ಕಡಂಗ: ಇತಿಹಾಸ ಪ್ರಸಿದ್ಧ ಕಡಂಗ ಕೊಕ್ಕ0ಡ ಬಾಣೆ ಊರೂಸ್ ಕಾರ್ಯಕ್ರಮವು ಜನವರಿ 31 ಶುಕ್ರವಾರ ದಿಂದ ಫೆಬ್ರವರಿ 04 ಮಂಗಳವಾರದ ವರೆಗೆ ನೆಡೆಯಲಿದೆ.
ಶುಕ್ರವಾರದ ಜುಮಾ ನಮಾಜಿನ ಬಳಿಕ ಮುಹಿಯದ್ದಿನ್ ಜುಮಾ ಮಸೀದಿಯಿಂದ ಭಂಡಾರ ಹೊತ್ತು ಕೊಕ್ಕಂಡ ಬಾಣೆ ದರ್ಗಾದವರೆಗೆ ಬೃಹತ್ ಮೆರವಣಿಗೆ ನೆಡೆಸಲಾಗುವುದು. ತದನಂತರ ಮಖಾಂ ಅಲಂಕಾರ ಮತ್ತು ಪ್ರಾರ್ಥನೆಗೆ ಮುಹಿಯದ್ದೀನ್ ಜುಮಾ ಮಸೀದಿ ಖತೀಬ್ ಉಸ್ತಾದರಾದ ರಫೀಕ್ ಲತೀಫ್ ನೇತೃತ್ವಗೈಲಿದ್ದಾರೆ. ಊರೂಸ್ ನ ಧ್ವಜರೋಹಣ ಕಾರ್ಯಕ್ರಮವನ್ನು ಅಧ್ಯಕ್ಷರಾದ ಕುಂಜಿ ಅಬ್ದುಲ್ಲ ಪಿ ಎಂ ರವರು ನೆರವೇರಿಸಲಿದ್ದಾರೆ.
ಜನವರಿ 31: ಶುಕ್ರವಾರ ರಾತ್ರಿ ನೆಡೆಯುವ ಮಜಿಲಿಸುನೂರ್ ಕಾರ್ಯಕ್ರಮಕ್ಕೆ ಕೇರಳದ ಸೈಯದ್ ಸಫಿಯುಲ್ಲಾ ಆಟಕೊಯ ತಂಗಳ್ ನೇತೃತ್ವ ವಹಿಸಲಿದ್ದಾರೆ. ಪ್ರಾರ್ಥನೆಗೆ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಜಿ ಎಡಪಾಲ ವಹಿಸಲಿದ್ದಾರೆ.
ಫೆಬ್ರವರಿ 01: ನಿವಾರ ರಾತ್ರಿ ನೆಡೆಯುವ ಬುರ್ದಾ ಮಜ್ಲಿಸ್ ಗೆ ನಿಸಾರ್ ಕುತುಬಿ ಮಡವೊರ್ ನೇತೃತ್ವ ವಹಿಸಲಿದ್ದಾರೆ. ಪ್ರಾರ್ಥನೆಗೆ ಮುಹೀದ್ದಿನ್ ಕುಟ್ಟಿ ಉಸ್ತಾದ್ ಕಡಂಗ ನೇತೃತ್ವ ವಹಿಸಲಿದ್ದಾರೆ
ಫೆಬ್ರವರಿ 02:ಭಾನುವಾರ ರಾತ್ರಿ ಇಸ್ಲಾಮಿಕ್ ಕಥಾ ಪ್ರಸಂಗ ಕಾರ್ಯಕ್ರಮವನ್ನು ಸಿ.ಕೆ.ಎಸ್ ಮೌಲವಿ ಮನ್ನಾರ್ ಕಾಡ್ ರವರು ನಿರ್ವಹಿಸಲಿದ್ದಾರೆ.
ಫೆಬ್ರವರಿ 03 ಮತ್ತು ಫೆಬ್ರವರಿ 04:: ಸೋಮವಾರ ರಾತ್ರಿ ನೆಡೆಯುವ ಸಮಾರಂಭಕ್ಕೆ ನವಾಜ್ ಮನ್ನಾನಿ ಮುಖ್ಯ ಭಾಷಣಗೈಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಸಂಜೆ ಮೌಲಿದ್ ಪಾರಯಣ ಮತ್ತು ಸಾರ್ವಜನಿಕ ಅನ್ನಸಂಪರ್ಪಣೆ ನೀಡಲಾಗುವುದು. ಊರೂಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶಿಸಲಾಗುವುದು.
ಕೋಮು ಸೌಹಾರ್ದತೆ ಸಾಕ್ಷಿಯಾದ ಕೊಕ್ಕಂಡ ಬಾಣೆ ಊರುಸ್ ದಿನಾಂಕ ನಿಗದಿಪಡಿಸಿದರಿಂದ ಎಲ್ಲಾ ಕಾರ್ಯಕ್ರಮಕ್ಕೂ ಪಾಲಚಂಡ ಕುಟುಂಬಸ್ಥರ ಸಹಕಾರವು ಎಲ್ಲಾ ವರ್ಷದಂತೆ ಈ ವರ್ಷವು ಕೊಡ ಕೈ ಜೋಡಿಸಿದ್ದಾರೆ ಎಂದು ಮನ್ಶವುಲ್ ಉಲೂಮ್ ಮದರಸ ಪ್ರಾಂಶುಪಾಲರದ ಶುಹೈಬ್ ಫೈಜಿ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ಲ ಪಿ.ಎಂ,ಕಾರ್ಯದರ್ಶಿ ಅಬ್ದುಲ್ ರಹಮಾನ್, ಸದಸ್ಯರಾದ ಶಮೀರ್ ಪಿ ಎಚ್, ಅಬ್ದುಲ್ ರಹಮಾನ್.ಟಿ, ಎಂ. ಸಿದ್ದಿಕ್. ಉಪಸ್ಥಿತರಿದ್ದರು.
ವರದಿ: ನೌಫಲ್ ಕಡಂಗ