ಕೊಳಕೇರಿ ಸುನ್ನೀ ಮುಸ್ಲಿಂ ಜಮಾಅತ್
ದರ್ಗಾ ಶರೀಫ್: ಮಖಾಂ ಉರೂಸ್
ಪ್ರಾಸ್ತಾವಿಕ
ಕೊಳಕೇರಿ ದರ್ಗಾ ಶರೀಫ್ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ದರ್ಗಾ ಶರೀಫ್ ಇದಾಗಿದೆ. ಈ ದರ್ಗಾವು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಳಕೇರಿ ಗ್ರಾಮದಲ್ಲಿದೆ. ಈ ದರ್ಗಾವು ಶ್ರದ್ಧಾ-ಭಕ್ತಿಯ ಕೇಂದ್ರವಾಗಿದ್ದು, ಮುಸ್ಲಿಂ ಭಾಂದವರಲ್ಲದೆ ಹಿಂದೂ, ಕ್ರೈಸ್ತ, ಮತ್ತು ಇತರ ಜನಾಂಗದವರೂ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾ ಬಂದಿರುತ್ತಾರೆ. ಈ ದರ್ಗಾದಲ್ಲಿ ಹಲವಾರು ಪವಾಡಗಳು ನಡೆಯುವ ಬಗ್ಗೆ ಇಲ್ಲಿನ ಸ್ಥಳೀಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಈ ದರ್ಗಾ ಷರೀಫ್‍ನ ಉಸ್ತುವಾರಿಯನ್ನು ಕೊಳಕೇರಿ ಸುನ್ನೀ ಮುಸ್ಲಿಂ ಜಮಾಅತ್ ಸಮಿತಿಯು ವಹಿಸಿಕೊಂಡು ವರ್ಷಂಪ್ರತಿ ಕೊಳಕೇರಿ-ಮುಖಾಂ ಊರೂಸನ್ನು ಏಳು ದಿನಗಳ ಕಾಲ ಆಚರಿಸೊಕೊಂಡು ಬರುತ್ತಿದೆ.
ಇತಿಹಾಸ ಹಿನ್ನಲೆ
ಮಹ್ಮದ್‍ಪೈಗಂಬರರು ಇಸ್ಲಾಂ ಧರ್ಮವನ್ನು ಸ್ಥಾಪಿಸಿದ ನಂತರ ಧರ್ಮಪ್ರಚಾರಕ್ಕಾಗಿ ಜಗತ್ತಿನ ಹಲವು ದೇಶಗಳ ಕಡೆ ಧರ್ಮ ಪ್ರಚಾರಕರನ್ನು ಕಳುಹಿಸುತ್ತಾರೆ. ಸಾಮಾನ್ಯ ಶಕ 7ನೇ ಶತಮಾನದ ಅಂತ್ಯ ಹಾಗೂ 8ನೇ ಶತಮಾನದ ಆದಿಯಲ್ಲಿ ಭರತಖಂಡದ ಕಡೆ ತಮ್ಮ ಪ್ರಚಾರದ ಪ್ರಯಾಣವನ್ನು ಆರಂಭಿಸುತ್ತಾರೆ. ಆ ಕಾಲಘಟ್ಟದಲ್ಲಿ ಅಂದರೆ 1300ವರ್ಷಗಳ ಹಿಂದೆ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಪ್ರಕೃತಿ ರಮಣೀಯ ತಾಣವಾಗಿದ್ದ ಕೊಡಗಿಗೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡ ಸೂಫಿ ಸಂತರು (ಸೂಫಿ ಸಂತರು: ಸೂಫಿ ಎಂದರೆ ಪರಿಶುದ್ಧ ಎಂದರ್ಥ. ಮಧ್ಯಕಾಲಿನ ಭಾರತದಲ್ಲಿ ಇಸ್ಲಾಂ ಧರ್ಮದ ಮೇಲೆ ಹಿಂದೂ ಧರ್ಮದ ಪ್ರಭಾವದ ಪರಿಣಾಮವಾಗಿ ಸೂಫಿ ಪಂಥ ಉದಯಿಸಿತು. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡಿತು. ಹಿಂದೂ ಸಂತರಂತೆ ಸೂಫಿ ಸಂತರು ಕೂಡ ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಧಾರ್ಮಿಕ ಸಾಮರಸ್ಯ, ಭಕ್ತಿ ಮುಂತಾದವುಗಳನ್ನು ಬೋಧಿಸಿದರು. ಇದರಿಂದಾಗಿಯೇ ಅನೇಕ ಹಿಂದೂ ಮತ್ತು ಮುಸಲ್ಮಾನರು ಸೂಫಿಗಳ ಶಿಷ್ಯರಾದರು.)
ತಮ್ಮ ವೆÀಯುಕ್ತಿಕ ಆಧ್ಯಾತ್ಮಿಕ ಸಾಧನೆಗಳಿಗಾಗಿ ಬಂದು ಕೊಡಗಿನ ಹಲವಾರು ಭಾಗಗಳಲ್ಲಿ ನೆಲೆ ನಿಲ್ಲುತ್ತಾರೆ. ಅವರಲ್ಲಿ ಬಹುಪಾಲು ಸೂಫಿ ಸಂತರು ತಲಕಾವೇರಿ, ಭಾಗಮಂಡಲ, ಕಕ್ಕಬ್ಬೆ, ಕೊಳಕೇರಿ, ನಾಪೋಕ್ಲು, ಮುಂತಾದೆಡೆ ಧ್ಯಾನಾಶಕ್ತರಾಗಿ ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಮಗ್ನರಾಗುತ್ತಾರೆ. ಅಂತಹ ಆಧ್ಯಾತ್ಮಿಕ ಸಾಧಕರಲ್ಲಿ ತಮ್ಮ ಹೆಸರನ್ನು ಎಂದಿಗೂ ಹೇಳಲಿಚ್ಚಿಸದ ಒಬ್ಬ ಸೂಫಿ ಸಂತ ಕೊಳಕೇರಿ ದರ್ಗಾಷರೀಫದಲ್ಲಿ ಸಮಾಧಿಯಾಗಿರುವುದು ಎಂದು ಜ್ಯೋತಿಷ್ಯರ ಮತ್ತು ತಂತ್ರಿಗಳ ಪ್ರಶ್ನೆಯಿಂದ ತಿಳಿದುಬಂದಿದೆ. ಆದ್ದರಿಂದ ಈ ದರ್ಗಾ ಶರೀಪ್‍ನನ್ನು ‘ಕೊಳಕೇರಿ ದರ್ಗಾ ಷರೀಫ’ ಎಂದೇ ಕರೆಯಲಾಗುತ್ತದೆ.
ಈ ಕೊಳಕೇರಿ ದರ್ಗಾ ಶರೀಪ್À ಬೆಳಕಿಗೆ ಬಂದು ಅಂದಾಜು 400ವರ್ಷಗಳು ಆಗಿದೆ ಎಂದು ಸ್ಥಳೀಯ ದರ್ಗಾ ಉಸ್ತುವಾರಿಯ ಮುಖಂಡರು ಹೇಳುತ್ತಾರೆ. ಅದಕ್ಕೊಂದು ರೋಚಕ ಕಥೆಯೊಂದು ಪ್ರಸ್ತುತ. ಅದೇನೆಂದರೆ ಕೊಳಕೇರಿಯ ಆಸುಪಾಸಿನಲ್ಲಿ ವಾಸವಿದ್ದ ಕೊಡವ ಜನಾಂಗದ ಕುಟುಂಬಗಳು ಹೈನುಗಾರಿಕೆಗಾಗಿ ಹಸುಗಳನ್ನು ಸಾಕಿ ಸಲಹುತ್ತಿದ್ದ ಸಂದರ್ಭದಲ್ಲಿ ಅವರಲ್ಲಿ ಹೆಚ್ಚಿರುವ ಹಸುಗಳನ್ನು ಸಾಕಲೆಂದು ಕೇರಳದ ಕಡೆ ಮಾರಾಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಸುಗಳ ಗುಂಪಿನಲ್ಲಿದ್ದ ಒಂದು ಹಸುವು ಯಾವ ಕಾರಣಕ್ಕೂ ಒಂದು ಹೆಜ್ಜೆ ಮುಂದಿಡಲು ಒಪ್ಪದೆ ನಿಂತಲ್ಲೆ ನಿಂತು ಹಠ ಮಾಡುತ್ತಿತ್ತು. ಆಗ ಆ ಹಸುವನ್ನು ಒಡೆದು ಬಡಿದು ಮಾಡಿದಾಗ ಅದು ಅಲ್ಲಿಂದ ಓಡಿಹೋಗಿ ಈಗ ‘ಕೊಳಕೇರಿ ದರ್ಗಾ ಶರೀಫ’ ಇರುವ ಸ್ಥಳದಲ್ಲಿಯೇ ಮಲಗಿಬಿಟ್ಟಿತಂತೆ. ಅದಾಗ್ಯೂ ಜನರು ಎಷ್ಟೇ ಪ್ರಯತ್ನ ಪಟ್ಟರೂ ಹಸುವನ್ನು ಕದಲಿಸಲಾಗಲಿಲ್ಲವಾದರಿಂದ ಹಸುವಿನ ಪಾಲಕರು ಏನೆಂದು ನೋಡಲಾಗಿ ಅಲ್ಲಿ ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳು ಇದ್ದುದು ಕಂಡು ಬಂದಿದೆ ಮತ್ತು ಅದೊಂದು ಸೂಫಿಸಂತರ ಸಮಾಧಿಯೆಂದು ತಿಳಿದುಬಂದುದಾಗಿ, ಮುಂದೆ ಅಲ್ಲಿ ದರ್ಗಾವನ್ನು ಕಟ್ಟಲಾಯಿತೆಂದು ಹೇಳಲಾಗುತ್ತಿದೆ. ಈ ದರ್ಗಾವು ಇಂದು ‘ಕೊಳಕೇರಿ ದರ್ಗಾ ಷರೀಫಾ’ ಎಂದು ಪ್ರಸಿದ್ಧಿಯನ್ನು ಪಡೆದಿದೆ.
ಚಿತ್ರಶಾಲೆ
2017-18ನೇ ಸಾಲಿನ ಆಡಳಿತ ಮಂಡಳಿ ಪದಾದಿಕಾರಿಗಳು
1. ಅಧ್ಯಕ್ಷರು: ಟಿ.ಎಚ್. ಮೊಯ್ದಿನ್ ಕುಟ್ಟಿ ಹಾಜಿ
2. ಉಪಾಧ್ಯಕ್ಷರು: ಸಿ.ಎಂ. ಹುಸೇನ್ ಮುಸ್ಲಿಯಾರ್
3. ಕಾರ್ಯದರ್ಶಿ: ಕೆ.ಎಂ. ಶಂಸುದ್ದೀನ್
4. ಕೋಷಾಧಿಕಾರಿ: ಎ.ಎ ಅಶ್ರಫ್
5. ಸದಸ್ಯರು: ಎ.ಕೆ. ಹ್ಯಾರೀಸ್
6. ಸದಸ್ಯರು:ಎಂ.ಎಚ್. ರಫೀಕ್
7. ಸದಸ್ಯರು:ಎಂ.ಎಂ. ಇಬ್ರಾಹೀಂ
8. ಸದಸ್ಯರು:ಎಂ.ಎ. ಅಬ್ದುಲ್ಲ ಸಕಾಫೀ
9. ಸದಸ್ಯರು:ಸಿ.ಎಂ.ತಾಜುದ್ದೀನ್
10.ಸದಸ್ಯರು:ಸಿ.ಯು. ಮಮ್ಮದ್
11.ಸದಸ್ಯರು:ಸಿ.ವೈ. ಗಫೂರ್
12.ಸದಸ್ಯರು:ಹ್ಯಾರೀಸ್.ಪಿ.ಎಂ
13.ಸದಸ್ಯರು:ಹಂಸ. ಟಿ.ಎ
14.ಸದಸ್ಯರು:ಕೆ.ಎ. ಮೂಸ ಹಾಜಿ
15.ಸದಸ್ಯರು:ಕೆ.ಎ. ಆಲಿ
16.ಸದಸ್ಯರು:ಸಿ.ಎ. ಮಹಮದ್ ಹಾಜಿ
17.ಸದಸ್ಯರು:ಎರುಮು
ಉಸ್ತಾದ್: ವಿ.ಪಿ. ಮೊಯ್ದಿನ್ ಕುಟ್ಟಿ ಮಜಾಇರಿ
ಸಂದರ್ಶನ: