ಶ್ರೀ ದುರ್ಗಾ ಭಗವತಿ ದೇವಸ್ಥಾನ, ತಾಳತ್ತಮನೆ-Sri Durga Bhagavathy Temple,Talathamane

ಕುಂದೂರುಕೇರಿ ಶ್ರೀ ದುರ್ಗಾ ಭಗವತಿ ದೇವಸ್ಥಾನ, ತಾಳತ್ತಮನೆ

ಶ್ರೀ ದುರ್ಗಾ ಭಗವತಿ ದೇವಾಸ್ಥಾನದ ಇತಿಹಾಸ ಹಿನ್ನಲೆ :

ಅಷ್ಟಮಂಗಲ ಪ್ರಶ್ನೆಯಂತೆ ಪುರಾತನ ಕಾಲದ ಈ ಕಾಳೀ ಸ್ವರೂಪಿಣಿ ಶಕ್ತಿ ದೇವತೆಯ ವಿಶಾಲ ದೇಗುಲವು ಕಾರಾಣಾಂತರದಿಂದ ನಿತ್ಯಪೂಜೆ ತಪ್ಪುವಂತಾಗಿ; ಗ್ರಾಮಸ್ಥರ ಕಡೆಗಣನೆಯಿಂದ ಕಾಡು ಪಾಲಾಗಿತ್ತು. ಸುಮಾರು 550 ವರ್ಷಗಳಿಂದ ಸಂಪೂರ್ಣ ಕಾಡು ಪಾಲಾಗಿ ನಶಿಸಿ ಹೋಗಿತ್ತು. ಈ ದೇವಾಲಯವು ಪುರಾತನ ಕಾಲದ್ದಾಗಿದ್ದು, ಯಾವಾಗ ಸ್ಥಾಪನೆಯಾಗಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಕಂಡು ಬಂದಿಲ್ಲ.
ಕಾಡು ಪಾಳಾಗಿ ಶಿಥಿಲಗೊಂಡಿದ್ದ ದೇವಾಲಯವು 2005ರಲ್ಲಿ ಪುನರ್‌ ನಿರ್ಮಾಣ ಮಾಡಲು ಸ್ಥಳೀಯ ಸಕ್ರೀಯ ಯುವ ಸಂಘಟನೆಯಾದ ನೇತಾಜಿ ಯುವಕ ಮಂಡಲವು ನಿರ್ಧರಿಸಿ. ಆರಂಭಿಕ ತಾಂಬೂಲ ಪ್ರಶ್ನಾ ಕಾರ್ಯವನ್ನು ನಡೆಸಿತು. ಈ ಸಂಬಂಧ ದೈವಜ್ಞ ರಿಂದ ಪ್ರಶ್ನೆ ಇರಿಸಿ ಮಾರ್ಗದರ್ಶನ ಪಡೆದುಕೊಂಡಿದೆ. ಅಂತೆಯೇ ಒಂದೊಮ್ಮೆ ಈ ಸ್ಥಳದಲ್ಲಿ ವಿಶಾಲ ದೇವಾಲಯ ದೊಂದಿಗೆ; ಮಹಾಕಾಳಿ ಸ್ವರೂಪಳಾದ ಶ್ರೀ ದುರ್ಗಾ ಭಗವತಿಯು ತನ್ನ ಪರಿವಾರದೊಂದಿಗೆ; ಪೂಜೆಗೊಳ್ಳುತ್ತಿದ್ದ ಐತಿಹ್ಯ ಗೋಚರಿಸಿದೆ. ಈ ದಿಸೆಯಲ್ಲಿ ಸಂಬಂಧಿಸಿದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ; ಐದು ಶತಮಾನಗಳಿಂದ ನಿರ್ಲಕ್ಷಿಸಲ್ಪಟ್ಟಿರುವ ದೇವಿಯನ್ನು ಮರಳಿ ಆರಾಧಿಸುವಂತಾದರೆ ನಾಡಿಗೆ ಸುಭಿಕ್ಷೆ ಪ್ರಾಪ್ತಿಯಾಗಲಿದೆ ಎಂಬ ಅಂಶವೂ ಕಂಡು ಬಂದಿತ್ತು.
ಈ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲಾ ಒಟ್ಟುಗೂಡಿ ವಿವಿಧ ಪ್ರಾಯಶ್ಚಿತ ಪೂಜಾ ಕಾರ್ಯಗಳನ್ನು ನಡೆಸಿ, ಜೀರ್ಣೊದ್ಧಾರ ಸಮಿತಿಯನ್ನು ರಚಿಸಿ ಮುಂದಿನ ಕಾರ್ಯಗಳ ಜವಾಬ್ದಾರಿಯನ್ನು ವಹಿಸಲಾಯಿತು. ಶ್ರೀ ದುರ್ಗಾ ಭಗವತಿ ದೇವಾಸ್ಥಾನದ ಜೀರ್ಣೊದ್ಧಾರ ಸಮಿತಿಯು ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು 31-03-2016ರಿಂದ 02-04-2016 ರವರಗೆ ನಡೆಸಿತು. ಶ್ರೀ ಕ್ಷೇತ್ರವು ಶ್ರೀ ಮಹಾಗಣಪತಿ, ಗುಳಿಗ, ಚಾಮುಂಡಿ, ನಾಗಸನ್ನಿಧಿಗಳನ್ನೊಳಗೊಂಡ ಐದು ಸಾನಿಧ್ಯವುಳ್ಳದಾಗಿದ್ದು, ಶ್ರೀ ಕ್ಷೇತ್ರದ ಪುನರ್‌ ಪ್ರತಿಷ್ಠೆಯಾದಲ್ಲಿ ಈ ವ್ಯಾಪ್ತಿಯಷ್ಟೇ ಅಲ್ಲದೆ ಇದರ ಸುತ್ತಮುತ್ತಲಿನ ಗ್ರಾಮಗಳೂ ಕೂಡ ಸುಭೀಕ್ಷೆಯಿಂದ ಕೂಡುವುದಲ್ಲದೇ, ಶ್ರೀ ಕ್ಷೇತ್ರವು ವಿವಾಹ ಯೋಗ, ಸಂತಾನ ಪ್ತಾಪ್ತಿ ಹಾಗೂ ಶತ್ರು ಸಂಹಾರಕ್ಕೆ ಪ್ರಸಿದ್ಧಿಯನ್ನು ಪಡೆಯುವುದಾಗಿ ಚಿಂತನೆಯಲ್ಲಿ ಕಂಡು ಬಂದಿರುತ್ತದೆ. ಅಷ್ಟಮಂಗಲ ಪ್ರಶ್ನೆಯ ಸಂದೇಶದಂತೆ ತಾಳತ್‍ಮನೆ ನಿವಾಸಿಗಳು; ಪ್ರಸಕ್ತ ಜಾಗದ ಮಾಲೀಕರಾಗಿರುವ ಗೊಲ್ಲ ಸಮುದಾಯದ ಅರೆಯಂಡ ಕುಟುಂಬವನ್ನು ಮನವೊಲಿಸಿ; ಸಂಬಂಧಿಸಿದ ಸ್ಥಳದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಸಾಮೂಹಿಕ ನಿರ್ಧಾರ ಕೈಗೊಂಡರು.
2016ನೇ ಆಗಸ್ಟ್‌ 31 ರಂದು ಅನುಜ್ಞಾಕಲಶ ಪೂಜಾ ಕಾರ್ಯದೊಂದಿಗೆ ಲಿಂಗರೂಪಿಣಿ ಶ್ರೀ ದುರ್ಗಾ ಭಗವತಿಯವರ ಮೂಲ ಪೀಠವನ್ನು ಬಾಲಾಲಯಕ್ಕೆ ಸ್ಥಳಾಂತರಿಸಿ ಇಲ್ಲಿಯವರಗೆ ತಿಂಗಳ ಮೊದಲ ಶುಕ್ರವಾರದಂದು ಪೂಜೆಯನ್ನು ಸಲ್ಲಿಸುತ್ತಾ ಬರಲಾಗಿತ್ತು. 19-03-2018 ರಂದು ದೇವಾಸ್ಥಾನದ ಶಿಲಾನ್ಯಾಸ ಕಾರ್ಯವನ್ನು ನಡೆಸಿ, ಪುನರ್‌ ನಿರ್ಮಾಣವನ್ನು ಆರಂಭಿಸಲಾಗಿತ್ತು. ದಿನಾಂಕ 09-01-2019ರಂದು ಗರ್ಭಾನ್ಯಾಸ ಕಾರ್ಯ ನಡೆದು ಶ್ರೀ ದುರ್ಗಾ ಭಗವತಿಯಮ್ಮನವರ ಗರ್ಭಗುಡಿ ಮತ್ತು ತೀರ್ಥ ಮಂಟಪದ ನಿರ್ಮಾಣಕ್ಕೆ ನಾಂದಿ ಹಾಡಲಾಯಿತು. ದಿನಾಂಕ 09-04-2019ರಂದು ಶ್ರೀ ಗಣಪತಿ ಗುಡಿ ಮತ್ತು ಸುತ್ತು ಪೌಳಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ದೈವಜ್ಞರಾದ ಶ್ರೀ ಪಂಕಜಾಕ್ಷ ಮತ್ತು ಶ್ರೀ ರಾಜೇಶ ಇವರ ನೇತ್ರತ್ವದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತೆನೆ ಕಾರ್ಯ ನಡೆದು, ವಾಸ್ತುಶಿಲ್ಪಿ ಬೆದರಡ್ಕ ರಮೇಶ್‌ ಕಾರಂತರು ದೇವಸ್ಥಾನದ ಪುನರ್‌ ನಿರ್ಮಾಣದ ನಕ್ಷೆಯನ್ನು ತಯಾರಿಸಿ ಶ್ರೀ ದುರ್ಗಾ ಭಗವತಿ ದೇವಾಸ್ಥಾನದ ಜೀರ್ಣೊದ್ಧಾರ ಸಮಿತಿಯವರಿಗೆ ಮಾರ್ಗದರ್ಶನ ನೀಡಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ|| ಡಿ. ವೇರೇಂದ್ರ ಹೆಗ್ಗಡೆ ಯವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ಮತ್ತು ರವೀಶ ತಂತ್ರಿಗಳ ಪೂರ್ಣ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಸ್ವಸ್ತಿ ಶ್ರೀ ವಿಕಾರಿ ನಾಮ ಸಂವತ್ಸರದ ಮಾಘ ಮಾಸ 24 ರಿಂದ 29 ಸಲ್ಲುವ ದಿನಾಂಕ: 07-02-2020 ರ ಶುಕ್ರವಾರದಿಂದ 12-02-2020 ರ ಬುಧವಾರದವರಗೆ ಪುನರ್‌ ಪ್ರತಿಷ್ಠೆ ಅಷ್ಟಬಂದ ಬ್ರಹ್ಮಕಲಶೋತ್ಸವ ನಡೆಯಿತು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 3.ಕಿ.ಮೀ. ಅಂತರದ ಕುಂದೂರುಕೇರಿ (ತಾಳತ್‍ಮನೆ)ಯಲ್ಲಿ ಶ್ರೀ ದುರ್ಗಾ ಭಗವತಿ ದೇವಾಸ್ಥಾನ ನೆಲೆ ನಿಂತಿದ್ದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ

ಶ್ರೀ ಚೆಟ್ಟೋಳಿರ ಅಪ್ಪಯ್ಯ: 9449476138

ಶ್ರೀ ಅರೆಯಂಡ ರಘು: 9480220003

ಶ್ರೀ ಚೆರಿಯಮನೆ ರಾಜಕುಮಾರ್:‌ 9448315457

ಶ್ರೀ ಬಿ.ಕೆ. ರವಿ: 9448303653

ಶ್ರೀ ಬಿ.ಬಿ. ಸುದೀಪ್‌ ರೈ: 9449634679

ಶ್ರೀ ಗಿರೀಶ್‌ ತಾಳತ್ತಮನೆ: 9449933457

ಶ್ರೀ ಬಿ. ಸತ್ಯೇಶ್‌ ಭಟ್:‌ 9448648505

ದೇವಾಲಯದ ಬ್ಯಾಂಕ್‌ ಖಾತೆ ವಿವರಗಳು

ಸುಮಾರು 70ಲಕ್ಷ ಅಂದಾಜು ವೆಚ್ಚದೊಂದಿಗೆ ಶ್ರೀ ದುರ್ಗಾ ಭಗವತಿ ದೇವಾಸ್ಥಾನ ಪುನರ್‌ ನಿರ್ಮಾಣಗೊಂಡಿದ್ದು, ಮುಂದಿನ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳು ತನು, ಮನ, ಧನಗಳಿಂದ ಸಹಕಾರ ನೀಡುವವರು ದೇವಾಲಯದ ಈ ಮುಂದಿನ ಬ್ಯಾಂಕ್‌ ಖಾತೆಗೆ ನೀಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗ ಬೇಕಾಗಿ ಈ ಮೂಲಕ ಶ್ರೀ ದುರ್ಗಾ ಭಗವತಿ ದೇವಾಸ್ಥಾನದ  ಸಮಿತಿಯು ಕೊರುತ್ತದೆ.

ವಿಜಯ ಬ್ಯಾಂಕ್‌, ಮಡಿಕೇರಿ.

Vijaya Bank, Main Road, Madikeri.

A/C. No:  114701011000990

IFSC Code: VIJB0001147

Sri Durga Bhgavathi Temple Cmmittee, Talathmane.

0 0 votes
Article Rating
Subscribe
Notify of
guest
0 Comments
Inline Feedbacks
View all comments