NANJARAYAPATNA ನಂಜರಾಯಪಟ್ಟಣ

Reading Time: 7 minutes

ನಂಜರಾಯಪಟ್ಟಣ - NANJARAYAPATNA

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯು ನಂಜರಾಯಪಟ್ಟಣ ಮತ್ತು ರಂಗಸಮುದ್ರ ಎಂಬ ಎರಡು ಗ್ರಾಮಗಳನ್ನು ಹೊಂದಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲಾ ಕೇಂದ್ರದಿಂದ 35ಕಿ.ಮೀ. ಸೋಮವಾರಪೇಟೆ ತಾಲೋಕು ಕೇಂದ್ರದಿಂದ 45ಕಿ.ಮೀ. ಕುಶಾಲನಗರ ಹೋಬಳಿ ಕೇಂದ್ರದಿಂದ 14ಕಿ.ಮೀ. ಅಂತರದಲ್ಲಿರುತ್ತದೆ. ಹಾಗೂ ರಾಜ್ಯ ಹೆದ್ದಾರಿ ಆರ್.ಹೆಚ್.91ರಲ್ಲಿ ರಸ್ತೆಯಿಂದ 10ಕಿ.ಮೀ.ನಲ್ಲಿದೆ. ಈ.ಗ್ರಾಮ ಪಂಚಾಯಿತಿಯ ಪೂರ್ವಕ್ಕೆ ಕಾವೇರಿ ನದಿ, ಪಶ್ಚಿಮಕ್ಕೆ ವಿಶಾಲ ಮೀನುಕೊಲ್ಲಿ ಮತ್ತು ಆನೆಕಾಡು ಅರಣ್ಯ ಪ್ರದೇಶ ಚಿಕ್ಲಿಹೊಳೆ ಅಣೆಕಟ್ಟು ಹಾಗೂ ದಕ್ಷಿಣಕ್ಕೆ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಮದ್ಯಭಾಗದ ಪ್ರದೇಶವಾಗಿರುತ್ತದೆ.
ಈ ಗ್ರಾಮ ಪಂಚಾಯಿತಿಯು ಪೂರ್ಣವಾಗಿ ಮುಖ್ಯರಸ್ತೆ ಹೆದ್ದಾರಿರಸ್ತೆ ಗ್ರಾಮೀಣ ರಸ್ತೆ ಹಾಗೂ ಕಚ್ಚಾ ರಸ್ತೆ ಸಂಪರ್ಕ ಬಹಳಷ್ಟು ಮಟ್ಟಿಗೆ ಡಾಮರೀಕರಣವಾಗಿರುತ್ತದೆ. ಈ ಗ್ರಾಮ ಪಂಚಾಯಿತಿಯ 2001ರ ಜನಗಣತಿ ಪ್ರಕಾರ 2885 ಜನಸಂಖ್ಯೆ ಹೊಂದಿದ್ದು, 2 ಕ್ಷೇತ್ರಗಳಾಗಿ ವಿಂಗಡಣೆಗೊಂಡಿರುತ್ತದೆ. ಅಲ್ಲದೆ ನಮ್ಮ ಪಂಚಾಯಿತಿಯಲ್ಲಿ 8 ಮಂದಿ ಚುನಾಯಿತಿ ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯ ಬಹುಭಾಗ ಭತ್ತದ ಗದ್ದೆ ಹೊಂದಿದ್ದು ಭಾಗಶಃ ಕಾಫಿ ಪ್ಲಾಂಟೇಶನ್ ಹೊಂದಿರುತ್ತದೆ. ಗ್ರಾಮ ಪಂಚಾಯಿತಿಯ ಉದ್ದಕ್ಕೂ ಹೊಂದಿಕೊಂಡಂತೆ ಕಾವೇರಿ ನದಿ ಪಾತ್ರ ಹೊಂದಿದ್ದು ಮಳೆಗಾಲದಲ್ಲಿ ನೀರು ತುಂಬಿ ವೈಯಾರದಿಂದ ಹರಿಯುತ್ತಿದ್ದು ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯೆನಿಸಿದೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ 1ಪ್ರಾಥಮಿಕ ಆರೋಗ್ಯ ಘಟಕ , 5 ಅಂಗನವಾಡಿ ಕೇಂದ್ರ 2 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಸರಕಾರಿ ಅನುದಾನಿತ ಪ್ರೌಢಶಾಲೆಗಳಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಕ್ಷರ ದಾಸೋಹ ಯೋಜನೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ 2 ಮುಂದುವರಿಕೆ ಶಿಕ್ಷಣ ಕೇಂದ್ರಗಳಿದ್ದು, ಪ್ರೇರಕಿಯಿಂದ ಅನಕ್ಷರಸ್ಥರನ್ನು ನವ ಸಾಕ್ಷರನ್ನಾಗಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ.

ಈ ಪಂಚಾಯಿತಿಯ ನಂಜರಾಪಟ್ಟಣ ಪುರಾತನ ಕಾಲದ ನಂಜುಂಡೇಶ್ವರ ದೇವಾಲಯವಿದ್ದು ಇತ್ತೀಚೆಗೆ ಇದರ ಜೀರ್ಣೋದ್ದಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಗ್ರಾಮದ ಸಮಸ್ತ ಭಕ್ತರು ತೊಡಗಿಸಿಕೊಂಡಿದ್ದು ಇದು ಊರಿನ ಬಹಳ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ.
ಈ ಪಂಚಾಯಿತಿ ವ್ಯಾಪ್ತಿಯ ನಂಜರಾಪಟ್ಟಣ ಗ್ರಾಮದಲ್ಲಿ ಸಂಪರ್ಕ ಕಲ್ಪಿಸುವ ಕಾವೇರಿ ನದಿಯಿಂದ ಆ ಬದಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ದುಬಾರೆ ಸಾಕಾನೆ ಶಿಬಿರವು ದೇಶದಲ್ಲೆ ಪ್ರವಾಸಿ ತಾಣವಾಗಿ ಗುರುತಿಕೊಂಡಿದ್ದು, ವರ್ಷದಲ್ಲಿ ಸುಮಾರು 5 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿಯ ಪ್ರಕೃತಿ ಸೌಂದರ್ಯ ರಮಣೀಯವಾಗಿದ್ದು ಪ್ರವಾಸಿಗರ ಕಣ್ಮನ ತಣಿಸುತ್ತಿದೆ. ಪಕ್ಕದಲ್ಲಿಯೇ ರಾಜ್ಯ ಸರ್ಕಾರದ ಸ್ವಾಮ್ಯಕೊಳಪಟ್ಟ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಇದ್ದು ಅರಣ್ಯದಲ್ಲಿ ಟ್ರಕ್ಕಿಂಕ್ ಮತ್ತು ಅರಣ್ಯದ ಸಂಪೂರ್ಣ ಮಾಹಿತಿಯನ್ನು ಇಲ್ಲಿಯ ಗೈಡುಗಳಿಂದ ಪಡೆಯುವ ವ್ಯವಸ್ಥೆ ಕಾವೇರಿ ನದಿಯಲ್ಲಿ ಆನೆ ಶಿಬಿರದಲ್ಲಿ ಆನೆಗಳ ಜೀವನ ಕ್ರಮ ಮತ್ತು ಪ್ರವಾಸಿಗರ ಕನಿಷ್ಟ ಪಾವತಿಯೊಂದಿಗೆ ಆನೆಗಳಿಗೆ ಅಹಾರ ತಿನಿಸುವ ವ್ಯವಸ್ಥೆ ಆನೆಗಳಿಗೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸುವ ಕಾರ್ಯಕ್ರಮವನ್ನು ಕೂಡ ನಡೆಸಲಾಗುತ್ತಿದೆ. ಇತ್ತೀಚೆಗೆ ರಷ್ಯಾ ದೇಶದ ರಾಯಬಾರಿ ಕೂಡ ಇಲ್ಲಗೆ ಭೇಟಿ ನೀಡಿದ್ದು, ಅಲ್ಲದೇ ಇತ್ತೀಚೆಗೆ ರಾಜ್ಯಪಾಲರು ಕೂಡ ಭೇಟಿ ನೀಡಿರುವುದು ವಿಶೇಷವಾಗಿದೆ. ಅನಂತರ ಕಾವೇರಿ ನದಿಯಲ್ಲಿ ಖಾಸಗಿಯವರಿಂದ ಮೈಪುಳಕಗೊಳಿಸುವ ಬೊಟಿಂಗ್ ಹಾಗೂ ಮೈರೋಮಾಂಚನಗೊಳಿಸುವ ರಿವರ್ ರ್ಯಾಪ್ಟಿಂಗ್ ನ್ನು ಪ್ರಕೃತಿಯ ಹಸಿರಿನ ನಡುವೆ ವಿಸಾಲವಾಗಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನಡೆಯುತ್ತಿದ್ದು, ಇದರ ರಸಾನುಭವದ ಅನುಭವವನ್ನು ಪಡೆಯಲು ತಂಡೋಪ ತಂಡವಾಗಿ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.ಅಲ್ಲದೆ ಭಾಗಶಃ ಈ ಪಂಚಾಯಿತಿಗೆ ಒಳಪಡುವ ಪ್ರಕೃತಿದತ್ತ ಹಸಿರಿನ ನಡುವೆ ವಿಶಾಲವಾಗಿ ಹರಡಿರುವ ಚಿಕ್ಲಿಹೊಳೆ ಜಲಾಶಯದ ವೀಕ್ಷಣೆಗೂ ಕೂಡ ಪ್ರವಾಸಿಗರು ಲಗ್ಗೆಯಿಡುತ್ತಿದ್ದು, ಇದು ಮುಂದೊಂದು ದಿನ ಪ್ರವಾಸಿ ತಾಣದ ಪಟ್ಟಿಯಲ್ಲಿ ಹೆಸರು ಪಡೆಯುವುದು ನಿಶ್ಚಿತ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಸಿ ಎಲ್ ವಿಶ್ವ President 9481432037
  2. ಎಸ್ ಎಂ ಸಮೀರ Vice President 9482261475
  3. ಮಾವಜಿ ರಕ್ಷಿತ್ Member 9880683849
  4. ಆರ್ ಕೆ ಚಂದ್ರ Member 9448874899
  5. ಜಾಜಿ ಜೆ ಟಿ Member 9481650330
  6. ಶ್ರೀಮತಿ ಗಿರಿಜಮ್ಮ Member 9731391552
  7. ಕುಸುಮ ಪಿ ಎನ್ Member 9480774154
  8. ಎ ಎಮ್ ಲೋಕನಾಥ್ Member 9449986417

ಪಂಚಾಯ್ತಿ ಸಂಪರ್ಕ

ವಿಳಾಸ: ನಂಜರಾಯಪಟ್ಟಣ (ಗ್ರಾಮ ಮತ್ತು ಅಂಚೆ) ಕುಶಾಲನಗರ (ಹೋಬಳಿ) ಸೋಮವಾರಪೇಟೆ(ತಾಲೋಕು) ಕೊಡಗು(ಜಿಲ್ಲೆ)
Tel: 08276-267805
Pdo:
Mob: 

Email: somnpatna@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಜೈನಭ President 9740135159
  2. ಕುಮಾರಿ ಜೆ ಸಿ Vice President 9483077425
  3. ಲೋಕನಾಥ ಎ.ಎಂ. Member 9449986417
  4. ಸುಮೇಶ್ ಟಿ ಕೆ Member 9448448436
  5. ಕೆ.ಜಿ.ನವೀನ್ Member 8762410516
  6. ಚಂದ್ರಾವತಿ ಎಂ.ಎಸ್. Member 9480056323
  7. ತಮ್ಮಯ್ಯ ಜೆ.ಸಿ. Member 8277132798
  8. ಆರ್.ಸಿ.ಮಲ್ಲಿಗೆ Member 9449276391
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.