SSF ಧ್ವಜ ದಿನ ಸೆಪ್ಟೆಂಬರ್ ೧೯
ಕನ್ನಡ ಮಣ್ಣಿನಲ್ಲಿ ಎಸ್.ಎಸ್.ಎಫ್ ಗೆ. ೩೦ ವರುಷ
ಸೆಪ್ಟಂಬರ್ 19 ರ ದಿನ ಪ್ರೀತಿಯ ಎಸ್ ಎಸ್ ಎಫ್ ನ ಕಾರ್ಯ ಕರ್ತರಿಗೆ ಎಂದೂ ಮೆರಯಲಾಗದ ದಿನವಾಗಿದೆ,1989 ರ ಸೆಪ್ಟಂಬರ್ 19 ರಂದು ಪ್ರಾರಂಭವಾದ ಎಸ್ ಎಸ್ ಎಫ್ ಎಂಬ ಸಂಘಟನೆಯು ಸ್ಥಾಪಿತವಾಗಿ ಇದೀಗ 2೯ವರ್ಷ ಯಶಸ್ವಿಯಾಗಿ ಪೂರೈಸಿ ೩೦ ನೇ ವರ್ಷದೆಡಗೆ ಮುನ್ನುಗ್ಗುತ್ತಿರುವಾಗ ಈ 2೯ ವರುಷದಲ್ಲಿ ಸವೆಸಿದ ಹಾದಿ ಅಷ್ಟು ಸುಲಭವಾಗಿರಲ್ಲಿಲ್ಲವದರೂ,ಎಲ್ಲಾ ಕಷ್ಟ ಪಾಡುಗಳನ್ನು ಮೀರಿ ಒಂದೊಂದು ಹೆಜ್ಜೆಗಳನ್ನು ಇಡುತ್ತಾ ಇದೀಗ ಯುವ ಪ್ರಾಯಕ್ಕೆ ಸಂಘಟನೆಯು ಕಾಲಿಟ್ಟು ಉಲಮಾ ಸಾರಥ್ಯದಲ್ಲಿ ಯುವಕರನ್ನು ಸೇರಿಸಿ ಧಾರ್ಮಿಕ,ಲೌಕಿಕವಾದ ವಿಚಾರಗಳನ್ನು ತಿಳಿಸಿಕೊಟ್ಟು ದೇಶಪ್ರೇಮದೊಂದಿಗೆ ಈ ದೇಶದ ಬೆನ್ನುಲುಬಾಗಿರುವಂತಹ ಸಂಘಟನೆಯಾಗಿ ಎಸ್ ಎಸ್ ಎಫ್ ಕಾರ್ಯಚರಿಸುತ್ತಿದೆ.
,ಎಸ್ ಎಸ್ ಎಫ್ ನ ಬಗ್ಗೆ ಅರ್ಥಮಾಡಿಕೊಳ್ಳದವರು ಇದರವಿಶ್ಲೇಷಣೆ ಮಾಡುತ್ತಾರೇ ಹೊರತು ಎಸ್ ಎಸ್ ಎಫ್ ಏನು,?ಎಸ್ ಎಸ್ ಎಫ್ ಏನೂ ಮಾಡುತ್ತಿದೆ, ಎಸ್ ಎಸ್ ಎಫ್ ನ ಶಕ್ತಿ ಏನೂ,? ಎಂಬುದರ ಬಗ್ಗೆ ಅಳವಾಗಿ ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ.
ಎಸ್ ಎಸ್ ಎಫ್ ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಕೆಡುಕಿನಿಂದ ದೂರವಿರುವಂತೆ ಮಾಡಿ ಸಮಾಜದಲ್ಲಿ ಒಬ್ಬ ಮೌಲ್ಯದಾರಿತ ಪ್ರಜೆಯನ್ನಾಗಿಸಿ ಮಾಡುದರ ಜೊತೆಗೆ ಅನಾಥ ಮಕ್ಕಳ,ನಿರ್ಗತಿಕರ,ಹೆಣ್ಣು ಮಕ್ಕಳ ಸಂರಕ್ಷಿಸಿ,ಅವರಿಗೆ ಬೇಕಾದ ಆಹಾರಬಟ್ಟೆ,ವಿಧ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಬದುಕನ್ನು ರೂಪಿಸಿ ಕೊಳ್ಳಲು ಅವಕಾಶವನ್ನು ನೀಡುತ್ತಾ,ಮಾನವೀಯತೆಯ ಮೌಲ್ಯಗಳನ್ನು ಕಲಿಸುತ್ತಾ ಧೃಢ ಹೆಜ್ಜೆಯನ್ನು ಇಡುತ್ತಿದೆ. ಭಯೋತ್ಪದನೆ,ಉಗ್ರವಾದ,ಕೋಮುವಾದ,ಮತೀಯವಾದವನ್ನು ಕಲಿಸದೆ, ಸಂಘಟನೆಯು ಕಟುವಾಗಿ ವಿರೋಧಿಸುತ್ತಿದೆ.
ಮನುಷ್ಯತ್ವದ ಮೌಲ್ಯಗಳಿಗೆ ಬೆಲೆ ಕೊಡುವುದಕ್ಕೆ ಹೆಚ್ಚು ಅದ್ಯತೆಯನ್ನು ನೀಡುತ್ತಾ ಬಂದಿದೆ. ಎ ಪಿ ಉಸ್ತಾದ್,ಭಾರತದಲ್ಲಿ ನಡೆಯುವ ಹತ್ಯೆ,ಪ್ರಪಂಚದಲ್ಲಿ ನಡೆಯುವ ಹತ್ಯೆಯನ್ನು ಬರೀ ಬಾಯಿಮಾತಿನಲ್ಲಿ ಖಂಡಿಸದೇ ಜೊತೆಗೆ ಬರ್ಮಾದಲ್ಲಿ ನಡೆದ ಹತ್ಯೆಯ ಕುರಿತು ನಮ್ಮ ದೇಶದ ಪ್ರಧಾನಮಂತ್ರಿಯವರೊಂದಿಗೂ, ಟರ್ಕಿ ಪ್ರಧಾನಮಂತ್ರಿಯೊಂದಿಗೆ ಚರ್ಚಿಸಿ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಭಾರತಕ್ಕೆ ಬಂದ ರೋಹಿಗ್ಯ ಮುಸ್ಲಿಂಮರಿಗೆ ಅಝಹರಿ ಉಸ್ತಾದವರು ದೆಹಲ್ಲಿಯಲ್ಲಿ ಅಲ್ಲಿನ ಮಕ್ಕಳಿಗೆ ಬೇಕಾದ ಆಹಾರ,ಬಟ್ಟೆನ್ನು ನೀಡಿ,ಮಾತಿನಲ್ಲಿ ಹೇಳದೆ ಕೆಲಸದಲ್ಲಿ ಮಾಡಿ ತೋರಿಸಿದ್ದು ಎಂದು ಎಸ್.ಎಸ್.ಎಫ್ ಗೆ ಮರೆಯಲಾಗದ ಕ್ಷಣ.
ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!
“ಕೆಡುಕುಗಳಿಂದ ಒಳಿತಿನೆಡೆಗೆ” ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.
ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.
ಕಳೆದ ೨೯ ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ.
ಪರಂಪರೆಯ ಸಂರಕ್ಷಣೆಗೆ ಉಲಮಾ ಸಾರಥ್ಯವೊಂದೇ ಎಸ್ ಎಸ್ ಎಫ್ ಗೆ ಆಶ್ರಯವಾಗಿದೆ,ನೆತ್ತರ ವಾಸನೆಯಿಲ್ಲದೆಯೂ ಸಮಾಜದಲ್ಲಿ ಕ್ರಾಂತಿಮೂಡಿಸಲೂ ಸಾದ್ಯವಿದೆ ಎಂದೂ ಸಾಧಿಸಿ ತೋರಿಸಿದ ಯುವ ಶಕ್ತಿ ಎಸ್ ಎಸ್ ಎಫ್, ಹಸಿರು ಶ್ವೇತ ನೀಲ ಧ್ವಜವನ್ನು ಎದೆಗಪ್ಪಿ ಉಲ್ಲಾಸದೊಂದಿಗೆ ಕಾರ್ಯಕ್ಷೇತ್ರಕ್ಕಿಳ್ಳಿದು ಕಾರ್ಯಚರಣೆಗೆ ಇಳಿದ ಎಸ್ ಎಸ್ ಎಫ್, ಭವ್ಯ ನಾಳೆಗಳ ನಿರ್ಮಾಣದ ಕಾರ್ಯಕ್ಕೆ ಕೈ ಜೋಡಿಸಿದ ಎಸ್ ಎಸ್ ಎಫ್,ನಾವು ಯಾರು,ನಮ್ಮ ಜವಬ್ದಾರಿ ಏನೂ ಎಂದು ತೊರಿಸಿಕೊಟ್ಟ ಎಸ್ ಎಸ್ ಎಫ್
ಎಸ್ ಎಸ್ ಎಫ್ ಸಂಘಟನೆಯು ಯಾರಲ್ಲೂ ದ್ವೇಷವನ್ನಾಗಲಿ,ಉನ್ನತ ಮಟ್ಟದ ನಾಯಕರುಗಳನ್ನಾಗಲಝ ಹೀಯಾಳಿಸುದಾಗಲಿ,ಇನ್ನೊಬ್ಬರ ತೇಜೊವಧೆಯನ್ನಾಗಲಿ ಮಾಡುತ್ತಿಲ್ಲ,ಬದಲಾಗಿ ಸುನ್ನತ್ ಜಮಾಅತಿನ ಆದರ್ಶವನ್ನು ಮಾತ್ರ ಜನರಿಗೆ ತಲುಪಿಸುವ ಸಿದ್ದಾಂತವನ್ನು ಇಟ್ಟುಕೊಂಡಿರುವ ಸಂಘಟನೆಯಾಗಿದೆ.
ಭಾರತ ಮಾತ್ರವಲ್ಲದೆ ಪ್ರಪಂಚವೇ ಮುಸ್ಲಿಂ ನಾಯಕರಾಗಿ ಒಪ್ಪಿಕೊಂಡಿರುವ ಒಬ್ಬ ಅಕ್ಷರ ಜ್ಞಾನದ ಪಾಂಡಿತ್ಯ,ಪ್ರಗಲ್ಬ ಪಂಡಿತ,ಎಸ್ ಎಸ್ ಎಫ್ ನ ಸಾರಥ್ಯದ ಸಾಮ್ರಾಟ ಆನಾಥ ಮಕ್ಕಳ ಅಶಾಕಿರಣ ಬಹುಮಾನ್ಯರಾದ ಎ ಪಿ ಉಸ್ತಾದ್ ಕಾಂತಪುರಂ ಈ ಸಂಘಟನೆಗೆ ಸಿಕ್ಕಿದ ಒಂದು ನಿಧಿ ಎಂದೇ ಹೇಳಬಹುದು , ಇವರ ನಾಯಕತ್ವದಲ್ಲಿ ಎಸ್ ಎಸ್ ಎಫ್ 2೯ಸಂವತ್ಸರಗಳು ಕಾರ್ಯಚರಿಸಿದೆ ಎಂಬುದೆ ದೊಡ್ಡ ಅಭಿಮಾನವಾಗಿದೆ.
ಕರುನಾಡ ಮಣ್ಣಿನಲ್ಲಿ ನಡೆದ ಕರ್ನಾಟಕ ಯಾತ್ರೆ ಕರ್ನಾಟಕದಲ್ಲಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.ಸಂಘಟನೆಯು ದೀನಿಕಾರ್ಯವಲ್ಲದೇ ಸಮಾಜಿಕ ಕಾರ್ಯಗಳಿಗೆ ಕೈ ಜೋಡಿಸುತ್ತಾ ಮುಂದೆ ಸಾಗುತ್ತಿದೆ ಇದನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಲೆ ಇರುವಷ್ಟು,ನಾವು ಇನ್ನೂ ಹೆಚ್ಚು ಬೆಳೆಯುತ್ತಾ ಹೊಗುತ್ತಿದ್ದೇವೆ ಅದೇ ನಮ್ಮ ಸಾಧನೆಯಾಗಿದೆ.
,ಕಳೆದ ತಿಂಗಳಲ್ಲಿ ,” ಕಳೆದು ತಿಂಗಳು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ” ಅಝಾಧಿ ರಾಲಿ ಎಲ್ಲಾ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಜನರಿಗೆ ತಲುಪಿಸಿದ್ದೇವೆ.
ಸತ್ಯ,ನ್ಯಾಯದ ಪರ ನಿಂತು ಎಲ್ಲಾ ಜನರ ಕಷ್ಟ ಸುಖಗಳಿಗೆಸ್ಪಂದಿಸುತ್ತಾ ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ .
ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ೩೦ ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಎಸ್ಸೆಸ್ಸಫ್ ನ ಧ್ವಜ ದಿನದ ಶುಭಾಶಯಗಳನ್ನು ಕೋರುತ್ತೇನೆ..