ಗುಡ್ಡೆಹೊಸೂರು - GUDDEHOSURU
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ತಾಲ್ಲೂಕು ಕೇಂದ್ರ ಸೋಮವಾರಪೇಟೆಯಿಂದ ಸುಮಾರು 34 ಕಿ.ಮೀ. ಮತ್ತು ಕುಶಾಲನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿದ್ದು, ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿಯ ಬದಿಯಲ್ಲಿ ಅಂದರೆ ಗುಡ್ಡೆಹೊಸೂರಿನಿಂದ ಸಿದ್ದಾಪುರಕ್ಕೆ ತೆರಳುವ ಮಾರ್ಗದಲ್ಲಿ ಗ್ರಾಮ ಪಂಚಾಯಿತಿಯ ಕಚೇರಿ ಇದೆ. ಗ್ರಾಮ ಪಂಚಾಯಿತಿಯು ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಗ್ರಾಮ ಪಂಚಾಯಿತಿಯ ಪೂರ್ವಕ್ಕೆ ಕಾವೇರಿ ನಿಸರ್ಗಧಾಮ, ಪಶ್ಚಿಮಕ್ಕೆ ಆನೆಕಾಡು ಮೀಸಲು ಅರಣ್ಯ,ಉತ್ತರಕ್ಕೆ ಹಾರಂಗಿ ಅಣೆಕಟ್ಟು ಮತ್ತು ದಕ್ಷಿಣಕ್ಕೆ ಚಿಕ್ಲಿಹೊಳೆ ಹಿನ್ನೀರು ನಾಲೆಯ ಪ್ರದೇಶವಿರುತ್ತದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಶಾಲೆಗಳು, 9 ಅಂಗನವಾಡಿ ಕೇಂದ್ರಗಳು, 1 ಎ.ಎನ್.ಎಂ. ಕೇಂದ್ರ, 1 ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್, 1 ವ್ಯವಸಾಯ ಸೇವಾ ಸಹಕಾರ ಸಂಘ, 1 ಗಿರಿಜನ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ ಸೊಸೈಟಿ), 2 ನ್ಯಾಯಬೆಲೆ ಅಂಗಡಿ, 1 ಹಾಲು ಉತ್ಪಾದನಾ ಸಹಕಾರ ಸಂಘ ಹಾಗೂ ಬಿದಿರು ಕೆಲಸಗಾರರ ಸಹಕಾರ ಸಂಘಗಳು ಇರುತ್ತವೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬಸವನಹಳ್ಳಿಯಲ್ಲಿ ಒಂದು ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿರುತ್ತದೆ.ಸುಮಾರು 5 ಕಿ.ಮೀ. ದೂರದಲ್ಲಿರುವ ಕುಶಾಲನಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿರುತ್ತದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 4422.00 ಹೆಕ್ಟೇರ್ ಆಗಿದ್ದು, ಇದರಲ್ಲಿ 1085.00 ಹೆಕ್ಟೇರ್ ಭೂಮಿ ವ್ಯವಸಾಯ ಯೋಗ್ಯವಾದ ಭೂಮಿಯಾಗಿದೆ. 1980.00 ಹೆಕ್ಟೇರ್ ಅರಣ್ಯ ಪ್ರದೇಶವಾಗಿರುತ್ತದೆ. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯು ಸಮುದ್ರ ಮಟ್ಟದಿಂದ ಸುಮಾರು 2720 ಅಡಿಗಳಷ್ಟು ಎತ್ತರದಲ್ಲಿದ್ದು, ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 1300 ಮಿ.ಮೀ.ನಿಂದ 1850 ಮಿ.ಮೀ. ಆಗಿರುತ್ತದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯು 6278 ಜನ ಸಂಖ್ಯೆಯನ್ನು ಹೊಂದಿದೆ. ಇದರಲ್ಲಿ 3252 ಜನ ಗಂಡಸರು ಮತ್ತು 3026 ಜನ ಹೆಂಗಸರು ಇದ್ದು, ಒಟ್ಟು 1356 ಕುಟುಂಬಗಳಿವೆ. ಇದರಲ್ಲಿ 610 ಬಿ.ಪಿ.ಎಲ್. ಮತ್ತು 746 ಎ.ಪಿ.ಎಲ್. ಕುಟುಂಬಗಳಿವೆ. ಒಟ್ಟು ಜನ ಸಂಖ್ಯೆಯಲ್ಲಿ 715 ಜನ ಪರಿಶಿಷ್ಟ ಜಾತಿಗೆ ಸೇರಿದವರು, 1031 ಜನ ಪರಿಶಿಷ್ಟ ಪಂಗಡಕ್ಕೆ ಸೇರಿದವರು, 4088 ಜನ ಇತರೆ ವರ್ಗಕ್ಕೆ ಸೇರಿದವರು ಮತ್ತು 444 ಜನ ಅಲ್ಪ ಸಂಖ್ಯಾತರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆ 3497 ಆಗಿರುತ್ತದೆ. ಕೊಡಗಿನಲ್ಲಿ ನಿಸರ್ಗ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕುಶಾಲನಗರದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಮಾರ್ಗದಲ್ಲಿ ಸುಮಾರು 65.00 ಎಕ್ರೆ ವಿಸ್ತೀರ್ಣದ ಸಣ್ಣ ದ್ವೀಪದಲ್ಲಿ ದಿನಾಂಕ 20-12-1989ರಂದು ಕಾವೇರಿ ನಿಸರ್ಗಧಾಮ ಎಂಬ ಪ್ರವಾಸಿ ತಾಣವನ್ನು ಅರಣ್ಯ ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬಿದಿರಿನಿಂದ ನಿರ್ಮಿಸಿಲಾದ 6 ಕುಟೀರಗಳು,ಇಟ್ಟಿಗೆಯಿಂದ ನಿರ್ಮಿಸಲಾದ 4 ಕುಟೀರಗಳು, 1 ಡಾರ್ಮಿಟರಿ ಮತ್ತು ಟೆಂಟ್ ಗಳು ಇವೆ. ಇಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಆನೆ ಸಫಾರಿ ಮತ್ತು ದೋಣಿ ವಿಹಾರವನ್ನು ಏರ್ಪಡಿಸಲಾಗಿದೆ. ಇಲ್ಲಿರುವ ಜಿಂಕೆ ವನದಲ್ಲಿ ಸುಮಾರು 28 ಜಿಂಕೆಗಳು, 2 ಕಡವೆ ಮತ್ತು ಮೊಲದ ಪಾರ್ಕ್ ನಲ್ಲಿ ಹಲವಾರು ಮೊಲಗಳು ಇರುತ್ತವೆ. ಕೊಡಗಿನ ಉತ್ಪನ್ನಗಳನ್ನು ಮಾರಾಟಕ್ಕಾಗಿ ಕಲಾಧಾಮ ಎಂಬ ಮಾರಾಟ ಮಳಿಗೆಯನ್ನು ತೆರೆಯಲಾಗಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ನಂದಿನಿ ಎಸ್ ಎಸ್ President 8618964069
- ಸುಶೀಲ ಕೆ ಜಿ Member 9483393943
- ಉಷಾ ಎನ್ ಪಿ Member 9480052373
- ಶಿವಪ್ಪ ಎಂ ಪಿ Member 9611603989
- ಪ್ರವೀಣ್ ಕುಮಾರ್ ಎಂ ಕೆ Member 9742559151
- ಪ್ರದೀಪ್ ಬಿ ಎಂ Member 9740028290
- ಬಿ ಕೆ ಗಂಗಮ್ಮ Member 9686596307
- ಸರ್ವಮಂಗಳ ಎಮ್ Member 9845309807
- ಯಶೋಧ ಡಿ ಜೆ Member 9449987410
- ನಾರಯಣ ಎಂ ಬಿ Member 9663110470
- ನಿತ್ಯಾನಂದ ಕೆ ಆರ್ Member 9483333433
- ರಮೇಶ್ ಬಿ ಎ Member 9900139231
- ಲಕ್ಷ್ಮಣ ಎ ವಿ ವಿ Member 9972522190
- ರುಕ್ಮಿಣಿ Member 9902361691
- ಸೌಮ್ಯ ಕೆ Member 9880368723
- ಉಮಾ ವೈ ಬಿ Member 9448178265
ಪಂಚಾಯ್ತಿ ಸಂಪರ್ಕ
ವಿಳಾಸ: ಗುಡ್ಡೆಹೊಸೂರು ಗ್ರಾಮ ಮತ್ತು ಅಂಚೆ ಕುಶಾಲನಗರ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. 571234
Tel: 08276-279102
Pdo:
Mob:
Email: som.guddehosur@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಕೆ ಎಸ್ ಭಾರತಿ President 9741568879
- ಲೀಲಾವತಿ Vice President 9972065351
- ಶಶಿ ಕುಮಾರ್ ಬಿ ಎನ್ Member 9741466816
- ಶಿವಪ್ಪ ಎಂ.ಪಿ Member 9611603989
- ಪಾರ್ವತಿ ಸಿ ಕೆ Member 9945672419
- ಪ್ರವೀಣ್ ಕುಮಾರ್ ಎಂ ಕೆ Member 9742559151
- ಬಸವರಾಜು ಎಂ ಎಂ Member 9740663961
- ಪ್ರಸನ್ನ ಬಿ.ಟಿ Member 9448448579
- ರವಿ ಜಿ ಟಿ Member 9448052930
- ಗಂಗೆ Member 9741954326
- ಪುಷ್ಪ Member 9845759055
- ಹೇಮಾವತಿ ಬಿ ವಿ Member 9741781738
- ನಾರಯಣ ಎಂ ಬಿ Member 9663110470
- ಕಾವೆರಪ್ಪ ಟಿ ಬಿ Member 9449475488
- ಡಾಟಿ ಎ ಪಿ Member 8762604565
- ಶೋಭ ಎಂ ಆರ್ Member 8971543390
- ಕವಿತ ಎಂ ಎನ್ Member 9481858704
- ಭೀಮಯ್ಯ ಕೆ ಸಿ Member 9448504406
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ