ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು; ಡಾ. ಕೆ.ಜಿ. ಜಗದೀಶ್

Reading Time: 5 minutes

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ 145ನೇ ವಾರ್ಷಿಕ ಮಹಾಸಭೆ: ಹೊಸ ಯೋಜನೆಗಳನ್ನು ಪರಿಚಯಿಸಿದ ಡಾ. ಕೆ.ಜಿ. ಜಗದೀಶ್

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ 145ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಜಿ. ಜಗದೀಶ್ ಅವರು, ಕಾಫಿ ಬೆಳೆಗಾರರಿಗೆ ಗುಣಮಟ್ಟ ಹೆಚ್ಚಿಸಲು ಮತ್ತು ತೋಟ ನಿರ್ವಹಣೆಗೆ ಹೊಸ ಯೋಜನೆಗಳನ್ನು ಪರಿಚಯಿಸಿದರು.

ಕಾಫಿ ಗುಣಮಟ್ಟ ಹೆಚ್ಚಿಸಲು ಸಮುದಾಯ ಗುಂಪುಗಳ ಪ್ರಾರಂಭ: ಪ್ರತಿ ಹೋಬಳಿಯ 100 ಕಾಫಿ ಕೃಷಿಕರನ್ನು ಒಳಗೊಂಡ ಸಮುದಾಯ ಗುಂಪುಗಳನ್ನು ಪ್ರಾರಂಭಿಸಿ, ಅವರ ಬೆಳೆದ ಕಾಫಿಯನ್ನು ಸಂಗ್ರಹಿಸುವ ಮೂಲಕ ಗುಣಮಟ್ಟ ತಾಳುವ ಪ್ರಯತ್ನ ನಡೆಯಲಿದೆ. ಈ ಗುಣಮಟ್ಟವನ್ನು “ಕಾಫಿ ಕಪ್ಪಿಂಗ್ ಸ್ಕೋರ್” ಮೂಲಕ ಪರಿಶೀಲಿಸಲಾಗುವುದು. ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ತಜ್ಞರು ಸಮುದಾಯದೊಂದಿಗೆ ಹಂಚಿಕೊಳ್ಳಲಿದ್ದಾರೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಸಲು ನೆರವಾಗಲಿದೆ ಎಂದು ಅವರು ಹೇಳಿದರು.

ಕಾಫಿ ತೋಟ ನಿರ್ವಹಣೆಗೆ ತರಬೇತಿ ಮತ್ತು ಉದ್ಯೋಗಾವಕಾಶಗಳು: ಭಾರತೀಯ ಕಾಫಿ ಮಂಡಳಿ ಶೀಘ್ರದಲ್ಲೇ 2 ವರ್ಷಗಳ ಡಿಪ್ಲೋಮ ಪದವಿಯನ್ನು ಪ್ರಾರಂಭಿಸಲಿದೆ. ಇದರಿಂದ ಯುವಪೀಳಿಗೆ ಕಾಫಿ ತೋಟ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ದೊರೆಯಲಿದೆ. 10ನೇ ತರಗತಿ ಪಾಸಾದ ವಿದ್ಯಾರ್ಥಿಗಳು ತೋಟಗಳ ಸೂಪರ್ ವೈಸರ್ ಮತ್ತು ವ್ಯವಸ್ಥಾಪಕರಾಗಿ ತರಬೇತಿ ಪಡೆದು ಉದ್ಯೋಗ ಪಡೆಯಬಹುದಾಗಿದೆ.

ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಬಾರಿಸ್ಟಾ ತರಬೇತಿ: ಬರುತ್ತಿರುವ ಕಾಫಿ ಕೆಫೆಗಳಿಗೆ ಸಿಬ್ಬಂದಿ ಅಗತ್ಯತೆ ಸಾಕಷ್ಟು ಹೆಚ್ಚಾಗಿರುವುದರಿಂದ, ಮಹಿಳೆಯರು ಮತ್ತು ಮಕ್ಕಳು ಬಾರಿಸ್ಟಾ ತರಬೇತಿಯನ್ನು ಪಡೆಯಲು ಅವಕಾಶ ದೊರೆಯಲಿದೆ. ಇದರಿಂದ ಪ್ರವಾಸಿಗರು ಹಾಗೂ ಸಂದರ್ಶಕರಿಗೆ ಉನ್ನತ ಗುಣಮಟ್ಟದ ಕಾಫಿಯನ್ನು ತಯಾರಿಸಿ ನೀಡಲು ಸಾಧ್ಯವಾಗುತ್ತದೆ.

ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ: ಕೊಡಗಿನಲ್ಲಿ ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮದ ಮೂಲಕ ತೋಟಗಳಿಗೆ ಪ್ರವಾಸಿಗರನ್ನು ಕರೆತರಬಹುದು. ತೋಟ ಮಾಲೀಕರು ಪರಿಸರ ಸ್ನೇಹಿಯಾಗಿ ತೋಟಗಳನ್ನು ನಿರ್ವಹಿಸಲು ಜವಾಬ್ದಾರಿ ಹೊಂದಿದ್ದಾರೆ. ಹವಾಮಾನ ಬದಲಾವಣೆ ತೋಟದ ಮೇಲೆ ಪ್ರಭಾವ ಬೀರುತ್ತಿರುವ ಕಾರಣ, ತೋಟ ಮಾಲೀಕರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾಂತ್ರೀಕರಣ ಮತ್ತು ಸುಸ್ಥಿರತೆ: ತೋಟಗಳಲ್ಲಿ ಕೆಲಸಗಾರರ ಕೊರತೆ ಹಿನ್ನಲೆಯಲ್ಲಿ ಶೇ.60ರಷ್ಟು ತೋಟಗಳನ್ನು ಯಾಂತ್ರೀಕರಣಗೊಳಿಸುವ ಅನಿವಾರ್ಯತೆ ಇದೆ. “ಸ್ಪೆಷಾಲಿಟಿ ಕಾಫಿ” ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಪ್ರಸ್ತುತ ಶೇ.5ರಷ್ಟು ಸ್ಪೆಷಾಲಿಟಿ ಕಾಫಿ 40% ಮಾರುಕಟ್ಟೆ ಪಾಲು ಪಡೆಯುವ ಸಾಧ್ಯತೆ ಇದೆ.

ಅನುದಾನ ಮತ್ತು ಉತ್ಸಾಹ ಹೆಚ್ಚಳ: ಕಾಫಿಯ ಬಗ್ಗೆ ಯುವಪೀಳಿಗೆಯ ಆಸಕ್ತಿ ಹೆಚ್ಚಿರುವುದು ಉತ್ತಮ ಬೆಳವಣಿಗೆಯಾಗಿದೆ. 2018ರಲ್ಲಿ ಕಾಫಿ ಮಂಡಳಿಗೆ 180 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ವರ್ಷ ಅದು 307 ಕೋಟಿ ರೂ.ಗಳಷ್ಟಾಗಿದೆ. ಇದರಿಂದ ಇನ್ನೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. 3 ಸಾವಿರ ಕಾಫಿ ಕೆಫೆಗಳ ಪ್ರಾರಂಭದಿಂದಲೂ ಈ ಕ್ಷೇತ್ರದಲ್ಲಿ ಭವಿಷ್ಯದ ಬಗ್ಗೆ ಆಶಾಭಾವನೆ ಹೆಚ್ಚಿದೆ.

ಉತ್ಪಾದನೆಯ ಹೆಚ್ಚಳ ಮತ್ತು ಪರಿಸರ ಸುಧಾರಣೆ: 2018ರಲ್ಲಿ 2.92 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗಿಂತ 2023ರಲ್ಲಿ 3.6 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ತಲುಪಿರುವುದು ಪ್ರಗತಿಯ ಸಂಕೇತವಾಗಿದೆ. ಆದಾಗ್ಯೂ, ಅಕಾಲಿಕ ಮಳೆಯ ಪ್ರಭಾವದಿಂದ ಉತ್ಪಾದನೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದರೂ ಸುಸ್ಥಿರ ಕಾಫಿ ಬೆಳೆಯತ್ತ ತೋಟ ಮಾಲೀಕರು ಗಮನ ಹರಿಸಬೇಕಾಗಿದೆ ಎಂದು  ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಜಿ. ಜಗದೀಶ್ ಅವರು ತಿಳಿಸಿದರು.

ಸಮಾರಂಭದಲ್ಲಿ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಸಕ ಪಿ.ಎ. ಮಂದಣ್ಣ ಮಾತನಾಡಿ, ಟಾಟಾ ಕಾಫಿ ತೋಟಗಳು ಪರಿಸರ ಸ್ನೇಹಿ ಪಾಲ್ಕರ್‌ಗಳನ್ನು ಬಳಸಿ ಮಣ್ಣು ಹಾಗೂ ಅಂತರ್ಜಲ ಮಟ್ಟ ಹೆಚ್ಚಳ ಕಂಡಿವೆ. ಪ್ರಕೃತಿಯೊಂದಿಗೆ ಸಹಜವಾಗಿ ತೋಟ ನಿರ್ವಹಣೆಯನ್ನು ಮಾಡುವುದು ಉತ್ತಮ ಪೈರು ಫಲಿತಾಂಶ ನೀಡುತ್ತದೆ ಎಂದರು.

ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಎ. ನಂದ ಬೆಳ್ಯಪ್ಪ ಮಾತನಾಡಿ, ಕಳೆದ 1 ವಷ೯ಧಲ್ಲಿ ಅಸೋಸಿಯೇಷನ್ ವತಿಯಿಂದ ಹಲವಾರು ಗಮನಾಹ೯ ಯೋಜನೆ ಜಾರಿಗೊಳಿಸಲಾಗಿದೆ,  ಜಮ್ಮ ಮತ್ತು ಸಾಗು ಸಮಸ್ಯೆಗಳ ಬಗೆಗಿನ ಮನವಿ ಮತ್ತು ಬೆಳೆಗಾರರಿಗೆ ಅಗತ್ಯ ಮಾಹಿತಿ ಒದಗಿಸುವ ಕಾರ್ಯದಲ್ಲಿ ಅಸೋಸಿಯೇಷನ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಡಾ. ರಾಜಾ ವಿಜಯ್ ಕುಮಾರ್, ಯುನೆಟೈಡ್ ಕಿಂಗ್ ಡಮ್ ನ ಕೖಷಿ ಪರಿಣಿತ ಮಾಕ್೯ ತ್ರಿಸ್ನಿ, ಕೆ. ಸುದೀಂದ್ರ ಅವರು ಕಾಫಿ ಕೖಷಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಉಪಯುಕ್ತ ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು. 

ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಕಾಯ೯ದಶಿ೯ ಸಿ.ಕೆ. ಬೆಳ್ಳಿಯಪ್ಪ, ಉಪಾಧ್ಯಕ್ಷ ಎ. ಚಂಗಪ್ಪ ವೇದಿಕೆಯಲ್ಲಿದ್ದರು, ಕಾಯ೯ಕ್ರಮದಲ್ಲಿ ಕನಾ೯ಟಕ ಕಾಫಿ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಬಿ.ಡಿ. ಮಂಜುನಾಥ್, ಮೋಹನ್ ದಾಸ್, ಕೆ.ಪಿ. ಉತ್ತಪ್ಪ ಸೇರಿದಂತೆ ಕಾಫಿ ಉದ್ಯಮದ ಅನೇಕರು ಹಾಜರಿದ್ದರು. 

ಪ್ರದರ್ಶನ ಮತ್ತು ಮಾರಾಟ: ಈ ಕಾರ್ಯಕ್ರಮದಲ್ಲಿ ಹಲವಾರು ಕೃಷಿಕ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x