ಕುಟ್ಟಂಡ ಕೆ. ವಿನು ಪೂವಯ್ಯ, ಸಹಕಾರಿಗಳು: ಅಮ್ಮತ್ತಿ. Ammathi

Reading Time: 5 minutes

ಕುಟ್ಟಂಡ  ಕೆ. ವಿನು ಪೂವಯ್ಯ, ಸಹಕಾರಿಗಳು: ಅಮ್ಮತ್ತಿ. Ammathi

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕುಟ್ಟಂಡ  ಕೆ. ವಿನು ಪೂವಯ್ಯ, ಸಹಕಾರಿಗಳು: ಅಮ್ಮತ್ತಿ. Ammathi


ಕುಟ್ಟಂಡ ಕೆ. ವಿನು ಪೂವಯ್ಯನವರು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ಕಾರ್ಮಾಡು  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಜನಸೇವೆ ಮಾಡುವ ಅಭಿಲಾಷೆಯಿಂದ 1990 ರಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಕುಟ್ಟಂಡ ಕೆ. ವಿನು ಪೂವಯ್ಯನವರು 2003ರಲ್ಲಿ ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ತದ ನಂತರ 2ನೇ ಅವಧಿಯ  ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾದರು. 3ನೇ ಅವಧಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ 4ನೇ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿ ಸುಮಾರು 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

2019-20ರ ಸಾಲಿನಲ್ಲಿ ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 40 ಲಕ್ಷ ಲಾಭವನ್ನು ಪಡೆದಿದ್ದು, 2020-21ರ ಸಾಲಿನಲ್ಲಿ 42.93 ಲಕ್ಷ ರೂಪಾಯಿಗಳಷ್ಟು ಲಾಭ ಪಡೆದುಕೊಂಡಿದೆ ಎಂದ ವಿನು ಪೂವಯ್ಯನವರು, 2019-20ರ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇಕಡ 21% ಡಿವಿಡೆಂಡ್‌ ನೀಡಲಾಗಿದೆ ಎಂದರು.

ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮುಖ್ಯವಾಗಿ ಪಿಗ್ಮಿ ಆಧಾರಿತ ಜಾಮೀನು ಸಾಲ ಹಾಗೂ ಆಭರಣ ಅಡಮಾನ ಸಾಲಗಳನ್ನು ನೀಡಿದರಿಂದ ಲಾಭದ ಹಾದಿಯಲ್ಲಿ ಸಾಗಲು ಕಾರಣವಾಗಿದೆ ಎಂದ ವಿನು ಪೂವಯ್ಯನವರು, ಅದರೊಂದಿಗೆ ವಾಹನ ಸಾಲ, ಮಧ್ಯಾಮಾವಧಿ ಸಾಲ, ಕೃಷಿ ಸಾಲ, ವೇತನ ಆಧಾರಿತ ಸಾಲ ಹಾಗೂ ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿರುವ ಸಾಲಗಳಿಂದ ಸಂಘ ಲಾಭ ಹೊಂದಿದೆ ಎಂದರು. ಹಾಗೆ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಸಕಾಲದ ಮರು ಪಾವತಿ ಹಾಗೂ ಗೊಬ್ಬರ ಮಾರಾಟ, ಕೃಷಿಪರಿಕರಗಳ ಮಾರಾಟದಿಂದಲೂ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಲಿದೆ ಎಂದು ಈ ಸಂದರ್ಭದಲ್ಲಿ ಕುಟ್ಟಂಡ ವಿನು ಪೂವಯ್ಯನವರು ತಿಳಿಸಿದರು.

ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 10000 ಸಾವಿರ ಚೀಲ ಕಾಫಿ ಹಾಗೂ 200‌ ಕ್ವಿಂಟಾಲ್ ಕಾಳು ಮೆಣಸನ್ನು ಬೆಳೆಗಾರರಿಂದ ಠೇವಣಿ ರೂಪದಲ್ಲಿ ಇಡಲಾಗಿದ್ದು, ಸರಿ ಸುಮಾರು ಈ ಅಡಮಾನವಿಟ್ಟ ಕಾಫಿ ಹಾಗೂ ಕಾಳುಮೆಣಸಿಗೆ 1 ಕೋಟಿ 50 ಲಕ್ಷ ದಷ್ಟೂ ಸಾಲವನ್ನು ನೀಡಲಾಗಿದೆ ಎಂದ ವಿನು ಪೂವಯ್ಯನವರು, ಈ ಹಿಂದೆ ನಷ್ಟದಲ್ಲಿ ಸಾಗುತ್ತಿದ್ದ ಸಂಘವು ಇದೀಗ ಪ್ರಗತಿಯತ್ತ ಸಾಗುತ್ತಿದೆ ಎಂದರು.

ಒಂದು ಸುಸಜ್ಜಿತ ಗೋದಾಮು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದ ವಿನು ಪೂವಯ್ಯನವರು, ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈ ಬಾರಿ 12000 ಸಾವಿರ ಚೀಲದಷ್ಟು ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಇನ್ನಷ್ಟು ಗೊಬ್ಬರ ಮಾರಾಟ ಮಾಡಲಾಗುವುದು ಎಂದರು. ಸಂಘದಿಂದ ಮೋದಿ ಕೇರ್‌ ಸ್ವದೇಶಿ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಗಿದ್ದು, ಅದು ಪ್ರಗತಿಯತ್ತ ಸಾಗಲು ಕ್ರಿಯಾ ಯೋಜನೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ವಿನು ಪೂವಯ್ಯನವರು ತಿಳಿಸಿದರು.

ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಎಂದ ವಿನು ಪೂವಯ್ಯನವರು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು. ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ನೀಡಿದರು.

ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಕುಟ್ಟಂಡ ವಿನು ಪೂವಯ್ಯನವರು,  ಕಾರ್ಮಾಡು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ಹಾಗೂ ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ವಿನು ಪೂವಯ್ಯನವರು, 2010ರಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಮ್ಮತ್ತಿ ರಾಯಲ್ಸ್ ರಿಕ್ರೀಯೇಷನ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಅಮ್ಮತ್ತಿ ಪ್ರೌಢ ಶಾಲೆಯ ಗೌರವ ಕಾರ್ಯದರ್ಶಿಗಳಾಗಿ ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಕುಟ್ಟಂಡ ಕೆ. ವಿನು ಪೂವಯ್ಯನವರು ಮಾಜಿ ಸೈನಿಕರಾಗಿದ್ದ   ದಿವಂಗತ ಕುಟ್ಟಂಡ ಕರುಂಬಯ್ಯ ಹಾಗೂ ದಿವಂಗತ ತಾಯಮ್ಮ ದಂಪತಿಗಳ ಮಗನಾಗಿದ್ದಾರೆ.  ಕುಟ್ಟಂಡ ಕೆ. ವಿನು ಪೂವಯ್ಯನವರ ಪತ್ನಿ ಲತಾ ಪೂವಯ್ಯ ಗೃಹಿಣಿ. ಮಕ್ಕಳಾದ ಸೋಮಣ್ಣ ಹಾಗೂ ಅಪ್ಪಚ್ಚು ಪದವಿ ವ್ಯಾಸಂಗ ನಿರತರಾಗಿದ್ದಾರೆ. ಕುಟ್ಟಂಡ ಕೆ. ವಿನು ಪೂವಯ್ಯನವರು ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ಗ್ರಾಮದಲ್ಲಿ ಪ್ರಸ್ತುತ ಕುಟುಂಬ ಸಮೇತ ನೆಲೆಸಿದ್ದಾರೆ. ಕುಟ್ಟಂಡ ವಿನು ಪೂವಯ್ಯನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”ವು  ಹಾರೈಸುತ್ತದೆ.


ಸಂದರ್ಶನ ದಿನಾಂಕ: 13-07-2021


Search Coorg Media

Coorg’s Largest Online Media Network 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.