ನೀರಾವರಿ
ಗಿಡಗಳ ಬೆಳವಣಿಗೆ ಮತ್ತು ಇಳುವರಿಗೆ ಸಾಕಾಗುವಷ್ಟು ನೀರನ್ನು ಮಣ್ಣಿಗೆ ಒದಗಿಸುವ ವಿಧಾನವನ್ನು ನೀರಾವರಿ ಎಂದು ಕರೆಯುತ್ತಾರೆ.
ನೀರಾವರಿಯ ಮುಖ್ಯ ಉದ್ಧೇಶಗಳು: ಗಿಡದ ಬೆಳವಣಿಗೆಗೆ ಬೇಕಾದ ಉಷ್ಣತೆ ಕಾಪಾಡಲು, ಮಣ್ಣಿನ ಹೂಳೆತ್ತಲು ಮತ್ತು ಮಣ್ಣನ್ನು ಮೃದುವಾಗಿಡಲು ಇತ್ಯಾದಿ.
ಸಸ್ಯ ಪ್ರಮುಖವಾಗಿ ಶೇಕಡ 60-70 ರಷ್ಟು ನೀರನ್ನು ಒಳಗೊಂಡಿದೆ ಮತ್ತು ಜೀವದ್ರವ್ಯದ ಪ್ರಮುಖ ಅಂಶವಾಗಿದೆ. ಉಷ್ಣತೆ ಕಾಪಾಡಲು, ಉಬ್ಬುವಿಕೆ, ದ್ಯುತಿ ಸಂಶ್ಲೇಷಣೆ ಕ್ರಿಯೆ, ಬೀಜ ಮೊಳಕೆಯೊಡೆಯಲು ಮತ್ತು ಪೋಷಕಾಂಶ ಹೀರಲು ಗಿಡಕ್ಕೆ ನೀರು ಅತೀ ಅವಶ್ಯ.
ಭೂಮಿ ಉಳುಮೆ ಮಾಡಲು ಮತ್ತು ಇತರ ಕೃಷಿ ಚಟುವಟಿಕೆಗಳಿಗೆ ಸಹ ಮಣ್ಣಿನಲ್ಲಿ ತೇವಾಂಶವಿರುವುದು ಅಗತ್ಯ.
ನೀರಿನ ಮೂಲಗಳು
ಮಳೆ ನೀರಿನ ನೈಸರ್ಗಿಕ ಮೂಲವಾಗಿದ್ದು ಅನಿಶ್ಚತತೆಯಿಂದ ಕೂಡಿದೆ. ಮಳೆಯಾದಾರಿತ ಕೃಷಿಯಲ್ಲಿ ಕಡಿಮೆ ಇಳುವರಿ ದೊರೆಯುತ್ತದೆ. ಆದ್ದರಿಂದ ಮಳೆ ನೀರನ್ನು ಕೊಳ, ಕೆರೆ, ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನೀರಾವರಿಗೆ ಬಳಸಲಾಗುತ್ತದೆ.
1. ಕಾಲುವೆಗಳು: ನೀರಾವರಿಯ ಪ್ರಮುಖ ಮೂಲವಾಗಿದ್ದು ನೀರಿನ ಗುಣಮಟ್ಟ ಉತ್ತಮವಾಗಿದೆ. ಮುಖ್ಯ ಕಾಲುವೆಯು ನದಿ, ಜಲಾಶಯ, ಅಣೆಕಟ್ಟುಗಳಿಗೆ ಜೋಡಿಸಲ್ಪಟಿರುತ್ತದೆ. ಮುಖ್ಯ ಕಾಲುವೆ ಮತ್ತು ಅದರ ಉಪ ಕಾಲುವೆಗಳ ಮೂಲಕ ಹರಿದ ನೀರು ಚಿಕ್ಕ ಕಾಲುವೆಗಳ ಮುಖಾಂತರ ಕೃಷಿಗೆ ಬಳಸಲ್ಪಡುತ್ತದೆ.
2. ಕೆರೆ/ಕೊಳಗಳು: ಪ್ರಮುಖವಾಗಿ ತಮಿಳು ನಾಡು, ಆಂಧ್ರ ಪ್ರದೇಶ ಮತ್ತು ಕನಾಟಕದಲ್ಲಿ ಮಳೆ ನೀರನ್ನು ಕೆರೆಗಳಲ್ಲಿ ಸಂಗ್ರಹಿಸಿ ನೀರಾವರಿಗೆ ಬಳಸುತ್ತಾರೆ. ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇರುವುದರಿಂದ ಬೇಗನೆ ಬತ್ತಿ ಹೋಗುತ್ತವೆ.
3. ಬಾವಿ: ದೇಶದ ಅನೇಕ ರಾಜ್ಯಗಳಲ್ಲಿ ಬಾವಿಯ ನೀರನ್ನು ನೀರಾವರಿಗೆ ಬಳಸುತ್ತಾರೆ. ಅಂತರ್ಜಲದ ನೀರು ಮಣ್ಣಿನ ಕೆಳ ಪದರದಲ್ಲಿರುವುದರಿಂದ ಕೆಲವೊಂದು ವಿಧಾನದ ಮೂಲಕ ನೀರನ್ನು ಮೇಲತ್ತಬೇಕಾಗುತ್ತದೆ.
4. ಕೊಳವೆ ಬಾವಿಗಳು: ಕೊಳವೆ ಬಾವಿಗಳಿಗೆ ಸಹ ಅಂತರ್ಜಲ ನೀರಿನ ಮೂಲವಾಗಿದೆ. ಶಕ್ತಿಯುತವಾದ ಯಂತ್ರಗಳ ಮೂಲಕ ಭೂಮಿಯ ಒಳಗೆ ಆಳವಾದ ರಂಧ್ರ ಕೊರೆದು ಪಂಪುಗಳನ್ನು ಬಳಸಿ ನೀರನ್ನು ಮೇಲತ್ತಲಾಗುತ್ತದೆ. ಇದು ವೆಚ್ಚದಾಯಕವಾದರೂ ನೀರಾವರಿಗೆ ಹೆಚ್ಚು ನೀರು ದೊರೆಯುತ್ತದೆ.
ನೀರಾವರಿ ವಿಧಾನ
ಕಾಲುವೆ ನೀರು ಭೂಮಿಯ ಮೇಲ್ಪದರದಲ್ಲಿ ಹರಿಯುತ್ತದೆ. ಹಾಗಾಗಿ ನೀರನ್ನು ಮೇಲೆತ್ತುವ ಕೆಲಸವಿರುವುದಿಲ್ಲ. ಆದರೆ ಕೆರೆ, ಬಾವಿ, ಕೊಳವೆ ಬಾವಿಗಳಿಂದ ಹಲವಾರು ವಿಧಾನ ಬಳಸಿ ನೀರನ್ನು ಮೇಲತ್ತಬೇಕಾಗುತ್ತದೆ. ನೀರನ್ನು ಮೇಲೆತ್ತಲು ಮಾನವ, ಪ್ರಾಣಿ ಮತ್ತು ಯಂತ್ರದ ಬಳಕೆಯಾಗುತ್ತದೆ.
1. ಮಾನವ ಶಕ್ತಿ:
ಎ. ಏತ ನೀರಾವರಿ (ದೇಕಲಿ): ನೀರಿನ ಸಂಗ್ರಹ 4-5 ಮೀ. ಮೇಲ್ಮಟ್ಟದಲ್ಲಿರುವಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ. ಒಬ್ಬನಿಂದ ಸುಮಾರು 2000-2500 ಲೀ. ನೀರು ಮೇಲೆತ್ತಬಹುದು.
2. ನೀರೆತ್ತುವ ಯಂತ್ರ: ವಿದ್ಯುತ್ ಮತ್ತು ಡೀಸೆಲ್ ಇಂಧನ ಚಾಲಿತ ಪಂಪುಗಳನ್ನು ನೀರೆತ್ತಲು ಬಳಸಲಾಗುತ್ತದೆ. ಅನೇಕ ತರಹದ ವಿವಿಧ ಸಾಮಥ್ರ್ಯ ಹೊಂದಿದ ಪಂಪುಗಳು ದೊರೆಯುತ್ತವೆ ಮತ್ತು ಇವುಗಳಿಂದ ಅಧಿಕ ಪ್ರಮಾಣದ ನೀರನ್ನು ಕಾಲುವೆ, ಬಾವಿ, ಕೊಳವೆ ಬಾವಿ, ಕೊಳ, ನದಿಯಿಂದ ಹೊರಹಾಕಬಹುದು.
ನೀರಾವರಿ ವಿಧಾನಗಳು
ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ನೀರಾವರಿ ವಿಧಾನ ಬಳಕೆಯಲ್ಲಿದೆ. ನೀರಿನ ಮೂಲ, ಮಣ್ಣಿನ ಗುಣ, ಬೆಳೆಯ ಪ್ರಾಕಾರದ ಮೇಲೆ ನೀರಾವರಿ ವಿಧಾನ ಅವಲಂಬಿತವಾಗಿದೆ. ನೀರಾವರಿ ವಿಧಾನವನ್ನು ಮೇಲ್ಮೈ ನೀರಾವರಿ, ನೆಲದೊಳಗಿನ ನೀರಾವರಿ ಮತ್ತು ಒತ್ತಡದ ನೀರಾವರಿ ಎಂದು ವಿಂಗಡಿಸಬಹುದು.
ಎ. ಮೇಲ್ಮೈ ನೀರಾವರಿ ವಿಧಾನ
ದೇಶದಲ್ಲಿ ಈ ವಿಧಾನ ಹೆಚ್ಚು ಬಳಕೆಯಲ್ಲಿದೆ. ಬೆಳೆ, ನಾಟಿ ವಿಧಾನ, ಗಿಡದ ಸಾಂದ್ರತೆ, ಮಣ್ಣಿನ ಗುಣ ಅವಲಂಬಿಸಿ ವಿವಿಧ ರೀತಿಯ ಮೇಲ್ಮೈ ನೀರಾವರಿ ವಿಧಾನ ಅಳವಡಿಸಲಾಗುತ್ತದೆ.
2. ಬುಟ್ಟಿ (ತೂಗುಯ್ಯಾಲೆ)
ನೀರು ಅತೀ ಮೇಲ್ಮಟ್ಟದಲ್ಲಿರುವಾಗ (1.5-2.0 ಮೀ.) ಈ ವಿಧಾನ ಬಳಸಲಾಗುತ್ತದೆ. ಇಬ್ಬದಿಯಿಂದ ಎರಡು ವ್ಯಕ್ತಿಗಳು ನೀರು ತುಂಬಿದ ಬುಟ್ಟಿಯನ್ನು ತೂಗಿ ಹತ್ತಿರದ ಜಾಗದಲ್ಲಿ ನೀರನ್ನು ಚೆಲ್ಲುತ್ತಾರೆ. ಒಂದು ತಾಸಿನಲ್ಲಿ ಅಂದಾಜು 3000-4000 ಲೀ. ನೀರನ್ನು ಹೊರ ಹಾಕಬಹುದು.
ಪ್ರಾಣಿಗಳ ಬಳಕೆ
1. ರಾಹತ್: 12 ಮೀ. ಆಳದಲ್ಲಿರುವ ನೀರನ್ನು ಈ ವಿಧಾನದ ಮೂಲಕ ಮೇಲತ್ತಬಹುದು. ಕಬ್ಬಿಣದ ಗಾಲಿಗೆ ಜೋಡಿಸಿದ ಬಕೇಟುಗಳನ್ನು ಬಾವಿಗೆ ಅಳವಡಿಸಿ ಎರಡು ಎತ್ತುಗಳ ಸಹಾಯದಿಂದ ಗಾಲಿಯನ್ನು ತಿರುಗಿಸಲಾಗುತ್ತದೆ. ಗಾಲಿಯೊಡನೆ ತಿರುಗುವ ಬಕೇಟುಗಳ ಸಹಾಯದಿಂದ ನೀರನ್ನು ಹತ್ತಿರದ ಬಾವಿ, ಕೆರೆ, ಕಾಲುವೆಗಳಿಂದ ಮೇಲತ್ತಲಾಗುತ್ತದೆ. ಪ್ರತೀ ಗಂಟೆಗೆ ಅಂದಾಜು 9000 ಲೀ. ನೀರನ್ನು ಈ ವಿಧಾನದ ಮೂಲಕ ಹೊರಚೆಲ್ಲಬಹುದು.
2. ಚರಸ್: 30 ಮೀ. ಆಳದ ಬಾವಿಯಲ್ಲಿ ಈ ವಿಧಾನ ಬಳಕೆಯಲ್ಲಿದೆ. ರಾಟೆಗೆ ಕಟ್ಟಿದ 170-200 ಲೀ. ಸಾಮಥ್ರ್ಯದ ಚರ್ಮದ ಚೀಲವನ್ನು ಜೊತೆ ಎತ್ತುಗಳ ಸಹಾಯದಿಂದ ಮೇಲೆತ್ತಲಾಗುವುದು. ನೀರನ್ನು ಹತ್ತಿರದ ನೀರಾವರಿ ಕಾಲುವೆಯಲ್ಲಿ ಹರಿಯ ಬಿಡಲಾಗುವುದು. ಗಂಟೆಗೆ ಅಂದಾಜು 8000 ಲೀ. ನೀರನ್ನು ಹೊರಚೆಲ್ಲಬಹುದು.
3. ನೀರು ಹಾಯಿಸುವುದು: ತುಂಬಾ ಅಗ್ಗದ ಮತ್ತು ಸುಲಭ ವಿಧಾನವಾಗಿದ್ದು ಯಾವದೇ ಅಡೆತಡೆಗಳಿಲ್ಲದೆ ನೀರನ್ನು ಇಡೀ ಜಮೀನಿಗೆ ಹರಿಯ ಬಿಡಲಾಗುವುದು. ಆದರೆ ಈ ವಿಧಾನದಲ್ಲಿ ನೀರು ಪೋಲಾಗುವುದು ಹೆಚ್ಚು ಹಾಗು ಸಮತಟ್ಟಾದ ಭೂಮಿ ಅವಶ್ಯ ಮತ್ತು ಎಲ್ಲಾ ಗಿಡಗಳಿಗೆ ಒಂದೇ ಪ್ರಮಾಣದಲ್ಲಿ ನೀರಿನ ಹಂಚಿಕೆ ಆಗುವುದಿಲ್ಲ.
4. ಪ್ಲಾಟ್ ವಿಧಾನ: ಬದುಗಳನ್ನು ನಿರ್ಮಿಸಿ ಇಡೀ ಜಮೀನನ್ನು ಚಿಕ್ಕ ತುಂಡುಗಳಾಗಿ ವಿಭಜಿಸಲಾಗುತ್ತದೆ ಮತ್ತು ಈ ತುಂಡುಗಳಿಗೆ ನೀರು ಪೂರೈಸಲು ಕಾಲುವೆಗಳನ್ನು ಜೋಡಿಸಲಾಗುತ್ತದೆ. ನೀರಿನ ಹಂಚಿಕೆ ಸಮಾನಾಗಿರುತ್ತದೆಯಾದರೂ ಬದು ಮತ್ತು ಕಾಲುವೆ ನಿರ್ಮಿಸಲು ಹೆಚ್ಚು ಕಾರ್ಮಿಕರ ಅಗತ್ಯವಿದೆ.
5. ಸಾಲು (ಚರಂಡಿ) ವ್ಯವಸ್ಥೆ: ಸಾಲುಗಳಲ್ಲಿ ನಾಟಿ ಮಾಡಿದ ಬೆಳೆಗೆ ಈ ವಿಧಾನ ಸೂಕ್ತವಾಗಿದೆ. ಚರಂಡಿಯಲ್ಲಿ ನೀರು ಹರಿಸಿದಾಗ ಎಲ್ಲಾ ಗಿಡಗಳಿಗೆ ಸಮಾನ ನೀರಿನ ಹಂಚಿಕೆಯಾಗುತ್ತದೆ. ಕಡಿಮೆ ಪ್ರಮಾಣದ ನೀರು ಪೋಲಾಗುವುದು ಮತ್ತು ಹೆಚ್ಚಿನ ನೀರು ಕಾಲುವೆಯಲ್ಲಿ ಬಸಿದು ಹೋಗುತ್ತದೆ. ಎಲ್ಲಾ ಬೆಳೆಗಳಿಗೆ ಈ ವಿಧಾನ ಅಳವಡಿಸುವುದು ಸಾಧ್ಯವಿಲ್ಲ.
6. ಸಾಲು ಮತ್ತು ಬದು ವಿಧಾನ: ಸಾಲು ಮತ್ತು ಪ್ಲಾಟ್ ವಿಧಾನದ ಸಂಗಮವಾಗಿದೆ. ಅನೇಕ ರೀತಿಯ ಬೆಳೆಗಳಿಗೆ ನೀರು ಒದಗಿಸಬಹುದಾದರೂ ಸಾಲು ಮತ್ತು ಬದುಗಳನ್ನು ನಿರ್ಮಿಸಲು ಹೆಚ್ಚು ಕಾರ್ಮಿಕರ ಅಗತ್ಯವಿದೆ.
ಗಿ. ಬೇಸಿನ್ ವಿಧಾನ
ಹಣ್ಣಿನ ಬೆಳೆಗೆ ಸೂಕ್ತವಾದ ವಿಧಾನ. ಗಿಡದ ಸುತ್ತಲೂ ವರ್ತುಲಾಕಾರದ ಅಥವಾ ಆಯತಾಕಾರದ ಕಟ್ಟೆ ನಿರ್ಮಿಸಿ ನೀರು ನಿಲ್ಲುವಂತೆ ಮಾಡಿ ನೀರು ಹರಿಸುವ ಉಪಕಾಲುವೆಗಳನ್ನು ಜೋಡಿಸಲಾಗುತ್ತದೆ. ಅಗ್ಗದ ವಿಧಾನ ಮತ್ತು ಕಡಿಮೆ ನೀರು ಸಾಕಾಗುತ್ತದೆ. ಗಿಡದಿಂದ ಗಿಡಕ್ಕೆ ರೋಗ ಹರಡುವ ಸಾಧ್ಯತೆ ಜಾಸ್ತಿ ಇದೆ.
ಗಿI. ರಿಂಗ್ ವಿಧಾನ
ಬೇಸಿನ್ ವಿಧಾನಕ್ಕಿಂತ ಸುಧಾರಿತ ವಿಧಾನವಾಗಿದೆ. ಗಿಡಗಳಿಗೆ ಜೋಡಿಸಿದ ಉಪಕಾಲುವೆಗಳನ್ನು ಮುಖ್ಯ ಕಾಲುವೆಗೆ ಜೋಡಿಸಲಾಗುವುದು. ಬೋಗುಣಿಯನ್ನು ಗಿಡದಿಂದ 2-3’ ದೂರ ನಿರ್ಮಿಸಬೇಕು. ಇದರಿಂದ ರೋಗ ಹರಡುವಕೆ ಮತ್ತು ಪೋಷಕಾಂಶ ಪೋಲಾಗುವುದು ಕಡಿಮೆಯಾಗುವುದು. ಹಣ್ಣಿನ ಬೆಳೆಯಲ್ಲಿ ಬಳಸುವ ಈ ವಿಧಾನದಲ್ಲಿ ಕಾರ್ಮಿಕರ ಬಳಕೆಯ ಅವಶ್ಯಕತೆಯಿದೆ.
b. ಮಣ್ಣಿನೊಳಗೆ ನೀರು ಪೂರೈಸುವುದು
ರಂಧ್ರಗಳಿರುವ ಕೊಳವೆಯನ್ನು 1-1.5 ಮೀ. ಆಳದಲ್ಲಿ ನೆಲದೊಳಗೆ ಅಳವಡಿಸಲಾಗುವುದು. ನಿಧಾನವಾಗಿ ನೀರು ಸೂಕ್ಷ್ಮ ವಾಹಿನಿಯಂತೆ ಗಿಡಗಳಿಗೆ ದೊರಕುವುದು. ದುಬಾರಿಯಾದ ವಿಧಾನವಾಗಿದ್ದು ಆಗಾಗ ಕೊಳವೆ ಕಟ್ಟಿಕೊಳ್ಳುತ್ತದೆ. ದೇಶದಲ್ಲಿ ಈ ವಿಧಾನ ಬಳಕಯಲ್ಲಿಲ್ಲ.
ಛಿ. ಒತ್ತಡ ನೀರಾವರಿ ವಿಧಾನ
ವಿವಿಧ ಗಾತ್ರದ ಕೊಳವೆಗಳ ಮೂಲಕ ನೀರನ್ನು ಒತ್ತಡದಿಂದ ಹರಿಸಲಾಗುವುದು. ಗಿಡಗಳಿಗೆ ನೀರು ಪೂರೈಸಲು ಕೊಳವೆಗಳಿಗೆ ವಿಶೇಷ ರೀತಿಯ ಸಾಧನಗಳನ್ನು ಅಳವಡಿಲಾಗಿರುತ್ತದೆ. ಈ ವಿಧಾನವನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ.
ತುಂತುರು ನೀರಾವರಿ: ಗಿಡಗಳ ಮೇಲೆ ಮಳೆ ಹನಿಯಂತೆ ನೀರನ್ನು ಸಿಂಚನ ಮಾಡುತ್ತದೆ. ಬೇಕಾದೆಡೆ ಬೇಕಾದಷ್ಟು ನೀರು ಹರಿಸಲು ಒತ್ತಡ ಲಭ್ಯವಾಗುವಂತೆ ಮುಖ್ಯ ಕೊಳವೆ ಮತ್ತು ಉಪ ಕೊಳವೆಗಳನ್ನು ರಚಿಸಲಾಗಿರುತ್ತದೆ. ನೀರು ಸಿಂಚನ ಮಾಡಲು ಸೂಕ್ಷ್ಮ, ಚಿಕ್ಕ ಮತ್ತು ದೊಡ್ಡ ಗಾತ್ರದ ಸ್ಪಿಂಕಲರ್‍ಗಳನ್ನು ಬೆಳೆ ಮತ್ತು ನೀರಿನ ಲಭ್ಯತೆಗನುಗುಣವಾಗಿ ಬಳಸುತ್ತಾರೆ.
ಈ ಹಿಂದೆ ಅಲ್ಯುಮಿನಿಯಂ ಅಥವಾ ಪಿ.ವಿ.ಸಿ. ಕೊಳವೆಗಳನ್ನು ಭೂಮಿಯ ಮೇಲ್ಮೈಯಲ್ಲಿ ತುಂತುರು ನೀರಾವರಿಗೆ ಬಳಸಲಾಗುತ್ತಿತ್ತು. ಆದರೆ ಈಗ ತುಂತುರು ನೀರಾವರಿ ಕೊಳವೆಗಳನ್ನು ಭೂಗರ್ಭದೊಳಗೆ ಅಳವಡಿಸಲಾಗುತ್ತದೆ. ವಾಣಿಜ್ಯ ತೋಟಗಳಲ್ಲಿ ಈಗಲೂ ಸಂಚಾರಿ ತುಂತುರು ನೀರಾವರಿ ಬಳಕೆಯಲ್ಲಿದೆ. ತರಕಾರಿ, ಹುಲ್ಲು ಹಾಸು, ನರ್ಸರಿ ಮುಂತಾದ ಎಡೆಗಳಲ್ಲಿ ಸೂಕ್ತವಾಗಿದ್ದು ಮೇಲ್ಮೈ ನೀರಾವರಿ ವಿಧಾನಕ್ಕಿಂತ ಹೆಚ್ಚು ದಕ್ಷತೆಯಿಂದ ಕೂಡಿದೆ. ಪ್ರಾರಂಭದ ಹೂಡಿಕೆ ಹೆಚ್ಚು ಮತ್ತು ನುರಿತ ಜನರು ಕೆಲಸ ಕಾರ್ಯಗಳಿಗೆ ಬೇಕಾಗುತ್ತದೆ.
ಹನಿ ನೀರಾವರಿ: ತುಂತುರು ನೀರಾವರಿಗೆ ಸಾಮ್ಯತೆಯಿದ್ದು, ಸ್ಪಿಂಕ್‍ಲರ್ ಬದಲು ಡ್ರಿಪ್ಪರುಗಳನ್ನು ನೀರನ್ನು ಬೇರಿನ ಸಮೀಪಕ್ಕೆ ಹಾಯಿಸಲು ಬಳಸಲಾಗುತ್ತದೆ. ನೀರು ಮತ್ತು ಶ್ರಮದ ಉಳಿತಾಯ ಆಗುತ್ತದೆ. ಆದರೆ ಇತರ ನೀರಾವರಿ ವಿಧಾನಕ್ಕಿಂತ ದುಬಾರಿಯಾಗಿದೆ. ಹಣ್ಣಿನ ಬೆಳೆಗೆ ಹೆಚ್ಚು ಸೂಕ್ತವಾಗಿದ್ದು ಬೆಳೆಗಾರರಲ್ಲಿ ಜನಪ್ರಿಯವಾಗಿದೆ. ಹನಿ ನೀರಾವರಿ ಮೂಲಕ ಗಿಡಗಳಿಗೆ ಪೋಷಕಾಂಶವನ್ನು ಸಹ ಪೂರೈಸಲು ಸಾಧ್ಯವಿದೆ.