Reading Time: < 1 minute
ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ಸಿರಿಲ್ ಮೊರಾಸ್ ರವರು 2ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಶ್ರೀ ಅಂತೋಣಿ ಕ್ಲೆಮೆಂಟ್ ರೇಗೊರವರು ಉಪಾಧ್ಯಕ್ಷರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸಿರಿಲ್ ಮೊರಾಸ್ ರವರು “ಪ್ರಥಮ ಅವಧಿಯಲ್ಲಿ ನಮ್ಮ ಸಾಧನೆ ಹಾಗೂ ಪಾರದರ್ಶಕ ಆಡಳಿತವನ್ನು ಗುರುತಿಸಿ, ನಮ್ಮ ತಂಡದ ಎಲ್ಲಾ ಸದಸ್ಯರನ್ನು ಅಭೂತಪೂರ್ವವಾಗಿ ಬೆಂಬಲಿಸಿ, ಮತ ನೀಡಿ ಜಯಶಾಲಿಗಳನ್ನಾಗಿ ಮಾಡಿದ ಮಾನ್ಯ ಸದಸ್ಯರುಗಳಿಗೆ ಮನದಾಳದ ಕ್ರೃತಜ್ಜತೆಗಳನ್ನು ಸಲ್ಲಿಸುತ್ತೇನೆ. ಹಾಗೆ ಸಂಘದ ಸದಸ್ಯರಿಗೆ, ಠೇವಣಿದಾರರಿಗೆ ಹಾಗೂ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸುವವರಿಗೆ ನಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸುತ್ತೇವೆ ಎಂಬುದಾಗಿ ಈ ಮೂಲಕ ಭರವಸೆ ನೀಡುತ್ತೇವೆ” ಎಂದು ತಿಳಿಸಿದರು.