7TH HOSKOTE 7 ನೇ ಹೊಸಕೋಟೆ

Reading Time: 7 minutes

7 ನೇ ಹೊಸಕೋಟೆ - 7TH HOSKOTE

   7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಒಂದೇ ಕಂದಾಯ ಗ್ರಾಮವನ್ನು ಹೊಂದಿದ್ದು ಭಾಗ-1, ಭಾಗ-2, ಭಾಗ-3. ಎಂಬ ಮುರು ವಾರ್ಡುಗಳಿರುತ್ತೆದೆ.7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯು ಬಿ.ಎಂ ರಸ್ತೆ ಬದಿಯಲ್ಲಿದ್ದು ಕೇಂದ್ರ ಸ್ಥಾನ ಮಡಿಕೇರಿಗೆ 20.ಕಿ.ಮೀ. ಹೋಬಳಿ ಕಛೇರಿ ಸುಂಟಿಕೊಪ್ಪಕ್ಕೆ 5.ಕಿ.ಮೀ, ಕುಶಾಲನಗರಕ್ಕೆ 10.ಕಿ.ಮೀ, ಸೋಮವಾರಪೇಟೆ ತಾಲ್ಲೂಕು ಕಛೇರಿಗೆ 42.ಕಿ.ಮೀ ದೂರವನ್ನು ಹೊಂದಿರುತ್ತದೆ. ಈ.ಗ್ರಾಮ ಪಂಚಾಯಿತಿಯು ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ ಮತ್ತು ಗುಡ್ಡೆಹೊಸೊರು ಗ್ರಾಮ ಪಂಚಾಯಿತಿಗಳ ಮಧ್ಯ ಭಾಗದಲ್ಲಿದೆ.ಗ್ರಾ.ಪಂ.2001ರ ಜನಗಣತಿ ಪ್ರಕಾರ 3573 ಜನ ಸಂಖ್ಯೆಯನ್ನು ಹೊಂದಿದು 258 ಪ.ಜಾತಿ, 162.ಪ.ಪಂ, 1451 ಅಲ್ಪಸಂಖ್ಯಾತರು ಜನರು ಇರುತ್ತಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಹರಿಜನ ಮತ್ತು ಒಂದು ಗಿರಿಜನ ಕಾಲೋನಿಗಳಿದ್ದು ಪ.ಜಾ 49, ಕುಟುಂಬ ಪ.ಪಂ 24 ಕುಟುಂಬಗಳಿದ್ದು ಇವರಿಗೆ ಎಲ್ಲಾ ಮುಲ ಭೂತ ಸೌಲಭ್ಯಗಳು ಇರುತ್ತದೆ. ಪ.ಜಾತಿ ರವರ ಉಪಯೋಗಕ್ಕೆ ತೋಟಗಾರಿಗೆ ಇಲಾಖೆಯಿಂದ ನಿರ್ಮಿಸಿದ 4 ಎಕರೆ ಹಣ್ಣಿನ ತೋಟವಿರುತ್ತದೆ. ಭಾಗ-2,ಭಾಗ-3 ಪ.ಜಾತಿ ಗಿರಿಜನ ಕಾಲೋನಿ ಸರ್ಕಾರದ ಪೈಸಾರಿ ಜಾಗವಾಗಿರುತ್ತದೆ.ಪಂಚಾಯಿತಿಯು ಬಿ.ಎಂ ರಸ್ತೆ ಬದಿಯಲ್ಲಿರುವುದರಿಂದ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಇದೆ ಆದರೆ ಭಾಗ-2 ಮತ್ತು ಭಾಗ-3ರ ಮುಲಕ ಖಾಸಗಿ ವಾಹನಗಳು ಮಾತ್ರ ಸಂಚಾರವಿರುತ್ತದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 2 ಪ್ರೌಢಶಾಲೆ 1 ಕಿರಿಯ ಪ್ರಾಥಮಿಕ ಶಾಲೆ ಮತ್ತು 6 ಅಂಗನವಾಡಿ ಕೇಂದ್ರಗಳು ಇರುತ್ತದೆ. ಇಲ್ಲಿನ ಭೌಗೋಳಿಕ ವಿಸ್ತೀರ್ಣ 3453 ಎಕರೆ ಇದ್ದು 1455 ಕೃಷಿ ಯೋಗ್ಯವಾದ ಸ್ಥಳವಾಗಿರುತ್ತದೆ. ಇಲ್ಲಿನ ಮುಖ್ಯ ಬೆಳೆ ಕಾಫಿ, ಭತ್ತ, ಮತ್ತು ಒಳ್ಳೆ ಮೆಣಸು ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಇಲ್ಲಿ ಕಲ್ಲುಕೋರೆಗಳಿದ್ದು ಇದರಲ್ಲಿ ಕೂಲಿ ಕೆಲಸ ಮಾಡುತ್ತಾರೆ ಮತ್ತು ನರ್ಸರಿ ಇಲ್ಲಿನ ಮುಖ್ಯ ಕಸುಬಾಗಿರುತ್ತದೆ, ವಾಸಕ್ಕೆ ಈ ಸ್ಥಳವು ತುಂಬಾ ಅನುಕೂಲಕರವಾಗಿರುತ್ತದೆ.ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿ ಹಿಂದು, ಮುಸ್ಲಿಂ, ಸಮ ಪ್ರಮಾಣದಲ್ಲಿದ್ದು, ಕ್ರಿಶ್ಚನ್ನರು ಸುಮಾರಾಗಿ ವಾಸವಿರುತ್ತಾರೆ. ಎಲ್ಲಾ ಜಾತಿಯವರು ಸಮಾನತೆಯಿಂದ ಬಾಳ್ವೆನಡೆಸುತ್ತಿದ್ದಾರೆ, ಇಲ್ಲಿ ಎಲ್ಲಾ ಕೋಮಿನವರು ವಿಧ್ಯಾವಂತರಾಗಿರುತ್ತಾರೆ, ಕೃಷಿ ಇಲ್ಲಿಯ ಮುಖ್ಯ ಕಸುಬು.

7ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಒಂದೇ ಗ್ರಾಮವಾಗಿದ್ದು 3 ವಾರ್ಡುಗಳನ್ನು ಹೊಂದಿರುತ್ತದೆ. 7ನೇ ಹೊಸಕೋಟೆ ಭಾಗ -2 ರಲ್ಲಿ ಒಂದು ಪ.ಜಾತಿಗೆ ಸೇರಿದ ಕಾಲೋನಿ ಇದ್ದು ಇದು ಬಿ.ಎಂ ರಸ್ತೆಗೆ ಕೆವಲ 0.5 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಕುಡಿಯುವ ನೀರು ಡಾಂಬರೀಕರಣದ ರಸ್ತೆ ಚರಂಡಿ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಬೀದಿ ದೀಪದ ಸೌಕರ್ಯವಿದ್ದು ಸುಮಾರು 12 ಕುಟುಂಬಗಳು ವಾಸವಾಗಿರುತ್ತಾರೆ, ಭಾಗ-3ರಲ್ಲಿ ಗಿರಿಜನ ಕಾಲೋನಿ ಇದ್ದು ಇಲ್ಲಿ ಸುಮಾರು 64 ಕುಟುಂಬದವರು ವಾಸವಾಗಿದ್ದಾರೆ, ಇವರಿಗೆ ಎಲ್ಲಾ ಮುಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.ಇವರು ಒಟ್ಟು 8 ಎಕರೆ ಪೈಸಾರಿ ಜಾಗದಲ್ಲಿ ವಾಸವಾಗಿರುತ್ತಾರೆ.ಪಂಚಾಯಿತಿ ವ್ಯಾಪ್ತಿಯಲ್ಲಿ 2 ಪ್ರೌಢಶಾಲೆ ಮತ್ತು 1 ಪ್ರಾಥಮಿಕ ಶಾಲೆ 6 ಆಂಗನವಾಡಿ ಕೇಂದ್ರಗಳಿವೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ವಿಷಯವೇನೆಂದರೆ ಹಿಂದೂಗಳ ಮಹಾಗಣಪತಿ ದೇವಾಲಯ ಅದರ ಎದುರುಗಡೆ ಕ್ರಿಶ್ಚನ್ನರ ಚರ್ಚ್ ಅದರ ಒಟ್ಟಿಗೆ ಮುಸ್ಲಿಂರ ಮಸೀದಿಯು ಇರುತ್ತದೆ, ಒಂದು ಕೋಮಿನ ಜನರು ಇನ್ನೊಂದು ಕೋಮಿನ ಹಬ್ಬಗಳಲ್ಲಿ ಭಾಗ ವಹಿಸುತ್ತಾರೆ ಮತ್ತು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಾದ್ದಾರೆ.ಈ ಗ್ರಾಮ ಪಂಚಾಯಿತಿಯು ಮೈಸೂರು, ಬಂಟ್ವಾಳ ರಸ್ತೆ ಬದಿಯದ್ದು ಜನರ ವಾಸಕ್ಕೆ ತುಂಬಾ ಅನುಕೂಲಕರವಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಕೈನಿಕಲ್ ಮಣಿ ರಮೇಶ President 9448448567
  2. ಜೋಸೆಫ್ Vice President 9481868924
  3. ಕಮಲ Member 8762163050
  4. ಮಧುಸೂದನ್ Member 9483352906
  5. ಸಿದ್ದಿಕ್ Member 9741515644
  6. ಸಿಂಧೂ Member 7483106236
  7. ವೇದಾವತಿ Member 8277131205
  8. ಸೌಮ್ಯಶ್ರೀ Member 8277560372
  9. ಚಂದ್ರಾವತಿ ಹೆಚ್ ಎಸ್ Member 9448021688
  10. ಮುಸ್ತಾಫ್ Member 9480905544

ಪಂಚಾಯ್ತಿ ಸಂಪರ್ಕ
ವಿಳಾಸ: ಭಾಗ-1 7ನೇ ಹೊಸಕೋಟೆ ಗ್ರಾಮ ಮತ್ತು ಅಂಚೆ ಸುಂಟಿಕೊಪ್ಪ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ, ಕರ್ನಾಟಕ. ಪಿನ್ ಕೊಡ್ ನಂ. 571237
Tel: 08276-279663
Pdo:
Mob: 

Email:7thhoskote.spet.kodg@gmail.com

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

  • Name : G H S HIGH SCHOOL 7TH HOSKOTE
    Department of Education, Type: Secondary Only
    Medium: Kannada, Since: 2007
    Address: “GOVT HIGH SCHOOL 7TH HOSAKOTE SOMWARPET TALUK KODAGU ” 571,237
    Contact: 9480084690, 9482632386

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

  • ಗೋಪಾಲ ಕೃಷ್ಣ ದೇವಾಲಯ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

ಶುಭಕೋರುವವರು

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಸುಜಾತ ಪಿ ಬಿ President 8762515484
  2. ಮುಸ್ತಫ ಕೆ ಎಂ Vice President 9449254541
  3. ಜೆ ಕೆ ಲಲಿತ Member 8762823821
  4. ಎ ಪಿ ರಮೇಶ Member 9901806772
  5. ಹಸೀನಾ ಕೆ ಡಿ Member 8762348968
  6. ಎಂ ಎಂ ಸುಮಲತ Member 8277120601
  7. ಅಬ್ದುಲ್ಲಾ ಕೆ ಎ Member 9483843952
  8. ಕೆ ಎ ಉಮೇಶ್ Member 9379775106
  9. ಜೋಸೆಫ್ ಇ ಬಿ Member 9481868924
  10. ಪುಷ್ಪ ಬಿ ಸಿ Member 9482617586
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.