ಸೆಪ್ಟೆಂಬರ್ ೨೮ ಭಗತ್ ಸಿಂಗ್ ಜನ್ಮ ದಿನ ಇಂದು ಮಹಾನ್ ದೇಶಭಕ್ತ: ಕ್ರಾಂತಿ ಕಿಡಿ ಭಗತ್ ಸಿಂಗ್ ಜನ್ಮ ದಿನ

ಸೆಪ್ಟೆಂಬರ್ ೨೮ ಭಗತ್ ಸಿಂಗ್ ಜನ್ಮ ದಿನ ಇಂದು ಮಹಾನ್ ದೇಶಭಕ್ತ: ಕ್ರಾಂತಿ ಕಿಡಿ ಭಗತ್ ಸಿಂಗ್ ಜನ್ಮ ದಿನ

About Author

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ಅಗ್ರಗಣ್ಯ. ಇಂದು ಆ ಮಹಾನ್ ಕ್ರಾಂತಿಕಾರಿಯ ಜನ್ಮದಿನ. ಭಾರತಾಂಬೆಗೆ ತನ್ನ ಸರ್ವಸ್ವವನ್ನು ಅರ್ಪಿಸಿದ ಭಗತ್­ಗೆ ಜನ್ಮ ದಿನ. ಜನನ : 28-9-1907 ರಂದು ಪಂಜಾಬಿನ ಒಂದು ದೇಶಭಕ್ತ ಕುಟುಂಬದಲ್ಲಿ ಜನಿಸಿದರ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬಾಲ್ಯ : ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು. ಊರಿನಾಚೆ ಹೊಲ ಗದ್ದೆಗಳ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದ್ದದ್ದನ್ನು ಕಂಡು ಅವನೆಡೆಗೆ ನಡೆದರು. ಬಾಲಕನ ತಂದೆ ಕುತೂಹಲದಿಂದ ‘ಏನು ಮಾಡುತ್ತಿದ್ದೀಯಾ?’ ಎಂದು ಕೇಳಿದರು. ಆಗ ಬಾಲಕನು ‘ಈ ಹೊಲದ ತುಂಬಾ ನಾನು ಬಂದೂಕುಗಳನ್ನು ನೆಡುತ್ತೇನೆ’ ಎಂದು ಮುಗ್ಧವಾಗಿ ಉತ್ತರಿಸಿದನು. ಈ ಮಾತು ಹೇಳುವಾಗ ಅವನ ಕಣ್ಣಿನಲ್ಲಿ ‘ನೆಟ್ಟಿರುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ’ ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಏಕೆ ಎಂದು ಪ್ರಶ್ನಿಸಿದಕ್ಕೆ ‘ಈ ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬಹುದು’ ಎಂಬ ಉತ್ತರವನ್ನು ನೀಡಿದ! ಇದನ್ನು ಕೇಳುತ್ತಿದ್ದ ಹಿರಿಯರು ಈ ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.

ಯುವಾವಸ್ಥೆ : ಉನ್ನತ ಶಿಕ್ಷಣ, ಸಿರಿವಂತ ಮನೆಯ ಸರ್ವ ಅನುಕೂಲಗಳು ಇವೆಲ್ಲವನ್ನೂ ತ್ಯಜಿಸಿ, ದೇಶಕ್ಕಾಗಿ ಅವಿವಾಹಿತನಾಗಿರಲು ನಿರ್ಧಿರಿಸದ ಭಗತ್ ಸಿಂಗ್, ಕ್ರಾಂತಿಕಾರಿಯಾದನು. ‘ನೌಜವಾನ್ ಭಾರತ ಸಭಾ’, ‘ಕೀರ್ತಿ ಕಿಸಾನ್ ಪಾರ್ಟಿ’ ಮತ್ತು ‘ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್’ ಮುಂತಾದ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೃತಿಶೀಲನಾದನು.

ಜೀವನದ ಕೆಲವು ಪ್ರಸಂಗಗಳು : ತನಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ತಿಳಿದ ನಂತರ ಭಗತ್ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ – ‘ಅಮ್ಮ, ಚಿಂತಿಸಬೇಡ! ಗಲ್ಲು ಆದರೇನು! ಆಂಗ್ಲ ಸರಕಾರವನ್ನು ಕಿತ್ತೊಗೆಯಲು ಒಂದೇ ವರ್ಷದಲ್ಲಿ ಪುನಃ ಜನ್ಮ ತಾಳುವೇನು!’

ಭಾರತದ ಅಂದಿನ ಪರಿಸ್ಥಿತಿ..

1928 ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದ ಮುಂದಿನ ದಿಶೆಯನ್ನು ನಿರ್ಧರಿಸುವುದು ಈ ಮಂಡಲದ ಉದ್ದೇಶವಾಗಿತ್ತು. ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ವಿರೋಶ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಒಂದು ನಿಷೇಧ ಯಾತ್ರೆಯು ಈ ಕಮಿಷನ್ ಅನ್ನು ಸ್ವಾಗತಿಸಿತು. ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂಬ ಕೂಗು ಎಲ್ಲೆಡೆ ಮೊಳಗಿತು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಳ್ಳುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು. ಆಂಗ್ಲ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಶತಪ್ರಯತ್ನ ಮಾಡಿತು. ಆದರೆ ಆರಕ್ಷಕರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾದರು ಮತ್ತು ಇತರ ಕ್ರಾಂತಿಕಾರಿಗಳಿಗೆ ಈ ಕಾರ್ಯವನ್ನು ಮುನ್ನಡೆಸಲು ಸ್ಪೂರ್ತಿ ನೀಡಿದರು.

 

ಭಾರತಾಂಬೆಯ ಚರಣಗಳಲ್ಲಿ ಲೀನ!

23 ಮಾರ್ಚ್, 1931 ರಂದು ಲಾಹೋರಿನ ಸೆಂಟ್ರಲ್ ಜೈಲ್­ನಲ್ಲಿ ಸಂಜೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರೂ ನಗುಮುಖದಿಂದ ನೇಣುಗಂಬವನ್ನು ಏರಿದರು. ಬನ್ನಿ ಈ ಮಹಾನ್ ದೇಶಭಕ್ತರಿಗೆ ನಮ್ಮ ನಮನಗಳನ್ನು ಅರ್ಪಿಸೋಣ!

Ismail Kandakkare

Follow On

ಇಸ್ಮಾಯಿಲ್‌ ಕಂಡಕೆರೆ

0 0 votes
Article Rating
Subscribe
Notify of
guest
0 Comments
Inline Feedbacks
View all comments