ಕೊಡವ ಕುಟುಂಬ ತಂಡಗಳ ನಡುವಿನ 25ನೇ ವರ್ಷದ ಮುದ್ದಂಡ ಹಾಕಿ ಪಂದ್ಯಾವಳಿಯ ಕ್ರೀಡಾ ಜ್ಯೋತಿಯನ್ನು ಕರಡ ಗ್ರಾಮದ ಪಾಂಡಂಡ ಐನ್ ಮನೆಯಲ್ಲಿ ಉದ್ಘಾಟಿಸಲಾಯಿತು.
ಕ್ರೀಡಾ ಜ್ಯೋತಿಯನ್ನು ಪಾಂಡಂಡ ಮೊಣ್ಣಪ್ಪ ,ಪಾಂಡಂಡ ದಿ.ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಮುದ್ದಂಡ ಕಪ್ ಹಾಕಿ ನಮ್ಮೆಗೆ ಶುಭಕೋರಿ ಹಾಕಿ ನಮ್ಮೆಗೆ 396 ತಂಡ ಪಾಲ್ಗೋಳ್ಳಲಿದೆ ಎಂದು ಹರ್ಷವ್ಯಕ್ತಪಡಿಸಿದರು. ದೇಶದಾದ್ಯಂತ ಹಾಕಿ ಹಬ್ಬ ಗಮನ ಸೆಳೆದಿದೆ.46 ಮಹಿಳಾ ತಂಡ ಭಾಗವಹಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
24 ಕುಟುಂಬಗಳ ಐನ್ ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾ ಜ್ಯೋತಿ ತಲುಪಲಿದ್ದು, ಮಾರ್ಚ್ 28 ರಂದು ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಿಂದ ಫೀ.ಮಾ.ಕಾರ್ಯಪ್ಪ ಕಾಲೇಜು ಮೈದಾನದವರೆಗೆ ಮೆರವಣಿಗೆಯ ಮೂಲಕ ಬರಲಿದೆ.
ಪಾಂಡಂಡ ಮೊಣ್ಣಪ್ಪ, ಮುದ್ದಂಡ ತಿಮ್ಮಯ್ಯ , ಮುದ್ದಂಡ ರಶಿನ್ ಸುಬ್ಬಯ್ಯ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಸುಜು ಬೋಪ್ಪಣ್ಣ, ಪಾಂಡಂಡ, ಮುದ್ದಂಡ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.