ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ
ಇವರನ್ನು”ಸರ್ಚ್ ಕೂರ್ಗ್ ಮೀಡಿಯಾ”ವು ಪ್ರಸ್ತುತ ಪಡಿಸಿರುವ “ಕೊಡಗು ಸಹಕಾರ” ಎಂಬ ಕೊಡಗಿನ ಸಹಕಾರ ಚಳುವಳಿಯ ಡಿಜಿಟಲ್ ದಾಖಲೆಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀನಾಗೇಶ್ ಕುಂದಲ್ಪಾಡಿ ಯವರು, “ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮೊದಲು 1976 ರಲ್ಲಿ ಸ್ಥಾಪನೆಯಾಯಿತು. ನಂತರದ ವರ್ಷಗಳಲ್ಲಿ ಈ ಸಹಕಾರ ಸಂಘವು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ವಿಲೀನವಾಗಿ 2018ರ ವರೆಗೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಒಂದು ಶಾಖೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ನಾನು ಬಿ.ಜೆ.ಪಿ ಪಕ್ಷದ ಕಾರ್ಯಕರ್ತನಾಗಿದ್ದು, ಸಂಪಾಜೆಯ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1993ರಚುಣಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷದಿಂದ ಸೂಚನೆ ಬಂದ ಕಾರಣ ನಾನು ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವನ್ನು ಪಡೆದು ಮೊದಲ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾದೆ, ಆದರಿಂದ ನಾನು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ನಮ್ಮ ಬಿ.ಜೆ.ಪಿ ಪಕ್ಷದ ಒತ್ತಾಸೆಯೆ ಕಾರಣ.
ನಂತರ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 3 ಬಾರಿ ನಿರ್ದೇಶಕನಾಗಿ ಆಯ್ಕೆಯಾದೆ. 2018 ರಲ್ಲಿ ಸರ್ಕಾರದ ಕಾನೂನಿನ ಪ್ರಕಾರ ವಿಭಾಗವಾಗಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾದಾಗ ತಾತ್ಕಾಲಿಕ ಪ್ರವರ್ತಕರಾಗಿ ಆಯ್ಕೆ ಆದೆ. ನಂತರದ ಚುಣಾವಣೆಯಲ್ಲಿ ಸ್ಫರ್ಧಿಸಿ ಬಿ.ಜೆ.ಪಿ ಪಕ್ಷದ ಬೆಂಬಲಿತ ಎಲ್ಲಾ ನಿರ್ದೇಶಕರ ಜೊತೆ ಗೂಡಿ ಅಧ್ಯಕ್ಷರಾಗಿ ಆಯ್ಕೆಯಾದೆ ಜೊತೆಗೆ ಉಪಾಧ್ಯಕ್ಷರಾಗಿ ಅಶೋಕ್‌ರವರು ಆಯ್ಕೆಯಾದರು.
ನಮ್ಮ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲೆಕ್ಕ ಪರಿಶೋದಕರ ಮೂಲಕ ಸಂಪಾಜೆಯ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಾಲು ಬಂಡವಾಳಗಳನ್ನು ವಿಭಾಗಿಸಲಾಯಿತು. ನಮ್ಮ ಸಹಕಾರ ಸಂಘದ ಪ್ರಾರಂಭದಲ್ಲಿ 1500 ಸದಸ್ಯರಿದ್ದು, ಪ್ರಸ್ತುತ 1700 ಸದಸ್ಯರಿದ್ದಾರೆ.
ಪ್ರಸ್ತುತ ಸಹಕಾರ ಸಂಘವು ಲಾಭದಲ್ಲಿದ್ದು, ಲಾಭಕ್ಕೆ ಮುಖ್ಯವಾಗಿ ಅಡಿಕೆ, ಕ್ಕೋಕ್ಕೋ, ರಬ್ಬರ್ ಖರೀದಿ, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಕೃಷಿ ಸಾಲಗಳು, ಉತ್ಪತಿ ಈಡಿನ ಸಾಲ, ನ್ಯಾಯಬೆಲೆ ಅಂಗಡಿ ಕಾರಣವಾಗಿದೆ. ನಮ್ಮ ಸಹಕಾರ ಸಂಘದ ಮುಖ್ಯ ಕಚೇರಿಯು ಪೆರಾಜೆ ಗ್ರಾಮದ ಮುಖ್ಯ ರಸ್ತೆಯಿಂದ ದೂರವಿದ್ದು ನಮ್ಮ ಸದಸ್ಯರ ಅನುಕೂಲಕ್ಕಾಗಿ ಪೆರಾಜೆ ಗ್ರಾಮದ ಮುಖ್ಯರಸ್ತೆಯಲ್ಲಿ ವಾರಕ್ಕೆ ಒಂದು ಬಾರಿ ಪಡಿತರ ವ್ಯವಸ್ಥೆಗಾಗಿ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗುತ್ತದೆ.
ಪ್ರಸ್ತುತ ಸಂಘಕ್ಕೆ ಜಾಗದ ಕೊರತೆಯಿದ್ದು, ಅಭಿವೃದ್ದಿ ವಿಳಂಬವಾಗುತಿದೆ. ಆದರಿಂದ ಆಡಳಿತ ಕಛೇರಿಯ ವಿಸ್ಥರಣೆ ಹಾಗೂ ಸದಸ್ಯರಿಗಾಗಿ ಸುಸಜ್ಜಿತ ಸಭಾಂಗಣದ ವ್ಯವಸ್ಥೆ ಜೊತೆಗೆ ಪೆರಾಜೆ ಮುಖ್ಯ ರಸ್ತೆಯಲ್ಲಿ ನಮ್ಮ ಸಹಕಾರ ಸಂಘದ ಒಂದು ಶಾಖೆಯನ್ನು ತೆರೆಯುವ ಬಗ್ಗೆ ಕ್ರಿಯಾಯೋಜನೆಯನ್ನು ತಯಾರಿಸುತ್ತಿದ್ದೇವೆ.
ನಮ್ಮ ಸಹಕಾರ ಸಂಘವು “ಏ” ಗ್ರೇಡ್ ತರಗತಿಯ ವ್ಯವಹಾರವನ್ನು ಹೊಂದಿದೆ. ಡಿಜಿಟಲ್ ಆಧುನೀಕರಣ ಹಾಗೂ ಪಾರದರ್ಶಕ ಆಡಳಿತವನ್ನು ನೀಡುತ್ತಿದೆ. ಸಂಘದ ವ್ಯವಹಾರ ಹಾಗೂ ಆಭಿವೃದ್ದಿ ಉತ್ತಮವಾಗಲು ನಮ್ಮ ಸಂಘದ ಎಲ್ಲಾ ಸದಸ್ಯರು ,ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಸಹಕಾರ ತುಂಬಾ ಸಹಾಯಕವಾಗಿದೆ.
ಸಹಕಾರ ಸಂಘ ಉತ್ತಮವಾಗಲು ಪ್ರಾಮಾಣಿಕ ವ್ಯವಹಾರ, ಸದಸ್ಯರ ಆಶೋತ್ತರಗಳಿಗೆ ಸಕಾಲಕ್ಕೆ ಸ್ಪಂದಿಸುವ ಮನಸ್ಸು , ಪಾರದರ್ಶಕ ಆಡಳಿತ ಜೊತೆಗೆ ಆಧುನಿಕ ತಂತ್ರಜ್ಞಾನದ ಬಳಕೆ ಮುಖ್ಯ ಪಾತ್ರ ವಹಿಸುತ್ತದೆ.
ವೈದ್ಯನಾಥನ್ ವರದಿಯ ಅನುಷ್ಟಾನದ ಬಗ್ಗೆ ಹೇಳುವುದೆಂದರೆ ವೈದ್ಯನಾಥನ್ ವರಿದಿಯು ಧ್ವಂದ್ವದಿಂದ ಕೂಡಿದ್ದು, ಈ ವರದಿಯ ತಯಾರಿಯು ಋಣಾತ್ತಕ ವಿಷಯಗಳ ಆಧಾರದ ಮೇಲೆ ತಯಾರಾಗಿದೆ. ಅಂದರೆ ಉತ್ತರ ಕರ್ನಾಟಕದ ಭಾಗಗಲ್ಲಿರುವ ಸಹಕಾರ ಸಂಘಗಳಲ್ಲಿ ಭ್ರಷ್ಟಚಾರದ ಮಟ್ಟ ಬಹಳ ಹೆಚ್ಚು ಇದ್ದು, ಇದರ ಆಧಾರದ ಮೇಲೆ ಸರಕಾರದ ಹಸ್ತಕ್ಷೇಪ ಅವಶ್ಯಕತೆ ಇದೆ. ಆದರೆ ಮಲೆನಾಡು ಭಾಗದಲ್ಲಿರುವ ಸಹಕಾರ ಸಂಘಗಳು ಪಾರದರ್ಶಕ ಆಡಳಿತ ನಡೆಸುವುದರಿಂದ ಸರಕಾರ ಅದಕ್ಕೆ ಹಸ್ತಕ್ಷೇಪ ಮಾಡುವುದರಿಂದ ಅಭಿವೃದ್ಧಿಗೆ ಅಡಚಣೆ ಆಗುತ್ತಿದೆ. ಆದರಿಂದ ನಮ್ಮ ಮಲೆನಾಡು ಭಾಗಕ್ಕೆ ಇದು ಉಪಯುಕ್ತವಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ
ಕೇಂದ್ರ ಸರ್ಕಾರದ ಹೊಸ ಸಹಕಾರ ಇಲಾಖೆಯು ಪ್ರಾಂಭವಾಗಿದ್ದು, ಉತ್ತಮ ವಾದ ಸ್ಪಂದನೆ ದೊರೆಯುತ್ತಿದೆ, ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿ ಕೃಷಿಕರಿಗೆ ಸಹಕಾರ ಆಗುವುದೆಂಬ ವಿಶ್ವಾಸವಿದೆ.
ಸಹಕಾರ ಸಂಘದ ಕ್ಷೇತ್ರದಿಂದ ಹಲವಾರು ರೈತರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಹಕಾರ ಸಂಘದ ವ್ಯವಹಾರಗಳು ಹಲವಾರು ಸರ್ಕಾರಿ ಬ್ಯಾಂಕ್‌ಗಳಿಗೆ ಪೈಪೋಟಿಯನ್ನು ನೀಡುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ.
ಅಧಿಕಾರ ವಿಕೇಂದ್ರಿಕರಣ ಹಾಗೂ ಸಹಕಾರ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಮಾಹಿತಿ ಇಲ್ಲದ ಕಾರಣ ಯುವಶಕ್ತಿಗೆ ಸಹಕಾರ ಕ್ಷೇತ್ರದ ಮಹತ್ವ ತಿಳಿಯುತ್ತಿಲ್ಲ. ಅವರು ರಾಜಕೀಯದ ದೃಷ್ಟಿಯಿಂದ ರಾಜಕೀಯ ಪಕ್ಷಗಳ ಒತ್ತಾಯದಿಂದ ಸಹಕಾರ ಕ್ಷೇತ್ರಕ್ಕೆ ಬರುತ್ತಾರೆ. ಅಲ್ಲದೆ ಇಲ್ಲಿ ಆಡಳಿತ ಮಂಡಳಿಯವರಿಗೆ ಗೌರವ ಧನ ಕೂಡ ಲಭಿಸುವುದಿಲ್ಲ ಅದರಿಂದಲೂ ಯುವಕರಿಗೆ ಸಹಕಾರ ಕ್ಷೆತ್ರದ ಮೇಲೆ ಆಸಕ್ತಿಯಿಲ್ಲ. ಯುವಕರು ಹೆಚ್ಚೆಚ್ಚು ಸಹಕಾರ ಕ್ಷೆತ್ರದಲ್ಲಿ ಪಾಲ್ಗೋಳ್ಳಬೇಕಾದ ಅನಿವಾರ್ಯತೆಯಿದೆ.
ಸಹಕಾರ ಸಂಘಗಳಿಂದ ಆರ್ಥಿಕ ಸಬಲೀಕರಣ, ಕನಿಷ್ಟ ದಾಖಲಾತಿ ಗರಿಷ್ಟ ಸಾಲದಂತಹ ಉಪಯುಕ್ತತೆಗಳಿವೆ . ಆದರಿಂದ ರೈತಾಪಿವರ್ಗ ಹಾಗೂ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ”
ನಾಗೇಶ್ ಕುಂದಲ್ಪಾಡಿಯವರು ಸಹಕಾರ ಕ್ಷೇತ್ರದಲ್ಲಿ ಕೊಡಗು ಹಾಪ್‌ಕಾಮ್ಸ್‌ನಲ್ಲಿ 20 ವರ್ಷಗಳಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಎ.ಬಿ.ವಿ.ಪಿ ಯ ಸುಳ್ಯ ತಾಲೂಕು ಸಂಚಾಲಕರಾಗಿ, ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, 1997 ರಲ್ಲಿ ಬಿ.ಜೆ.ಪಿ ಮಂಡಲ ಕಾರ್ಯದರ್ಶಿಯಾಗಿ ಹಾಗೂ 2007ರಲ್ಲಿ ಕೊಡಗು ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿಯಾಗಿ 2010ಲ್ಲಿ ಕೊಡಗು ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ 2015 ರಲ್ಲಿ ಬಿ.ಜೆ.ಪಿ ಸಹಕಾರಿ ಪ್ರಕೋಷ್ಠದ ಅಧ್ಯಕ್ಷರಾಗಿ ಪ್ರಸ್ತುತ ಬಿ.ಜೆ.ಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1994 ರಿಂದ 2000ರದ ಅವಧಿಯ ವರೆಗೆ ಪೆರಾಜೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ನಂತರದ 3 ಅವಧಿಯಲ್ಲಿ ಸದಸ್ಯರಾಗಿ, 2010 ರಲ್ಲಿ ಮಡಿಕೇರಿ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾಗಿ, 2016 ರಲ್ಲಿ ಮಡಿಕೇರಿ ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ 1989ರಲ್ಲಿ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘ, ಪೆರಾಜೆ ಇದರ ಕಾರ್ಯದರ್ಶಿಯಾಗಿ, JCI Junior ಸುಳ್ಯ ಇದರ ಅಧ್ಯಕ್ಷರಾಗಿ, ಪ್ರಸ್ತುತ ಮಡಿಕೇರಿ ತಾಲೂಕು ಅಕ್ರಮ-ಸಕ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿದ್ದು, ಪ್ರಾಥಮಿಕ ಸಂಘ ಶಿಕ್ಷಣವನ್ನು ಪಡೆದಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿ 1994ರಿಂದ ಪೆರಾಜೆ ಶಾಸ್ತಾವು ದೇವಾಲಯದ ಸದಸ್ಯರಾಗಿ, 2012 ರಿಂದ 2017ರವರೆಗೆ ದೇವಾಲಯದ ಮೊಕ್ತೇಸರರಾಗಿ ದೇವಾಲಯದ ನವೀಕರಣವನ್ನು ನಡೆಸಿದ್ದಾರೆ.
ಶೈಕ್ಷಣಿ ಕ್ಷೇತ್ರದಲ್ಲಿ SDMC ಅಧ್ಯಕ್ಷರಾಗಿ ಗ್ರಾಮ ಪ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯ , ರಂಗಸ್ಥಾನ, ಮೈದಾನ ಮತ್ತು ಕಾಂಪೌಡ್‌ನ ವ್ಯವಸ್ಥೆಯನ್ನು ಮಾಡಿದ್ದಾರೆ.
ನಾಗೇಶ್ ಕುಂದಲ್ಪಾಡಿಯವರ ಕುಟುಂಬ ಪರಿಚಯ:
ಮೂಲತ: ಕೃಷಿಕರಾಗಿರುವ ಶ್ರೀ ನಾಗೇಶ್ ಕುಂದಲ್ಪಾಡಿಯವರ ತಂದೆ: ಬೆಳ್ಯಪ್ಪ ಗೌಡ. ತಾಯಿ: ಬೊಮ್ಮಕ್ಕ. ಪತ್ನಿ: ಭಾರತಿ, ಗೃಹಿಣಿ. ಇಬ್ಬರು ಪುತ್ರಿಯರು ವ್ಯಾಸಂಗ ನಿರತರಾಗಿದ್ದಾರೆ.
ನಾಗೇಶ್ ಕುಂದಲ್ಪಾಡಿಯವರು ಪ್ರಸ್ತುತ ಪೆರಾಜೆ ಗ್ರಾ.ಪಂ. ವ್ಯಾಪ್ತಿಯ ಪೆರಾಜೆ. ಕೆ(ಕುಂದಲ್ಪಾಡಿ) ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.