(ಸಾಂದರ್ಭಿಕ ಚಿತ್ರ)
ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆ ಇದೇ ಡಿಸೆಂಬರ್ 3ರಂದು 10-00 ಗಂಟೆಗೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲ್ಲಿದ್ದು ಮೂರು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಆಗಮಿಸಿ ಸಲಹೆ ಸಹಕಾರ ನೀಡಬೇಕು ಎಂದು ಬೊಟ್ಟಿಯತ್ ಮೂಂದ್ ನಾಡಿನ ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪುತ್ತರಿ ದೇವ ಕಟ್ಟ್ ಇದೇ 29ರಂದು ಬೀಳಲಿದ್ದು, ಅಂದು ಪುತ್ತರಿಯ ಮುಹೂರ್ತ ನಿಗದಿಯಾಗಲಿದೆ. ಈ ನಿಟ್ಟಿನಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿನಾಡ್’ಗೆ ಸೇರಿದ ಎಲ್ಲಾ ಗ್ರಾಮಗಳು ಒಂದೆಡೆ ಸೇರಿ ನಡೆಸುವ ಕೈಮುಡಿಕೆ ಪುತ್ತರಿ ಕೋಲ್ ಮಂದ್ ದಿನಾಂಕ ನಿಗದಿ ಮಾಡುವ ವಿಷಯವಾಗಿ ಹಾಗೂ ಯಾವ ರೀತಿ ನಡೆಸಬೇಕು ಎಂದು ಇದೇ ಡಿಸೆಂಬರ್ 3-00ರಂದು ಬೆಳಿಗ್ಗೆ 10-00 ಗಂಟೆಗೆ ಕೈಮುಡಿಕೆ ಕೋಲ್ ಮಂದ್’ನಲ್ಲಿಯೇ ಪೂರ್ವಬಾವಿ ಸಭೆ ಕರೆಯಲಾಗಿದ್ದು, ಮೂರು ನಾಡಿಗೆ ಸೇರಿದ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಸಲಹೆ ಸಹಕಾರ ನೀಡಬೇಕು ಎಂದು ಅವರು ಕೋರಿ ಕೊಂಡಿದ್ದಾರೆ.