VAALNURUTHYAGATHURU ವಾಲ್ನೂರು ತ್ಯಾಗತ್ತೂರು

Reading Time: 7 minutes

ವಾಲ್ನೂರು ತ್ಯಾಗತ್ತೂರು - VAALNURUTHYAGATHURU

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನಲ್ಲಿರುವ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ವಾಲ್ನೂರು ತ್ಯಾಗತ್ತೂರು ಮತ್ತು ಅಭ್ಯತ್ ಮಂಗಲ ಎಂಬ ಎರಡು ಕಂದಾಯ ಗ್ರಾಮಗಳನ್ನು ಒಳಗೊಂಡಿದೆ. ಈ ಗ್ರಾಮ ಪಂಚಾಯಿತಿಯು ಸೋಮವಾರಪೇಟೆ ತಾಲ್ಲೂಕಿನಿಂದ 48 ಕಿ.ಮೀ. ದೂರದಲ್ಲಿದೆ ಹಾಗೂ ಕುಶಾಲನಗರ ಹೋಬಳಿಯಿಂದ 18 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಪಂಚಾಯಿತಿಯು 12 ಕಿ.ಮೀ. ವಿಸ್ತೀರ್ಣವಿದ್ದು, ಪೂರ್ವಕ್ಕೆ ನಂಜರಾಯಪಟ್ಟಣ ಗ್ರಾಮ ಪಶ್ಚಿಮಕ್ಕೆ ಚೆಟ್ಟಳ್ಳಿ ಗ್ರಾಮ ಉತ್ತರಕ್ಕೆ ಚೆಟ್ಟಳ್ಳಿ ಗ್ರಾಮವು ಮತ್ತು ದಕ್ಷಿಣಕ್ಕೆ ಕಾವೇರಿ ಹೊಳೆ ಇರುತ್ತದೆ.

ಹಿಂದಿನ ಅರಸು ಮನೆತನಗಳ ಕಾಲದಿಂದಲೂ ಭತ್ತ ಬೆಳೆಯುವ ಯೋಗ್ಯ ಭೂಮಿಯಾಗಿದ್ದು, ಭತ್ತದ ಬೆಳೆಗೆ ಪ್ರಸಿದ್ದವಾಗಿದೆ. ಈ ಪಂಚಾಯಿತಿ ಕೃಷಿ ಪ್ರಧಾನವಾದ ಪ್ರದೇಶವಾಗಿದೆ. ಈ ಭಾಗದಲ್ಲಿ ಕಾಫಿ, ಕಿತ್ತಳೆ, ಏಲಕ್ಕಿ ಪ್ರಮುಖ್ಯ ಬೆಳೆ. ಇಲ್ಲಿ ಬಹುತೇಕ ಹೆಚ್ಚು ವಿಸ್ತಾರ ಹೊಂದಿರುವ ತೋಟದ ಮಾಲಕರು ಇರುತ್ತಾರೆ. ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳು ಸೇರಿದ್ದು, ಬಹು ಹಿಂದೆ ತೋಟ ಕಾರ್ಮಿಕರಾಗಿ ಹೊರ ರಾಜ್ಯಗಳಿಂದ ಬಂದು ನೆಲೆಸಿದ ಕುಟುಂಬಗಳೆ ಗ್ರಾಮದಲ್ಲಿ ಈಗ ಬಹುಸಂಖ್ಯಾತರು ಹೆಚ್ಚಿನ ಭೂಮಿಯು ವ್ಯವಸಾಯಕ್ಕಾಗಿ ನೈಸರ್ಗಿಕ ನೀರನ್ನು ಅವಲಂಬಿಸಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಈ ಗ್ರಾಮ ಪಂಚಾಯಿತಿಯಲ್ಲಿ 2001ರ ಜನಗಣತಿಯಂತೆ ವಾಲ್ನೂರು ತ್ಯಾಗತ್ತೂರಿನಲ್ಲಿ 2034 ಜನಸಂಖ್ಯೆ ಹಾಗೂ ಅಭ್ಯತ್ ಮಂಗಲ ಗ್ರಾಮದಲ್ಲಿ 2758 ಜನಸಂಖ್ಯೆ ಒಟ್ಟು ಜನಸಂಖ್ಯೆ 4792 ಆಗಿರುತ್ತದೆ. ಇಲ್ಲಿ ಗೌಡ ಕೊಡವ, ಮಲಿಯಾಳಿ, ಮುಸ್ಲಿಂ, ಕ್ರಿಸನ್ , ಬ್ರಾಹ್ಮಣ, ಜೇನು ಕುರುಬ, ಪ.ಜಾತಿ ಮತ್ತು ಪ.ಪಂಗಡ ಕುಟುಂಬಗಳಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರ ಕೊರತೆ ಹಾಗೂ ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತಿರುವುದರಿಂದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಬಹುವಾರ್ಷಿಕ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ ಬೆಳೆಗೆ ಕೃಷಿಕರು ಹೆಚ್ಚಿನ ಗಮನ ನೀಡುತ್ತಿರುವುದು ಕಂಡುಬರುತ್ತದೆ.

ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಕೊಡಗಿನ ಜೀವ ನದಿಯಾದ ಕಾವೇರಿಯು ಸುಮಾರು 10 ಕಿ.ಮೀ ನಷ್ಟು ಹರಿಯುತ್ತಿದೆ. ಅಲ್ಲದೆ ಈ ನದಿಯಲ್ಲಿ ಕೊಡಗು ವನ್ಯ ಜೀವವತಿಯಿಂದ ಮಹಶೀರ್
ಮೀನುಗಳನ್ನು ಬಿಟ್ಟಿದ್ದು ಇದನ್ನು ಸುರಕ್ಷಿತ ಪ್ರದೇಶವೆಂದು ಘೋಷಿಸಿ ಆವ್ಯಾಸಿ ಮೀನು ಬೇಟೆಗಾರರಿಗೆ ಅನುಕೂಲತೆಯನ್ನು ಕಲ್ಪಿಸಲಾಗಿದೆ. ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಬಿದಿರು, ಬಹು ಗಾತ್ರದ ಮರಗಳು ಹಾಗು ಬೆಲೆ ಬಾಳುವ ಮರಗಳು ಹೇರಳವಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ವತಿಯಿಂದ 2 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅಕ್ಷರ ದಾಸೋಹ ಕಾರ್ಯಕ್ರಮ ಸುಗುಮವಾಗಿ ನಡೆಯುತ್ತಿದೆ. ಹಾಗೂ 6 ಅಂಗನವಾಡಿ ಕೇಂದ್ರಗಳೂ ಕಾರ್ಯನಿರ್ವಹಿಸುತ್ತದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಯುವಕ ಸಂಘಗಳಿದ್ದು, 19 ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾವತಿಯಿಂದ 2 ಸ್ತ್ರೀಶಕ್ತಿ ಸಂಘಗಳು ಸಂಘಟಿತವಾಗಿರುತ್ತದೆ. ಈ ಸಂಘಗಳ ಉಳಿತಾಯದಲ್ಲಿ ತೊಡಗಿಸಿಕೊಂಡು ಎಲ್ಲಾ ಸಂಘಗಳು ವಾಣಿಜ್ಯ ಹಾಗು ಸೇವಾ ಸಹಕಾರ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿರುತ್ತವೆ.

ಈ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಧರ್ಮದ ಜನರಿದ್ದು, ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ವಿವಿಧ ಧರ್ಮದ ವಿಧಿವಿಧಾನದಂತೆ ಮದುವೆ, ಅಂತ್ಯ ಸಂಸ್ಕಾರ ನಡೆಯುತ್ತದೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಶ್ರೀಮತಿ ಅನಿತ ಬಿ ಎಸ್ President 9591714730
  2. ಸುಧಾ ಹೆಚ್ ಎಂ Vice President 8277069400
  3. ಭುವಿನ್(ಭುವನೇಂದ್ರ)ಜಿ.ಆರ್ Member 9880920705
  4. ಜಮುನಾ ಆರ್ Member 9113677706
  5. ಮಂಜುಳ Member 9449671275
  6. ಗಣೇಶ ಪಿ ಜಿ Member 8431025921
  7. ಹೆಚ್‌ ಆರ್‌ ದಮಯಂತಿ Member 9482276737
  8. ಮಹೇಶ ಚಂದ್ರ Member 9972076212
  9. ವಿಶಾಲ ಕೆ ಸಿ Member 9353322778
  10. ಜಲ Member 9449680828
  11. ಸತೀಶ್‌ ಕೆ ಬಿ Member 8277561496

ಪಂಚಾಯ್ತಿ ಸಂಪರ್ಕ

ವಿಳಾಸ:  ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಕುಶಾಲನಗರ ಹೋಬಳಿ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08276-267469
Pdo:
Mob: 

Email: som.valnoorthyagathur@gmail.com



ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ನಾಗರತ್ನ ಹೆಚ್ ಕೆ President 8277394895
  2. ಭುವಿನ್ ಜಿ ಆರ್ (ಭುವನೇಂದ್ರ) Member 9880920705
  3. ದಿನೇಶ್ ಹೆಚ್ ಎಸ್ Member 9482794163
  4. ಕವಿತ ದೇವಿಲಾಲ್ Member 9482616650
  5. ಕಮಲಮ್ಮ ಹೆಚ್ ಎನ್ Member 9483825468
  6. ಸುಧಿಕುಮಾರ ಎ ಎನ್ Member 9448167129
  7. ಸತೀಶ ಕೆ ಬಿ Member 8277561496
  8. ಯಶೋದ ಬಿ ಕೆ Member 9663186957
  9. ಜಮೀಲ ಅಭ್ಯತ್ Member 9449986158
  10. ನಳಿನಿ ಪಿ ಆರ್ Member 9483689070
  11. ಸಲೀಂ Member 9449187340

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.