ದೇಚೂರು ಶ್ರೀ ರಾಮ ಮಂದಿರ
ಮಡಿಕೇರಿ, ಕೊಡಗು
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಹಬ್ಬದ ದಶಮಂಟಪಗಳಲ್ಲಿ 2ನೇ ಹಾಗೂ ಪ್ರಮುಖ ದೇಗುಲವಾದ ದೇಚೂರು ಶ್ರೀ ರಾಮ ಮಂದಿರ ದಸರಾ ಸಮಿತಿ ಸುಮಾರು 105 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ.
ಹಿನ್ನಲೆ – ಇತಿಹಾಸ
ಈ ದೇಗುಲವು ಓಂಕಾರೇಶ್ವರ ದೇಗುಲದಿಂದ ಪೂರ್ವಕ್ಕೆ ಅನತಿ ದೂರದಲ್ಲಿದೆ. ಪ್ರಸ್ತುತ `ದೇಚೂರು ಶ್ರೀರಾಮವಿದ್ಯಾಗಣಪತಿ ದೇವಸ್ಥಾನ’ ಎಂದು ಕರೆಯಲ್ಪಡುತ್ತಿರುವ ಈ ದೇವಾಲಯವು ಒಂದು ರೀತಿಯಲ್ಲಿ ಪುರಾತನ ಇತಿಹಾಸವುಳ್ಳ ನವೀನ ದೇಗುಲ. ಸುಮಾರು ಒಂದು ಶತಮಾನಗಳಷ್ಟು ಹಿಂದಿನ ಮಾತು. ನಗರದ ದೇಚೂರಿನಲ್ಲೊಂದು ಪುಟ್ಟ ಭಜನಾ ಮಂದಿರ. ಅಲ್ಲಿ ರಾಮಾಂಜನೇಯ ಸೇರಿದಂತೆ ಇನ್ನಿತರ ದೇವತೆಗಳ ಚಿತ್ರ ಪಟಗಳು ಮಾತ್ರ ಇದ್ದವು. ಯಾವ ವಿಗ್ರಹವು ಇರಲ್ಲಿಲ್ಲ. ಆದರೆ ಪ್ರತಿ ಶನಿವಾರದಂದು ಅಲ್ಲಿ ಹಬ್ಬದ ಸಂಭ್ರಮ. ನೂರಾರು ಮಂದಿ ಸೇರಿ ಏಕ ಕಂಠದಲ್ಲಿ ಭಜನೆ ಹಾಡುತ್ತಿದ್ದರು. ಇಂತಹ ದೇಗುಲದ ವತಿಯಿಂದ 89 ವರ್ಷಗಳ ಹಿಂದೆ ದಸರಾ ಉತ್ಸವ ಮಂಟಪವನ್ನು ಹೊರತರುವ ಸಂಪ್ರದಾಯ ಆರಂಭವಾಯಿತು. ಅಂದು ದೇಚೂರಿನಿಂದಲೇ ಹೊರಡುತ್ತಿದ್ದ ಮತ್ತೊಂದು ಮಂಟಪ `ರಘುರಾಮ ಮಂದಿರ’ದ ಮಂಟಪ. ದಸರಾ ಉತ್ಸವದಿಂದಲೇ ಪ್ರಮುಖವಾಗಿ ಗುರುತಿಸಲ್ಪಡುವ ದೇಚೂರು ಶ್ರೀರಾಮ ಮಂದಿರದ ದಸರಾ ಮಂಟಪವು ಹಲವು ದಶಕಗಳ ಹಿಂದೆ ಮಣಿಮಂಟಪಗಳಾಗಿ ಹೊರಡುತ್ತಿದ್ದವು 12 ಅಥವಾ 16 ಕಂಬಗಳ ಮಣಿಮಂಟಪಗಳನ್ನು ತಯಾರಿಸುವ ಕಾರ್ಯ ದಸರಾ ಉತ್ಸವಕ್ಕಿಂತ 3 ತಿಂಗಳ ಮುಂಚಿನಿಂದಲೇ ಆರಂಭವಾಗುತ್ತಿದ್ದವು. ಕಂಬಗಳ ಮೇಲೆ ಸುಂದರ ಕೆತ್ತನೆ ಇರುತ್ತಿತ್ತು. ಮದ್ರಾಸ್(ಚೆನೈ)ನಿಂದ ತರಿಸಿದಂತ ನೀಲಿ, ಹಸಿರು ಮತ್ತು ಬಿಳಿ ಬಣ್ಣದ ಸಣ್ಣ-ಸಣ್ಣ ಮಣಿಗಳನ್ನು ಪೋಣಿಸಿ ಕಲಾತ್ಮಕವಾಗಿ ಆ ಕಂಬಗಳಿಗೆÀ ಜೋಡಿಸಲಾಗುತ್ತಿತ್ತು. ಈ ಕಾರ್ಯದಲ್ಲಿ ಮಣಿ, ತಗಡು ಮತ್ತು ವ್ಯಾಂಡಂನ ಬಳಕೆಯಾಗುತ್ತಿತ್ತು. ಮಂಟಪದ ನಾಲ್ಕು ಮೂಲೆಗೂ `ತಂಡ ಮಾಲೆ’ ಗಳಿಂದ ಅಲಂಕರಿಸಲಾಗುತ್ತಿತ್ತು. ಹೀಗೆ ಸರ್ವಲಾಂಕೃತವಾದ ಮಂಟಪದಲ್ಲಿ ದೇವರ ಚಿತ್ರ ಪಟವಿರುತ್ತಿತ್ತು. ಜೊತೆಗೆ ಚಾಮರ ಬೀಸಲು ಪುಟಾಣಿ ಬಾಲಕಿಯರೊಂದಿಗೆ 8 ಮಂದಿ ಮಂಟಪವನ್ನು ಹೊತ್ತು ಸಾಗುತ್ತಿದ್ದರು. ದೇಚೂರು ಶ್ರೀರಾಮಮಂದಿರವು ಶಿಥಿಲಾವಸ್ಥೆಯನ್ನು ತಲುಪಿದಾಗ ಅದನ್ನು ಬೇರೆಡೆಗೆ ವರ್ಗಾಹಿಸುವ ಚಿಂತನೆ ನಡೆದು, ದೇಗುಲದಿಂದ ಅನತಿ ದೂರದಲ್ಲಿ ಹೊಸÀ ದೇಗುಲದ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ದಾನಿಗಳ ಸಹಕಾರದಿಂದ ಇಂದು ದೇಚೂರಿನಲ್ಲಿ ಸುಂದರ ದೇವಾಲಯವೊಂದು ನಿರ್ಮಾಣಗೊಂಡು 17 ವರ್ಷಗಳು ಕಳೆದಿವೆ. ಇಲ್ಲಿ ಶ್ರೀರಾಮ ಮತ್ತು ಬಲಮುರಿ ಗಣಪತಿಯು ನಿತ್ಯ ಪುಜಿಸಲ್ಪಡುತ್ತಿರುವ ದೈವಗಳು. ಜೊತೆಗೆ ನವಗ್ರಹ ಮತ್ತು ನಾಗದೇವತೆಯ ಪ್ರತಿಷ್ಠಾಪನೆ ಸಹ ನಡೆದಿದೆ. ನಿತ್ಯ ಪೂಜೆಯೊಂದಿಗೆ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ
ಮಂಟಪದ ವಿವರಗಳು – 2024
106 ನೇ ವರ್ಷದ ಆಚರಣೆ
ಕಥೆ:
ತೀರ್ಪಿನ ಸಮಯ :
ಸ್ಥಳ:
ಅಧ್ಯಕ್ಷರು:
ಕಥಾ ನಿರ್ವಹಣೆ:
ಲೈಟಿಂಗ್ ಬೋರ್ಡ್ :
ಒಟ್ಟು ಕಲಾಕೃತಿಗಳು:
ಕಲಾ ಕೃತಿನಿರ್ಮಾಣ:
ಧ್ವನಿವರ್ಧಕ ಸ್ಟುಡಿಯೋ ಲೈಟ್ :
ಫೈರ್ ವರ್ಕ್ಸ್:
ಟ್ರ್ಯಾಕ್ಟರ್ ಸೆಟ್ಟಿಂಗ್ :
ಸ್ಪೆಷಲ್ ಎಫೆಕ್ಸ್ :
ಒಟ್ಟು ವೆಚ್ಚ:
ಫ್ಲಾಟ್‍ಫಾರಂ ಸೆಟ್ಟಿಂಗ್:
ಒಟ್ಟು ಸದಸ್ಯರು: 150
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ
ಮಂಟಪದ ವಿವರಗಳು – 2023
105 ನೇ ವರ್ಷದ ಆಚರಣೆ
ಕಥೆ: ವಿಷ್ಣುವಿನಿಂದ ಮಧುಬೈಟಬರ ಸಂಹಾರ
ತೀರ್ಪಿನ ಸಮಯ : 11.00 P.M
ಸ್ಥಳ: ಆಂಜನೇಯ ದೇವಾಲಯ ಮುಂಭಾಗ
ಅಧ್ಯಕ್ಷರು: ವಿ . ವೇಣುಗೋಪಾಲ್
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ಪ್ರೊಫೆಷನಲ್ ಲೈಟ್ &ಸೌಂಡ್ಸ್ ಮಡಿಕೇರಿ
ಒಟ್ಟು ಕಲಾಕೃತಿಗಳು: 13
ಕಲಾ ಕೃತಿನಿರ್ಮಾಣ: ಜೆ. ಪಿ. ಆರ್ಟ್ ಮಂಗಳೂರು (14 ಕಲಾಕೃತಿ)
ಧ್ವನಿವರ್ಧಕ ಸ್ಟುಡಿಯೋ ಲೈಟ್ : ಕಿಂಗ್ಸ್ ಆಫ್ ಮ್ಯೂಸಿಕ್ ಬೆಂಗಳೂರು
ಫೈರ್ ವರ್ಕ್ಸ್: ಕಮಿಟಿ
ಟ್ರ್ಯಾಕ್ಟರ್ ಸೆಟ್ಟಿಂಗ್ : ಅನಿಲ್ ಕುಮಾರ್ & ಟೀಮ್
ಸ್ಪೆಷಲ್ ಎಫೆಕ್ಸ್ : ಸಸ್ಪೆನ್ಸ್
ಒಟ್ಟು ವೆಚ್ಚ: 10 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಅನಿಲ್ ಕುಮಾರ್ & ಟೀಮ್
ಒಟ್ಟು ಸದಸ್ಯರು: 150
ಮಂಟಪದ ವಿವರಗಳು – 2022
104 ನೇ ವರ್ಷದ ಆಚರಣೆ
ಕಥೆ: ವಿಷ್ಣುವಿನಿಂದ ಮಧುಬೈಟಬರ ಸಂಹಾರ
ತೀರ್ಪಿನ ಸಮಯ : 11.00 P.M
ಸ್ಥಳ: ಆಂಜನೇಯ ದೇವಾಲಯ ಮುಂಭಾಗ
ಅಧ್ಯಕ್ಷರು: ವಿ . ವೇಣುಗೋಪಾಲ್
ಕಥಾ ನಿರ್ವಹಣೆ: ಸಮಿತಿ ಸದಸ್ಯರು
ಲೈಟಿಂಗ್ ಬೋರ್ಡ್ : ದಿಂಡಿಗಲ್‌ನ ಜೇಮ್ಸ್
ಒಟ್ಟು ಕಲಾಕೃತಿಗಳು: 13
ಕಲಾ ಕೃತಿನಿರ್ಮಾಣ: ಮಂಗಳೂರಿನ ಜೆ.ಪಿ. ಆರ್ಟ್ಸ್
ಧ್ವನಿವರ್ಧಕ ಸ್ಟುಡಿಯೋ ಲೈಟ್ : ಹುಬ್ಬಳ್ಳಿಯ ಕ್ರಿಷ್ ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ : ಪುಣ್ಯ ಕ್ರಿಯೆಟಿವ್ ಕೂರ್ಗ್ ತಂಡ
ಸ್ಪೆಷಲ್ ಎಫೆಕ್ಸ್ :
ಒಟ್ಟು ವೆಚ್ಚ: 15 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಮಡಿಕೇರಿಯ ಅನಿಲ್ ಕುಮಾರ್
ಒಟ್ಟು ಸದಸ್ಯರು: 100
ದೇಚೂರು ಶ್ರೀ ರಾಮ ಮಂದಿರ ದಸರಾ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
ಮಂಟಪದ ವಿವರಗಳು – 2021
103 ನೇ ವರ್ಷದ ಆಚರಣೆ
ಕಥೆ: ” ಹನುಮಂತ ಸುರಸೆಯ ಪರಾಜಯ ಕಥಾ ಸಾರಾಂಶ ಕಲಾಕೃತಿ
ಪ್ರದರ್ಶನ ಸಮಯ ಮತ್ತು ಸ್ಥಳ:
ಅಧ್ಯಕ್ಷರು:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಆರ್ಚ್‌ಲೈಟಿಂಗ್ಸ್ ಬೋರ್ಡ್:
ಸೌಂಡ್ಸ್:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಚಲನವಲನ:
ಕಲಾಕೃತಿ ನಿರ್ಮಾಣ:
ಫ್ಲಾಟ್‍ಫಾರಂ ಸೆಟ್ಟಿಂಗ್:
ಒಟ್ಟು ಸದಸ್ಯರು: 160
ಮಂಟಪದ ವಿವರಗಳು – 2019
101 ನೇ ವರ್ಷದ ಆಚರಣೆ
ಕಥೆ: ” ಪಂಚಮುಖಿ ಆಂಜನೇಯನ ವಿಶ್ವ ರೂಪದೊಂದಿಗೆ ಶ್ರೀ ರಾಮನನ್ನು ಕೊದಂಡರಾಮ ನಾದ ಸಾರಂಶ”
ಪ್ರದರ್ಶನ ಸಮಯ ಮತ್ತು ಸ್ಥಳ: ರಾತ್ರಿ
ಅಧ್ಯಕ್ಷರು: ಹೆಚ್.ಬಿ. ವಿಜಯ ಕುಮಾರ್
ಕಥಾ ನಿರ್ವಹಣೆ: ಕೃಷ್ಣ ಭಟ್, ಪುತ್ತೂರು
ಸ್ಟುಡಿಯೋ ಸೆಟ್ಟಿಂಗ್ಸ್: ಅನಿಲ್ ವಾಸುದೇವ್, ಬೆಂಗಳೂರು
ಆರ್ಚ್‌ಲೈಟಿಂಗ್ಸ್ ಬೋರ್ಡ್: ಜೇಮ್ಸ್, ದಿಂಡ್‌ಗಲ್
ಸೌಂಡ್ಸ್: ಕುಮರೇಶನ್, ಬೆಂಗಳೂರು
ಒಟ್ಟು ಕಲಾಕೃತಿಗಳು: 14
ಒಟ್ಟು ವೆಚ್ಚ: 14 ಲಕ್ಷ
ಚಲನವಲನ: ಸಮಿತಿ ಸದಸ್ಯರು
ಕಲಾಕೃತಿ ನಿರ್ಮಾಣ: ಶಿವ, ಮೈಸೂರು
ಫ್ಲಾಟ್‍ಫಾರಂ ಸೆಟ್ಟಿಂಗ್: ಚಾರ್ಲಿ ಮತ್ತು ತಂಡ
ಒಟ್ಟು ಸದಸ್ಯರು: 160
2018
ಮಂಟಪದ ವಿವರಗಳು – 2018
100 ನೇ ವರ್ಷದ ಆಚರಣೆ
ಕಥೆ: ಪಂಚಮುಖಿ ಆಂಜನೇಯನ ದರ್ಶನ
ಅಧ್ಯಕ್ಷರು: ತೀರ್ಥಾನಂದ
ಆರ್ಚ್ ಲೈಟಿಂಗ್ ಬೋರ್ಡ್ : ಯಶವಂತ್ ಮಡಿಕೇರಿ
ಕಥಾ ನಿರ್ವಹಣೆ: ಸಮಿತಿಯಿಂದ
ಸೌಂಡ್ಸ್ : ಪೂಕೋಡ್ ಬ್ಯಾಂಡ್ ಸೆಟ್
ಒಟ್ಟು ಕಲಾಕೃತಿಗಳು: 1
ಒಟ್ಟು ವೆಚ್ಚ: 3 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಆನಂದ್, ಚಾರ್ಲಿ ಮತ್ತು ತಂಡ
ಒಟ್ಟು ಸದಸ್ಯರು: 60
ಸಂದರ್ಶನ – 2018
2017
ಮಂಟಪದ ವಿವರಗಳು – 2017
ಅಧ್ಯಕ್ಷರು: ಆನಂದ್.ಕೆ.ಎಸ್
ಕಥೆ: ಶ್ರೀ ಕೃಷ್ಣನಿಂದ ದೇವೇಂದ್ರನ ಗರ್ವಭಂಗ
ಆರ್ಚ್ ಲೈಟಿಂಗ್ಸ್ ಬೋರ್ಡ್: ಕೆ.ಎಸ್. ಪ್ರಮೋದ್ ಮತ್ತು ಬಿ.ಎಸ್. ನಂದಕುಮಾರ್, ಪುಣ್ಯ ಫ್ಯಾಬ್ರಿಕೇಷನ್ ಮಡಿಕೇರಿ ಒಟ್ಟು ಕಲಾಕೃತಿಗಳು: 12
ಒಟ್ಟು ವೆಚ್ಚ: 9 ಲಕ್ಷ
ಕಥಾ ನಿರ್ವಹಣೆ: ಕೆ.ಎಸ್. ಪ್ರಮೋದ್ ಮತ್ತು ಬಿ.ಎಸ್. ನಂದಕುಮಾರ್, ಪುಣ್ಯ ಫ್ಯಾಬ್ರಿಕೇಷನ್ ಮತ್ತು ಸಮಿತಿ ಸದಸ್ಯರು
ಸ್ಟುಡಿಯೋ ಸೆಟ್ಟಿಂಗ್ಸ್: ಕೆ.ಎಸ್. ಪ್ರಮೋದ್ ಮತ್ತು ಬಿ.ಎಸ್. ನಂದಕುಮಾರ್, ಪುಣ್ಯ ಫ್ಯಾಬ್ರಿಕೇಷನ್ ಮಡಿಕೇರಿ
ಫ್ಲಾಟ್‍ಫಾರಂ ಸೆಟ್ಟಿಂಗ್: ಚಾರ್ಲಿ, ಆನಂದ್ ಮತ್ತು ತಂಡ ಮಡಿಕೇರಿ.
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಕೆ.ಎಸ್. ಪ್ರಮೋದ್ ಮತ್ತು ಬಿ.ಎಸ್. ನಂದಕುಮಾರ್, ಪುಣ್ಯ ಫ್ಯಾಬ್ರಿಕೇಷನ್ ಮತ್ತು ಸಮಿತಿ ಸದಸ್ಯರು
ಚಲನವಲನ: ಕೆ.ಎಸ್. ಪ್ರಮೋದ್ ಮತ್ತು ಬಿ.ಎಸ್. ನಂದಕುಮಾರ್, ಪುಣ್ಯ ಫ್ಯಾಬ್ರಿಕೇಷನ್ ಮತ್ತು ಸಮಿತಿ ಸದಸ್ಯರು
ಸೌಂಡ್ಸ್: ಬೆಂಗಳೂರು
ಕಲಾಕೃತಿ ನಿರ್ಮಾಣ: ಪುಣ್ಯ ಫ್ಯಾಬ್ರಿಕೇಷನ್ ಮತ್ತು ಸಮಿತಿ ಸದಸ್ಯರು
ಒಟ್ಟು ಸದಸ್ಯರು: 60
ಸಂದರ್ಶನ – 2017