ಜೆ.ಎನ್.ಜೆ. ಕಾಫಿ ವರ್ಕ್ಸ್‌ನ ವ್ಯವಸ್ಥಾಪಕ ಪಾಲುದಾರರಾದ ಕೊಳುವಂಡ ಕಾರ್ಯಪ್ಪನವರೊಂದಿಗಿನ ಸಂದರ್ಶನ
ಕಾರ್ಯಪ್ಪನವರೆ, ನಿಮ್ಮ ಜೆ.ಎನ್.ಜೆ. ಕಾಫಿ ವರ್ಕ್ಸ್‌ನ್ನು ನೀವು ಹೇಗೆ ಪ್ರಾರಂಭಿಸಿದ್ದೀರಿ?
ಕಾಫಿ ಉದ್ಯಮದಲ್ಲಿ ನಾನು ಕಳೆದ 40 ವರ್ಷಗಳಿಂದ ಅನುಭವ ಹೊಂದಿದ್ದೇನೆ. ವೈನಾಡಿನಲ್ಲಿರುವ ವಾರಿಯತ್ ಕಾಫಿ ಎಸ್ಟೇಟ್ ನಲ್ಲಿ ಹತ್ತು ವರ್ಷ ಅಂದರೆ 1985 ರಿಂದ 1995 ರವರೆಗೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದೆ. ಈ ಕಾಫಿ ತೋಟವು ಏಷ್ಯಾದ ಅತ್ಯಂತ ಇಳುವರಿ ನೀಡುವ ತೋಟವಾಗಿ ಹೆಸರು ಮಾಡಿದೆ. 370 ಎಕರೆ ವಿಸ್ತೀರ್ಣದ ಕಾಫಿ ತೋಟದಲ್ಲಿ ಸರಿ ಸುಮಾರು 624 ಟನ್ ದಾಖಲೆ ಮಟ್ಟದ ಕಾಫಿ ಕುಯ್ಲು ಈ ತೋಟದಲ್ಲಿ ಮಾಡಲಾಗುತ್ತಿದೆ. ಈ ಕಾಫಿ ತೋಟದಲ್ಲಿ ಕಾಫಿ ಪಲ್ಪಿಂಗ್, ಡ್ರೈಯಿಂಗ್ ಹಾಗೂ ಹಲ್ಲಿಂಗ್‌ಗೆ ಆ ದಿನದ ಸಮಯದಲ್ಲಿ ಬ್ರೆಜಿಲ್ ನಂತಹ ದೇಶಗಳಿಂದ ಯಂತ್ರಗಳನ್ನು ತಂದು ಸ್ಥಾಪಿಸಿ ಕೆಲಸಗಳನ್ನು ಮಾಡಿರುವ ಅನುಭವವನ್ನು ಪಡೆದಿದ್ದೇನೆ.
1995 ರಲ್ಲಿ ನಾನು ಕೇರಳದಿಂದ ಬಿಟ್ಟು ಕೊಡಗಿನ ಟಾಟಾ ಕಾಫಿಯಲ್ಲಿ 1995ರಿಂದ 2007 ರ ತನಕ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದೆ. ನನ್ನದೆ ಆದ ಸ್ವಂತ ಉದ್ಯಮವನ್ನು ಮಾಡಬೇಕೆಂಬ ಇಚ್ಛೆಯಿಂದ 2007ರಲ್ಲಿ ನಾನು ಟಾಟಾ ಕಾಫಿಗೆ ರಾಜಿನಾಮೆಯನ್ನು ನೀಡಿ ಬಂದು ಎಸ್ಟೇಟ್ ಮ್ಯಾನೇಜ್ಮೆಂಟ್ ಮತ್ತು ಕನ್ಸಲ್ಟೆಂಟ್ ಅನ್ನು ಶುರು ಮಾಡಿ ಸರಿ ಸುಮಾರು ಕೊಡಗಿನ 1200 ಎಕರೆಯಷ್ಟು ವಿವಿಧ ಕಾಫಿ ತೋಟಗಳಲ್ಲಿ ಕನ್ಸಲ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದೇನೆ.
ನಂತರದ ದಿನಗಳಲ್ಲಿ ಕಾಫಿ ಉದ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಕಳೆದ 5 ವರ್ಷಗಳಿಂದ ಅಂದರೆ 2020 ರಲ್ಲಿ ವಿರಾಜಪೇಟೆ ಸಮೀಪದ ಚಂಬೆಬೆಳ್ಳೂರು ಗ್ರಾಮದ ಕುಕ್ಲೂರುವಿನಲ್ಲಿ ಜೆ.ಎನ್.ಜೆ. ಕಾಫಿ ವರ್ಕ್ಸ್ ಪ್ರಾರಂಭಿಸಿ ಇದುವರೆಗೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.
ನಿಮ್ಮ ಜೆ.ಎನ್.ಜೆ. ಕಾಫಿ ವರ್ಕ್ಸ್‌ನ ಕಾರ್ಯ ವಿಧಾನದ ಕುರಿತು ತಿಳಿಸುವಿರಾ?
ಬೆಳೆಗಾರರು ತಂದ ಕಾಫಿಯ 500ಗ್ರಾಂ. ಮಾದರಿಯನ್ನು ಮೊದಲಿಗೆ ಹಲ್ಲಿಂಗ್ ಮಾಡಿ ಅದರ ಇಳುವರಿ(‘OUT-TURN TEST’) ಹಾಗೂ ತೇವಾಂಶ(Moisture)ವನ್ನು ತಿಳಿಸಿಕೊಡುತ್ತೇವೆ. ತದನಂತರ ಬೆಳೆಗಾರರು ಒಪ್ಪಿದರೆ ಅವರ ಕಾಫಿಯನ್ನು ನಮ್ಮ ವಾಹನದಲ್ಲೆ ಅವರ ತೋಟದಿಂದ ನೇರವಾಗಿ ತಂದು ಪ್ರತಿ ಚೀಲದಿಂದ ಸ್ಯಾಂಪಲ್ ತೆಗೆದು ಪುನಃ ಅವರ ಮುಂದೆ ಪಾರದರ್ಶಕವಾಗಿ ಇಳುವರಿ ಹಾಗೂ ತೇವಾಂಶವನ್ನು ನಿಗದಿ ಮಾಡಿ ಪೂರ್ಣ ಪ್ರಮಾಣದ ಮೊತ್ತವನ್ನು ಬ್ಯಾಂಕಿನ ಮೂಲಕ ಪಾವತಿಸುವ ವ್ಯವಸ್ಥೆ ನಮ್ಮಲ್ಲಿ ಇದೆ.
ಕಾಫಿಯ ಗುಣಮಟ್ಟ ಸಮತೋಲನ ಕಾಪಾಡುವ ದೃಷ್ಠಿಯಿಂದ ಯಾವುದೇ ಕಾರಣಕ್ಕೆ ತೇವಾಂಶವಿರುವ ಕಾಫಿಯನ್ನು ನಾವು ಖರೀದಿಸುವುದಿಲ್ಲ. ಈ ಎಲ್ಲವನ್ನು ಸಂಸ್ಥೆಯ ಹಿತ ದೃಷ್ಟಿಯಿಂದ ನಾವು ವ್ಯವಹಾರವನ್ನು ನಡೆಸುತ್ತಿದ್ದೇವೆ.
ಅಲ್ಲದೆ ಬೆಳೆಗಾರರ ಕಾಫಿಯ ದಾಸ್ತಾನು ಮಾಡುವ ವ್ಯವಸ್ಥೆ ನಮ್ಮಲ್ಲಿ ಇದೆ. ಬಾಡಿಗೆ, ಸಾಗಾಣಿಕ ವೆಚ್ಚ ಹಾಗೂ ವಿಮಾ ಭದ್ರತೆ ನೀಡಿ ಪ್ರತಿ ಚೀಲವೊಂದಕ್ಕೆ ದಾಸ್ತಾನು ಮಾಡಲು 50 ರೂಪಾಯಿಯಂತೆ ಒಂದು ವರ್ಷಕ್ಕೆ ನಿಗದಿ ಮಾಡಲಾಗಿದೆ.
ಕಾಫಿ ಕುಯುಲು ಸೀಸನ್ ಟೈಮಿನಲ್ಲಿ ಹಸಿ ಕಾಫಿಯನ್ನು ಖರೀದಿ ಮಾಡುತ್ತೇವೆ. ಕಾಫಿ ಸಾಕಾಣಿಕೆಗೆ ನಮ್ಮದೇ ಆದ ವಾಹನ ಸೌಕರ್ಯವಿರುತ್ತದೆ.
ನಮ್ಮದೇ ಆದ ತತ್ವ ಸಿದ್ಧಾಂತಗಳಲ್ಲಿ ಸತ್ಯ ಮತ್ತು ನೀತಿಯಲ್ಲಿ ನಮ್ಮದೇ ಆದ ರೀತಿಯ ವ್ಯವಹಾರವನ್ನು ಮಾಡಿಕೊಂಡು ಬರುತ್ತಿದ್ದೇವೆ. ನಾವು ಕಾಫಿ ಅಲ್ಲದೆ ಕಾಳು ಮೆಣಸು, ಭತ್ತ, ಅಡಿಕೆ ಹಾಗೂ ಏಲಕ್ಕಿ ವ್ಯವಹಾರದಲ್ಲಿಯೂ ತೊಡಗಿಕೊಂಡಿದ್ದೇವೆ. ನಮಗೆ ರೈತ ಬಾಂದವರ ಪೂರ್ಣ ಪ್ರಮಾಣದ ಸಹಕಾರ ಇಲ್ಲಿಯವರಗೆ ದೊರೆಯುತ್ತಾ ಬಂದಿದ್ದು, ಮುಂದಕ್ಕೂ ಅವರ ಸಹಕಾರ ದೊರಕುತ್ತದೆ ಎಂಬ ಆಶಾ ಭಾವನೆಯನ್ನು ನಮ್ಮಲ್ಲಿ ಇದೆ.
ಕಾಫಿ ಬೆಳೆಗಾರರಿಗೆ ನೀವು ಏನು ಸಲಹೆ ನೀಡಲು ಇಚ್ಚಿಸುತ್ತಿರಿ?
ಭೂಮಿಯ ಯಾವ ದಿಕ್ಕಿನಿಂದ ಸೂರ್ಯನ ಬೆಳಕಿನ ವ್ಯವಸ್ಥೆ ಗಿಡಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿತುಕೊಂಡು ನಮ್ಮ ಕೊಡಗಿನಲ್ಲಿ ನೈಸರ್ಗಿಕವಾಗಿರುವ ಅಮೂಲ್ಯವಾದ ಮರ-ಗಿಡಗಳನ್ನು ಉಳಿಸಿಕೊಂಡು, ಕಾಫಿ ಕೃಷಿ ಮಾಡಿದರೆ ನೈಸರ್ಗಿಕವಾದ ವಿಪತ್ತುಗಳನ್ನು ಮೆಟ್ಟಿ ನಿಲ್ಲಬಹುದು. ಸಮಯಕ್ಕೆ ಸರಿಯಾಗಿ ಕಾಫಿ ಕುಯ್ಯುಲು ಮಾಡಿ, ಸರಿಯಾದ ರೀತಿಯಲ್ಲಿ ಒಣಗಿಸಿ, ಸಂಸ್ಕರಿಸಿ ಸೂಕ್ತವಾದ ಗೋದಾಮುಗಳಲ್ಲಿ ದಾಸ್ತಾನು ಮಾಡಿದರೆ, ಪ್ರತಿಯೋರ್ವ ಬೆಳೆಗಾರನ ಅಳಿಲು ಸೇವೆ ಕಾಫಿ ಉದ್ಯಮಕ್ಕೆ ನೀಡಿದಂತಾಗುತ್ತದೆ.
ಕಾಫಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ಹೊಸ ತಲೆಮಾರು ಯುವ ಪೀಳಿಗೆಗೆ ನೀವು ಯಾವ ಸಲಹೆಯನ್ನು ನೀಡುತ್ತೀರಿ?
ಸ್ಥಳೀಯವಾಗಿ ಕಾಫಿಪುಡಿಯ ಘಟಗಳನ್ನು ಪ್ರಾರಂಭ ಮಾಡಿ ತಮ್ಮದೆ ಆದ ರೀತೀಯ ಬ್ರಾಂಡ್‌ನಲ್ಲಿ ಮಾರಾಟ ಮಾಡುವ ಸ್ವಂತ ಉದ್ಯಮಕ್ಕೆ ವಿಫುಲ ಅವಕಾಶಗಳು ಕೊಡಗಿನಲ್ಲಿ ಇದೆ. ಇದಕ್ಕೆ ಇಂದಿನ ಯುವ ಪೀಳಿಗೆ ಮುತುವರ್ಜಿ ವಹಿಸಿ ಮುಂದೆ ಸಾಗುವ ಸಲಹೆಯನ್ನು ಈ ಸಂದರ್ಭವನ್ನು ತಿಳಿಸುತ್ತೇನೆ.
ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಪಾತ್ರವನ್ನು ತಿಳಿಸುವಿರಾ?
ಧಾರ್ಮಿಕ ಕ್ಷೇತ್ರದಲ್ಲಿ ಚಂಬೆ ಬೆಳ್ಳೂರು ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಈಶ್ವರ ಪಾರ್ವತಿ ದೇವಾಲಯದ ತಕ್ಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದೇನೆ ಅಲ್ಲದೆ ವಿರಾಜಪೇಟೆ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವಾಲಯದ ಅಧ್ಯಕ್ಷರಾಗಿ ಹಾಗೂ ನಾಡಿನ ತಕ್ಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಕೊನೆಯದಾಗಿ, ಬೆಳೆಗಾರರು ನಿಮ್ಮ ಕಾಫಿ ವರ್ಕ್ಸ್‌ನ್ನು ಹೇಗೆ ಹುಡುಕಬಹುದು?
ನಮ್ಮನ್ನು ಈ ಕೆಳಗಿನ ವಿಳಾಸದಲ್ಲಿ ಅಥವಾ ಈ ಮೊಬೈಲ್ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು:
JNJ COFFEE WORKS
KUCKLOOR, Chembebellur Road,
Virajpet, Karnataka 571218
Mob: +919448721469
Coluvanda Cariappa
Mob: +919483333008
Gautham Chengappa
Good going and all the very best wishes for your endeavours, Cari 😊