ಮಡಿಕೇರಿ: ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು 14 ಸ್ಥಾನಗಳಿಗೆ 24 ಮಂದಿ ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದ 11 ಸ್ಥಾನಗಳಿಗೆ 18, ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ 4, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ 1 ಸ್ಥಾನಕ್ಕೆ ಇಬ್ಬರು ಸ್ಪರ್ಧೆಯಲ್ಲಿದ್ದರು.
1048 ಮತದಾರರ ಪೈಕಿ 691 ಮಂದಿ ಮತದಾನ ಮಾಡಿದರು. ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಅಂಥೋಣಿ ಕ್ಲೆಮೆಂಟದ ರೆಗೋ (421 ಮತ), ಜೋಕಿಮ್ ವಾಸ್ (500), ಎನ್.ಟಿ.ಜೋಸೆಫ್ (401), ಜೋಸೆಫ್ ವಿ.ವಿನ್ಸೆಂಟ್ (399), ಎಸ್.ಎಂ.ಡಿಸಿಲ್ವ (492), ಫ್ರಾನ್ಸಿಸ್ ಡಿಸೋಜ (462), ಬೆನ್ ಡಿಕ್ಟ್ ರೇಮಂಡ್ ಸಲ್ಹಾನ್ಹಾ (400), ರಿಚರ್ಡ್ ಉಲ್ಲಾಸ್ ಕುಮಾರ್ (369), ಸಾರ್ಜೆಂಟ್ ಎಮಾನ್ಯುಯಲ್ (352), ಸಿರಿಲ್ ಮೊರಾಸ್ (566), ಜೆ.ಸುನಿಲ್ ಲೋಬೋ (387) ಜಯಶಾಲಿಗಳಾದರು. ಗಾಡ್ವಿನ್ ಪ್ರಮೋದ್ ಮಸ್ಕರನೇಸ್ (200), ವಿ.ಜೆ.ಟೋನಿ (180), ಕೆ.ಕೆ.ಪೌಲೋಸ್ (115), ಮರ್ವಿನ್ ಲೋಬೋ (195), ಎ.ಜಿ.ಯೇಸುದಾಸ್ (196), ವಿ.ಎ.ಲಾರೆನ್ಸ್ (115), ಜೆ.ಸ್ಯಾಮ್ಯುವೆಲ್ (179) ಪರಾಜಯಗೊಂಡರು.
ಹಿಂದುಳಿದ ವರ್ಗ ಬಿ.ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆ.ಜಿ.ಪೀಟರ್ 405 ಮತಗಳನ್ನು ಪಡೆದು ಗೆಲುವು ದಾಖಲಿಸಿದರು. ಎದುರಾಳಿಯಾಗಿದ್ದ ಜಾನ್ಸನ್ ಪಿಂಟೋ 232 ಮತಗಳನ್ನು ಪಡೆದು ಪರಾಭವಗೊಂಡರು. ಮಹಿಳಾ ಕ್ಷೇತ್ರದಲ್ಲಿ ಜುಡಿತ್ ಡಿಸೋಜ (512), ಅನಿತಾ ತೆರೆಸಾ (430) ಗೆಲುವು ಪಡೆದರು. ಪ್ಲವೀಯಾ ಪ್ರಮೀಳಾ ಡಿಸೋಜಾ (174), ಕೆ.ಜೆ.ನೀತಾ (138) ಸೋಲು ಅನುಭವಿಸಿದರು. ಚುನಾವಣಾಧಿಕಾರಿಯಾಗಿ ಸಿದ್ದಲಿಂಗಮೂರ್ತಿ ಕಾರ್ಯನಿರ್ವಹಿಸಿದರು.