ಮಡಿಕೇರಿ: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿಯಿರುವ ಕೆಳಗಿನ ಗೌಡ ಸಮಾಜ ಹತ್ತಿರದ ಶ್ರೀ ಭದ್ರಕಾಳಿ ಭಗವತಿ ದೇವಸ್ಥಾನದ ವಾರ್ಷಿಕೋತ್ಸವವು ಮೇ 5ರಿಂದ 6ರವರಗೆ ನಡೆಯಲಿದೆ.
ದಿನಾಂಕ: 05-05-2025ರ ಸೋಮವಾರ ಸಂಜೆ, ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯ ವಾಚನ, ಸ್ಥಳ ಶುದ್ಧಿ, ದೀಪ ನಮಸ್ಕಾರ,ದಿಕ್ಪಾಲಕ ಬಲಿ
ದಿನಾಂಕ: 06-05-2025ರ ಮಂಗಳವಾರ ಸಂಜೆ, ಗಣಪತಿ ಹೋಮ, ನವಕಳಸ ಪ್ರತಿಷ್ಠಾಪನ ಪೂರ್ವಕ ದುರ್ಗಾ ಹೋಮ, ನಾಗಮೂಲಮಂತ್ರ ಹವನ, ಮಹಾಪೂರ್ಣಾಹುತಿ, ನಾಗದೇವತೆಗೆ ಪೂಜೆ, ಬೋಳಾರಮ್ಮನಿಗೆ ಫಲ ಪಂಚಾಮೃತ ಅಭಿಷೇಕ, ಪೂರ್ವಕ ನವಕಳಸ ಅಭಿಷೇಕ, ಹೂವಿನ ಅಲಂಕಾರ ಪೂರ್ವಕ ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯಲಿದೆ.
ಶ್ರೀ ಭದ್ರಕಾಳಿ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವಿರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಭದ್ರಕಾಳಿ ಭಗವತಿ ದೇವಸ್ಥಾನ ಸಮಿತಿ ವಿನಂತಿಸಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277778657