ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu

ಅರೆಯಡ ಅಶೋಕ್ ಮುದ್ದಪ್ಪ, ಸಹಕಾರಿಗಳು: ನಾಪೋಕ್ಲು – Napoklu

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.


ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದವರಾದ ಅರೆಯಡ ಅಶೋಕ್ ಮುದ್ದಪ್ಪನವರು ಪ್ರಸ್ತುತ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2013ರಿಂದ 2018ರವರೆಗೆ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅರೆಯಡ ಅಶೋಕ್ ಮುದ್ದಪ್ಪನವರು 2018ರ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ತದನಂತರ 2020ರಿಂದ ಮರಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಿ ಸುಮಾರು 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೊಡಗು ಡಿ.ಸಿ.ಸಿ. ಬ್ಯಾಂಕಿನ ಪ್ರಸ್ತುತ ಉಪಾಧ್ಯಕ್ಷರಾಗಿರುವ ಕೇಟೋಳಿರ ಹರೀಶ್ ಪೂವಯ್ಯನವರು ಹಾಗೂ ಅವರ ಸ್ನೇಹಿತರ ಆವಾಹನೆಯ ಮೇರೆಗೆ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಲೆಂದು ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡಿರುವುದಾಗಿ ತಿಳಿಸಿದ ಅಶೋಕ್ ಮುದ್ದಪ್ಪನವರು ತಮ್ಮ ಚಿಕ್ಕಪ್ಪ ಅರೆಯಡ ಅಪ್ಪಾಜಿಯವರು ದಶಕಗಳ ಹಿಂದೆ ನಾಪೋಕ್ಲು ನಾಡು ಗ್ರಾಹಕರ ಸೇವಾ ಸೊಸೈಟಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ನನಗೆ ಸಹಕಾರ ಕ್ಷೇತ್ರದಲ್ಲಿ ತೋಡಗಿಸಿಕೊಳ್ಳಲು ಪ್ರೇರಣೆ ಎಂಬುದಾಗಿ ತಿಳಿಸಿದರು.

ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತನ್ನ ಅಧ್ಯಕ್ಷತಾವಧಿ 2019-20 ರಲ್ಲಿ 33 ಲಕ್ಷದ 67 ಸಾವಿರಗಳಷ್ಟು ಲಾಭಗಳಿಸಿರುವುದಾಗಿ ತಿಳಿಸಿದ ಅರೆಯಡ ಅಶೋಕ್ ಮುದ್ದಪ್ಪನವರು ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಆಧುನಿಕ ಅಕ್ಕಿ ಗಿರಣಿ, ಗೊಬ್ಬರ ಮಳಿಗೆಯ ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಸಂಘದಿಂದ ಸದಸ್ಯರು ಪಡೆದ ಸಾಲದ ಸಕಾಲ ಮರುಪಾವತಿ, ಹನಿ ನೀರಾವರಿಗೆ ಸಾಲ, ಕಾಫಿ ಕಣ ನಿರ್ಮಾಣದ ಸಾಲ, ಕೆರೆ ನಿರ್ಮಾಣದ ಸಾಲ, ಜಾಮೀನು ಸಾಲ, ಆಭರಣ ಸಾಲ ಹಾಗೂ ವಾಹನ ಸಾಲಗಳಿಂದ ಸಹಕಾರ ಸಂಘಕ್ಕೆ ಆದಾಯ ಬಂದಿದೆ ಎಂದು ತಿಳಿಸಿದರು.

ಉತ್ತಮ ಆಡಳಿತ ನಿರ್ವಹಣೆಗೆ ಕೊಡಗು ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯನ್ನು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಡೆದಿದೆ ಎಂದು ಅರೆಯಡ ಅಶೋಕ್ ಮುದ್ದಪ್ಪನವರು ತಿಳಿಸಿದರು. 2020ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಆರ್ಥಿಕ ಸ್ಪಂದನ ಕಾರ್ಯಕ್ರಮಕ್ಕೆ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಉತ್ತಮ ಸಹಕಾರ ಸಂಘ ಎಂದು ಪರಿಗಣಿಸಿ ಆಹ್ವಾನಿಸಲಾಯಿತು ಎಂದು ಈ ಸಂದರ್ಭ ತಿಳಿಸಿದರು.

ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿದೆ ಎಂದು ಅಧ್ಯಕ್ಷರಾದ  ಅರೆಯಡ ಅಶೋಕ್ ಮುದ್ದಪ್ಪ ನವರು ಈ ಸಂದರ್ಭದಲ್ಲಿ ತಿಳಿಸಿದರು.

ನಾಪೋಕ್ಲು ಪಟ್ಟಣದ ಬೇತು ರಸ್ತೆಯಲ್ಲಿರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾಗದಲ್ಲಿ ಸಿಮೆಂಟ್ ಮತ್ತು ಉಕ್ಕಿನ ದಾಸ್ತಾನು ಮಾರಾಟ ಮಳಿಗೆಯನ್ನು, ಅದೇ ರೀತಿ ಅದರ ಪಕ್ಕದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ಅಶೋಕ್ ಮುದ್ದಪ್ಪನವರು ತಿಳಿಸಿದರು. 

ಸಹಕಾರ ಸಂಘಗಳಲ್ಲಿ ಸಿಬ್ಬಂದಿಗಳ ನೇಮಕಾತಿ ಹಾಗೂ ಮುಂತಾದ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟ  ಅರೆಯಡ ಅಶೋಕ್ ಮುದ್ದಪ್ಪನವರು ಆಡಳಿತ ಮಂಡಳಿಯವರ ಪಾರದರ್ಶಕ ಆಡಳಿತದಿಂದ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರದಲ್ಲಿ ಯವಶಕ್ತಿ ಹೆಚ್ಚಾಗಿ ತೊಡಗಿಸಿಕೊಂಡು ಸೇವಾ ಮನೋಭಾವದಿಂದ ಸಹಕಾರ ಕ್ಷೇತ್ರವನ್ನು ನಿರಂತರ ಮುನ್ನಡೆಸುವಂತೆ ಆಗಬೇಕೆಂದು, ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಯುವಶಕ್ತಿಗೆ ತಮ್ಮ ಸಲಹೆಯನ್ನು ನೀಡಿದರು.

ಅರೆಯಡ ಅಶೋಕ್ ಮುದ್ದಪ್ಪನವರು ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಸೇವೆಸಲ್ಲಿಸುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ನಾಪೋಕ್ಲು ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ,   ನಾಲ್ಕು ನಾಡು ಪ್ಲಾಂಟರ್ಸ್ ಆಸೋಸಿಯೇಷನ್ ನಿರ್ದೇಶಕರಾಗಿ‌, ಮಡಿಕೇರಿ ಕೌಂಟಿ ಕ್ಲಬ್ ನಿರ್ದೇಶಕರಾಗಿ ಹಾಗೂ ಮಡಿಕೇರಿ ಕೊಡವ ಸಮಾಜ ರಿಕ್ರಿಯೇಶನ್ ಕ್ಲಬ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಕೃಷಿಕರಾಗಿದ್ದು, ಉದ್ಯಮಿಯಾಗಿರುವ ಅರೆಯಡ ಅಶೋಕ್ ಮುದ್ದಪ್ಪನವರು ತಂದೆ ದಿವಂಗತ ಅರೆಯಡ ಮುದ್ದಪ್ಪ ಹಾಗೂ ತಾಯಿ ಅರೆಯಡ ಮುತ್ತಮ್ಮ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ವೀಣಾ, ಇಂಜಿನಿಯರ್ ಪದವೀದರ ಮಗ ಬೋಪಯ್ಯ, ಎಂಎಸ್ಸಿ ವ್ಯಾಸಂಗ ಮಾಡುತ್ತಿರುವ ಮಗಳು ಇವರೊಂದಿಗೆ ಕುಟುಂಬ ಸಮೇತ ನಾಪೋಕ್ಲು ಗ್ರಾಮದ ಹಳೆ ತಾಲೂಕಿನ ಬಳಿ ಇರುವ ಶ್ರೀ ಭಗವತಿ ದೇವಾಲಯದ ಬಳಿ ನೆಲೆಸಿದ್ದಾರೆ. ಇವರ ಮುಂದಿನ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತಿದೆ.



ಸಂದರ್ಶನ ದಿನಾಂಕ: 16-03-2021



Search Coorg Media

Coorg’s Largest Online Media Network 


ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.