ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು; ಸಣ್ಣುವಂಡ ಅಕ್ಕಮ್ಮಉತ್ತಪ್ಪ

Reading Time: 5 minutes

ಸಣ್ಣುವಂಡ ಅಕ್ಕಮ್ಮ ಉತ್ತಪ್ಪ, ಅಧ್ಯಕ್ಷರು: ಗ್ರಾಮ ಪಂಚಾಯಿತಿ ಹಾತೂರು(Gram Panchayat: Hathur )

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಹಾತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಣ್ಣುವಂಡ ಅಕ್ಕಮ್ಮ ಉತ್ತಪ್ಪ ಅವರನ್ನು “ಸರ್ಚ್‌ ಕೂರ್ಗ್‌ ಮೀಡಿಯಾ” ದ “ನಮ್ಮ ಕೊಡಗು-ನಮ್ಮಗ್ರಾಮ” ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

“ಸರ್ಚ್‌ ಕೂರ್ಗ್‌ ಮೀಡಿಯಾ” ದೊಂದಿಗೆ ಮಾತನಾಡಿದ ಸಣ್ಣುವಂಡ ಅಕ್ಕಮ್ಮ ಉತ್ತಪ್ಪ “ನಮ್ಮ ಸಮಾಜಕ್ಕೆ ಸಮಯ ಕೊಡವುದು, ಸೇವೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಸಾಮಾಜಕ್ಕೆ ಮರಳಿ ಕೊಡಲು ಒಂದು ಅವಕಾಶ ದೊರೆತಾಗ ನಾವು ತಡಮಾಡದೆ ನಮ್ಮ ಕರ್ತವ್ಯವನ್ನು ನಿರ್ವಹಿಸಿಬೇಕು. ಈ ಮೊದಲು ನಾನು ಒಂದು NGO ದಲ್ಲಿ ಅನಾಥ ಮಕ್ಕಳಿಗೆ, ಬಡ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ , ಜೀವನಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ನೀಡುವಲ್ಲಿ ಸೇವೆ ಸಲ್ಲಿಸುತ್ತಿದ್ದೆ. 

 ನನ್ನ ಈ ಸಾಮಾಜಿಕ ಕಾರ್ಯವನ್ನು ಗಮನಿಸಿದ ಗ್ರಾಮಸ್ಥರು, ಕುಟುಂಬದದವರು ಹಾಗೂ ಪಕ್ಷದ ಹಿರಿಯರ ಒತ್ತಾಸೆಯ ಮೇರೆಗೆ ಅವರೆಲ್ಲರ ಸಹಕಾರದಿಂದ 2020ರ ಗ್ರಾ.ಪಂ. ಚುನಾವಣೆಯಲ್ಲಿ ಕೈಕೇರಿ 4 ವಾರ್ಡ್‌ ನಿಂದ ನಾನು ಸ್ಪರ್ಧಿಸಿ ಗೆಲುವನ್ನು ಸಾಧಿಸಿ ಹಾತೂರು ಗ್ರಾ.ಪಂ. ಸದಸ್ಯಳಾಗಿ ಆಯ್ಕೆಯಾದೆ. ಪಂಚಾಯಿತಿ ಆಡಳಿತದ 2ನೇ ಅವಧಿಯಲ್ಲಿ ಅಧ್ಯಕ್ಷೆ ಯಾಗಿ ಆಯ್ಕೆಯಾದೆ. 

ಪಂಚಾಯಿತಿಗೆ ಈ ವರ್ಷ ಸ್ವಚ್ಚ ಗ್ರಾಮವೆಂದು ಗಾಂಧೀ ಗ್ರಾಮ ಪುರಸ್ಕಾರ ದೊರಕಿದೆ. ಕಸವಿಲೇವಾರಿಗೆ ಘಟಕವಿದ್ದು, ಕಸ ಸಂಗ್ರಹಮಾಡಲು ವಾಹನ ವ್ಯವಸ್ಥೆಯಿದೆ. ವಾರದ ಒಂದು ದಿನ ಒಂದು ವಾರ್ಡ್‌ಗೆ ಹಾಗೆ ವಾಹನ ವ್ಯವಸ್ಥೆಯಿದೆ. ಪ್ರಸ್ತುತ ಒಣ ಕಸ ಮಾತ್ರ ಸಂಗ್ರಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಸಿ ಹಸವನ್ನು ಕೂಡ ಸಂಗ್ರಹ ಮಾಡಲಾಗುವುದು. ಆದರಿಂದ ಮನೆಗಳಲ್ಲೇ ಹಸಿ ಕಸವನ್ನು ಗೊಬ್ಬರವಾಗಿ ಬಳಸಲು ಸಲಹೆಯನ್ನು ನೀಡಲಾಗಿದೆ. ಕಸ ಸಂಗ್ರಹ ಮಾಡಲು ವಾಹನ ವ್ಯವಸ್ಥೆ ಮಾಡಲಾಗಿದ್ದರು ಸಹ , ಗ್ರಾಮಸ್ಥರು ರಸ್ತೆ ಬದಿಯಲ್ಲೇ ಕಸವನ್ನು ಹಾಕುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸಿದ್ದರೂ ಕೂಡ ಹಾಗೆ ಮುಂದುವರೆಸುತ್ತಿರುವುದು ದುಃಖದ ವಿಷಯವಾಗಿದ್ದು, ಗ್ರಾಮಸ್ಥರು ಸ್ವಯಂ ಆಗಿ ಯೋಚಿಸಬೇಕಾದ ಅವಶ್ಯಕತೆ ಇದೆ. ನಮ್ಮ ಗ್ರಾಮವನ್ನು ಸ್ವಚ್ಛವಾಗಿಡುವು ಪ್ರತಿಯೊಬ್ಬ ಗ್ರಾಮಸ್ಥರ ಕರ್ತವ್ಯವಾಗಿದೆ.

3 ರಿಂದ 4 ವಾರ್ಡ್‌ಗಳಲ್ಲಿ ಕೇಂದ್ರ ಸರ್ಕಾರದ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಕಾಮಗಾರಿ 80% ರಷ್ಟು ಪೂರ್ಣವಾಗಿದೆ. ಮನೆ ಮನೆಗೆ ಕುಡಿಯುವ ನೀರಿನ ಯೋಜನೆ ಪೂರ್ಣವಾಗಿದೆ. ಆದರಿಂದ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಸ್ವಚ್ಛಬಾರತ್‌ ಯೋಜನೆ ಅಡಿಯಲಿ ಮನೆ ಮನೆಗೆ ಶೌಚಾಲಯ ಶೇಕಡ. 100% ರಷ್ಟು ಆಗಿದೆ. ಬಸವೇಶ್ವರ ಬಡಾವಣೆ ಅಭಿವೃಧ್ಧಿ ಆಗುತ್ತಿದೆ. ರಸ್ತೆ, ಮನೆಗಳ ನಿರ್ಮಾಣ, 90% ತೆರೆದ ಬಾವಿಗಳು ಎಲ್ಲಾ ಗ್ರಾಮಗಳಿಗೆ ಆಗಿದೆ. ಕುಡಿಯುವ ನೀರಿನ ವ್ಯವಸ್ಥೆ ಪೂರ್ಣವಾಗಿದೆ. ಕೈಕೇರಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಅದಕ್ಕೆ ಕಾರಣ ಅಲ್ಲಿನ ಅಂತರ್ಜಲದ ಮಟ್ಟ ಕಡಿಮೆ ಇರುವುದು. ಆದರಿಂದ ತೆರೆದ ಬಾವಿ ಹಾಗೂ ಕೊಳವೆ ಬಾವಿ ತೋಡಿದಾಗಲೂ ನೀರು ಲಭಿಸುತ್ತಿಲ್ಲ.15 ನೇ ಹಣಕಾಸಿನ ಯೋಜನೆಯ ಅನುದಾನವನ್ನು ಬಳಸಲಾಗಿದೆ. 

ಕೈಕೇರಿ ಭಾಗದಲ್ಲಿ ಲೇಜೌಟ್‌ಗಳ ನಿರ್ಮಾಣ ವೇಗವಾಗಿ ನಡೆಯುತ್ತಿದ್ದು,  ಲೇಔಟ್‌ಗಳನ್ನು ಖರೀದಿಸುವವರಿಗೆ ಮನವಿ ಮಾಡುವುದೇನೆಂದರೆ ಲೇಜೌಟ್‌ಗಳ ದಾಖಲಾತಿಗಳು, ಜಾಗದ ಸೂಕ್ತ ಅಳತೆ, ಜಾಗ ಪರಿವರ್ತನೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ವ್ಯವಸ್ಥೆ ಮುಂತಾದವುಗಳು ಮೊದಲೆ ಪೂರ್ಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ಇಲ್ಲದಿದಲ್ಲಿ ಜಾಗ ಖರೀದಿಯ ನಂತರ ಪಂಚಾಯಿತಿಯಲ್ಲಿ ಬಂದು ವ್ಯವಸ್ಥೆಗಳು ಪೂರ್ಣವಾಗಿಲ್ಲವೆಂದು ಹೇಳಿದರೆ ಅದನ್ನು ಪರಿಹರಿಸಲು ನಮಗೂ ಕಷ್ಟವಾಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. 

ಎಲ್ಲಾ ಅನುದಾನಗಳನ್ನು ಸೂಕ್ತವಾಗಿ ಬಳಸಲಾಗಿದೆ. ಖಾಸಗಿ ಶಾಲೆ ಹಾಗೂ ರೆಸಾರ್ಟ್‌ಗಳು ಪಂಚಾಯಿತಿಗೆ ಆದಾಯದ ಮೂಲಗಳಾಗಿದೆ. ಪಾರದರ್ಶಕ ಆಡಳಿತ , ಹಾಗೂ ಗ್ರಾಮಸ್ಥರಿಗೆಲ್ಲ ಪಂಚಾಯಿತಿಯ ಆಡಳಿತದ ಬಗ್ಗೆ ಹಾಗೂ ಅವರ ಅಧಿಕಾರ ವ್ಯಾಪ್ತಿಗಳ ಬಗ್ಗೆ ಜಾಗೃತಿ ಮೂಡಿಸುವುದು ನನ್ನ  ಕನಸಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಆಗಲೇ ಸಾಮಾಜಿಕವಾಗಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುವುದು. ರಾಜಕೀಯ ಕ್ಷೇತ್ರ ತುಂಬಾ ಕಷ್ಟವಾಗಿ, ಸವಾಲುಗಳಿಂದ ಕೂಡಿದ್ದರೂ ಹೆದರದೆ ಧೈರ್ಯವಾಗಿ ಸವಾಲುಗಳನ್ನು ಸ್ವೀಕರಿಸಬೇಕು. ರಾಜಕೀಯದಲ್ಲಿ ಕೂಡಾ ಹೆಣ್ಣು ಮಕ್ಕಳ ಪಾತ್ರ ಮುಖ್ಯವಾಗಿದೆ. ಮಕ್ಕಳಿಗೆ ಕಿರಿಯ ವಯಸ್ಸಿನಲ್ಲೇ ಸಾಮಾಜಿಕ ಕಾರ್ಯ, ರಾಜಕೀಯ ಮುಂತಾದವುಗಳ ಬಗ್ಗೆ ಪುಸ್ತಕ ಜ್ಞಾನದಿಂದ ಮಾತ್ರವಲ್ಲದೆ ಪಾಯೋಗಿಕವಾಗಿ ಅದರ ಭಾಗವಹಿಸುವಿಕೆಯಿಂದ ಜ್ಞಾನವನ್ನು ಕಲಿಸುವುದು ಮುಖ್ಯವಾಗಿದೆ. 

ನಾವು ಪುಸ್ತಕದಲ್ಲಿ ಕಲಿಯುವ ಶಿಕ್ಷಣದ ವಾತಾವರಣ ಹಾಗೂ ನೈಜ ಜೀವನದಲ್ಲಿ ಬದುಕುವ ವಾತಾವರಣ ಬೇರೆಯೇ ಆಗಿದೆ. ನಮ್ಮದು ಪ್ರಜಾಪ್ರಭುತ್ವದ ದೇಶವಾಗಿರುವುದರಿಂದ ಯುವಕರು ಚುನಾವಣೆ, ಅದರಲಿ ಸ್ಪರ್ಧಿಸುವುದು ಮತ ಚಲಾವಣೆ ಮಾಡುವುದು ಪ್ರಮುಖ ಪಾತ್ರವಹಿಸುತ್ತದೆ. ಆದರಿಂದ ಅವರಿಗೆ ಶಾಲೆಗೆ ಹೋಗುವ ಸಂದರ್ಭದಲ್ಲೇ ಅವರ ಶಾಲೆಗಳಲ್ಲೇ ಚುನಾವಣೆಯಿಂದ ನಾಯಕರನ್ನು ಆಯ್ಕೆಮಾಡಿಸುವ ಬಗ್ಗೆ ಮುಂತಾದವುಗಳನ್ನು ಕಲಿಸಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ”

ಮೂಲತಃ ಕೃಷಿಕರಾಗಿರುವ ಸಣ್ಣುವಂಡ ಅಕ್ಕಮ್ಮ ಉತ್ತಪ್ಪನವರು, ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಗೋಣಿಕೊಪ್ಪಲು ಎ.ಪಿ.ಸಿ.ಎಂ.ಸಿ ಯ ಸದಸ್ಯೆಯಾಗಿ ಸೇವೆಸಲ್ಲಿಸಿದ್ದಾರೆ. ಇವರ ತಂದೆ: ದಿವಂಗತ ಉದ್ದಪಂಡ ಕಾಶಿಯಪ್ಪ,  ತಾಯಿ: ಮಾಚಮ್ಮ ಪತಿ: ದಿವಂಗತ ಸಣ್ಣುವಂಡ ಕುಮಾರ್‌ ಉತ್ತಪ್ಪ, ಮಗ: ಸಣ್ಣುವಂಡ ದೇವಯ್ಯ ಇಂಜಿನಿರಿಂಗ್‌ ವ್ಯಾಸಂಗ ನಿರತರಾಗಿದ್ದಾರೆ. ಪ್ರಸ್ತುತ ಇವರು ಹಾತೂರು ಪಂಚಾಯಿತಿ ವ್ಯಾಪ್ತಿಯ ಕೈಕೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಾಮಾಜಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು ಈ ಸಂದರ್ಭದಲ್ಲಿ  ಹಾರೈಸುತ್ತದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments