ನಂ. 2779ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಕ್ಕಬೆ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 1976
ಸ್ಥಾಪಕ ಅಧ್ಯಕ್ಷರು: ಅಪ್ಪಾರಂಡ ಜಿ. ಮುತ್ತಪ್ಪ
ಹಾಲಿ ಅಧ್ಯಕ್ಷರು: ಕಲಿಯಾಟಂಡ ಎ. ತಮ್ಮಯ್ಯ(ರಘು)
ಹಾಲಿ ಉಪಾಧ್ಯಕ್ಷರು: ಅಲ್ಲಾರಂಡ ಎಸ್. ಅಯ್ಯಪ್ಪ(ಸನ್ನು)
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎಸ್.ಮಂಜುಳ
# 2. ಸಂಘದ ಕಾರ್ಯವ್ಯಾಪ್ತಿ:-
ಕುಂಜಿಲ, ನಾಲಡಿ, ಯವಕಪಾಡಿ ಹಾಗೂ ಮರಂದೊಡ. ಗ್ರಾಮಗಳ ಕಾರ್ಯವ್ಯಾಪ್ತಿ
# 3. ಸಂಘದ ಕಾರ್ಯಚಟುವಟಿಕೆಗಳು:-
1. ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್‌ಗಳಿಂದ ಪಡೆಯುವುದು.
2. ವ್ಯವಹಾರ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಸದಸ್ಯರಿಗೆ ವಿತರಿಸುವುದು.
3. ಯಶಸ್ವಿನಿ ಸಹಕಾರಿ ರೈತ ಆರೋಗ್ಯ ರಕ್ಷಣಾ ಯೋಜನೆಗೆ ಸದಸ್ಯರನ್ನು ನೋಂದಾಯಿಸಿಕೊಳ್ಳುವುದು
4. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
5. ಸಾಲ ಸೌಲಭ್ಯಗಳನ್ನು ಪೂರೈಸುವುದು.
6. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
7. ಇನ್ನು ಅನೇಕ ರೀತಿಯ ಸೌಲಭ್ಯಗಳನ್ನು ಕೃಷಿಕ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಮತ್ತು ಕೃಷಿ ಸಂರಕ್ಷಣೆ ಮಾಡುವುದು.
# 4. ಅಭಿವೃದ್ಧಿಯ ಮುನ್ನೋಟ:-
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ
2018-19ನೇ ಸಾಲಿನಲ್ಲಿರೂ.13.28 ಲಕ್ಷ ಲಾಭ ಬಂದಿರುತ್ತದೆ.
2019-20ನೇ ಸಾಲಿನಲ್ಲಿ ರೂ. 16.17 ಲಕ್ಷ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ.9% ಡಿವಿಡೆಂಟ್ ನೀಡಲಾಗಿದೆ.
2020-21ನೇ ಸಾಲಿನಲ್ಲಿ ರೂ. —ಮಿಗಿಲು ಲಾಭ ಬಂದಿರುತ್ತದೆ.
ಸಂಘವು ಸದಸ್ಯರುಗಳಿಗೆ ಅಲ್ಪಾವಧಿ ಸಾಲ, ಸ್ವಸಹಾಯ ಗುಂಪಿನ ಸಾಲ, ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಚಿನ್ನಾಭರಣ ಅಡವು ಸಾಲ, ನಿರಖು ಠೇವಣಿ ಸಾಲ, ಗೊಬ್ಬರ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸಂಘವು ಕಳೆದ ಹಲವು ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಿದ್ದು, ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ.
# 5 ಸಂಘದ ಸದಸ್ಯತ್ವ:-
ಸಂಘದಲ್ಲಿ ಸ್ರಸಕ್ತ ಸಾಲಿಗೆ 2038 ಎ. ತರಗತಿ ಸದಸ್ಯರಿದ್ದಾರೆ.
# 6. ಪಾಲು ಬಂಡವಾಳ:-
ಸಂಘದಲ್ಲಿ 82.11 ಲಕ್ಷ ರೂ.ಪಾಲು ಬಂಡವಾಲ ಹೊಂದಿರುತ್ತದೆ.
# 7. ಠೇವಣಿಗಳು:-
ಸಂಘದಲ್ಲಿ 360.22 ಲಕ್ಷ ಠೇವಣಿ ಸಂಗ್ರಹವಾಗಿರುತ್ತದೆ.
# 8. ನಿಧಿಗಳು:-
ಸಂಘದಲ್ಲಿ ಒಟ್ಟು 52.00 ಲಕ್ಷ ಇತರ ನಿಧಿಗಳಿರುತ್ತದೆ.
# 9. ಧನವಿನಿಯೋಗಗಳು:-
ಸಂಘದಲ್ಲಿ 199.95 ಲಕ್ಷರೂ. ಧನವಿನಿಯೋಗವಿರುತ್ತದೆ.
# 10. ಸದಸ್ಯರಿಗೆ ವಿತರಿಸಿದ ಸಾಲ:-
ಸಂಘವು ಒಟ್ಟು ಸದಸ್ಯರಿಗೆ 694.42 ಲಕ್ಷ ರೂ.ಗಳನ್ನು ಸದಸ್ಯರಿಗೆ ಸಾಲವಾಗಿ ನೀಡಿರುತ್ತದೆ.
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
2019-20ನೇ ಸಾಲಿನಲ್ಲಿ ರೂ. 16.17 ಲಕ್ಷ ಲಾಭವನ್ನು ಹೊಂದಿದ್ದು, ಸದಸ್ಯರಿಗೆ ಶೇ.9% ಡಿವಿಡೆಂಟ್ ನೀಡಲಾಗಿದೆ.
# 13. ಗೌರವ ಮತ್ತು ಪ್ರಶಸ್ತಿ:-
ಸಂಘವು 2019-20ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಮಡಿಕೇರಿ ತಾಲ್ಲೂಕಿಗೆ 2ನೇ ಸ್ಥಾನ ಪಡೆದಿದ್ದು ಪ್ರಶಸ್ತಿ ಪತ್ರ ಹಾಗೂ 10,000/- ಬಹುಮಾನ ಪಡೆದುಕೊಂಡಿದೆ.
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
# 17. ಸಂಘದ ಸ್ಥಿರಾಸ್ತಿಗಳು:-
ಸಂಘದಲ್ಲಿ ಒಟ್ಟು 71.34 ಲಕ್ಷದ ಸ್ಥಿರಾಸ್ತಿಯಿದ್ದು, ನಾಲ್ಕು ಗೋದಾಮು ಕಟ್ಟಡ ಮತ್ತು ಒಂದು ಕಛೇರಿಯನ್ನು ಹೊಂದಿರುತ್ತದೆ.
# 18. ಸಂಘದ ಆಡಳಿತ ಮಂಡಳಿ:-
ಕಲಿಯಾಟಂಡ ಎ.ತಮ್ಮಯ್ಯ (ರಘು)
ಅಧ್ಯಕ್ಷರು
ಅಲ್ಲಾರಂಡ ಎಸ್ . ಅಯ್ಯಪ್ಪ(ಸನ್ನು)
ಉಪಾಧ್ಯಕ್ಷರು
ಬಡಕಡ ಎಂ. ಬೆಳ್ಯಪ್ಪ(ಸುರೇಶ್)
ನಿರ್ದೇಶಕರು
ಕಲಿಯಾಟಂಡ ಎಂ, ಬೋಪಣ್ಣ (ಯತೀಶ್)
ನಿರ್ದೇಶಕರು
ನಿಡುಮಂಡ ಸಿ .ಪೂವಯ್ಯ(ಹರೀಶ್)
ನಿರ್ದೇಶಕರು
ಕೋಡಿಮಣಿಯಂಡ ಎಂ.ನಾಣಯ್ಯ( ಬಿಜು)
ನಿರ್ದೇಶಕರು
ನಂಬಡಮಂಡ ಬಿ. ಸುನೀತ
ನಿರ್ದೇಶಕರು
ನಿರ್ದೇಶಕರು
ಎ. ಎನ್. ಲಕ್ಷ್ಮಣ
ನಿರ್ದೇಶಕರು
ನಿರ್ದೇಶಕರು
ನಿರ್ದೇಶಕರು
ನಿರ್ದೇಶಕರು
ಎಂ .ಬಿ. ಅಯ್ಯಪ್ಪ
ಜಿಲ್ಲಾ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕರು
# 19. ಸಂಘದ ಸಿಬ್ಬಂದಿ ವರ್ಗ:-
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಲೆಕ್ಕಿಗರು
ಅಟೆಂಡರ್
ಮಾರಾಟ ಗುಮಾಸ್ಥರು
ಹಂಗಾಮಿ ನೌಕರರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ. 2779ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕಕ್ಕಬ್ಬೆ.
Kakkabe Primary Agricultural Credit Co-operative Society LTD., (PACCS-Kakkabe)
ಮಡಿಕೇರಿ ತಾಲೂಕು- ಕೊಡಗು.
ದೂರವಾಣಿ: 08272 – 238358.
Email:
Search Coorg Media
Coorg’s Largest Online Media Network