Pete Rama Mandira Temple Madikeri Dasara ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಸಮಿತಿ

Reading Time: 13 minutes

ಪೇಟೆ ಶ್ರೀ ರಾಮ ಮಂದಿರ ದೇವಾಲಯ
ದಸರಾ ಸಮಿತಿ

ಮಡಿಕೇರಿ, ಕೊಡಗು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಸ್ತಾವಿಕ

ಐತಿಹಾಸಿಕ ಮಡಿಕೇರಿ ದಸರಾ ಹಬ್ಬದ ದಶಮಂಟಪಗಳಲ್ಲಿ ಪ್ರಥಮ ಹಾಗೂ ಪ್ರಮುಖ ದೇಗುಲವಾದ ಶ್ರೀ ಪೇಟೆ ರಾಮಮಂದಿರವು ಸುಮಾರು 158 ವರ್ಷಕ್ಕೂ ಹೆಚ್ಚು ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ.
ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡ ಭಯಂಕರವಾದ ವಿವಿಧ ತರದ ಸಾಂಕ್ರಾಮಿಕ ರೋಗಗಳೊಂದಿಗೆ ಆರ್ಥಿಕ ಸಮಸ್ಯೆ ಕಂಡುಬಂದು ಇಲ್ಲಿಯ ಜನಸಾಮಾನ್ಯರು ತುಂಬಾ ತೊಂದರೆ ಅನುಭವಿಸಿದರು . ಇಂತಹ ಸಂಕಟ ಕಾಲದಲ್ಲಿ ಇದರ ಪಲಹಾರಕ್ಕಾಗಿ ಧಾರ್ಮಿಕ ಮುಖಂಡರು ಕೊಡಗಿನ ಮುಖ್ಯ ಸ್ಥಳವಾದ ಮಡಿಕೇರಿ ನಗರದಲ್ಲಿರುವ ನಾಲ್ಕು ಶಕ್ತಿ ದೇವತೆಗಳನ್ನು ದೊಡ್ಡ ಪೇಟೆಗೆ ಕರೆತಂದು ನಗರ ಪ್ರದಕ್ಷಿಣೆ ಮಾಡಿಸುವ ವ್ಯವಸ್ಥೆಯನ್ನು ದಸರಾ ಹಬ್ಬದ ಹಿನ್ನೆಲೆಯಲ್ಲ ಆಚಸಲು ನಿರ್ಧಸಿದರು . ಈ ಶಕ್ತಿ ದೇವತೆಗಳು ಮೂಲ ಪಾರ್ವತಿ ದೇವಿಯ ಅಂಶದವರಾಗಿರುತ್ತಾರೆ , ನವರಾತ್ರಿಯ ಮೊದಲ ದಿನ ದೇವಿಯು ದುಷ್ಟ ಸಂಹಾರಕ್ಕಾಗಿ ಅವಶ್ಯವಿರುವ ಆಯುಧಗಳಗಾಗಿ ದೇವಾನುದೇವತೆಗಳ ಅಣ್ಣನ ಸ್ಥಾನದಲ್ಲಿರುವ ಶ್ರೀ ಮಹಾ ವಿಷ್ಣುವಿನ ಬಳಿ ಹೋಗುತ್ತಾಳೆ : ಶ್ರೀ ಮಹಾ ವಿಷ್ಣು ಆ ದಿನ ತನ್ನ ನಾಲ್ಕು ಅಸ್ತ್ರಗಳಾದ ಶಂಕ , ಚಕ್ರ , ಗಧೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ನೀಡುತ್ತಾನೆ . ಇದು ಪುರಾಣ ಕಥೆ . ೫ ದಿನದ ಹಿನ್ನೆಲೆಯಲ್ಲಿ ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಚೌಟಿ ಮಾರಿಯಮ್ಮ ಶ್ರೀ ಕೋಟೆ ಮಾರಿಯಮ್ಮ ಶ್ರೀ ಕಂಚಿಕಾಮಾಕ್ಷಿಯಮ್ಮ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವತೆಗಳು ಕರಗ  ಕಟ್ಟಿದಂತೆ   ಅಣ್ಣನಾದ ಶ್ರೀ ಮಹಾ ವಿಷ್ಣುವಿನ ಸ್ಥಾನವಾದ ಪೇಟೆ ಶ್ರೀ ರಾಮಮಂದಿರಕ್ಕೆ ಬರುವ ಸಂಪ್ರದಾಯವಾಯಿತು , ನಂತರ ನವದಿನಗಳು ಈ ಶಕ್ತಿ ದೇವತೆಗಳ ಕರಗಗಳನ್ನು ನಗರ ಪ್ರದಕ್ಷಿಣೆ ಮಾಡುತ್ತಿರುತ್ತದೆ .
ಹತ್ತನೇ ದಿನವಾದ ವಿಜಯದಶಮಿಯಂದು ದೊಡ್ಡ ಪೇಟೆಯ ಶ್ರೀ ರಾಮ ಮಂದಿರದಿಂದ ಸಂಜೆ 7.00 ಗಂಟೆಯ ಸಮಯಕ್ಕೆ ಕಳಶ ಹೊತ್ತ ಪಲ್ಲಕಿಯು ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೊರಟು ಶ್ರೀ ಚೌಟಿ ಮಾರಿಯಮ್ಮ ದೇವಾಲಯವನ್ನು ತಲುಪಿ ಅಲ್ಲಿ ಕರಗ ಪೂಜೆ ಪಡೆಯುವ ಮೂಲಕ ಕರಗವನ್ನು ಹೊರಡಿಸಿಕೊಂಡು ಶ್ರೀ ಕಂಚಿ ಕಾಮಾಕ್ಷಿ ದೇವಾಲಯಕ್ಕೆ ಬಂದು ಅಲ್ಲಿಯೂ ಪೂಜೆ ಸ್ವೀಕರಿಸಿ ಅಲ್ಲಿಂದ ಕರಗವನ್ನು ಹೊರಡಿಸಿಕೊಂಡು ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಬರುತ್ತದೆ . ಅದೇ ಸಮಯದಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಹೊರಟು ಬಂದು ದಂಡಿನ ಮಾರಿಯಮ್ಮ ದೇವಾಲಯದಲ್ಲಿ ಪೇಟೆ ಶ್ರೀ ರಾಮಮಂದಿರದ ಕಳಶಪೂಜೆಗೆ ಕಾದು ಕುಳಿತ್ತಿರುತ್ತದೆ . ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಕರಗ ತನ್ನ ಅಕ್ಕನ ಸ್ಥಾನಕ್ಕೆ ಬಂದು ಕಾಯುತ್ತಿರುವುದಕ್ಕೆ ಒಂದು ಮುಖ್ಯ ವಾದ ಕಾರಣವಿರುತ್ತದೆ . ಹಿಂದೆ ದಸರಾ ಹಬ್ಬವನ್ನು ಮಡಿಕೇರಿಯಲ್ಲಿ ಆಚರಿಸಲು ಆರಂಭಿಸಿದ ಆ ದಿನಗಳಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯಕ್ಕೆ ಹೋಗಲು ತುಂಬಾ ಕಿರಿದಾದ ಒಂದು ಕಾಲು ದಾರಿ ಮಾತ್ರ ಇತ್ತು . ಬಹಳ ವರ್ಷಗಳ ಹಿಂದೆ ಕೋಟೆ ಕಟ್ಟುವ ಸಲುವಾಗಿ ನೆಲಸಮ ಮಾಡಿದ್ದ ಮಣ್ಣಿನ ರಾಶಿ ಕೋಟೆ ಸುತ್ತಲ ಪ್ರದೇಶವನ್ನು ಕಡಿದಾದ ಬೆಟ್ಟವನ್ನಾಗಿಸಿತ್ತು . ಇಂತಹ ಕಡಿದಾದ ಸ್ಥಳದಲ್ಲಿ ಇದ್ದ ಈ ಕಾಲು ದಾರಿಯಲ್ಲಿ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಿಂದ 3 ಮಂದಿ ಹೊರುವ ಅಲಂಕೃತ ಪಲ್ಲಕಿಯೊಂದಿಗೆ ವಾದ್ಯವೃಂದದ ಮೆರವಣಿಗೆಯು ರಾತ್ರಿ 9.00 ರ ವೇಳೆಯಲ್ಲಿ ಸಾಗುವುದು ಕಷ್ಟಕರವಾಗಿದ್ದರಿಂದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಕರಗ ಮುಖ್ಯಸ್ಥರು ತಮ್ಮ ಕರಗದೊಂದಿಗೆ ದಂಡಿನ ಮಾರಿಯಮ್ಮ ದೇವಾಲಯದಿಂದ ಬಂದು ಪೇಟೆ ಶ್ರೀ ರಾಮ ಮಂದಿರ ತರುವ ಕಳಶಕ್ಕಾಗಿ ಕಾಯುವಂತಾಯಿತು . ಇದೇ ಸಂಪ್ರದಾಯವು ಇಂದಿನವರೆಗೂ ಮುಂದುವರೆಯುತ್ತಾ ಬಂದಿರುತ್ತದೆ . ಹಿಂದೆಲ್ಲಾ ಶ್ರೀ ದಂಡಿನ ಮಾಲಯಮ್ಮ ದೇವಾಲಯದಿಂದ ಕರಗವನ್ನು ಹೊರಡಿಸಿದ ಪೇಟೆ ಶ್ರೀ ರಾಮಮಂದಿರದ ಕಳಶ ಹೊತ್ತ ಪಲ್ಲಕ್ಕಿಯು ನಾಲ್ಕು ಕರಗಗಳೊಂದಿಗೆ ಮೆರವಣಿಗೆಯಲ್ಲಿ ಮುಖ್ಯ ರಸ್ತೆಯಲ್ಲಿ ಸಾಗಿ ರಾಜರಸ್ತೆ ಎನಿಸಿದ ಮಹದೇವಪೇಟೆ ರಸ್ತೆಯ ಮೂಲಕ ಎಲೆ ಪೇಟೆಯಲ್ಲಿ ಬನ್ನಿ ಕಡಿಯುವ ಮೂಲಕ ವಿಜಯದಶಮಿಯ ರಾತ್ರಿ 12,00 ಗಂಟೆಯೊಳಗೆ ಉತ್ಸವವು ಶಾಂತಿಯುತವಾಗಿ ಮುಗಿಯುತ್ತಿತ್ತು

ಹಿನ್ನಲೆ – ಇತಿಹಾಸ

ಪ್ರಪ್ರಥಮವಾಗಿ ನಡೆದ ದಸರಾ ಹಬ್ಬದಿಂದ ಪುಣ್ಯ ಫಲವೆಂಬಂತೆ ನಾಡಿನಲ್ಲಿ ತಲೆ ತೋರಿದ್ದ ಸಾಂಕ್ರಾಮಿಕ ಮಾರಿರೋಗಗಳೊಂದಿಗೆ ಜನ ಸಾಮಾನ್ಯರ ಕಷ್ಟಕೋಟಲೆಗಳು ಮಂಜಿನಂತೆ ಕರಗಿ ಹೋಗಿದ್ದು , ಶಾಂತಿಯುತವಾದ ಆರೋಗ್ಯಕರ ವಾತಾವರಣ ಮೂಡಿಸಿದ್ದನ್ನು ಮನಗಂಡ ಧಾರ್ಮಿಕ ಮುಖಂಡರು ಹಾಗೂ ಶಕ್ತಿ ದೇವತೆಗಳ ದೇವಾಲಯದ ಪ್ರಮುಖರು ಇನ್ನು ಮುಂದಕ್ಕೆ ಪ್ರತೀ ವರ್ಷವೂ ಶಕ್ತಿದೇವತೆಗಳನ್ನು ಅನುಗ್ರಹ ಪಡೆಯುವ ಸಲುವಾಗಿ ಈ ದಸರಾ ಹಬ್ಬವನ್ನು ಮುಂದುವರೆಸಿಕೊಂಡು ಬರಲು ನಿರ್ಧರಿಸಿದರು . ಅಂದಿನಿಂದ ಇಂದಿನವರೆಗೂ ವರ್ಷದಿಂದ ವರ್ಷಕ್ಕೆ ದಸರಾ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಮಡಿಕೇರಿ ನಗರದ ಜನತೆಯ ಪರಂಪರೆಯಾಗಿದೆ . ವಿಶೇಷವೆಂದರೆ 2 ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಎಲ್ಲಾ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ನಗರದಲ್ಲಿ ಪೇಟೆ ಶ್ರೀ ರಾಮಮಂದಿರದಿಂದ ಹೊರಡುವ ಪಲ್ಲಕ್ಕಿಯ ಮೆರವಣಿಗೆ ಮಾತ್ರ ನಿಲ್ಲಲಿಲ್ಲ. 1962 ನೇ ಇಸವಿಯಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿಯೂ ಸಹ ಪೇಟೆ ಶ್ರೀ ರಾಮಮಂದಿರದಿಂದ ಕರಗಗಳನ್ನು ಹೊರಡಿಸುವುದನ್ನು ನಿಲ್ಲಿಸಲಿಲ್ಲ . ನಂತರವು ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ದೇವಾಲಯದವರು ತಮ್ಮದೇ ಆದ ಪಲ್ಲಕಿಗಳನ್ನು ಹೊರಡಿಸಿಕೊಂಡು ಪೇಟೆ ಶ್ರೀ ರಾಮಮಂದಿರದ ಮೆರವಣಿಗೆಯನ್ನು ಹಿಂಬಾಲಿಸುವುದರ ಮೂಲಕ ಈ ಉತ್ಸವದ ಮೆರಗು ಹೆಚ್ಚುತ್ತಾ ಬಂತು . ಮಡಿಕೇರಿಯಲ್ಲಿ ಆಚರಿಸುತ್ತಿದ್ದ ಈ ದಸರಾ ಹಬ್ಬವು ವರ್ಷದಿಂದ ವರ್ಷಕ್ಕೆ ಜನತೆಯನ್ನು ಆಕರ್ಷಿಸುತ್ತಾ ಬಂದು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು . ಪಲ್ಲಕ್ಕಿಗಳ ಸಂಖ್ಯೆಯು 5 ಕ್ಕೆ ಏರಿತು . ಜೊತೆಗೆ ಬದಲಾವಣೆಯ ಗಾಳಿಯು ಬೀಸಿತು . ಪಲ್ಲಕ್ಕಿಯಿಂದ ಮಣಿ ಮಂಟಪ – ಮಣಿಮಂಟಪಂದಿಂದ ಮೋಟಾರು ಗಾಡಿಯಲ್ಲಿ ಮಂಟಪವನ್ನು ಹೊರಡಿಸುವಂತಾಯಿತು . ದೇವರ ಫೋಟೋವಿಂದ ಮಣ್ಣಿನ ಮೂರ್ತಿಯಾಯಿತು – ಪೇಪರ್ ಮೋಲ್ಡಿಂಗ್‌ನಲ್ಲಿ ದೇವತೆಗಳ ಬೊಂಬೆಗಳು ರಾರಾಜಿಸಿದವು . ದೊಂದಿಯೊಂದಿಗೆ ಆರಂಭವಾದ ಮೆರವಣಿಗೆ ಬಂದು – ಗ್ಯಾಸ್‌ಲೈಟ್ ನಂತರ ವಿದ್ಯುತ್ ಲೈಟಿಂಗ್ ಬೋರ್ಡ್‌ಗಳು ಬಂದವು . ಜಾನಪದ ವಾದ್ಯಗಳು , ನಾದಸ್ವರಗಳ ಬದಲು ಪಾಶ್ಚಾತ್ಯ ಶೈಲಿಯ ಬ್ಯಾಂಡ್‌ಸೆಟ್‌ಗಳು ಬಂದವು . ಜನಾಕರ್ಷಣೆಯು ಹೆಚ್ಚಿತು . ದಸರಾ ಸಮಿತಿಯ ಉದಯವಾಯಿತು . ಇದರಿಂದ ನಾಡ ದಸರಾ ಹಬ್ಬವು ದೇಶಾದ್ಯಂತ ಮನ್ನಣೆ ಪಡೆದು ಹೆಸರುವಾಸಿಯಾಯಿತು . ಮಂಟಪಗಳ ಸಂಖ್ಯೆಯು 10 ಕ್ಕೆ ಏರಿ ದಶಮಂಟಪಗಳಾಯಿತು . ಮಂಟಪಗಳ ಗಾತ್ರವೂ ದೊಡ್ಡದಾಗಿಬಂತು . ದೇವಾದಿದೇವತೆಗಳು ಹಾಗೂ ಇತರ ಬೊಂಬೆಗಳಿಗೂ ಚಲನವನಗಳ ಅಳವಡಿಕೆಯಾಗಿ ಈ ಚಲನವಲನಗಳಿಗೆ ತಕ್ಕಂತಹ ಧ್ವನಿಮುದ್ರಣ ನೀಡಿ ಅದ್ಭುತವೆನಿಸುವ ಮನೋರಂಜನೆಯೊಂದಿಗೆ ಭಕ್ತಿ ಭಾವಗಳ ಸಮ್ಮಿಳಲನವಾಯಿತು . ಆದರೆ ಪೇಟೆ ಶ್ರೀ ರಾಮಮಂದಿರವು ತನ್ನ ಸಂಪ್ರದಾಯ ಪಾಲನೆಯನ್ನು ಮುಂದುವರಿಸುವ ನಿಟ್ಟನಲ್ಲ ತನ್ನ ಮಂಟಪದ ಗಾತ್ರವನ್ನು ಮಾತ್ರ ಹೆಚ್ಚಿಸಿಕೊಳ್ಳುವ ಸಾಹಸಕ್ಕೆ ಹೋಗಲಿಲ್ಲ , ಹಾಗೂ ನಗರದ ಕಿರಿದಾದ ರಸ್ತೆಗಳ ತೆರಳಬೇಕಾದ ಸಂದರ್ಭ ಹಾಗೂ ಸಮಯಕ್ಕೆ ಸರಿಯಾಣ ಕರಗಗಳನ್ನು ಹೊರಡಿಸಬೇಕಾದ ಜವಾಬ್ದಾರಿಯನ್ನು ಹೊತ್ತು ಇಂದಿಗೂ ಪ್ರತಿ ವರ್ಷದ ವಿಜಯದಶಮಿಯ ದಿನ ಸಂಜೆ 7.30 ರ ಸಮಯಕ್ಕೆ ಸರಿಯಾಗಿ ತನ್ನ ನೆಲೆಯಿಂದ ಹೊರಡುತ್ತದೆ .

ಮಂಟಪದ ವಿವರಗಳು – 2024

159 ನೇ ವರ್ಷದ ಆಚರಣೆ

ಕಥೆ: ಲೋಕ ಕಲ್ಯಾಣಕ್ಕಾಗಿ ವಿಷ್ಣುವಿನ ಮತ್ಸಾವತಾರ
ತೀರ್ಪಿನ ಸಮಯ : 10.00
ಸ್ಥಳ: ಗಾಂಧಿ ಮೈದಾನ ಬಳಿ

ಅಧ್ಯಕ್ಷರು: ಚೇತನ್‌
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ಸೆಲ್ವಂ ಲೈಟಿಂಗ್ಸ್‌, ದಿಂಡ್‌ಕಲ್‌
ಒಟ್ಟು ಕಲಾಕೃತಿಗಳು: 4
ಕಲಾ ಕೃತಿನಿರ್ಮಾಣ: ಮಧುಕರ್‌ ಆರ್ಟ್ಸ್‌, ಪೈಯನ್ನೂರು, ಕೇರಳ
ಧ್ವನಿವರ್ಧಕ : ನಿತಿಶ್‌ ಸೌಂಡ್ಸ್‌, ಕೊಣನೂರು
ಸ್ಟುಡಿಯೋ ಲೈಟ್ : SKYC (ಶಾಂತಿನಿಕೇತನ ಯುತ್‌ ಕ್ಲಬ್‌) ಮಡಿಕೇರಿ
ಒಟ್ಟು ವೆಚ್ಚ:  10 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: SKYC (ಶಾಂತಿನಿಕೇತನ ಯುತ್‌ ಕ್ಲಬ್‌) ಮಡಿಕೇರಿ
ಒಟ್ಟು ಸದಸ್ಯರು: 100

ಶ್ರೀ ಪೇಟೆ ರಾಮಮಂದಿರ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.

ಮಂಟಪದ ವಿವರಗಳು – 2023

158 ನೇ ವರ್ಷದ ಆಚರಣೆ

ಕಥೆ: ವೈಕುಂಠದಲ್ಲಿ ವಿಷ್ಣುವಿನ ದರ್ಶನ
ತೀರ್ಪಿನ ಸಮಯ :
ಸ್ಥಳ: 

ಅಧ್ಯಕ್ಷರು: ಭರತ್ ಬಿದ್ದಪ್ಪ
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ಸೆಲ್ವಂ ಎಲೆಕ್ಟ್ರಿಕಲ್ಸ್ ದಿಂಡಿಗಲ್
ಒಟ್ಟು ಕಲಾಕೃತಿಗಳು:
ಕಲಾ ಕೃತಿನಿರ್ಮಾಣ: ಮಧುಕರ್ ಬೆಂಗಳೂರು
ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ : ಮರ್ಕರ ಪವರ್ಸ್
ಒಟ್ಟು ವೆಚ್ಚ:  8ಲಕ್ಷ 
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮಿತಿ ಸದಸ್ಯರು
ಒಟ್ಟು ಸದಸ್ಯರು: 100

ಮಂಟಪದ ವಿವರಗಳು – 2022

157 ನೇ ವರ್ಷದ ಆಚರಣೆ

ಕಥೆ: ಋಷಿ – ಮುನಿಗಳ ತಪಸ್ಸಿಗೆ ಒಲಿಯುವ ಶಿವ – ಪಾರ್ವತಿ
ತೀರ್ಪಿನ ಸಮಯ :10.00 P.M.
ಸ್ಥಳ: ಕಾಫಿ ಕೃಪ ಕಟ್ಟಡದ ಬಳಿ, ಗಾಂಧಿ ಮೈದಾನ 

ಅಧ್ಯಕ್ಷರು: ಎಂ.ಡಿ. ಸುರೇಶ್
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ದಿಂಡಿಗಲ್‌ನ ಸೆಲ್ವಂ 
ಒಟ್ಟು ಕಲಾಕೃತಿಗಳು: 8
ಕಲಾ ಕೃತಿನಿರ್ಮಾಣ:  ಬೆಂಗಳೂರಿನ ಕಲಾವಿದ ಮಧುಕರ್‌
ಧ್ವನಿವರ್ಧಕ ಹಾಗೂ ಸ್ಟುಡಿಯೋ ಲೈಟ್ : ಮಡಿಕೇರಿಯ ಸ್ಕಂದ ಡೆಕೊರೇಟರ್‌ನ  ಅನಿ 
ಒಟ್ಟು ವೆಚ್ಚ: 5 ಲಕ್ಷ 
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮಿತಿ ಸದಸ್ಯರು
ಒಟ್ಟು ಸದಸ್ಯರು: 100

ಮಂಟಪದ ವಿವರಗಳು – 2021

156 ನೇ ವರ್ಷದ ಆಚರಣೆ

ಕಥೆ:ಸಂಜೀವಿನಿಯ ಬೆಟ್ಟವನ್ನು ಹೊತ್ತ ಆಂಜನೇಯ ಕಥಾ ಸಾರಾಂಶ ಕಲಾಕೃತಿ”
ಪ್ರದರ್ಶನ ಸಮಯ ಮತ್ತು ಸ್ಥಳ: 

ಅಧ್ಯಕ್ಷರು: 
ಕಥಾ ನಿರ್ವಹಣೆ: 
ಸೌಂಡ್ಸ್ :
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಫ್ಲಾಟ್‍ಫಾರಂ ಸೆಟ್ಟಿಂಗ್:
ಒಟ್ಟು ಸದಸ್ಯರು: 100

ಮಂಟಪದ ವಿವರಗಳು – 2019

154 ನೇ ವರ್ಷದ ಆಚರಣೆ

ಕಥೆ:ಅರ್ಧನಾರೀಶ್ವರ”
ಪ್ರದರ್ಶನ ಸಮಯ ಮತ್ತು ಸ್ಥಳ:
ರಾತ್ರಿ 10:30 ಗಂಟೆಗೆ, ಗಾಂಧೀ ಮಂಟಪ
ಅಧ್ಯಕ್ಷರು: ಭರತ್‌ ಕುಮಾರ್‌
ಕಥಾ ನಿರ್ವಹಣೆ: ಸಮಿತಿಯಿಂದ
ಸೌಂಡ್ಸ್ :
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಫ್ಲಾಟ್‍ಫಾರಂ ಸೆಟ್ಟಿಂಗ್:
ಒಟ್ಟು ಸದಸ್ಯರು: 100

2018

ಮಂಟಪದ ವಿವರಗಳು – 2018

153 ನೇ ವರ್ಷದ ಆಚರಣೆ
ಕಥೆ: ನಂದಿಯಿಂದ ಶಿವ ದರ್ಶನ
ಅಧ್ಯಕ್ಷರು: ಚೆನ್ನಪಂಡ ಚಂಗಪ್ಪ
ಕಥಾ ನಿರ್ವಹಣೆ: ಸಮಿತಿಯಿಂದ
ಸೌಂಡ್ಸ್ : ಡಿಜೆ. ತಮ್ಮಣ್ಣ ಪಿರಿಯಾಪಟ್ಟಣ
ಒಟ್ಟು ಕಲಾಕೃತಿಗಳು: 4
ಒಟ್ಟು ವೆಚ್ಚ: 4 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಮಧುಕರ್ ಬೆಂಗಳೂರು
ಒಟ್ಟು ಸದಸ್ಯರು: 100

2017

ಮಂಟಪದ ವಿವರಗಳು – 2017

ಕಥೆ: ಅನಂತ ಪದ್ಮನಾಭ
ಅಧ್ಯಕ್ಷರು: ಒ.ಎನ್. ಬಾಬು
ಆರ್ಚ್ ಲೈಟಿಂಗ್ಸ್ ಬೋರ್ಡ್: ಸೆಲ್ವಂ ಸೌಂಡ್ಸ್ ಅ್ಯಂಡ್ ಎಲೆಕ್ಟ್ರಿಕಲ್ಸ್
ಒಟ್ಟು ಕಲಾಕೃತಿಗಳು: 13
ಒಟ್ಟು ವೆಚ್ಚ: 7 ಲಕ್ಷ
ಕಥಾ ನಿರ್ವಹಣೆ: ಗಜರಾಜ್ ನಾಯ್ಡು
ಸ್ಟುಡಿಯೋ ಸೆಟ್ಟಿಂಗ್ಸ್:
ಫ್ಲಾಟ್‍ಫಾರಂ ಸೆಟ್ಟಿಂಗ್: ಅಂಜು ಮತ್ತು ನಯಾಝ್
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ವಿಶ್ವನಾಥ್, ಮಡಿಕೇರಿ
ಚಲನವಲನ:
ಸೌಂಡ್ಸ್: ವಿಕ್ರಂ, ಬೆಂಗಳೂರು.
ಕಲಾಕೃತಿ ನಿರ್ಮಾಣ: ಮಧುಕರ್, ಬೆಂಗಳೂರು
ಒಟ್ಟು ಸದಸ್ಯರು: 68

ಸಂದರ್ಶನ

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments