ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ-ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಟ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ವೇದ ಕಾಲದಿಂದಲೂ ಸಹ­ಕಾರ­ ತತ್ವವು ನಮ್ಮ ದೇಶದಲ್ಲಿ ಪ್ರಾರಂಭ­ವಾಗಿದೆ. ಸಹಕಾರ ತತ್ವವು ಭಾರತದ ಕೊಡುಗೆಯಾಗಿದೆ. ಸಹಕಾರಿ ತತ್ವ ಬಹಳ ಹಿಂದಿನಿಂದಲೂ ಜನಪ್ರಿಯಗಳಿಸಿವೆ. ಜಾತಿ ರಹಿತ, ಶೋಷಣೆ ಮುಕ್ತ, ಸಮಾನತೆಯ ಸಮಾಜ ನಿರ್ಮಾಣದಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಸಹಕಾರ ಸಂಘಗಳು ಗ್ರಾಮೀಣರ ಮತ್ತು ಕೃಷಿಕರ ಅಭ್ಯುದ­ಯಕ್ಕೆ ಶ್ರೇಷ್ಠವಾದ ಕಾರ್ಯವನ್ನು ನಿರ್ವ­ಹಿಸುತ್ತಿದೆ.

ತಮ್ಮ ಜಮೀನುಗಳಲ್ಲಿ ರೈತರು ಒಬ್ಬರಿಗೊಬ್ಬರು ಪರಸ್ಪರ ಸಹಕಾರ ನೀಡುತ್ತಾ ಯಾವುದೇ ವೇತನವಿಲ್ಲದೆ ಕೃಷಿಚಟುವಟಿಕೆ ಪೂರ್ಣಗೊಳಿಸುತ್ತಿದ್ದರು. ಇದೇ ಸಹಕಾರ ತತ್ವದ ಮೂಲ ಎಂದರೆ ತಪ್ಪಾಗದು. ಅಸಂಘಟಿತ ವಲಯದ ಜನರನ್ನು ಸಂಘಟಿಸಿ, ಆಡಳಿತ ಮಂಡಳಿ ರಚಿಸಿಕೊಂಡು ಸದಸ್ಯರ ಅಭಿವೃದ್ಧಿಗೆ ಶ್ರಮಿಸುವುದೇ ಸಹಕಾರ ಸಂಘದ ಉದ್ದೆಶ. ವಸ್ತುನಿಷ್ಠ ಹಾಗೂ ನ್ಯಾಯಪರ­ವಾದ ಜನಸಾಮಾನ್ಯರ ಸಂಸ್ಥೆ ಸಹಕಾರಿ ಕ್ಷೇತ್ರವಾಗಿದೆ. ಇಲ್ಲಿ ಜನತೆಗೆ ನಿರಂತರ­ವಾದ ಉಪಯೋಗ ನೀಡುವುದು ಸಹಕಾರ ತತ್ವದ ಗುರಿಯಾಗಿದೆ. ನೇರ­ವಾಗಿ ಬಡಬಗ್ಗರಿಗೆ ವಿಫುಲವಾದ ಅನು­ಕೂಲತೆಯನ್ನು ಮಾಡುವ ಶ್ರೇಷ್ಠ ಕಾರ್ಯವನ್ನು ಸಂಘಗಳು ಮಾಡುವು­ದರಿಂದ ಇದು ಪವಿತ್ರ ಕ್ಷೇತ್ರವಾಗಿದೆ.

ಬ್ರಿಟಿಷರದು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರಾಗಿದ್ದ ಕಾಲದಲ್ಲೇ ಏಷಿಯಾ ಖಂಡದಲ್ಲಿ ಮೊದಲ ಸಹಕಾರಿ ಕೋಳಿ ಕೂಗಿದ್ದುದು, ಗದಗ ಜಿಲ್ಲೆಯಲ್ಲಿಯೇ ಎಂಬುದು ಗಮನಾರ್ಹ. ಕೇವಲ ಭಾರತದಲ್ಲಷ್ಟೆ  ಅಲ್ಲ, ಇಡೀ ಏಷಿಯಾ ಖಂಡದಲ್ಲೇ ಸಹಕಾರ ಚಳುವಳಿಯ ಉಗಮಕ್ಕೆ ನಾಂದಿ ಹಾಡಿದ ಗದಗ ಜಿಲ್ಲೆ ಈಗಲೂ ಸಹಕಾರಿ ಕಾಶಿ ಅನ್ನಿಸಿಕೊಂಡಿದೆ.

ಇತಿಹಾಸದಲ್ಲಿ ಮಹತ್ವದ ದಾಖಲೆಯೋಂದಿಗೆ ದೇಶದಲ್ಲಿ ಪ್ರಥಮ ಕೃಷಿ ಪತ್ತಿನ ಸಹಕಾರ ಸಂಘ ಗದಗ ತಾಲೂಕಿನ ಕಣಗಿನಹಾಳದಲ್ಲಿ 1905 ಮೇ 8ರಂದು ಸ್ಥಾಪನೆಯಾದುದು ಜಗತ್ತಿನ ಸಹಕಾರ ಚಳುವಳಿಯ ಇತಿಹಾಸದಲ್ಲಿ ಮಹತ್ವದ ದಾಖಲಾಗಿದೆ. ಅಂದು ಸಂಘವನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಎಂಬುವರು ಭಾರತದ ಸಹಕಾರಿ ಪಿತಮಹಾರಾಗಿದ್ದಾರೆ. 

(ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ)


ಕಣಗಿನಹಾಳದಲ್ಲಿ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದ ಹದಿನಾಲ್ಕು ದಿನಗಳಲ್ಲೆ ಅಂದರೆ ಮೇ 22, 1905 ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಕುರಾದ ಗೌಡ್ನಮನೆ ಪಿ. ದೊಡ್ಡಯ್ಯ ನೇತೃತ್ವದಲ್ಲಿ ಭಾರತದ ಎರಡನೇ ಹಾಗೂ ಕೊಡಗು ಜಿಲ್ಲೆಯ ಪ್ರಥಮ ಸಹಕಾರ ಸಂಘವು ಸ್ಥಾಪಿಸಲ್ಪಟ್ಟಿತು. ನಂತರ ಒಂದೆರಡು  ದಿನಗಳಲ್ಲೆ ಗದಗದ ಹುಲಕೋಟಿಯಲ್ಲಿ ವ್ಯಯಸಾಯ ಸೇವಾ ಸಹಕಾರ ಸಂಘವೊಂದು ಅಸ್ತಿತ್ವಕ್ಕೆ ಬಂತು. ಈ ರೀತಿ ಸ್ವಾತಂತ್ರ‍್ಯ ಪೂರ್ವದಲ್ಲೇ ಸಹಕಾರಿ ಆಂದೋಲನ ಬೆಳೆದು ಬಂದು ಕರ್ನಾಟಕದಾದ್ಯಂತ ಆ ಮೂಲಕ ದೇಶದಾದ್ಯಂತ ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡು ಇಂದು ಸಹಕಾರ ಚಳುವಳಿ ಬೃಹತ್ ಆಂದೋಲನವಾಗಿ ಬೆಳೆದಿದೆ.

ಅಲ್ಲಿಂದ ನಂತರ ಜಿಲ್ಲೆ, ರಾಜ್ಯ ಹಾಗೂ ದೇಶದಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳು ಪ್ರಾರಂಭಗೊಂಡು 115 ವರ್ಷಗಳು ಕಳೆದಿವೆ.  ಸಹಕಾರ ಸಂಘಗಳು ಸ್ಥಾಪನೆಯಾಗಲು ಮೂಲ ಕಾರಣ ಬಂಡವಾಳಶಾಹಿಗಳು.  ಜನರ ಬೇಡಿಕೆಗೆ
ಅನುಗುಣವಾಗಿ ಸಾಲ ಸೌಲಭ್ಯಗಳನ್ನು ಹೆಚ್ಚಿನ ಬಡ್ಡಿಯನ್ನು ಪಡೆಯುವುದರ ಮೂಲಕ ಗ್ರಾಮೀಣ ಜನರಿಗೆ ನೀಡುತ್ತಾ ಅವರ ಶೋಷಣೆಯನ್ನು ಮಾಡಿ ತಾನು ಶ್ರೀಮಂತನಾಗಿಯೇ ಉಳಿದು ಬಡ ಜನತೆ ಇನ್ನಷಟ್ಟು ಬಡತನದಲ್ಲೆಯೇ ಕಳೆಯುವಂತಾಯಿತು. ಇದನ್ನು ಮನಗಂಡು ನಮ್ಮ ಹಿರಿಯರು ಶೋಷಣೆಯನ್ನು ತಪ್ಪಿಸುವ ಸಲುವಾಗಿ ಸಹಕಾರ ಸಂಘವನ್ನು ತಾವೇ ಬಂಡವಾಳ ಹಾಕುವುದರ ಮೂಲಕ ಸಂಘವನ್ನು ಸ್ಥಾಪಿಸಿ ಜನರ ಬೇಡಿಕೆಗನುಗುಣವಾಗಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತಾಯಿತು.  

ಇಂದು ಸಹಕಾರ ಕ್ಷೇತ್ರವು ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ವ್ಯಾಪಿಸಿ ಬಡಜನರ ಬೇಕು ಬೇಡಿಕಗಳನ್ನು ಪೂರೈಸುವ ಏಕಮಾತ್ರ ಸಂಸ್ಥೆಯಾಗಿ ಬೆಳೆದು ನಿಂತಿದೆ.  ಇಂದು ವಿವಿಧ ರೀತಿಯ ಸಹಕಾರ ಸಂಘಗಳು ಸ್ಥಾಪಿಸಲ್ಪಟ್ಟು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.

67 ವರ್ಷಗಳ ಜನತೆಗೆ ಸಹಕಾರ ಮತ್ತು ತತ್ವ ಆಚರಣೆಯಲ್ಲಿ ನಿರ್ಧಿಷ್ಟ ಅರಿವು ಇರಲಿಲ್ಲ.  ಸಹಕಾರ ಪದ್ದತಿಯ ಬಗ್ಗೆ ವಿಶ್ವಾಸವಿರಲಿಲ್ಲ.  ಚಳುವಳಿ ಆರಂಭವಾಗಿ 50 ವರ್ಷಗಳೇ ಕಳೆದಿದ್ದರೂ ಸಹಕಾರ ವ್ಯವಸ್ಥೆ ಭದ್ರ ಬುನಾದಿಯ ಮೇಲೆ ನಿಂತಿರಲಿಲ್ಲ. ಆದ್ದರಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯವೊಂದನ್ನು ಗಮನದಲ್ಲಿರಿಸಿಕೊಂಡು ಅದರ ಮೇಲೆ ಹಿಡಿತ ಸಾಧಿಸಲು ಯಶಸ್ಸುಗಳಿಸಲು ಸತತವಾಗಿ, ನಿರಂತರ ನವೆಂಬರ್ 14 ರಿಂದ 20 ರವರೆಗೆ 7 ದಿನಗಳ ಅವಧಿಯಲ್ಲಿ ಈ ಪ್ರಯತ್ನ ನಡೆಯುವ ಕಾರಣದಿಂದ ಸಪ್ತಾಹ ಎನ್ನುತ್ತೇವೆ.

1952 ರಲ್ಲಿ ಅಂತರರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ ಕೈಗೊಂಡ ನಿರ್ಣಯವು 1953 ರಿಂದ ಜಾರಿಗೆ ಬಂದಿರುತ್ತದೆ.  ಇದರ ಅಂಗ ಸಂಸ್ಥೆಯಾಗಿ ಭಾರತ ರಾಷ್ಟ್ರೀಯ ಸಹಕಾರಿ ಯೂನಿಯನ್ ಭಾರತದಾದ್ಯಂತ ಸಪ್ತಾಹದಾಚರಣೆಗೆ ವ್ಯವಸ್ಥೆ ಮಾಡಲಾರಂಭಿಸಿತು.  ವಿವಿಧ ರಾಜ್ಯಗಳ ಸಹಕಾರ ಸಂಸ್ಥೆಗಳು ರಾಜ್ಯ ಸಹಕಾರ ಯೂನಿಯನ್‌ನ ಸಲಹೆಯನ್ನು ಮಾನ್ಯ ಮಾಡಿ ಸಪ್ತಾಹದ ಆಚರಣೆಯನ್ನು ಆರಂಭಿಸಿದವು.

ಲೇಖಕರು: ವಿವೇಕ್ ನರೇನ್


Search Coorg Media

Coorg’s Largest Online Media Network 

kodagu sahakara

Comments are closed.