ಪ್ರೊ ಕಬ್ಬಡಿ ೬ ನೇ ಆವೃತ್ತಿಗೆ ವರ್ಣ ರಂಜಿತ ಚಾಲನೆ 3 ತಿಂಗಳ ಕಾಲ ನಡೆಯಲಿದೆ ರೋಚಕವಾದ ಪ್ರೊ ಕಬಡ್ಡಿ

ಪ್ರೊ ಕಬ್ಬಡಿ ೬ ನೇ ಆವೃತ್ತಿಗೆ ವರ್ಣ ರಂಜಿತ ಚಾಲನೆ 3 ತಿಂಗಳ ಕಾಲ ನಡೆಯಲಿದೆ ರೋಚಕವಾದ ಪ್ರೊ ಕಬಡ್ಡಿ

ಪ್ರೊ ಕಬಡ್ಡಿ 6ನೇ ಆವೃತ್ತಿಗೆ ಭಾನುವಾರ ಚೆನ್ನೈನಲ್ಲಿ ವರ್ಣ ರಂಜಿತ ಚಾಲನೆ ದೊರೆತಿದೆ.ಅಭಿಮಾನಿಗಳ ಕಾತರ ಕೊನೆಗೊಳ್ಳಲಿದೆ. ಕಳೆದ ಬಾರಿಯಂತೆ ಈ ವರ್ಷವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 3 ತಿಂಗಳ ಸುದೀರ್ಘ ಟೂರ್ನಿಯ ಫೈನಲ್ ಪಂದ್ಯ 2019ರ ಜನವರಿ 5ರಂದು ನಡೆಯಲಿದೆ. ಪಂದ್ಯಾವಳಿ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆ ಯಲಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

12 ತಂಡಗಳನ್ನು ತಲಾ 6 ತಂಡಗಳಂತೆ 2 ವಲಯಗಳಾಗಿ ವಿಂಗಡಿಸಲಾಗಿದೆ. ಫೈನಲ್ ಸೇರಿ ಪಂದ್ಯಾವಳಿಯಲ್ಲಿ ಒಟ್ಟು 138 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡ 22 ಪಂದ್ಯಗಳನ್ನು ಆಡಲಿವೆ. ಇದರಲ್ಲಿ ತನ್ನವಲಯದಲ್ಲೇ 15 ಪಂದ್ಯಗಳನ್ನು ಆಡಿದರೆ, ಇನ್ನುಳಿದ 7 ಪಂದ್ಯಗಳನ್ನು ಮತ್ತೊಂದು ವಲಯದಲ್ಲಿರುವ ತಂಡದ ಎದುರು ಆಡಲಿದೆ.

2 ವಲಯಗಳಿಂದ ಅಗ್ರ 3 ತಂಡಗಳು ಪ್ಲೇ-ಆಫ್ ಹಂತಕ್ಕೆ ಪ್ರವೇಶ ಪಡೆಯಲಿವೆ. ಪ್ಲೇ-ಆಫ್‌ನಲ್ಲಿ 3 ಎಲಿಮಿನೇಟರ್, 2 ಕ್ವಾಲಿಫೈಯರ್ ಹಾಗೂ 1 ಫೈನಲ್ ನಡೆಯಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1 ರಲ್ಲಿಸೆಣಸಲಿವೆ. 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಲಿವೆ.ಹೋಲುವ

ಎಲಿಮಿನೇಟರ್‌ನಲ್ಲಿ ಸೋಲುವ ತಂಡಗಳು ನೇರವಾಗಿ ಹೊರಬಿದ್ದರೆ, ಗೆಲ್ಲುವ ತಂಡಗಳು ಎಲಿ ಮಿನೇಟರ್-3ರಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ದಲ್ಲಿ ಗೆಲ್ಲುವ ತಂಡ, ಕ್ವಾಲಿಫೈಯರ್ ೧ರಲ್ಲಿ ಸೋಲುವ ತಂಡ ವನ್ನು ಎದುರಿಸಲಿದೆ. ಕ್ವಾಲಿಫೈಯರ್ ೧ರಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಗೇರಲಿದ್ದು, ಕ್ವಾಲಿಫೈಯರ್ 2ರಲ್ಲಿ ಗೆಲ್ಲುವ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದೆ.

ಕಬಡ್ಡಿ ಇತಿಹಾಸ

ಭಾರತದಲ್ಲಿ 4 ಸಾವಿರ ವರ್ಷಗಳ ಹಿಂದೆ ಕಬಡ್ಡಿಯನ್ನು ಆಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇದರ ಮೂಲ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಅಭಿಮನ್ಯು ಕಬಡ್ಡಿ ಕ್ರೀಡೆಯನ್ನು ಪರಿಚಯಿಸಿದನೆಂಬ ಉಲ್ಲೇಖವಿದೆ.
ಜಬಡ್ಡಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಪಂಜಾಬ್‌ನ “ರಾಜ್ಯ ಕ್ರೀಡೆ’ಯಾಗಿದೆ.
ಕಬಡ್ಡಿ ಭಾರತೀಯ ಮೂಲದ ಕ್ರೀಡೆಯಾದರೂ ಇದು ರಾಷ್ಟ್ರೀಯ ಕ್ರೀಡೆ ಆಗಿ ಮಾನ್ಯತೆ ಪಡೆದಿರುವುದು ಬಾಂಗ್ಲಾದೇಶದಲ್ಲಿ !
ಕಬಡ್ಡಿ ಹೆಸರಿನ ಮೂಲ ತಮಿಳು. ತಮಿಳಿನ ಕೈ-ಪಿ (ಕೈಯನ್ನು ಹಿಡಿ) ಎಂಬ ಶಬ್ದದಿದ ಕಬಡ್ಡಿ ಎಂಬ ಪದ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ.
ಕಬಡ್ಡಿ ಏಶ್ಯದಲ್ಲಿ ಹೆಚ್ಚು ಜನಪ್ರಿಯ. ಇಟಲಿ, ಸ್ಪೇನ್‌, ಅಜೇಟಿನಾ, ಡೆನ್ಮಾರ್ಕ್‌, ಯುಎಸ್‌ಎ ಹಾಗೂ ಬೆಲ್ಜಿಯಂ ದೇಶಗಳಲ್ಲೂ ಕಬಡ್ಡಿ ಆಡಲಾಗುತ್ತಿದೆ.
1936ರ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರದರ್ಶನ ಕ್ರೀಡೆಯಾಗಿ ಕಬಡ್ಡಿ ಆಡಿ ತೋರಿಸಿದ ಬಳಿಕ ಕಬಡ್ಡಿ ವಿಶ್ವ ಮಟ್ಟದಲ್ಲಿ ಜನಪ್ರಿಯಗೊಂಡಿತು.

ಪ್ರಾಯೋಜಕರಿಗೆ ಸ್ಫೂರ್ತಿ

ಪ್ರೊ ಕಬಡ್ಡಿಯ ಜನಪ್ರಿಯತೆ ಆ ಮಟ್ಟದಲ್ಲಿದೆ. ಪ್ರೋತ್ಸಾಹ, ಪ್ರಾಯೋಜನೆ, ವೀಕ್ಷಕ ವರ್ಗ, ದುಡ್ಡಿನ ಪ್ರವಾಹ ದೊಡ್ಡ ಮಟ್ಟದಲ್ಲೇ ಹರಿದು ಬರುತ್ತಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಇದು ದೇಶದ “ಕ್ರೀಡಾ ಸ್ಥಿತ್ಯಂತರ’ದ ಕಾಲಘಟ್ಟವೂ ಆಗಿದೆ. ಕ್ರೀಡೆಯೆಂದರೆ ಕೇವಲ ಕ್ರಿಕೆಟ್‌ ಎಂಬಷ್ಟಕ್ಕೇ ಸೀಮಿತಗೊಂಡ ಭಾರತದಲ್ಲೀಗ ದೇಶಿ ಕ್ರೀಡೆಯಾದ ಕಬಡ್ಡಿಯತ್ತ ಭಾರೀ ಪ್ರಮಾಣದಲ್ಲಿ ವೀಕ್ಷಕರು ಒಲವು ತೋರುತ್ತಿದ್ದಾರೆ. ಟಿ20 ಪಂದ್ಯಕ್ಕೂ ಕಡಿಮೆ ಅವಧಿಯಲ್ಲಿ, ಕೇವಲ ಒಂದು ಗಂಟೆಯೊಳಗಾಗಿ ಮುಗಿದು ಹೋಗುವ ಕಬಡ್ಡಿ ಅದೆಷ್ಟೋ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತ ಹೋಗುತ್ತಿದೆ. ಇದು ಪ್ರಾಯೋಜಕರಿಗೆ ಹೊಸ ಸ್ಫೂರ್ತಿ ತಂದಿದೆ.

ಸುದೀರ್ಘ‌ ಕೂಟದ ದಾಖಲೆ?

ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ ಬರೋಬ್ಬರಿ 91 ದಿನಗಳ ಕಾಲ ನಡೆಯಲಿದೆ. ಬಹುಶಃ ಕ್ರೀಡಾ ಇತಿಹಾಸದಲ್ಲೇ ಇದೊಂದು ದಾಖಲೆಯಾಗಿರಬಹುದು. ಆದರೆ ಕೂಟದ ಅಂತಿಮ ದಿನದ ತನಕವೂ ಕ್ರೀಡಾಪ್ರೇಮಿಗಳ ಆಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಆರಂಭದಲ್ಲಿ ಎಲ್ಲರಿಗೂ ವಿಪರೀತ ಕುತೂಹಲ ಸಹಜ. ಆದರೆ ನಡುವಲ್ಲಿ ಈ ಕೌತುಕ ಧೊಪ್ಪನೆ ಕುಸಿಯಲೂಬಹುದು. ಅದರಲ್ಲೂ ಬೇರೊಂದು ಪಂದ್ಯಾವಳಿ ಇದ್ದರಂತೂ ವೀಕ್ಷಕರ ಪಲ್ಲಟ ನಿರೀಕ್ಷಿತ. ಲೀಗ್‌ ಮುಗಿದು ನಾಕೌಟ್‌ ಹಂತದ ಪಂದ್ಯ ಮೊದಲ್ಗೊಳ್ಳುವ ಹಂತದಲ್ಲಿ ಮತ್ತೆ ಕುತೂಹಲ ಗರಿ ಗೆದರಬಹುದು. ಹೀಗಾಗಿ “ನಡು ಅವಧಿ’ ಎನ್ನುವುದು ಬೂಸ್ಟ್‌ ಆಗುವುದು ಮುಖ್ಯ.

ಕಾಡಲಿದೆ ಫಿಟ್‌ನೆಸ್‌ ಸಮಸ್ಯೆ

ಇನ್ನು ಆಟಗಾರರ ಸಂಕಟ ಬೇರೆಯೇ ಇದೆ. ಅದೆಂದರೆ ಫಿಟ್‌ನೆಸ್‌. ನಿರಂತರ 3 ತಿಂಗಳ ಕಾಲ ಯಾವುದೇ ಗಾಯ-ನೋವುಕಾಯ್ದು ಕೆಲ ಎದುರಾಗದಂತೆ ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಕಬಡ್ಡಿಪಟುಗಳ ಮುಂದಿರುವ ದೊಡ್ಡ ಸವಾಲು. ಭಾರೀ ಮೊತ್ತ ಪಡೆದು ಬರುವ ಈ ಆಟಗಾರರು ನಡುವಲ್ಲಿ ಇಂಥ ಸಂಕಟಕ್ಕೆ ಸಿಲುಕಿ ಹೊರಬಿದ್ದರೆ ಎಲ್ಲರಿಗೂ ನಷ್ಟ. 2 ವರ್ಷಗಳ ಹಿಂದಕ್ಕೆ ಪಯಣಿಸಿದರೆ, ಒಂದೇ ಋತುವಿನಲ್ಲಿ 2 ಪ್ರೊ ಕಬಡ್ಡಿ ಲೀಗ್‌ ಪಂದ್ಯಾವಳಿಯನ್ನು ಆಯೋಜಿಸಿದ ನಿದರ್ಶನ ಕಾಣಸಿಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅತಿರೇಕವೆನಿಸಿತ್ತು. ಪುನಃ ಕಳೆದ ವರ್ಷದಿಂದ ಒಂದೇ ಕೂಟವನ್ನು ಆಯೋಜಿಸಲಾಯಿತು. ಇದು ಕೂಡ 3 ತಿಂಗಳ ಕಾಲ ನಡೆದಿತ್ತು.

ಮಾಮೂಲಿ ಕಬಡ್ಡಿಯಂತಲ್ಲ ಪ್ರೊ ಕಬಡ್ಡಿ

ಪ್ರೊ ಕಬಡ್ಡಿ ಹಲವು ಕ್ರಾಂತಿಕಾರಕ ಬದಲಾವಣೆ ಮಾಡಿಕೊಂಡಿದ್ದು ಅಭಿಮಾನಿಗಳ ಕುತೂಹಲ ಸೆಳೆಯುವುದಕ್ಕೆ ಕಾರಣವಾಗಿದೆ. ಟಿ20 ಕ್ರಿಕೆಟ್‌ನ ಹಾಗೆ ಕಬಡ್ಡಿಯಲ್ಲೂ ವೇಗ ಹೆಚ್ಚಿಸಲು ಹಲವು ಬದಲಾವಣೆ ಮಾಡಲಾಗಿದೆ.

ಸೂಪರ್‌ ರೈಡ್‌ಗೆ ಹೆಚ್ಚುವರಿ ಅಂಕ

ಒಬ್ಬ ರೈಡರ್‌ ಎದುರಾಳಿ ಅಂಕಣದ ಮೂರು ಅಥವಾ ಹೆಚ್ಚಿನ ಆಟಗಾರರನ್ನು ಔಟ್‌ ಮಾಡಿದರೆ ಅದನ್ನು ಸೂಪರ್‌ ರೈಡ್‌ ಎಂದು ಪರಿಗಣಿಸಲ್ಪ ಡುತ್ತದೆ. ಹೆಚ್ಚಿನ ಒಂದು ಅಂಕ ಸಿಗುತ್ತದೆ.

ಪಂದ್ಯದ ಅವಧಿ 40 ನಿಮಿಷ

ಮಾಮೂಲಿ ಕಬಡ್ಡಿಗೂ ಪ್ರೊ ಕಬಡ್ಡಿಗೂ ಇಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಒಟ್ಟಾರೆ ಅವಧಿ 40 ನಿಮಿಷವಿರುತ್ತದೆ. ಆದರೆ ಪ್ರೊ ಕಬಡ್ಡಿಯಲ್ಲಿ ತಂಡವೊಂದಕ್ಕೆ 90 ಸೆಕೆಂಡ್‌ಗಳ ಕಿರು ವಿರಾಮ ತೆಗೆದುಕೊಳ್ಳುವ ಅವಕಾಶ ನೀಡಲಾಗುತ್ತದೆ. 20 ನಿಮಿಷ ಮುಗಿದಾಗ 5 ನಿಮಿಷದ ಅಂತರವಿರುತ್ತದೆ.

ಟಾಪ್‌ 5 ಪ್ರೊ ಕಬಡ್ಡಿ ವೀರರು

ಈ ವರೆಗಿನ 5 ಪ್ರೊ ಕಬಡ್ಡಿ ಕೂಟದಲ್ಲಿ ಆಟಗಾರರ
ನಿರ್ವಹಣೆಯ ಆಧಾರದಲ್ಲಿ ಅಗ್ರ ಐವರು ಆಟಗಾರರ ಸಾಧನೆಯನ್ನು ಇಲ್ಲಿ ಅವಲೋಕನ ಮಾಡಲಾಗಿದೆ. ಇವರಿಂದ ಈ ಬಾರಿಯೂ ಉತ್ಕೃಷ್ಟ ನಿರ್ವಹಣೆ ನಿರೀಕ್ಷಿಸಲಾಗಿದೆ.
1.ರಾಹುಲ್‌ ಚೌಧರಿ (ರೈಡರ್‌)
ಆರಂಭದಿಂದಲೂ ತೆಲುಗು ಟೈಟಾನ್ಸ್‌ ಜತೆಗಿದ್ದ ರಾಹುಲ್‌ ಚೌಧರಿ ಅಪ್ರತಿಮ ರೈಡರ್‌. ಪ್ರೊ ಕಬಡ್ಡಿ ಇತಿಹಾಸದಲ್ಲಿ ದಾಖಲೆಯ 666 ರೈಡಿಂಗ್‌ ಅಂಕ ಪಡೆದವರು. 25ರ ಹರೆಯದ ಅವರು ರೈಡ್‌ ಮತ್ತು ಟ್ಯಾಕಲ್‌ನಲ್ಲಿ ಒಟ್ಟು 710 ಅಂಕ ಗಳಿಸಿದ್ದಾರೆ. ರೈಡ್‌ ಮಾಡಿದ ವೇಳೆ ಅಂಕವಿಲ್ಲದೇ ಮರಳಿ ಬರುವುದು ಅಪರೂಪ. ಚೌಧರಿ ರೈಡ್‌ಗೆ ಹೋದರೆ ಅಂಕ ಗ್ಯಾರೆಂಟಿ. ಆದರೆ ಅವರಿದ್ದ ತಂಡ ಪ್ರೊ ಕಬಡ್ಡಿಯಲ್ಲಿ ಸಾಧಾರಣ ನಿರ್ವಹಣೆ ದಾಖಲಿಸಿದೆ.

2.ಪ್ರದೀಪ್‌ ನರ್ವಾಲ್‌ (ರೈಡರ್‌)
ಪಾಟ್ನಾ ಪೈರೇಟ್ಸ್‌ ಹ್ಯಾಟ್ರಿಕ್‌ ಪ್ರಶಸ್ತಿ ಗೆಲ್ಲಲು ಕಾರಣರಾದ ಪ್ರದೀಪ್‌ ನರ್ವಾಲ್‌ ಸತತ ಎರಡು ಋತುಗಳಲ್ಲಿ “ಅತ್ಯಂತ ಉಪಯುಕ್ತ ಆಟಗಾರ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 4ನೇ ಋತುವಿನಲ್ಲಿ 369 ಅಂಕ ಪಡೆದು ಶ್ರೇಷ್ಠ ರೈಡರ್‌ ಎನಿಸಿಕೊಂಡಿದ್ದರು. ಎರಡನೇ ಶ್ರೇಷ್ಠ ರೈಡರ್‌ ಪ್ರಶಸ್ತಿ ಪಡೆದ ರೋಹಿತ್‌ ಕುಮಾರ್‌ 150 ಅಂಕ ಗಳಿಸಿದ್ದರು. ಐದನೇ ಋತುವಿನಲ್ಲಿ ಅವರ ನಿರ್ವಹಣೆ ಅದ್ಭುತವಾಗಿತ್ತು. ಒಂದು ರೈಡ್‌ನ‌ಲ್ಲಿ ಗರಿಷ್ಠ 8 ಅಂಕ ಪಡೆದ ಹಿರಿಮೆ ಅವರದ್ದು. ಒಂದು ಪಂದ್ಯದಲ್ಲಿ ಗರಿಷ್ಠ 34 ಅಂಕ ಗಳಿಸಿದ ವೀರರಾಗಿದ್ದರು.

3. ಫ‌ಜೆಲ್‌ ಅತ್ಯುತ್ತಮ (ಡಿಫೆಂಡರ್‌)

ಪ್ರೊ ಕಬಡ್ಡಿ ಇತಿಹಾಸದ ಅತ್ಯಂತ ಯಶಸ್ವಿ ವಿದೇಶಿ ಆಟಗಾರರೆಂಬ ಖ್ಯಾತಿಗೆ ಫ‌ಜೆಲ್‌ ಅತ್ರಾಚಲಿ ಪಾತ್ರರಾಗಿದ್ದಾರೆ. ಇರಾನಿನ ಅತ್ರಾಚಲಿ ಒಂದು ಕೋಟಿ ರೂ.ಗೆ ಯು ಮುಂಬಾ ಮಾರಾಟವಾಗಿದ್ದರು. ಗರಿಷ್ಠ ಟ್ಯಾಕಲ್‌ ಅಂಕ ಗಳಿಸಿದವರಲ್ಲಿ ಅತ್ರಾಚಲಿಗೆ 11ನೇ ಸ್ಥಾನ. 56 ಪಂದ್ಯಗಳಲ್ಲಿ 230 ಟ್ಯಾಕಲ್‌ ಅಂಕ ಸಂಪಾದಿಸಿದ ಹಿರಿಮೆ ಅವರದ್ದು. 26ರ ಹರೆಯದ ಅವರು ನಾಲ್ಕು ಪ್ರೊಕಬಡ್ಡಿ ಫೈನಲ್ಸ್‌ನಲ್ಲಿ ಆಡಿದ ಏಕೈಕ ವಿದೇಶಿ ಆಟಗಾರ. 52 ಅಂಕ ಪಡೆದ ಅವರಿಗೆ 4ನೇ ಋತುವಿನ ಶ್ರೇಷ್ಠ ಡಿಫೆಂಡರ್‌ ಗೌರವ ಒಲಿದಿದೆ.

4. ಅಜಯ್‌ ಠಾಕೂರ್‌ (ರೈಡರ್‌)
ಖ್ಯಾತ ರೈಡರ್‌ಗಳ ಸಾಲಿನಲ್ಲಿ ಅಜಯ್‌ ಠಾಕೂರ್‌ಗೆ ಮೂರನೇ ಸ್ಥಾನ. 80 ಪಂದ್ಯಗಳಿಂದ ಅವರು 529 ರೈಡ್‌ ಅಂಕ ಪಡೆದಿದ್ದಾರೆ. 32ರ ಹರೆಯದ ಅವರು ಹೆಚ್ಚಿನ ರೈಡಿಂಗ್‌ ವೇಳೆ ಅಜೇಯ ಸಾಧನೆ ಮಾಡಿದವರು. 2016ರ ವಿಶ್ವಕಪ್‌ ಫೈನಲ್‌ ನಲ್ಲಿ ಸೂಪರ್‌ 10 ಅಂಕ ಪಡೆದ ಸಾಹಸಿ. ಈ ಮೂಲಕ ಭಾರತ ಇರಾನ್‌ ತಂಡವನ್ನು ಸೋಲಿಸಲು ನೆರವಾಗಿ ದ್ದರು. ಐದನೇ ಪ್ರೊ ಕಬಡ್ಡಿಯಲ್ಲಿ ಅವರು ತಮಿಳ್‌ ತಲೈವಾಸ್‌ ತಂಡವನ್ನು ಮುನ್ನಡೆಸಿದ್ದರು.

5. ಮಿರಾಜ್‌ ಶೇಖ್‌ (ಆಲ್‌ರೌಂಡರ್‌)
ಇರಾನ್‌ನ 30ರ ಹರೆಯದ ಮಿರಾಜ್‌ ಶೇಖ್‌ ಪ್ರೊ ಕಬಡ್ಡಿಯಲ್ಲಿ ತಂಡದ ನೇತೃತ್ವ ವಹಿಸಿದ್ದ ಮೊದಲ ವಿದೇಶಿ ಆಟಗಾರ. ಎರಡನೇ ಋತುವಿನಲ್ಲಿ ತೆಲುಗು ಟೈಟಾನ್ಸ್‌ ತಂಡದ ನಾಯಕರಾಗಿದ್ದರು. 4ನೇ ಋತುವಿನ ಶ್ರೇಷ್ಠ ಆಲ್‌ರೌಂಡರ್‌ ಗೌರವಕ್ಕೆ ಪಾತ್ರರಾಗಿದ್ದರು. ಎರಡು ಋತುಗಳಲ್ಲಿ ದಬಾಂಗ್‌ ಡೆಲ್ಲಿ ಪರ ಆಡಿದ್ದ ಮಿರಾಜ್‌ 63 ಪಂದ್ಯಗಳಿಂದ 265 ಆಲ್‌ರೌಂಡ್‌ ಅಂಕ ಪಡೆದಿದ್ದಾರೆ. ಇರಾನ್‌ ತಂಡದ ನಾಯಕರೂ ಆಗಿದ್ದರು.

ಲೀಗ್‌ನಲ್ಲಿ ಅತೀ ಟ್ಯಾಕಲ್ ಪಾಯಿಂಟ್ಸ್ ಗಳಿಸಿವರು.

ಮಂಜಿತ್ತ್ ಚಿಲ್ಲರ್:೨೪೩
ಸುರೇಂದ್ರ ನಾಡಾ:೨೧೮
ಸುದೀಪ್ ನರ್ವಾಲ್:೨೧೩
ಮೋಹಿತ್ ಚಿಲ್ಲಾರ್:೨೦೯
ರವೀಂದ್ರ ಪೆಹಲ್:೨೦೪

ಇದುವರೆಗಿನ ಚಾಂಪಿಯನ್:

ವರ್ಷ:೨೦೧೪
ತಂಡ:ಜೈಪುರ ಪಿಂಕ್ ಪ್ಯಾಥರ್ಸ್

ವರ್ಷ:೨೦೧೫
ತಂಡ:ಯೂ ಮುಂಬಾ

ವರ್ಷ:೨೦೧೬ ಜನವರಿ, ೨೦೧೬ ಜೂನ್ ೨೦೧೭,

ತಂಡ:ಪಾಟ್ನಾ ಪೈರೇಟ್ಸ್

ಅತೀ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಗಳಿಸಿದವರು

ಪಂದ್ಯ: ೭೯
ರಾಹುಲ್ ಚೌಧರಿ:(ತೆಲುಗು ಟೈಟನ್ಸ್):೬೬೬

ಪಂದ್ಯ:೬೪
ಪ್ರದೀಪ್ ನರ್ವಾಲ್ (ಪಾಟ್ನಾ ಪೈರೇಟ್ಸ್)
೬೨೫

ಪಂದ್ಯ-೮೦
ಅಜಯ್ ಠಾಕೂರ್(ತಮಿಳ್ ತಲೈವಾಸ್)
೫೨೯

೮೧:ದೀಪಕ್ ನಿವಾಸ್ ಹೂಡಾ( ಪುಣೇರಿ ಪಲ್ಟನ್)
೫೧೪

೭೨:ಕಾಶಿಲಿಂಗ್ ಅಡಕೆ(ಯು ಮುಂಬಾ)
೪೯೪.

ಲೀಗ್ ನಲ್ಲಿ ಅತೀ ಹೆಚ್ಚು ಪಾಯಿಂಟ್ಸ್ ಕಲೆಹಾಕಿದವರು.

ರಾಹುಲ್ ಚೌಧರಿ:೭೧೦
ಪ್ರದೀಪ್ ನರ್ವಾಲ್:೬೩೨
ದೀಪಕ್ ನಿವಾಸ್ ಹೂಡಾ:೫೭೭
ಅಜಯ್ ಠಾಕೂರ್:೫೪೯
ಅನೂಪ್ ಕುಮಾರ್:೫೪೬

About Author

Ismail Kandakkare

Follow On

0 0 votes
Article Rating
Subscribe
Notify of
guest
0 Comments
Inline Feedbacks
View all comments