾರಂಗಿ ಆಣೆಕಟ್ಟಿನ ಹಿನ್ನೀರು ಹಾಗೂ ದಕ್ಷಿಣಕ್ಕೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಮಧ್ಯ ಬಾಗದ ಪ್ರದೇಶವಾಗಿರುತ್ತದೆ.
ಈ ಗ್ರಾಮ ಪಂಚಾಯಿತಿಯು ಪೂರ್ಣವಾಗಿ ಮುಖ್ಯ ರಸ್ತೆ ಹೆದ್ದಾರಿ ರಸ್ತೆ ಗ್ರಾಮೀಣ ರಸ್ತೆ ಹಾಗೂ ಕಚ್ಚಾ ರಸ್ತೆ ಸಂಪರ್ಕ ಬಹಳಷ್ಟು ಮಟ್ಟಗೆ ಡಾಂಬರೀಕರಣವಾಗಿರುತ್ತದೆ. ಈ ಗ್ರಾಮ ಪಂಚಾಯಿತಿಯ 2001 ರ ಜನಗಣತಿ ಪ್ರಕಾರ 3,715 ಜನಸಂಖ್ಯೆ ಹೊಂದಿದೆ. 3 ಕ್ಷೇತ್ರಗಳಾಗಿ ವಿಂಗಡಣೆಗೊಂಡಿದ್ದು, 2348 ಮತದಾರರಿದ್ದು, 10 ಮಂದಿ ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯ ಬಹು ಭಾಗ ಕಾಫಿ ತೋಟ ಹೊಂದಿದ್ದು ಭಾಗಶಃ ಖುಷ್ಕಿ ಜಮೀನನ್ನು ಹೊಂದಿರುತ್ತದೆ. ಗ್ರಾಮ ಪಂಚಾಯಿತಿಯ ಉದ್ದಕ್ಕೂ ಹೊಂದಿಕೊಂಡಂತೆ ಹಾರಂಗಿ ಜಲಾಶಯದ ಹಿನ್ನೀರು ಆವರಿಸಿದಂತೆ ಮಳೆಗಾಲದಲ್ಲಿ ನೀರು ತುಂಬಿ ಸಮುದ್ರದಂತೆ ಗೋಚರಿಸುತ್ತಿದ್ದು ಬೀಸಿಗೆಯಲ್ಲಿ ಜಲಾಶಯದ ನೀರು ಸಂಗ್ರಾಹವಾಗದೇ ಹಿನ್ನೀರಿನ ಭಾಗವು ಮರಳುಗಾಡಿನಂತೆ ಗೋಚರಿಸುತ್ತದೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರಕಾರಿ ಬಸ್ಸು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಸಂಚರಿಸಿತ್ತಿದ್ದು ಇಲ್ಲಿನ ಗ್ರಾಮದ ಜನತೆಗೆ ಅದರಲ್ಲೂ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಬಹಳ ಅಡಚಣೆಯಾಗುತ್ತದ್ದು ಖಾಸಗಿ ವಾಹನಗಳನ್ನೆ ಅವಲಂಬಿಸಬೇಕಾಗಿದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಸಾರ್ವಜನಿಕ ಕೆರೆಗಳಿದ್ದು ಬೇಸಿಗೆಯಲ್ಲಿ ಬರಿದಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇಲ್ಲಿನ ತೋಟದ ಕಾಫಿ ಬೆಳೆಗೆ ನೀರಿನ ಅವಶ್ಯಕತೆಯಿದ್ದು ಕೆರೆಗಳಿಂದ ಹಾರಂಗಿ ಹಿನ್ನೀರಿನಿಂದ ಕೊಳವೆ ಬಾವಿಗಳಿಂದ ಡೀಸೆಲ್ ಮೋಟಾರು ಇಲ್ಲವೆ ವಿದ್ಯುಚ್ಛಕ್ತಿ ಮೋಟಾರಿನ ಮೂಲಕ ನೀರನ್ನು ಬಳಸುವುದು ಕಂಡುಬರುತ್ತದೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಅಂಗನವಾಡಿ ಕೇಂದ್ರಗಳು 2 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಸರಕಾರಿ ಪ್ರೌಢಶಾಲೆಗಳಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದ್ದು ಅಕ್ಷರ ದಾಸೋಹ ಯೋಜನೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಐಕಲ್ ವ್ಯವಸ್ಥೆ ಕಲ್ಪಿಸಲಾಗಿದೆ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಮುಂದುವರಿಕ ಶಿಕ್ಷಣ ಕೇಂದ್ರಗಳಿದ್ದು ಪ್ರೇರಕಿಯಿಂದ ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ರಮೇಸ್ ಬಿ ಜಿ President 9449254512
  2. ಸತೀಶ ಬಿ ಈ Vice President 9449264493
  3. ರಾಧಮಣಿ Member 9449827934
  4. ಜಗನ್ನಾಥ್‌ ಎಂ ಸಿ Member 9448976622
  5. ಅರುಣಕುಮಾರಿ Member 9449917861
  6. ಪ್ರೇಮ Member 8105951556
  7. ಸೀತೆ Member 9482449337

ಪಂಚಾಯ್ತಿ ಸಂಪರ್ಕ

ವಿಳಾಸ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಕಾನ್ ಬೈಲು ಅಂಚೆ ಸುಂಟಿಕೊಪ್ಪ ಹೋಬಳಿ ಸೋಮವಾರಪೇಟೆ ತಾಲ್ಲೂಕು ಕೊದಗು ಜಿಲ್ಲೆ 571237
Tel: 08276-260266
Pdo:
Mob: 

Email: som.nakurusirangala@gmail.com

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

  • ಫ್ರೆಂಡ್ಸ್ ಯೂತ್ ಕ್ಲಬ್, ನಾಕೂರು-ಕಾನ್‍ಬೈಲು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ರಂಜಿನಿ ವಿ.ಆರ್ President 9483263832
  2. ಯಶೋಧ .ಎಸ್.ಬಿ Vice President 9480179816
  3. ಚೆನ್ನಮ್ಮ Member 9448267702
  4. ರಾಣಿ Member 8277279142
  5. ಪಿ.ಎಂ ಬಿಜು Member 9444940309
  6. ವಸಂತಕುಮಾರ ಕೆ.ಪಿ Member 9480052403
  7. ಚಂದ್ರಶೇಖರ ಟಿ Member 9483840156
  8. ಸತೀಶ.ಬಿ .ಈ Member 9449264493

ಶುಭಕೋರುವವರು

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.