ಸೆಪ್ಟೆಂಬರ್ ೨೯ ಇಂಡಿಯನ್ ಸೂಪರ್ ಲೀಗ್ ಆರಂಭ ಕ್ರಿಕೆಟ್ ನಾಡಿನಲ್ಲಿ ಇಂದಿನಿಂದ ಫುಟ್ಬಾಲ್ ಕಲರವ ಬಜೇಕೇ ಸೀಟಿ ಉಡೇ ಕಾ ಬಾಲ್ ಕಮಾನ್ ಇಂಡಿಯಾ ಲೆಟ್ಸ್ ಫುಟ್ಬಾಲ್

Reading Time: 9 minutes

ಸೆಪ್ಟೆಂಬರ್ ೨೯ ಇಂಡಿಯನ್ ಸೂಪರ್ ಲೀಗ್ ಆರಂಭ ಕ್ರಿಕೆಟ್ ನಾಡಿನಲ್ಲಿ ಇಂದಿನಿಂದ ಫುಟ್ಬಾಲ್ ಕಲರವ ಬಜೇಕೇ ಸೀಟಿ ಉಡೇ ಕಾ ಬಾಲ್ ಕಮಾನ್ ಇಂಡಿಯಾ ಲೆಟ್ಸ್ ಫುಟ್ಬಾಲ್

ಭಾರತದಲ್ಲಿ ಫುಟ್ಬಾಲ್‌ಗೆ ಹೊಸ ರೂಪು ನೀಡಿ, ಯುವ ಫುಟ್ಬಾಲಿಗರಿಗೆ ಬದುಕು ನೀಡಿದ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಮತ್ತೆ ಬಂದಿದೆ. 2018-19ರ ಋತುವಿನ ಮೊದಲಾ‘ರ್ದ ವೇಳಾಪಟ್ಟಿಯ ಮೊದಲ ಪಂದ್ಯ ಸೆ.೨೯ ಇಂದಿನಿಂದ ಕೋಲ್ಕೊತಾದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ಪರಸ್ಪರ ಸೆಣಸಲಿವೆ. 12 ಸುತ್ತುಗಳು ಹಾಗೂ 5೯ ಪಂದ್ಯಗಳು ಈ ಬಾರಿ ಮೊದಲ ಹಂತದಲ್ಲಿ ನಡೆಯಲಿವೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಐದನೇ ಆವೃತ್ತಿಯ ಐಎಸ್‌ಎಲ್ ಹೊಸ ರೂಪ ಪಡೆದು ಕಾಣಿಸಿಕೊಳ್ಳಲಿದೆ. ಸಾಲ್ಟ್ ಲೇಕ್ ಅಂಗಣದಲ್ಲಿ ಎರಡು ಬಾರಿ ಚಾಂಪಿಯನ್ ಎಟಿಕೆ ಬಲಿಷ್ಠ ಕೇರಳ ತಂಡವನ್ನು ಎದುರಿಸಲಿದೆ. ಎಟಿಕೆ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾಗಿತ್ತು.
ಸೆ. 30 ರಂದು ದಕ್ಷಿಣ ಭಾರತದ ಡರ್ಬಿ ಎಂದೇ ಕರೆಯಲ್ಪಡುವ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಹಾಗೂ ಚೆನ್ನೈಯನ್ ಎಫ್ಸಿ ತಂಡಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈ ಬಾರಿ ಐಎಸ್‌ಎಲ್‌ನಲ್ಲಿ ಎರಡು ಬಾರಿ ಬಿಡುವಿರುತ್ತದೆ.
ಅಕ್ಟೋಬರ್ 8 ರಿಂದ 16 ಹಾಗೂ 12 ರಿಂದ 20 ನವೆಂಬರ್ 2018ರವರೆಗೆ ಫಿಫಾ ವೇಳಾಪಟ್ಟಿಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಡಿಸೆಂಬರ್ 17ರಿಂದ ಭಾರತ ರಾಷ್ಟ್ರೀಯ ತಂಡ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್‌ಗಾಗಿ ಭಾರತ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. 2019ರ ವೇಳಾಪಟ್ಟಿಯನ್ನು ಲೀಗ್‌ನ ಆಡಳಿತ ಮಂಡಳಿ ನಂತರದ ದಿನಗಳಲ್ಲಿ ಪ್ರಕಟಿಸಲಿದೆ. ಪ್ರತಿ ದಿನ ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು, ಭಾನುವಾರ ಎಂದಿನಂತೆ ಎರಡು ಪಂದ್ಯಗಳಿರುತ್ತವೆ.

ಐಎಸ್​ಎಲ್ 5ನೇ ಆವೃತ್ತಿಗೆ ಆರಂಭೋತ್ಸವ ಇಲ್ಲ!

ಕ್ರೀಡಾಕೂಟಗಳೆಂದರೆ ವರ್ಣರಂಜಿತ ಉದ್ಘಾಟನಾ ಸಮಾರಂಭ ಸಾಮಾನ್ಯ. ಆದರೆ ಫುಟ್​ಬಾಲ್​ನಲ್ಲಿ ಇಂಥ ಸಂಪ್ರದಾಯಗಳು ಕಡಿಮೆ. ಇದಕ್ಕೆ ಕಾರಣ, ಜಾಗತಿಕ ಫುಟ್​ಬಾಲ್ ಆಡಳಿತ ಸಂಸ್ಥೆ ಫಿಫಾದ ನಿಲುವು. ಉದ್ಘಾಟನಾ ಸಮಾರಂಭಕ್ಕೆ ದುಂದುವೆಚ್ಚ ಮಾಡುವ ಬದಲು ಅದನ್ನು ಕ್ರೀಡೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ವಿಶ್ವಕಪ್ ಸಹಿತ ಫಿಫಾದ ಯಾವುದೇ ಟೂರ್ನಿಗೆ ವರ್ಣರಂಜಿತ ಆರಂಭೋತ್ಸವಗಳಿಲ್ಲ. ಇದೀಗ ಭಾರತದ ಫುಟ್​ಬಾಲ್ ಟೂರ್ನಿ ‘ಇಂಡಿಯನ್ ಸೂಪರ್ ಲೀಗ್’ (ಐಎಸ್​ಎಲ್) ಕೂಡ ಇದನ್ನೇ ಅನುಸರಿಸಲು ಮುಂದಾಗಿದೆ. ಇದರಿಂದಾಗಿ ಮುಂಬರುವ ಐಎಸ್​ಎಲ್ 5ನೇ ಆವೃತ್ತಿಗೆ ಆರಂಭೋತ್ಸವ ಇರುವುದಿಲ್ಲ. ಫುಟ್​ಬಾಲ್ ಆಟದತ್ತ ಮಾತ್ರ ಗಮನ ಕೇಂದ್ರೀಕರಿಸಬೇಕೆಂದು ಐಎಸ್​ಎಲ್ ಸಂಘಟಕರು ನಿರ್ಧರಿಸಿದ್ದಾರೆ. ಕಳೆದ 4 ಆವೃತ್ತಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಬಾಲಿವುಡ್ ತಾರೆಯರು ನರ್ತಿಸಿದ್ದರು.

ಭಾರತೀಯ ಫುಟ್ಬಾಲ್ ನಲ್ಲಿ ಅತೀ ಹೆಚ್ಚು ಬಹುಮಾನ ನೀಡಿದ ಇಂಡಿಯನ್ ಸೂಪರ್ ಲೀಗ್

ಕಳೆದ ಬಾರಿಯ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ₹ 8t ಕೋಟಿ ಬಹುಮಾನ ಮೊತ್ತ ನೀಡುವುದರೊಂದಿಗೆ ಭಾರತೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಬಹುಮಾನ ಮೊತ್ತ ನೀಡಿದ ಟೂರ್ನಿ ಎಂಬ ಖ್ಯಾತಿಯನ್ನು ಐಎಸ್‌ಎಲ್ ತನ್ನದಾಗಿಸಿಕೊಂಡಿದೆ. ಇದು, ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ವಿಜೇತ ತಂಡಕ್ಕೆ ನೀಡುವ ಮೊತ್ತದ ಅರ್ಧಕ್ಕಿಂತ ಹೆಚ್ಚು ಎಂಬುದು ಗಮನಾರ್ಹ. ಹೀಗಾಗಿ ಐಎಸ್‌ಎಲ್‌ ಟೂರ್ನಿಯು ಐಪಿಎಲ್‌ನ ಹಾದಿಯಲ್ಲೇ ಹೆಜ್ಜೆ ಇರಿಸುತ್ತಿದೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

ಮೂಗಿನ‌ ಮೇಲೆ ಬೆರಳಿಟ್ಟವರೇ ಹೆಚ್ಚು

ಈ ವರ್ಷದ ಮಾರ್ಚ್‌ನಲ್ಲಿ ಇಂಡಿಯನ್‌ ಸೂಪರ್‌

(ಐಎಸ್‌ಎಲ್‌) ಟೂರ್ನಿಯ ನಾಲ್ಕನೇ ಆವೃತ್ತಿ ಮುಕ್ತಾಯಗೊಂಡ ಕೂಡಲೇ ಟೂರ್ನಿಯ ಅಧಿಕೃತ ಪ್ರಾಯೋಜಕರಾದ ಹೀರೊ ಮೋಟೊ ಕಾರ್ಪ್‌ ಲೀಗ್‌ ಮೇಲೆ ಹೂಡುವ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿತು. ಮೊದಲ ಮೂರು ಆವೃತ್ತಿಗಳಿಗೆ ಕಂಪೆನಿ ಹೂಡಿದ್ದು ₹ 57 ಕೋಟಿ. ಮುಂದಿನ ಮೂರು ಆವೃತ್ತಿಗಳಿಗಾಗಿ ₹ 180 ಕೋಟಿ ಮೊತ್ತ ಹೂಡಲು ನಿರ್ಧರಿಸಿದಾಗ ಮೂಗಿನ ಮೇಲೆ ಬೆರಳಿಟ್ಟವರೇ ಹೆಚ್ಚು. ಆದರೆ ಐಎಸ್ಎಲ್‌ ವರ್ಷದಿಂದ ವರ್ಷಕ್ಕೆ ಗಳಿಸುತ್ತಿರುವ ಖ್ಯಾತಿಯನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಹೀರೊ ಮೋಟೊ ಕಾರ್ಪ್‌ನ ನಿರ್ಧಾರ ಅಚ್ಚರಿ ಮೂಡಿಸಲಿಲ್ಲ. ಐಎಸ್‌ಎಲ್‌ನ ಐದನೇ ಆವೃತ್ತಿ ಇಂದಿನಿಂದ ಆರಂಭಗೊಳ್ಳಲಿದ್ದು ಲೀಗ್‌, ಹಣ ಬಿತ್ತಿ ಹಣದ ಕೊಯ್ಲು ತೆಗೆಯುವ ಹೆಮ್ಮರವಾಗಿ ಬೆಳೆಯುವ ಇನ್ನಷ್ಟು ಸಾಧ್ಯತೆಗಳ ಭರವಸೆ ಮೂಡಿಸಲಿದೆ.

ಜಿದ್ದಾಜಿದ್ದಿಯ ಹಣಾಹಣಿ

ಕಳೆದ ಬಾರಿ ಏಷ್ಯನ್‌ ಫುಟ್‌ಬಾಲ್ ಫೆಡರೇಷನ್‌ನ ಮಾನ್ಯತೆ ಸಿಕ್ಕಿದ ನಂತರವಂತೂ ಐಎಸ್‌ಎಲ್‌ನ ಕ್ಯಾತಿ ಇಮ್ಮಡಿಗೊಂಡಿದೆ. ದೇಶದ ಪ್ರಮುಖ ಉದ್ಯಮಿಗಳು, ಚಿತ್ರನಟರು ಮತ್ತು ಕ್ರಿಕೆಟ್ ಆಟಗಾರರು ಫ್ರಾಂಚೈಸ್‌ಗಳ ಮಾಲೀಕತ್ವದಲ್ಲಿ ಪಾಲುದಾರರಾಗುತ್ತಿದ್ದುದನ್ನು ಕಂಡು ಪ್ರೇಕ್ಷಕರು ಅಂಗಣಗಳತ್ತ ಮುಗಿ ಬಿದ್ದರು.

ಹೀಗಾಗಿ ಪ್ರತಿ ಪಂದ್ಯಕ್ಕೂ, ವಿಶೇಷವಾಗಿ ವಾರಾಂತ್ಯದ ಪಂದ್ಯಗಳಿಗೆ ಜನಸಾಗರ ಹರಿದು ಬರತೊಡಗಿತು. ಹೀಗಾಗಿ ಐಎಸ್‌ಎಲ್‌ಗೆ ಆರ್ಥಿಕವಾಗಿ ಶ್ರೀಮಂತಿಕೆಯ ಪಟ್ಟವನ್ನೂ ಕಟ್ಟಿತು.
ಈ ಎಲ್ಲ ಕಾರಣಗಳಿಂದ ಪಂದ್ಯಗಳು ರೋಚಕವಾಗುತ್ತಿವೆ. ಈ ಬಾರಿಯೂ ಕಾಲ್ಚಳಕದ ರಸ ರೋಮಾಂಚನವನ್ನು ಸವಿಯಲು ಸಿಗುವುದರಲ್ಲಿ ಸಂದೇಹವಿಲ್ಲ.

ಎರಡು ಬಾರಿ ಫೈನಲ್‌ ತಲುಪಿ ಕಪ್‌ ಗೆಲ್ಲಲಾಗದ ಕೇರಳ ಬ್ಲಾಸ್ಟರ್ಸ್‌, ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ಗೆ ಲಗ್ಗೆ ಇರಿಸಿ ತವರಿನಲ್ಲೇ ಪ್ರಶಸ್ತಿ ಕೈಚೆಲ್ಲಿದ ಬೆಂಗಳೂರು ಎಫ್‌ಸಿ, ಮೊದಲ ಮೂರು ಆವೃತ್ತಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದರೂ ನಂತರ ಮಂಕಾದ ಎಟಿಕೆ, ಕಳೆದ ಆವೃತ್ತಿಯಲ್ಲಿ ಗೆದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬದಲ್ಲಿರುವ ಚೆನ್ನೈಯಿನ್ ಎಫ್‌ಸಿ….ಹೀಗೆ ಪ್ರತಿ ತಂಡಗಳಿಗೂ ಪ್ರಶಸ್ತಿ ಮೇಲೆ ಕಣ್ಣಿದೆ.

ಕಾಲೂ ಊಚೆ ರಾಕಿಂಗ್ ನಲ್ಲಿ ಪ್ರಥಮ

ಸ್ಪೇನ್‌ನ ಫೆರಾನ್ ಕೊರೊಮಿನಾಸ್‌, ವೆನೆಜುವೆಲಾದ ಮಿಕು, ಭಾರತದ ಸುನಿಲ್‌ ಚೆಟ್ರಿ…ಕಳೆದ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್ ಟೂರ್ನಿಯ ಉದ್ದಕ್ಕೂ ಫುಟ್‌ಬಾಲ್‌ ಪ್ರಿಯರ ಮನದಲ್ಲಿ ಅಚ್ಚಾಗಿದ್ದ ಹೆಸರುಗಳು ಇವು. ತಲಾ 18, 15 ಮತ್ತು 14 ಗೋಲುಗಳನ್ನು ಗಳಿಸಿದ್ದ ಈ ಆಟಗಾರರು ಟೂರ್ನಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು.

ಟೂರ್ನಿಯಲ್ಲಿ 55 ಗೋಲುಗಳನ್ನು ತಡೆದ ಭಾರತದ ಗೋಲ್‌ ಕೀಪರ್‌ ಅಮರಿಂದರ್ ಸಿಂಗ್‌, 51 ಗೋಲು ತಡೆದ ಕರಣ್‌ಜೀತ್ ಸಿಂಗ್‌, 46 ಬಾರಿ ಎದುರಾಳಿ ತಂಡದವರನ್ನು ನಿರಾಸೆಗೊಳಿಸಿದ್ದ ಗುರುಪ್ರೀತ್‌ ಸಿಂಗ್ ಸಂಧು ಮುಂತಾದವರು ಕೂಡ ಗಳಿಸಿದ ಖ್ಯಾತಿ ಕಡಿಮೆ ಏನಲ್ಲ.

ಆದರೆ ಟೂರ್ನಿಯಲ್ಲಿ ಒಟ್ಟಾರೆಯಾಗಿ ಹೆಚ್ಚು ಗಮನ ಸೆಳೆದ ಆಟಗಾರರ ರ‍್ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಂಡಾಗ ಅಚ್ಚರಿ ಮೂಡಿಸಿದ್ದು ನೈಜೀರಿಯಾ ಆಟಗಾರ ಡೆಲ್ಲಿ ಡೈನಾಮೊಸ್‌ನ ಕಲು ಉಚೆ, ಎಫ್‌ಸಿ ಗೋವಾದಲ್ಲಿ ಆಡಿದ್ದ ಸ್ಪೇನ್‌ನ ಮ್ಯಾನ್ಯುವೆಲ್‌ ಲಾಂಜ್ರೊಟೆ, ಇದೇ ತಂಡ ಮತ್ತು ಇದೇ ದೇಶದ ಆಟಗಾರ, ಫೆರಾನ್ ಕೊರೊಮಿನಾಸ್‌ ಮುಂತಾದವರು.

2016ರಲ್ಲಿ ಐಎಸ್‌ಎಲ್‌ನಲ್ಲಿ ಮೊದಲ ಬಾರಿ ಆಟಗಾರರ ರ‍್ಯಾಂಕಿಂಗ್ ಪದ್ಧತಿ ಜಾರಿಗೆ ತರಲಾಯಿತು. ಆ ವರ್ಷವೂ ಸ್ಪೇನ್‌ನ ಆಟಗಾರ ಡೆಲ್ಲಿ ಡೈನಾಮೊಸ್‌ನ ಮಾರ್ಸೆಲೊ ಪೆರೇರ, ಸ್ಪೇನ್‌ನ ಮತ್ತೊಬ್ಬ ಆಟಗಾರ ಆಟಗಾರ, ಎಟಿಕೆಯ ಜೇವಿಯರ್ ಲಾರಾ, ಡೆಲ್ಲಿ ಡೈನಾಮೊಸ್‌ನಲ್ಲಿ ಆಡಿದ್ದ ಪ್ರೆಂಚ್ ಆಟಗಾರ ಫ್ಲಾರೆಂಟ್‌ ಮಲೋಡಾ ಮೊದಲಾದವರು ಪಟ್ಟಿಯ ಅಗ್ರ ಮೂರು ಸ್ಥಾನಗಳಲ್ಲಿ ಹೆಸರು ಗಳಿಸಿ ಗಮನ ಸೆಳೆದಿದ್ದರು.
ಪಂದ್ಯದಿಂದ ಪಂದ್ಯಕ್ಕೆ ರೋಮಾಂಚನ ಮತ್ತು ಕುತೂಹಲವನ್ನು ಹೆಚ್ಚಿಸುವ ಐಎಸ್‌ಎಲ್‌, ಹೆಚ್ಚು ಗಮನಕ್ಕೆ ಬಾರದ ಇಂಥ ಅನಿರೀಕ್ಷಿತ ‘ತಿರುವು’ಗಳಿಗೂ ವೇದಿಕೆಯಾಗುತ್ತದೆ.

ಹಿಂದಿನ ಆವೃತ್ತಿಗಳ ವಿಜೇತರು ,ರನ್ನರ್ಸ್ ಅಪ್ ತಂಡಗಳು

ವರ್ಷ:೨೦೧೪
ವಿಜೇತರು:ಎಟಿಕೆ
ರನ್ನರ್ಸ್ ಅಪ್:ಕೇರಳ ಬ್ಲಾಸ್ಟರ್ಸ್

ವರ್ಷ:೨೦೧೫
ವಿಜೇತರು:ಚೈನೈಯನ್ ಎಫ್ ಸಿ
ರನ್ನರ್ಸ್ ಅಪ್:ಗೋವಾ

ವರ್ಷ:೨೦೧೬
ವಿಜೇತರು:ಎಟಿಕೆ
ರನ್ನರ್ಸ್ ಅಪ್:ಕೇರಳ

ವರ್ಷ:೨೦೧೭-೧೮
ವಿಜೇತರು:ಚೈನೈಯನ್ ಎಫ್ ಸಿ.
ರನ್ನರ್ಸ್ ಅಪ್ :ಬಿ.ಎಫ್.ಸಿ

ಸೆಮಿಫೈನಲ್ ತಲುಪಿದ ತಂಡಗಳು

ವರ್ಷ:೨೦೧೪
ಚೆನೈಯನ್ ಎಫ್ ಸಿ- ಗೋವಾ
ವರ್ಷ: ೨೦೧೫
ಎಟಿಕೆ-ಡೆಲ್ಲಿ ಡೈನಾಮೋಸ್
ವರ್ಷ:೨೦೧೬
ಡೆಲ್ಲಿ ಡೈನಾಮೋಸ್-ಮುಂಬೈ ಸಿಟಿ
ವರ್ಷ:೨೦೧೭-೧೮
ಗೋವಾ-ಪುಣೆ ಎಫ್ ಸಿ.

ಅತೀ ಹೆಚ್ಚು ಗೋಲು ಗಳಿಸಿದವರು

ಆಟಗಾರ:ಲೇನ್ ಹ್ಯೂಮ್
ದೇಶ:ಕೆನೆಡಾ
ಪಂದ್ಯಗಳು:೫೯
ಗೋಲುಗಳು:೨೮

ಆಟಗಾರ:ಜೆಜೆ ಲಾಲ್ ಪೆಖ್ಲೂವಾ
ದೇಶ:ಭಾರತ
ಪಂದ್ಯಗಳು:೫೩
ಗೋಲುಗಳು:೨೨

ಆಟಗಾರ:ಸುನಿಲ್ ಚೆಟ್ರಿ
ದೇಶ:ಭಾರತ
ಪಂದ್ಯಗಳು:೩೮
ಗೋಲುಗಳು:೨೧

ಆಟಗಾರ:ಫೆರಾನ್ ಕೊರಾಮಿನಾಸ್
ದೇಶ:ಸ್ಪೇನ್
ಪಂದ್ಯಗಳು:೨೦
ಗೋಲುಗಳು:೧೮

ಆಟಗಾರ:ಮಾರ್ಸಲೋ ಪೆರೇರಾ
ದೇಶ:ಬ್ರೆಜಿಲ್
ಪಂದ್ಯಗಳು:೩೨
ಗೋಲುಗಳು:೧೮

ಆಟಗಾರ:ಜಾನ್ ವೆಲೆನ್ಸಿಯಾ
ದೇಶ:ಕೊಲೊಂಬಿಯಾ
ಪಂದ್ಯಗಳು:೨೫
ಗೋಲುಗಳು:೧೭

ಆಟಗಾರ:ಕಾಲೂ ಊಚೆ
ದೇಶ:ನೈಜೀರಿಯಾ
ಪಂದ್ಯಗಳು:೨೬
ಗೋಲುಗಳು:೧೭

ಆಟಗಾರ:ಮಿಕು
ದೇಶ:ವೆನುಜುವೆಲಾ
ಪಂದ್ಯಗಳು:೨೦
ಗೋಲುಗಳು:೧೫

ಟಾಪ್ ೫ ಗೋಲ್ ಕೀಪರ್ ಗಳು

ಆಟಗಾರ:ಸುಬ್ರತಾ ಪಾಲ್
ದೇಶ:ಭಾರತ
ಪಂದ್ಯಗಳು:೫೫
ತಡೆದ ಗೋಲುಗಳು:೧೬೮

ಆಟಗಾರ:ಲಕ್ಷಿ ಕಾಂತ್ ಕಟ್ಟಿ ಮನಿ
ದೇಶ:ಭಾರತ
ಪಂದ್ಯಗಳು:೩೯
ತಡೆದ ಗೋಲುಗಳು:೧೩೫

.ಆಟಗರಾ:ಟಿ.ಪಿ ರೆಹನೇಶ್
ದೇಶ:ಭಾರತ
ಪಂದ್ಯಗಳು:೪೪
ತಡೆದ ಗೋಲುಗಳು:೧೩೪

ಆಟಗಾರ:ಅಪೋಲಾ ಎಡೆಲ್
ದೇಶ:ಅರ್ಮೇನಿಯಾ
ಪಂದ್ಯಗಳು:೩೫
ತಡೆದ ಗೋಲುಗಳು:೧೨೧

ಆಟಗಾರ:ಅಮರಿಂದರ್ ಸಿಂಗ್
ದೇಶ:ಭಾರತ
ಪಂದ್ಯಗಳು: ೩೫
ತಡೆದ ಗೋಲುಗಳು:೧೦೩

About Author

Ismail Kandakkare

Follow On

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments