ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾತೂರು. Hathur Primary Agricultural Credit Co-operative Society LTD., (PACCS-Hathur)

Reading Time: 9 minutes

ನಂ. 2784ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಹಾತೂರು



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  18-09-1976

ಸ್ಥಾಪಕ ಅಧ್ಯಕ್ಷರು: ಡಿ.ಎ. ಸುಬ್ರಮಣಿ
 
ಹಾಲಿ ಅಧ್ಯಕ್ಷರು: ಕೊಡಂದೇರ ಬಾಂಡ್‌ ಗಣಪತಿ
 
ಹಾಲಿ ಉಪಾಧ್ಯಕ್ಷರು: ಯಸ್.ಕೆ.ಮಂದಣ್ಣ
 
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಬಿ.ಎಂ ಪ್ರದೀಪ್
 

# 2. ಸಂಘದ ಕಾರ್ಯವ್ಯಾಪ್ತಿ:- 

ಹಾತೂರು, ಕುಂದಾ, ಈಚೂರು, ಕೊಳತ್ತೋಡು ಬೈಗೋಡು, ಕಳತ್ಮಾಡು ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಿದೆ.

# 3. ಸಂಘದ ಕಾರ್ಯಚಟುವಟಿಕೆಗಳು:-

ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳು, ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟ, ರಸಗೊಬ್ಬರ ಮಾರಾಟ, ಕೀಟನಾಶಕ, ಕೊಳೆನಾಶಕಗಳ ಮಾರಾಟ, ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಸಂಘದಲ್ಲಿ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಆಹಾರ ಧಾನ್ಯ ವಿತರಣೆ ಇತ್ಯಾದಿ
* ಸದಸ್ಯರುಗಳಲ್ಲಿ ಮಿತವ್ಯಯ, ಸ್ವ-ಸಹಾಯ, ಸಹಕಾರ ಮನೋಭಾವನೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ದತಿ ವಿಷಯದಲ್ಲಿ ಸದಸ್ಯರುಗಳಿಗೆ ತಿಳುವಳಿಕೆ ಕೊಡುವುದು.
* ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ಪೂರೈಸುವುದು.

* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ ಗಳಿಂದ ಪಡೆಯಬಹುದು.

* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ ಗೊಬ್ಬರ ರಾಸಾಯನಿಕ ಗೊಬ್ಬರ ವ್ಯವಸಾಯ ಉಪಕರಣಗಳು ಕ್ರಿಮಿ ನಾಶಕ ಔಷಧಿಗಳು ಇತ್ಯಾದಿಗಳನ್ನು ಪೂರೈಸುವುದು.

* ಸಣ್ಣ ಉಳಿತಾಯ ಯೋಜನೆಯಲ್ಲಿ ಸದಸ್ಯರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.

* ಸ್ವಸಹಾಯ ಗುಂಪು ಅಥವಾ ಸಂಘಗಳಿಗೆ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಬಾರ್ಡ್ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

* ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮತ್ತು ಮೇಲ್ಕಾಣಿಸಿದ ಉದ್ದೇಶಕ್ಕೆ ಒಳಪಟ್ಟು ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು.

* ಹಾಗೂ ಉಪನಿಯಮ ಸಂಖ್ಯೆ 4ರಂತೆ ಇನ್ನಿತರ ಚಟುವಟಿಕೆಗಳು.

 

ಸಂಘದಲ್ಲಿರುವ ಇತರೆ. ಸೌಲಭ್ಯಗಳು:

 

1. ಹತ್ಯಾರು ವಿಭಾಗದಲ್ಲಿ ಸದಸ್ಯರಿಗೆ ಅವಶ್ಯಕವಾದ ವ್ಯವಸಾಯೋಪಕರಣಗಳು, ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕ ಮತ್ತು ಕೀಟನಾಶಕಗಳು, ಸುಣ್ಣ ಮತ್ತು ಹತ್ಯಾರು ಸಾಮಾಗ್ರಿಗಳು ದೊರೆಯುತ್ತದೆ.

 

2. ಸಂಘದಲ್ಲಿ ಸೇಪ್‌ ಡಿಪಾಸಿಟ್ಟು ಲಾಕರ್‌ ಸೌಲಭ್ಯ ದೊರೆಯುತ್ತದೆ.

 

3. ಸಂಘದಲ್ಲಿ ರೈತರ ಕಾಫಿ ಮತ್ತು ಕರಿಮೆಣಸನ್ನು ದಾಸ್ತಾನು ಮಾಡಲು ಗೋದಾಮು ಸೌಲಭ್ಯವಿರುತ್ತದೆ. ಮತ್ತು ಈ ದಾಸ್ತಾನಿನ ಆಧಾರದಲ್ಲಿ ಮುಂಗಡ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

 

4. ಸಂಘದಲ್ಲಿ ಸದಸ್ಯರಿಗೆ ಕೆ.ಸಿ.ಸಿ.ಸಾಲ , ಜಾಮೀನು ಸಾಲ,ಗೊಬ್ಬರ ಸಾಲ, ಅಸಾಮಿ ಸಾಲ, ದಾಸ್ತಾನಿನ ಮೇಲೆ ಮುಂಗಡ ಸಾಲ, ಗೃಹವಸ್ತುಗಳ ಖರೀದಿ ಸಾಲ, ವಾಹನ ಸಾಲ, ಆಭರಣ ಸಾಲ, ಪಿಗ್ಮಿ ಓ.ಡಿ ಸಾಲ, ಮಧ್ಯಮಾವಧಿ ಸಾಲ ಮತ್ತು ದೀರ್ಫಾವಧಿ ಸಾಲವನ್ನು ನೀಡಲಾಗುತ್ತದೆ.

 

5. ಕೆ.ಸಿ.ಸಿ. ಸಾಲಗಾರ ಸದಸ್ಯರು ಮೃತಪಟ್ಟಲ್ಲಿ ರೂ 25000/- ಸಾಲಮನ್ನಾ ಸೌಲಭ್ಯ ಇರುತ್ತದೆ.

 

6. ನಿರಖು ಶೇವಣಿಗೆ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತದೆ.

 
# 4. ಅಭಿವೃದ್ಧಿಯ ಮುನ್ನೋಟ:-

ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19 ನೇ ಸಾಲಿನಲ್ಲಿ ರೂ 25.98 ಲಕ್ಷ ಲಾಭವನ್ನು ಹೊಂದಿದ್ದು ಸದಸ್ಯರಿಗೆ ಶೇ.15 % ಡಿವಿಡೆಂಡ್‌ ನೀಡಲಾಗಿದೆ. 2019-20 ನೇ ಸಾಲಿನಲ್ಲಿ ರೂ. 28.09 ಲಕ್ಷ ಲಾಭವನ್ನು ಹೊಂದಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಟ್‌ ನೀಡಲಾಗಿದೆ. ಸಂಘವು ಸದಸ್ಯರುಗಳಿಗೆ ಅಲ್ಪಾವಧಿ ಸಾಲ, ಸ್ವಸಹಾಯ ಗುಂಪಿನ ಸಾಲ, ಫಸಲು ಸಾಲ, ಮಧ್ಯಮಾವಧಿ ಸಾಲ, ಪಿಗ್ಮಿ ಓ.ಡಿ ಸಾಲ, ಜಾಮೀನು ಸಾಲ, ವಾಹನ ಸಾಲ,ಚಿನ್ನಾಭರಣ ಅಡವು ಸಾಲ,ನಿರಖು ಠೇವಣಿ ಸಾಲ, ಗೊಬ್ಬರ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು ಸಂಘವು ಕಳೆದ ಹಲವು ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ.

 
# 5 ಸಂಘದ ಸದಸ್ಯತ್ವ:- 

ಸಂಘದಲ್ಲಿ 2019-20 ರ ಸಾಲಿನಂತ್ಯಕ್ಕೆ 953 ಜನ “ಎ” ತರಗತಿ ಸದಸ್ಯರಿದ್ದಾರೆ.

# 6. ಪಾಲು ಬಂಡವಾಳ:-

2019-20 ರ ಸಾಲಿನಂತ್ಯಕ್ಕೆ ರೂ. 76.52 ಲಕ್ಷಗಳ ಪಾಲುಬಂಡವಾಳ ಹೊಂದಿರುತ್ತದೆ.

 
# 7. ಠೇವಣಿಗಳು:-

2019-20 ರ ಸಾಲಿನಂತ್ಯಕ್ಕೆ ಸಂಘದಲ್ಲಿ 780.80 ಲಕ್ಷ ಠೇವಣಿ ಸಂಗ್ರಹವಾಗಿರುತ್ತದೆ.

 
# 8. ನಿಧಿಗಳು:- 

ಸಂಘದಲ್ಲಿ 2019-20 ರ ಸಾಲಿನಾಂತ್ಯಕ್ಕೆ ರೂ.53.43 ಲಕ್ಷಗಳ ಕ್ಷೇಮನಿಧಿ ಮತ್ತು ರೂ.48.27 ಲಕ್ಷಗಳ ಇತರ ನಿಧಿಗಳಿರುತ್ತದೆ.

 
# 9. ಧನವಿನಿಯೋಗಗಳು:- 

ಸಂಘದಲ್ಲಿ 2019-20 ರ ಸಾಲಿನಾಂತ್ಯಕ್ಕೆ ರೂ.194 25 ಲಕ್ಷ ರೂ ಧನವಿನಿಯೋಗವಿರುತ್ತದೆ.

 
# 10. ಸದಸ್ಯರಿಗೆ ವಿತರಿಸಿದ ಸಾಲ:- 

ಸಂಘವು 2019-20 ರ ಸಾಲಿನಲ್ಲಿ ಒಟ್ಟು ರೂ. 1426.83 ಲಕ್ಷಗಳನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ.

 
# 11. ಬ್ಯಾಂಕಿನ ವಹಿವಾಟು:- 

ಸಂಘವೂ 2019-20 ರ ಸಾಲಿನಲ್ಲಿ ರೂ.284.13 ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿರುತ್ತದೆ. ಹಾಗೂ ಸದರಿ ಸಾಲಿನಲ್ಲಿ ರೂ 7066.09 ಲಕ್ಷಗಳ ವಾರ್ಷಿಕ ವಹಿವಾಟು ನಡೆದಿರುತ್ತದೆ.

 
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

2019-20 ನೇ ಸಾಲಿನಲ್ಲಿ ರೂ. 28.06 ಲಕ್ಷ ಲಾಭವನ್ನು ಹೊಂದಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಡ್‌

ನೀಡಲಾಗಿದೆ.

 
# 13. ಗೌರವ ಮತ್ತು ಪ್ರಶಸ್ತಿ:- 

ಉತ್ತಮವಾಗಿ ಕಾರ್ಯನಿರ್ವಹಿಸಿದ ಸಹಕಾರ ಸಂಘಕ್ಕೆ ಕೆ.ಡಿ.ಸಿ.ಸಿ. ಬ್ಯಾಂಕಿನವರು ನೀಡುವ ಬಹುಮಾನದಲ್ಲಿ 2017-18 ಮತ್ತು 2018-19 ಮತ್ತು 2020-21 ನೇ ಸಾಲಿನಲ್ಲಿ ನಮ್ಮ ಸಂಘವೂ ಕ್ರಮವಾಗಿ ವಿರಾಜಪೇಟೆ ತಾಲ್ಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರವನ್ನು ಹಾಗೂ 2019-20 ನೇ ಸಾಲಿನಲ್ಲಿ ತೃತೀಯ ಸ್ಮಾನವನ್ನು ಪಡೆದು ಪ್ರಶಸ್ತಿ ಪತ್ರ ಮತ್ತು ನಗದು ಪುರಸ್ಕಾರವನ್ನು ಪಡೆದುಕೊಂಡಿದೆ. ಅದೇ ರೀತಿಯಲ್ಲಿ 2017-18 ಮತ್ತು 2019-20ನೇ ಸಾಲಿನಲ್ಲಿ ಅಪೆಕ್ಸ್‌ ಬ್ಯಾಂಕಿನಿಂದಲೂ ಉತ್ತಮ ಕಾರ್ಯನಿರ್ವಹಣೆಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಪಡೆದುಕೊಂಡಿದೆ.

 
# 14. ಸ್ವ-ಸಹಾಯ ಗುಂಪುಗಳ ರಚನೆ:- 

ನಮ್ಮ ಸಂಘದಲ್ಲಿ 10 ಸ್ವ-ಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ತಮ್ಮ ಸ್ವಂತ ಉಳಿತಾಯದಿಂದ ಸಾಲವನ್ನು ಹೊಂದಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಲು ಸಹಕರಿಸಿರುತ್ತೇವೆ. 2019-20 ನೇ ಸಾಲಿನಲ್ಲಿ. ಸ್ವ-ಸಹಾಯ ಗುಂಪುಗಳಿಗೆ ರೂ 16,00,000/-ಸಾಲವನ್ನು ವಿತರಿಸಿದ್ದು ಗುಂಪಿನ ಸದಸ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕರಿಸಿರುತ್ತೇವೆ. 2020-21 ನೇ ಸಾಲಿನಲ್ಲಿ 2 ಸ್ವ-ಸಹಾಯ ಗುಂಪಿಗೆ ರೂ 800000/-ಸಾಲ ವಿತರಣೆ ಮಾಡಿರುತ್ತೇವೆ.

 
# 15. ಸಾಲ ಮರುಪಾವತಿ:- 

2019-20 ಸಾಲಿನಲ್ಲಿ ಸಾಲ ಮರುಪಾವತಿಯೂ ಉತ್ತಮ ಸ್ಲಿತಿಯಲ್ಲಿರುತ್ತದೆ.

 
# 16. ಆಡಿಟ್ ವರ್ಗ:- 
2019-20 ರ ಸಾಲಿನಲ್ಲಿ ಆಡಿಟ್‌ ವರ್ಗಿಕರಣದಲ್ಲಿ ಕಳೆದ ಹತ್ತು ವರ್ಷಗಳಿಂದ ಸಂಘವೂ “ಎ”’ ತರಗತಿಯನ್ನು ಪಡೆದುಕೊಂಡಿರುತ್ತದೆ.
 
# 17. ಸಂಘದ ಸ್ಥಿರಾಸ್ತಿಗಳು:- 

ಸಂಘದಲ್ಲಿ ಒಟ್ಟು 2019- 20ರ ಸಾಲಿನಂತ್ಯಕ್ಕೆ ರೂ. 78.95 ಲಕ್ಷಗಳ ಸ್ಥಿರಾಸ್ತಿಯಿದ್ದು, ನಾಲ್ಕು ಗೋದಾಮು ಕಟ್ಟಡ ಮತ್ತು ಒಂದು ಕಛೇರಿ, ಸಭಾಭವನ ಮತ್ತು ಮೂರು ಕೊಠಡಿಗಳ ವಾಣಿಜ್ಯ ಮಳಿಗೆಯನ್ನು ಹೊಂದಿರುತ್ತದೆ

 
# 18. ಸಂಘದ ಆಡಳಿತ ಮಂಡಳಿ:-
1. ಕೆ.ಪಿ. ಗಣಪತಿ: ಅಧ್ಯಕ್ಷರು
 
2. ಎಸ್.ಕೆ. ಮಂದಣ್ಣ: ಉಪಾಧ್ಯಕ್ಷರು
 
3.ಸಿ.ಎಸ್.‌ ಬೋಪಣ್ಣ: ನಿರ್ಧೇಶಕರು
 
4. ಹೆಚ್.ಡಿ.‌ ಶ್ರೀನಿವಾಸ್: ನಿರ್ಧೇಶಕರು
 
5. ಯಂ .ಟಿ. ಅಯ್ಯಪ್ಪ: ನಿರ್ಧೇಶಕರು
 
6. ಕೆ.ಬಿ. ಉತ್ತಪ್ಪ: ನಿರ್ಧೇಶಕರು
     
7. ಪಿ.ಡಿ. ದಿನೇಶ್: ನಿರ್ಧೇಶಕರು
8. ಬಿ.ಎ. ದುಗ್ಗಪ್ಪ: ನಿರ್ಧೇಶಕರು
    
9. ಕೆ.ವಿ. ಮುತ್ತಣ್ಣ: ನಿರ್ಧೇಶಕರು
  
10. ಸಿ.ಜೆ. ರೂಪ: ನಿರ್ಧೇಶಕರು
 
11. ಕೆ.ಎಂ. ಕಾವೇರಮ್ಮ: ನಿರ್ಧೇಶಕರು
   
12. ಸಿ.ಶಂಕರ: ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕರು‌ (ಗೋಣಿಕೊಪ್ಪಲು ವೃತ್ತ)

# 19. ಸಂಘದ ಸಿಬ್ಬಂದಿ ವರ್ಗ:-

1. ಬಿ.ಎಂ. ಪ್ರದೀಪ್:  ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ಬಿ.ಎಲ್.‌ ಕಸ್ತೂರಿ ಶೆಟ್ಟಿ: ‌ಲೆಕ್ಕಿಗರು

3. ಯಂ.ಎಸ್‌ ಪ್ರತಿಮಾ: ‌ಗುಮಾಸ್ತ

4. ಪಿ.ಎಸ್.‌ ನಂಜಪ್ಪ:ಗುಮಾಸ್ತ

5. ಕೆ.ಜೆ.ರಮೇಶ್:‌  ಅಟೇಂಡರ್

6. ಸಿ.ಟಿ. ಕುಶಾಲಪ್ಪ: ಕಛೇರಿ ಅಟೇಂಡರ್‌

7. ಟಿ.ಪಿ. ವೆಂಕಟೇಶ್.‌ ಪಿಗ್ಮಿ ಸಂಗ್ರಾಹಕ

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ.2784ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ –ಹಾತೂರು.

 
Hathur Primary Agricultural Credit Co-operative Society LTD., (PACCS- Hathur)
 
ಪೊನ್ನಂಪೇಟೆ ತಾಲ್ಲೂಕು, ದ. ಕೊಡಗು.
 
ಮೋಬೈಲ್:‌ 9483504766
 
Email: hathurpacs@gmail.com
 

Search Coorg Media

Coorg’s Largest Online Media Network 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.