ಗೌಡಳ್ಳಿ - GOWDALLI
ಪಶ್ಚಿಮಘಟ್ಟದ ಹಸಿರಿನ ಕಂಗಳ ಸ್ವಚ್ಚಂದ ನೈಸರ್ಗಿಕ ರಮಣೀಯ ತಾಣವಾದ ಗೌಡಳ್ಳಿ ಗ್ರಾಮ ಪಂಚಾಯಿತಿಯು ಶನಿವಾರಸಂತೆ ಹೋಬಳಿ ಸೋಮವಾರಪೇಟೆ ತಾಲೋಕು ಕೊಡಗುಜಿಲ್ಲೆಯಲ್ಲಿರುತ್ತದೆ.ಹೋಬಳಿ ಮತ್ತು ತಾಲ್ಲೋಕು ಕೇಂದ್ರದ ಮಾರ್ಗಮದ್ಯ 10 ಕಿ.ಮೀಟರ್ ಗಳ ಮತ್ತು ಜಿಲ್ಲಾ ಕೇಂದ್ರದಿಂದ 40 ಕಿ.ಮೀಟರುಗಳ ಅಂತರದಲ್ಲಿದೆ.
ನಮ್ಮ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 5 ಕಂದಾಯ ಗ್ರಾಮಗಳಾದ ಗೌಡಳ್ಳಿ,ನಂದಿಗುಂದ,ಹೆಗ್ಗಳ,ಚೆನ್ನಾಪುರ,ಶುಂಠಿ, 14 ಉಪಗ್ರಾಮಗಳಾದ ಕೂಗೂರು,ಚಿಕ್ಕಾರ,ಕೋಟೆಊರು,ಅಜ್ಜಳ್ಳಿ,ಶಾಂತ್ವೇರಿ,ರಾಮನಹಳ್ಳಿ,ಕುರುಡುವಳ್ಳಿ,ಗೊಂದಳ್ಳಿ, ಬಸವನಕೊಪ್ಪ,ಹಾರಳ್ಳಿ,ಹಿರಿಕರ,ಶಿವಪುರ,ಕೊರ್ಲಳ್ಳಿ,ಶುಂಠಿಮಂಗಳೂರು ಗ್ರಾಮಗಳಿವೆ.
ಗೌಡಳ್ಳಿಯಲ್ಲಿ 1 ಅನುದಾನಿತ ಪ್ರೌಢಶಾಲೆ,ನಂದಿಗುಂದ ಮತ್ತು ಗೌಡಳ್ಳಿಯಲ್ಲಿ ತಲಾ ಒಂದೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ ಹಾಗೂ ಶುಂಠೀ ಮತ್ತು ಹಿರಿಕರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿವೆ..7 ಅಂಗನವಾಡಿಕೇಂದ್ರಗಳು,ಗೌಡಳ್ಳಿಯಲ್ಲಿ 1 ಪಶುಸಂಗೋಪನ ಆಷ್ಪತ್ರೆ, 1 ಸರಕಾರಿ ಪ್ರಾಥಮಿ ಆಷ್ಪತ್ರೆ, 1 ವ್ಯವಸಾಯ ಸಹಕಾರ ಬ್ಯಾಂಕ್ ,1 ಗ್ರಂಥಾಲಯ, 1 ಸಿಂಡಿಕೇಟ್ ಬ್ಯಾಂಕ್ ,1 ಅಂಚೆ ಕಛೇರಿ, 1 ಖಾಸಗಿ ಮಲ್ಲೇಶ್ವರ ಆಂಗ್ಲಮಾಧ್ಯಮ ಕಾನ್ವೆಂಟಿ್, ನಂದಿಗುಂದದಲ್ಲಿ 1 ಅಂಚೆ ಕಛೇರಿ ಹಾಗೂ ಹಾರಳ್ಳಿಬೀಟಿಕಟ್ಟೆಯಲ್ಲಿ 1 ಹಾಲಿನಡೈರಿ ಇರುತ್ತದೆ.
ನಮ್ಮ ಗ್ರಾಮ ಪಂಚಾಯಿತಿ ಕೇಂದ್ರಸ್ತಾನದಿಂದ ಶನಿವಾರಸಂತೆ ಮಾರ್ಗದಲ್ಲಿ 5 ಕಿ ಮೀ ದೂರದಲ್ಲಿ “ಮಲೆ ಮಲ್ಲೇಶ್ವರ” ಬೆಟ್ಟದ ಮೇಲೆ “ಮಲೆ ಮಲ್ಲೇಶ್ವರ” ದೇವಸ್ಥಾನವು ವಿದ್ದು ನೋಡಲು ಆಕರ್ಷಿಯಣವಾಗಿದ್ದು ಭಕ್ತಾದಿಗಳ ಮತ್ತು ಪ್ರವಾಸಿಗರ ಗಮನ ಸೆಳೆಯುತ್ತದೆ. ಈ ದೇವಸ್ಥಾನಕ್ಕೆ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತೆ.ಹಾಗೂ ನಮ್ಮ ಪಂಚಾಯಿತಿಯಿಂದ ಸುಮಾರು 7 ಕಿ ಮೀ ದೂರದಲ್ಲಿ”ಹೊನ್ನಮ್ಮನ ಕೆರೆ” ಯಿದ್ದು ಈ ಕೆರೆಗೆ ಪೌರಾಣಿಕ ಕಥೆ ಇರುತ್ತದೆ. ಈ ಕೆರೆಗೆ ಗೌರಿಹಬ್ಬದಂದು ಹೊಸದಾಗಿ ಮದುವೆಯಾದ ಹಾಗೂ ಮುತ್ತೈದೆಯರಿಂದ ಭಾಗಿನ ಅರ್ಪಣೆ ಮಾಡಲಾಗುತ್ತದೆ. ಮತ್ತು ವಿಶೇಷವಾದ ಪೂಜೆ ಹಾಗೂ ಒಂದುದಿನದ ಜಾತ್ರೆಯನ್ನು ನೆಡೆಸಲಾಗುತ್ತದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕ್ರಿಶ್ಚನ್,ಮುಸಲ್ಮಾನ್,ಲಿಂಗಾಯಿತರು ಹಾಗೂ ಪ.ಜಾತಿಗೆ ಸೇರಿದವರು ನೆಲೆಸಿರುತ್ತಾರೆ.
ವ್ಯವಸಾಯವನ್ನೆ ಜೀವನಾದಾರವಾಗಿ ನಂಬಿಕೊಂಡು ಬದುಕುತ್ತಿರುವ ಇಲ್ಲಿನ ಜನರೀಗೆ”ಕಾಫಿ”ಯು ಮುಖ್ಯ ಬೆಳೆಯಾಗಿದ್ದು ಭತ್ತ,ರಾಗಿ,ಶುಂಠಿ,ಮೆಣಸು,ಕಿತ್ತಳೆ,ತೆಂಗು,ಅಡಿಕೆ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯಲು ಯೋಗ್ಯವಾದ ಮಣ್ನನ್ನು ಹೊಂದಿಕೊಂಡಿರುವ ನಮ್ಮ ಗೌಡಳ್ಳಿ ಗ್ರಾಮ ಪಂಚಾಯಿತಿಯ ಕಿರುಪರಿಚಯ ಇದಾಗಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಸುಮ ಕೆ ಕೆ President 8277443230
- ರೋಹಿಣಿ ಕೆ ಎಮ್ Vice President 9448389510
- ನಾಗರಾಜ ಜಿ ಎಸ್ Member 8762111404
- ಜಿ ಜಿ ಗಣೇಶ್ Member 9591180253
- ಗೌರಿ Member 9482269691
- ವಿಶಾಲಾಕ್ಷಿ ಕೆ ಡಿ Member 8296255607
- ವೆಂಕಟೇಶ ಸಿ ಈ Member 9483839693
- ಬಿ ಹೆಚ್ ಮಂಜುನಾಥ Member 9481602438
- ಜಿ ಜಿ ಮಲ್ಲಿಕ Member 9483264174
- ನವೀನ್ ಕುಮಾರ್ ಎ ಎಸ್ Member 9844482112
ಪಂಚಾಯ್ತಿ ಸಂಪರ್ಕ
ವಿಳಾಸ: ಗೌಡಳ್ಳಿ ಗ್ರಾಮ ಪಂಚಾಯಿತಿ,ಗೌಡಳ್ಳಿ ಅಂಚೆ,ಸೋಮವಾರಪೇಟೆ ತಾಲೂಕು,ಶನಿವಾರಸಂತೆ ಹೋಬಳಿ,ಕೊಡಗು ಜಿಲ್ಲೆ
Tel: 08276-285266
Pdo:
Mob:
Email: gowdalli.spet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ವೆಂಕಟೇಶ್ ಜಿ. President 9980353749
- ಮಂಜುಳ Vice President 9620634298
- ಕೃಷ್ಣಮೂರ್ತಿ Member 9900296739
- ಗೌರಮ್ಮ Member 9632113207
- ಬೀಬಿಜಾನ್ Member 9482955768
- ಪುಟ್ಟಗಂಗಯ್ಯ Member 8095003704
- ಸೋಮಶೇಖರಯ್ಯ Member 9880500313
- ದೇವರಾಜು ಎಂ.ಜಿ. Member 9900783437
- ಮಹೇಶ್ ಎನ್.ಡಿ. Member 8453462834
- ಗಂಗಮ್ಮ Member 9972363440
- ಲೋಹಿತ್ ಎನ್.ಪಿ. Member 9341487783
- ಉದಯ ಎಲ್.ಆರ್. Member 8861967574
- ಪರಶುರಾಮಯ್ಯ Member 9071150023
- ತಿಮ್ಮಕ್ಕ Member 9591540295
- ರಮೇಶ್ ಎಂ. ಆರ್ Member 8197851655
- ಹೊನ್ನಮ್ಮ Member 8197209176
- ಜಯಲಕ್ಷ್ಮಮ್ಮ Member 9964105991
- ಉಮಾದೇವಿ ಬಿ.ಎನ್. Member 9611409492
- ಪ್ರೇಮಲತಾ ಬಿ.ಜಿ. Member 8861228603
- ಗೀತಾ Member 7760587271
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ