ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

Reading Time: 4 minutes

 ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಬಾಚರಣಿಯಂಡ ಸುಮನ್, ಸಹಕಾರಿಗಳು: ಚೇರಂಬಾಣೆ – Cherambane

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಡಿಕೇರಿ-ಭಾಗಮಂಡಲ ಹೆದ್ದಾರಿಯ ನಡುವೆ ಸಿಗುವ ಚೇರಂಬಾಣೆ ಪಟ್ಟಣದವರಾದ ಬಾಚರಣಿಯಂಡ ಸುಮನ್‌ರವರು ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

2001 ನೇ ಇಸವಿಯಲ್ಲಿ ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವವನ್ನು ಪಡೆದ ಸುಮನ್‌ರವರು 2008ರಿಂದ 2013, 2013 ರಿಂದ 2018 ಹಾಗೂ ಅಲ್ಲಿಂದ ಇದೀಗ ಮೂರನೇ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಚರಣಿಯಂಡ ಸುಮನ್‌ರವರು ಸತತ 12 ವರ್ಷಗಳಿಂದ ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜನಸೇವೆ ಮಾಡುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಾಚರಣಿಯಂಡ ಸುಮನ್‌ರವರು ಕಳೆದ 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20 ರ ಸಾಲಿನಲ್ಲಿ 13.48 ಲಕ್ಷ ಲಾಭವನ್ನು ಪಡೆದುಕೊಂಡಿದೆ ಎಂದ ಸುಮನ್‌ರವರು, ಸಕಾಲಕ್ಕೆ ಸಂಘದಿಂದ ಪಡೆದ ಸಾಲವನ್ನು ಸದಸ್ಯರು ಮರು ಪಾವತಿ ಮಾಡಿರುವುದು ಮುಖ್ಯ ಕಾರಣ ಎಂದರು. ಹಾಗೆಯೇ ಆಭರಣ ಸಾಲ, ಗೊಬ್ಬರ ಸಾಲ, ಮುಂತಾದ ಸಾಲಗಳಿಂದ ಆದಾಯ  ದೊರಕಿದ್ದು, ಸಹಕಾರ ಸಂಘದಿಂದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದರಿಂದಲೂ ಆದಾಯ ದೊರಕಿದೆ ಎಂದರು. ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿದ್ದು, ಪ್ರಗತಿಯತ್ತ ಸಾಗುತ್ತಿದೆ ಎಂದು ಸುಮನ್‌ರವರು ತಿಳಿಸಿದರು.

ಚೇರಂಬಾಣೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಿಂದ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರ ಉತ್ತಮವಾಗಿದೆ ಎಂದ ಸುಮನ್‌ರವರು, ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯ ಮುಖಾಂತರ ನಬಾರ್ಡ್ ಸಹಯೋಗದಿಂದ ಹೊಸದಾದ ಆಡಳಿತ ಕಚೇರಿ ಕಟ್ಟಡ, ಗೋದಾಮು ಕಟ್ಟಡ ಹಾಗೂ ಸಭಾಂಗಣವನ್ನು ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬಾಚರಣಿಯಂಡ ಸುಮನ್‌ರವರು ತಿಳಿಸಿದರು. ಹಾಗೆಯೆ ಚೇರಂಬಾಣೆಯ ಬಿ.ಬಾಡಗ ಗ್ರಾಮದಲ್ಲಿ ಚೇರಂಬಾಣೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 15 ಸೆಂಟ್ ಜಾಗವಿದ್ದು, ಅದರಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಸಮುದಾಯ ಭವನದ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದೆ ಎಂದು ಸುಮನ್‌ರವರು ತಿಳಿಸಿದರು.

ಸರ್ಕಾರದ ಕೆಲವೊಂದು ಸಹಕಾರ ಸಂಘಗಳ ಬಗ್ಗೆಗಿನ ಕಾನೂನುಗಳು ಸಹಕಾರ ಕ್ಷೇತ್ರ ಸುಗಮವಾಗಿ ಸಾಗಲು ಅಡಚಣೆಯಾಗುತ್ತಿದ್ದು, ಸರಕಾರದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಇರಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಬಾಚರಣಿಯಂಡ ಸುಮನ್‌ರವರು ತಿಳಿಸಿದರು. ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಸಿಬ್ಬಂದಿಗಳ ನೇಮಕಾತಿಯಿಂದ ಹಿಡಿದು ಸಹಕಾರ ಸಂಘಗಳ ಅಭಿವೃದ್ಧಿಗೆ ಸರಕಾರದಿಂದ ಪೂರ್ಣಪ್ರಮಾಣದ ಅಧಿಕಾರ  ದೊರಕುವಂತಾಗಬೇಕು ಎಂದು ಸುಮನ್ ಅಭಿಪ್ರಾಯಪಟ್ಟರು.

ಯುವಕರು ಹೆಚ್ಚು ಹೆಚ್ಚು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಹಕಾರ ಕ್ಷೇತ್ರವನ್ನು ಇ
ನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯೊಲು ಮುಂದೆ ಬರಬೇಕು ಎಂದ ಸುಮನ್‌ರವರು,

ನಿಸ್ವಾರ್ಥತೆಯಿಂದ ಹಾಗೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಹಕಾರ ಕ್ಷೇತ್ರಕ್ಕೆ  ಪಾದಾರ್ಪಣೆ ಮಾಡುವಂತಾಗಬೇಕು ಎಂಬುದು ಬಾವಿ ಯುವಶಕ್ತಿಗೆ ತಮ್ಮ ಸಲಹೆಯನ್ನು ನೀಡಿದರು.

ಈ ಬಾರಿ ನಮ್ಮ ಚೇರಂಬಾಣೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯುವ ಶಕ್ತಿಯೇ ಹೆಚ್ಚು ಸದಸ್ಯತ್ವವನ್ನು ಪಡೆದುಕೊಂಡಿರುವುದು ಯುವ ಶಕ್ತಿಯು ಸಹಕಾರ ಕ್ಷೇತ್ರದ ಬಗ್ಗೆ ಒಲವು ತೋರಿಸುತ್ತಿರುವ ಶುಭ ಲಕ್ಷಣವಾಗಿದೆ ಎಂದು ಬಾಚರಣಿಯಂಡ ಸುಮನ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಬಾಚರಣಿಯಂಡ ಸುಮನ್‌ರವರು ಕೊಡಗು ಬಿ.ಜೆ.ಪಿ.ಯ ಜಿಲ್ಲಾ ಸಮಿತಿ ಸದಸ್ಯರಾಗಿ, ಬಿ.ಜೆ.ಪಿ. ಶಕ್ತಿಕೇಂದ್ರದ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಸುಮನ್‌ರವರು,  ಸಾಮಾಜಿಕವಾಗಿ  ಕೊಳಗದಾಳು ಭಗವತಿ ದೇವಾಲಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗುನಾಡು ಸ್ಫೋರ್ಟ್ಸ್ ಅಂಡ್ ರಿಕ್ರಿಯೇಶನ್ ಅಸೋಶಿಯೇಶನ್ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 

ಮೂಲತಃ ಕೃಷಿಕರಾಗಿರುವ ಬಿ.ಕಾಂ. ಪದವೀಧರರಾದ ಸುಮನ್‌ರವರು ತಂದೆ ಪೊನ್ನಪ್ಪ, ತಾಯಿ ಮಲ್ಲಿಗೆ,  ಪತ್ನಿ ಮೇಘನಾರೊಂದಿಗೆ ಚೇರಂಬಾಣೆ ಪಟ್ಟಣದಲ್ಲಿ ನೆಲೆಸಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಆಶಿಸುತ್ತದೆ.


ಸಂದರ್ಶನ ದಿನಾಂಕ: 06-03-2021


Search Coorg Media

Coorg’s Largest Online Media Network 


Comments are closed.