• Search Coorg Media

“ಸರ್ಚ್‌ ಕೂರ್ಗ್‌ ಮೀಡಿಯಾ” ಗ್ರಾಮೀಣ ಪತ್ರಿಕೋದ್ಯಮದಲ್ಲಿ‌ ಕೃಷಿ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಸಾವಿರಾರು ಚಂದಾದಾರರೊಂದಿಗೆ, searchcoorg.com ಈಗ ಅತಿದೊಡ್ಡ ಹಾಗೂ ಅತಿ ವಿಸ್ತರಾವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿ ಪರಿಣಮಿಸಿದೆ.

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ

ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿû, ಕಾಳುಮೆಣಸು, ಅಡಿಕೆ ಮತ್ತು ಶುಂಠಿ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯ ರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.

ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತು, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡಿ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಮೈಲುತುತ್ತ್ತು ಅಂದರೆ ಶುದ್ಧ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ದವಾಗಿ ಕೆಲಸ ಮಡುತ್ತದೆ. ಘನ ಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲಿಕ್ಕೆ ಬರುವುದಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೂಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯಾವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೆÇೀಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಗಲೂ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ.

ಬೋರ್ಡೊ ದ್ರಾವಣದ ಅನುಕೂಲಗಳು:- ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು. ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು. ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು. ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾಮಾಗಳು ತುಂಬಾ ಕಡಿಮೆ.

ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು (100 ಲೀಟರ್ ನೀರು): ಮೈಲುತುತ್ತ 1 ಕೆ.ಜಿ., ಸುಣ್ಣ 1 ಕೆ.ಜಿ., ನೀರು 100 ಲೀಟರ್, ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್, 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್, 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್

ತಯಾರಿಕೆ ವಿಧಾನ: ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ ಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಸರಿಯಾದ ಶೇ.1 ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ:-ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುುಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪರಣೆಗೆ ಸೂಕ್ತ ಎಂದು ತಿಳಿಯಬಹುದು.

ಕಿತ್ತಳೆ ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕಿತ್ತಳೆ ಬಣ್ಣದ ಲಿಟ್‍ಮಸ್ ಕಾಗದವು ತಿಳಿನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು: ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.

ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು. ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ. ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು. ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು. ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ಪ್ರಮುಖ ತೋಟದ ಬೆಳೆಗಳ ರೋಗ ನಿರ್ವಹಣೆಯಲ್ಲಿ ಶೇ. 1 ರ ಬೋರ್ಡೊ ದ್ರಾವಣದ ಬಳಕೆ: ಬೆಳೆಗಳು ಕಾಫಿû-ಕೊಳೆ ರೋಗ, ತುಕ್ಕು ರೋಗ, ಅಡಿಕೆ-ಕೊಳೆರೋಗ, ಸುಳಿಕೊಳೆರೋಗ, ತೆಂಗು ಸುಳಿಕೊಳೆರೋಗ, ಕಾಂಡದಿಂದ ರಸಸೋರುವ ರೋಗ, ಕಾಳು ಮೆಣಸು-ಶೀಘ್ರ ಸೊರಗು ರೋಗ,ಚಿಬ್ಬು ರೋಗ (ಕೊತ್ತು ಉದುರುವುದು), ಶುಂಠಿ-ಗೆಡ್ಡೆ ಕೊಳೆರೋಗ, ಎಲೆಚುಕ್ಕೆರೋಗ.

ಈ ರೀತಿಯಾಗಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ರೈತರು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಉತ್ತಮ ರೀತಿಯಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ನ್ನು ಸಂಪರ್ಕಿಸಬಹುದು.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ; ಭತ್ತ ಸಸಿಮಡಿ ಕಾರ್ಯಕ್ಕೆ ಸಿದ್ಧತೆ

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ; ಭತ್ತ ಸಸಿಮಡಿ ಕಾರ್ಯಕ್ಕೆ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯ ಆರಂಭವಾಗಿದೆ. ಸೋಮವಾರಪೇಟೆ ತಾಲ್ಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಗುರಿ ಇದ್ದು, ಇದರಲ್ಲಿ ಈಗಾಗಲೇ ಶೇ.10 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ 30,400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಸಕಾಲದಲ್ಲಿ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲ್ಲಿ ದಾಸ್ತಾನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 2,600 ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಬಿತ್ತನೆ ಬೀಜ ಅಗತ್ಯವಿದ್ದು, ಈಗಾಗಲೇ 950 ಕ್ವಿಂಟಾಲ್ ಭಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ರಾಜು ಅವರು ಮಾಹಿತಿ ನೀಡಿದ್ದಾರೆ.

ಕೃಷಿಕರು ಭತ್ತ ಸಸಿಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವುದು ಸೂಕ್ತವಾಗಿದೆ. ಪ್ರತಿ ಕೆ.ಜಿ.ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್(ಕಾರ್ಬನ್‍ಡೈಜಿಂ) ಶಿಲೀಂದ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವುದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವುದು ಒಳಿತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ.

ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತಿ ಒಂದು ಕೆ.ಜಿ.ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು, ಮೊಳಕೆ ಬಂದ ನಂತರ ಸಸಿ ಮಡಿಯಲ್ಲಿ ಬಿತ್ತನೆ ಮಾಡುವುದು. ಹೀಗೆ ಮಾಡುವುದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಗಟ್ಟಬಹುದಾಗಿದೆ.

ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655 ತಳಿ ಭತ್ತಗಳನ್ನು ಜೂನ್ 10 ರಿಂದ 20 ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ ಮೂರನೇ ಅಥವಾ 4ನೇ ವಾರದಲ್ಲಿ ಬಿತ್ತನೆ ಮಾಡುವುದು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ.

ರಸಗೊಬ್ಬರ ದಾಸ್ತಾನು:-ಜಿಲ್ಲೆಯ ಸಹಕಾರ ಸಂಘ ಹಾಗೂ ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ಡಿ.ಎ.ಪಿ, ಎಂ.ಒ.ಪಿ, ಹಾಗೂ 17:17:17, 15:15:15, 10;26:26. ಹೀಗೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರಾಜು ಅವರು ಮಾಹಿತಿ ನೀಡಿದ್ದಾರೆ.

ಮುಳಿಯ ಜ್ಯುವೆಲ್ಸ್‌ನ ವಿನೂತನ ಹೆಜ್ಜೆ: ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ

ಮುಳಿಯ ಜ್ಯುವೆಲ್ಸ್‌ನ ವಿನೂತನ ಹೆಜ್ಜೆ:

ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ

ಖ್ಯಾತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಗ್ರಾಹಕರಿಗಾಗಿ ಮನೆಯಿಂದಲೇ ಚಿನ್ನಾಭರಣ ಖರೀದಿಸುವ ಲೈವ್ (Jewellery Live Shopping from Home) ಕಾರ್ಯಕ್ರಮವನ್ನು ಆರಂಭಿಸಿದೆ.

ಈ ನೂತನ ಸೌಲಭ್ಯದ ಉದ್ಘಾಟನೆಯು ಜೂಮ್‌ ಆಪ್‌ ಮುಖಾಂತರ ಜೂನ್ 10 ರಂದು ಸಂಜೆ 5:30ಕ್ಕೆ ರೇ. ವಿಜಯ್ ಹಾರ್ವಿನ್, ಸಂಚಾಲಕರು, ಸುದಾನ ವಸತಿಯುತ ಶಾಲೆ, ಪುತ್ತೂರು ಇವರಿಂದ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯ್ ಹಾರ್ವಿನ್, ಸದಾ ಹೊಸತನಕ್ಕೆ ಎಲ್ಲರ ಮನೆಮಾತಾಗಿರುವ ಆಭರಣ ಮಳಿಗೆ ಮುಳಿಯ ಜುವೆಲ್ಸ್. ಗ್ರಾಹಕರಿಗಾಗಿ ಚಿನ್ನಾಭರಣಗಳ ವರ್ಚುವಲ್‌ ಶೋರೂಂನಲ್ಲಿ ಲೈವ್‌ ಖರೀದಿ ಸೌಲಭ್ಯದಂತಹ ನೂತನ ಸೌಲಭ್ಯವನ್ನು ಪರಿಚಯಿಸುತ್ತಿದೆ. ಕೊರೋನಾ ನಂತರದ ಜವಾಬ್ದಾರಿಯಲ್ಲಿ ವ್ಯವಹರಿಸುವ ನಿಟ್ಟಿನಲ್ಲಿ ನೀವು ಮನೆಯಿಂದಲೇ ಲೈವ್ ಮೂಲಕ ಆಭರಣ ಖರೀದಿಸುವ ಹೊಸ ಯೋಜನೆ‌ಯೊಂದನ್ನು ಮುಳಿಯ ಜ್ಯವೆಲ್ಸ್‌ನಿಂದ ರೂಪಿಸಿರುವುದು ಒಂದು ವಿನೂತನ ಪ್ರಯೋಗ ಎಂದರು. ಇವರ ಈ ಕಾರ್ಯಕ್ಕೆ ಆ ಭಗವಂತನು ಎಲ್ಲಾ ರೀತಿಯ ಅನುಗ್ರಹ ನೀಡಲಿ ಎಂದು ಆಶೀರ್ವಾವಾದಿಸಿದರು.

ಪ್ರಥಮ ಖರೀದಿದಾರರಾಗಿ ಶ್ರೀಮತಿ ಅನುಪಮಾ ಶಿವರಾಮ್ ಇವರು ಆನ್‍ಲೈನ್ ಮೂಲಕ ಭಾಗವಹಿಸಿ ಹಲವಾರು ಆಭರಣಗಳನ್ನು ಮುಳಿಯದ 5 ಶೋರೂಂಗಳಲ್ಲಿ ವೀಕ್ಷಿಸಿ ಕೆಲವೊಂದನ್ನು ಆಯ್ಕೆ ಮಾಡಿ ಇಟ್ಟುಕೊಂಡರು. ತದ ನಂತರ ವಿವಿಧ ಕಡೆಗಳಲ್ಲಿದ್ದ ತಮ್ಮ ಕುಟುಂಬ ವರ್ಗದವರೊಂದಿಗೆ ಚರ್ಚಿಸಿ ತಮ್ಮ ಕುಟುಂಬವರ್ಗಕ್ಕೆ ಇಷ್ಟವಾದ ಆಭರಣಗಳನ್ನು ಆನ್‌ಲೈನ್‌ ಮುಖಾಂತರ ಖರೀದಿಸಿದರು.

ನಂತರ ಮಾತನಾಡಿದ ಶ್ರೀಮತಿ ಅನುಪಮಾ ಶಿವರಾಮ್ ಆನ್‌ಲೈನ್‌ ವರ್ಚುವಲ್‌ ಶೋರೂಂನಲ್ಲಿ ಲೈವ್‌ ಖರೀದಿ ಸೌಲಭ್ಯ ಒಂದು ಅದ್ಬುತವಾದ ಅನುಭವವನ್ನು ನೀಡಿದೆ. ಕುಟುಂಬ ಸಮೇತ 5 ಶೋರೂಂಗಳಲ್ಲಿ ನಾವಿದ್ದಲ್ಲೇ ಆಭರಣಗಳನ್ನು ವೀಕ್ಷಿಸಿ ಈ ಕೋರಾನಾ ಕಾಲದಲ್ಲಿ ಅವಕಾಶ ದೊರೆತದ್ದು ತುಂಬಾ ಉಪಯುಕ್ತವಾಯಿತು ಎಂದರು. ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ತುಂಬಾ ಸುಲಭವಾದ ಮಾರ್ಗ ಎಂದು ಅಭಿಪ್ರಾಯಪಟ್ಟರು.

ಶ್ರೀಮತಿ ಅನುಪಮಾ ಶಿವರಾಮ್ ‌ರವರ ಪತಿ ಶಿವರಾಮ್‌ ಮಾತನಾಡಿ ನಮಗೆ ಒಂದು ಕಾರ್ಯಕ್ರಮದ ನಿಮಿತ್ತ ಆಭರಣದ ಅಗತ್ಯ ತುರ್ತಾಗಿ ಬೇಕಾಗಿತ್ತು. ಆದರೆ ಶೋರೂಂಗಳಿಗೆ ಕುಟುಂಭ ಸಮೇತ ಖುದ್ದಾಗಿ ಭೇಟಿಕೊಟ್ಟು ಖರೀದಿಸಲು ಕೊರೋನಾ ನಮಗೆ ತಡೆಯಾಗಿತ್ತು. ಹಾಗಾಗಿ ಮುಳಿಯ ಜ್ಯವೆಲ್ಸ್‌ನಿಂದ ಚಿನ್ನಾಭರಣಗಳ ವರ್ಚುವಲ್‌ ಶೋರೂಂನಲ್ಲಿ ಲೈವ್‌ ಖರೀದಿ ಸೌಲಭ್ಯ ನಮಗೆ ತುಂಬಾ ಸಹಾಯಕವಾಯಿತು ಎಂದರು.

ಪ್ರಾಸ್ತವಿಕವಾಗಿ ಮುಳಿಯ ಜ್ಯುವೆಲ್ಸ್‌ನ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮಾತನಾಡಿ Online ಖರೀದಿಯ ವಿನೂತನ ಹೆಜ್ಜೆಯ ಪರಿಕಲ್ಪನೆ ಯಾವ ರೀತಿಯಲ್ಲಿ ಪ್ರಾರಂಭಿಸಲು ಪ್ರೇರಪಣೆ ನೀಡಿತ್ತು ಎಂದರೆ “Necessity is the mother of invention” (ಅವಶ್ಯಕತೆಯು ಆವಿಷ್ಕಾರದ ತಾಯಿ) ಹಾಗೇಯೆ ಆಭರಣ ವ್ಯಾಪಾರದಲ್ಲೂ ಕೂಡಾ ನಾವು ಈ Necessity (ಅವಶ್ಯಕತೆ) ಯಿಂದಲೇ ವಿನೂತನ ಹೆಜ್ಜೆಗಳನ್ನು ಹಾಕುತ್ತಾ ಬಂದಿದ್ದೇವೆ ಎಂದರು. “ಈಗಾಗಲೇ ದಿನಕ್ಕೆ ಹಲವಾರು ಮಂದಿ ನಮ್ಮ ವರ್ಚುವಲ್ ಶೋರೂಂನ ಲೈವ್ Online ಖರೀದಿಯನ್ನು ಇಷ್ಟಪಟ್ಟು ನಮ್ಮನ್ನು ಹುರಿದುಂಬಿಸಿ ಹರಸಿದ್ದಾರೆ. ಕೊರೊನಾ ಜೊತೆ ಬದುಕಬೇಕಾದದ್ದು “ಹೊಸ ಸಾಮಾನ್ಯ ಜೀವನ” ಆಗಿರುವುದರಿಂದ ಇದು ಖಂಡಿತಾ ಅಗತ್ಯ” ಎಂದು ಮುಳಿಯದ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮುಳಿಯರವರು ನುಡಿದರು.

ಗ್ರಾಹಕರು ತಮ್ಮ ತಮ್ಮ Mobile/ Tab/ Google meet/ Zoom/ Whatsapp/ Video chat ಮೂಲಕ Online ಮಳಿಗೆಯನ್ನು Laptop/Mobile ನಲ್ಲಿ ಕಣ್ಣೆದುರು ನೋಡಿ ಆಭರಣಗಳ ಶ್ರೇಣಿಯನ್ನು ಆನಂದಿಸಬಹುದು. ಸೇಲ್ಸ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ ಆಭರಣಗಳ ಕುರಿತು ಸಂಪೂರ್ಣ ವಿವರ, ಪ್ರಾತ್ಯಕ್ಷಿಕೆ ಪಡೆಯಬಹುದು. ಹಾಗೆಯೇ ಗೂಗಲ್‌ ಪೇ, ಪೇಟಿಯಂ, ಮುಂತಾದ Online ಪಾವತಿಯಂತಹ ವ್ಯವಸ್ಥೆಯ ಮುಖಾಂತರ ಮಾಡಿ ಇನ್‌ಸ್ಯೂರ್‌ ಕೊರಿಯರ್‌ ಮೂಲಕ ಆಭರಣವನ್ನು ತಮ್ಮ ತಮ್ಮ ಮನೆಯಲ್ಲಿಯೇ ಕೂತು ಪಡೆಯಬಹುದು. ಎಂದು ಮುಳಿಯದ ಚೇರ್ಮನ್ ಶ್ರೀ ಕೇಶವ ಪ್ರಸಾದ್ ಮುಳಿಯರವರು ನುಡಿದರು.

ಮುಳಿಯ ಜ್ಯುವೆಲ್ಸ್ ಅವರಿಂದ ನಿಮ್ಮ ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ, ಮನೆಯಿಂದಲೇ ಚಿನ್ನ ಖರೀದಿಸುವ ವ್ಯವಸ್ಥೆಯಿಂದ 65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಪುಟಾಣಿಗಳನ್ನು ಮನೆಯಿಂದಲೇ ಚಿನ್ನಾಭರಣ ಖರೀದಿಯಲ್ಲಿ ತೊಡಗಿಸುವುದರಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಮನೆಯಿಂದಲೇ ಲೈವ್ ಆಭರಣ ಖರೀದಿಯು ಪ್ರಾಯೋಗಿಕವಾಗಿ ಸಫಲವಾಗಿದ್ದು, ಗ್ರಾಹಕರ ಮೆಚ್ಚುಗೆಯನ್ನು ಪಡೆಯುತ್ತಿದೆ. “ನಿಮ್ಮ ಮುಳಿಯ ಜಸ್ಟ್‌ ಒಂದು ಕಾಲ್‌ನಲ್ಲಿ” ನಿಮ್ಮ ಬಳಿಯೆ ಇದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ಶ್ರೀ ಕೇಶವ ಪ್ರಸಾದ್ ಮುಳಿಯರವರು ಗ್ರಾಹಕರಲ್ಲಿ ಮನವಿ ಮಾಡಿಕೊಂಡರು.

ಮುಳಿಯ ಜ್ಯುವೆಲ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಸರ್ವರನ್ನೂ ಸ್ವಾಗತಿಸಿದರು. ಸೌಜನ್ಯ ಹೆಗ್ಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ತಾಂತ್ರಿಕ ಸಲಹೆ ಜೆ.ಸಿ. ಶಿವಪ್ರಸಾದ್ ನೀಡಿದರು. ಗುರುರಾಜ್‌ ವಂದನಾರ್ಪಣೆ ಮಾಡಿದರು. ಜೂಮ್‌ ಆಪ್‌ ಮುಖಾಂತರದ ಈ ಆನ್‌ಲೈನ್ ಕಾರ್ಯಕ್ರಮದಲ್ಲಿ ಮುಳಿಯ ಜ್ಯುವೆಲ್ಲರ್‍ಸ್ ನ ಸ್ಥಾಪಕ ಶ್ಯಾಮ್‌ಭಟ್ ಮುಳಿಯ, ಮುಳಿಯ ಜ್ಯುವೆಲ್ಸ್‌ನ ಪುತ್ತೂರು, ಮಡಿಕೇರಿ, ಗೋಣಿಕೊಪ್ಪಲು, ಬೆಳ್ತಂಗಡಿ ಹಾಗೂ ಬೆಂಗಳೂರಿನ ಶೋರೂಂನ ಸಿಬ್ಬಂದಿಗಳು, ಹಲವಾರು ಗ್ರಾಹಕರು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.

ಮುಳಿಯ ಜ್ಯುವೆಲ್ಸ್‌ನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ನ್ನು ಕ್ಲಿಕ್‌ ಮಾಡಿ. https://muliya.in/

ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ – ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ

ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ:

-ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ

ಹೋಂಸ್ಟೇಗಳನ್ನು ಅವಲಂಬಿಸಿಕೊಂಡು ಜೀವನ ಸಾಗಿಸುವುದು ಕೂಡ ಬದುಕಿನ ಒಂದು ಹಕ್ಕಾಗಿದ್ದು, ಇದನ್ನು ಕಸಿದುಕೊಳ್ಳುವುದಕ್ಕಾಗಿ ಪಿತೂರಿ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ಕಳೆದ ಎರಡೂವರೆ ತಿಂಗಳ ಲಾಕ್‌ಡೌನ್‌ನಿಂದಾಗಿ ಹೋಂಸ್ಟೇಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ವರ್ಷಗಳ ಅತಿವೃಷ್ಟಿಯಿಂದಲೂ ಸಾಕಷ್ಟು ನಷ್ಟವಾಗಿದೆ. ಹೋಂಸ್ಟೇಗಳನ್ನು ತೆರೆಯಲು ಸರ್ಕಾರವೇ ಅನುಮತಿ ನೀಡಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಅತಿಥಿ ಸತ್ಕಾರವನ್ನು ಮಾಡಲಿದ್ದೇವೆ. ಕಷ್ಟ, ನಷ್ಟಗಳ ನಡುವೆ ಹೋಂಸ್ಟೇಗಳನ್ನು ಆರಂಭಿಸದೇ ಇದ್ದರೆ ಇವುಗಳನ್ನೇ ನಂಬಿರುವ ನೌಕರ ವರ್ಗದ ಕುಟುಂಬ ಬೀದಿಗೆ ಬರುತ್ತದೆ ಎಂದು ನುಡಿದರು.

ಡಿಸೆಂಬರ್ ಅಂತ್ಯದವರೆಗೆ ಕೊಡಗಿನ ಹೋಂಸ್ಟೇಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಹೇಳಿಕೆ ನೀಡಿರುವವವರು ಹೋಂಸ್ಟೇಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ಮಾಲಕರು ಹಾಗೂ ನೌಕರರಿಗೆ ಆಗುವ ಸಂಪೂರ್ಣ ನಷ್ಟವನ್ನು ಭರಿಸುವುದಾದರೆ ಹೋಂಸ್ಟೇಗಳನ್ನು ಮುಚ್ಚಲು ಸಿದ್ಧವೆಂದು ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಜಿ.ಅನಂತಶಯನ ಈ ಸಂದರ್ಭ ಹೇಳಿದರು.

ಕೊಡಗಿನ ಹೋಂಸ್ಟೇಗಳು ಸ್ಥಳೀಯ ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಲಾ ಪ್ರಕಾರ, ಪ್ರಕೃತಿ, ಕೃಷಿ ಮತ್ತು ಆಹಾರ ಪದ್ಧತಿಯನ್ನು ಪರಿಚಯಿಸುತ್ತಿದೆ. ಹೋಂಸ್ಟೇ ಪರಿಕಲ್ಪನೆ ಮಾಲಕನ ದುಡಿಮೆಯ ಬೆವರ ಹನಿಯಿಂದ ಸಾಕಾರಗೊಳ್ಳುತ್ತಿದೆಯೇ ಹೊರತು ಸರ್ಕಾರದಿಂದ ಯಾವುದೇ ನೆರವುಗಳು ದೊರೆಯುತ್ತಿಲ್ಲ. ನಾವು ಸರ್ಕಾರಕ್ಕೆ ನ್ಯಾಯಯುತವಾಗಿ ತೆರಿಗೆ ಪಾವತಿಸುತ್ತಿದ್ದೇವೆ, ಆದರೆ ಹೇಳಿಕೆಗಳನ್ನು ನೀಡುವವರು ತೆರಿಗೆ ಪಾವತಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ದಿಢೀರ್ ಆಗಿ ನಾಯಕರಾಗಬೇಕೆನ್ನುವ ಕಾರಣಕ್ಕೆ ವಿತಂಡವಾದದಲ್ಲಿ ತೊಡಗಿರುವಂತೆ ಕಂಡು ಬರುತ್ತಿರುವವರು, ದೊಡ್ಡ ದೊಡ್ಡ ರೆಸಾರ್ಟ್‌ಗಳ ಪರ ಮಾತನಾಡುವವರು ಮಧ್ಯಮ ವರ್ಗ ನಡೆಸುವ ಹೋಂಸ್ಟೇಗಳ ವಿರುದ್ಧ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಯಾವುದೋ ಲಾಭದ ದುರುದ್ದೇಶ ಅಡಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅನಂತಶಯನ ಆರೋಪಿಸಿದರು.

ಹೋಂಸ್ಟೇಗಳಿಗಿಂತ ರೆಸಾರ್ಟ್ ಮತ್ತು ಲಾಡ್ಜ್‌ಗಳಲ್ಲಿ ಆರೋಗ್ಯ ವರ್ಧಕ ವ್ಯವಸ್ಥೆಗಳಿಗೆ ವೆಚ್ಚ ಹೆಚ್ಚಾಗುತ್ತದೆ. ಹೋಂಸ್ಟೇಗಳಲ್ಲಿ ೨ ರಿಂದ ೫ ಕೋಣೆಗಳು ಮಾತ್ರ ಇರುವುದರಿಂದ ಕೋವಿಡ್ ೧೯ ಸಂಬಂಧಿತ ಮುಂಜಾಗ್ರತಾ ಕ್ರಮಗಳಿಗೆ ಮತ್ತು ಪರೀಕ್ಷೆಗೆ ಹೆಚ್ಚಿನ ವೆಚ್ಚವಾಗುವುದಿಲ್ಲ. ಈಗಾಗಲೇ ಅಧಿಕೃತ ಹೋಂಸ್ಟೇಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸುರಕ್ಷಾ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ರಾಜ್ಯದ ಪ್ರವಾಸೋದ್ಯಮದ ಚೇತರಿಕೆಗೆ ಅಗತ್ಯ ರೂಪುರೇಷಗಳನ್ನು ಸಿದ್ಧಪಡಿಸುವ ಸಂದರ್ಭ ಸರ್ಕಾರ ಸುಮಾರು ೧೪ ಜಿಲ್ಲೆಗಳಿಗೆ ಆದ್ಯತೆ ನೀಡಿದೆ. ಪ್ರವಾಸಿತಾಣಗಳು ಇಲ್ಲದ ಪ್ರದೇಶಗಳನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಆದರೆ ಜನಪ್ರಿಯ ಪ್ರವಾಸಿತಾಣಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಕೊಡಗು ಜಿಲ್ಲೆಯನ್ನೇ ಕೈಬಿಡಲಾಗಿದೆ ಎಂದು ಅನಂತಶಯನ ಬೇಸರ ವ್ಯಕ್ತಪಡಿಸಿದರು.

ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ, ಚರಂಡಿಗಳು ನಿರ್ಮಾಣಗೊಳ್ಳುತ್ತವೆ. ಅಲ್ಲದೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರ ಲಾಭವನ್ನು ಜಿಲ್ಲೆಯ ಎಲ್ಲರೂ ಪಡೆಯುತ್ತಾರೆ, ಆದರೆ ಪ್ರವಾಸಿಗರಿಗೆ ಆತಿಥ್ಯ ನೀಡಿದ ಹೋಂಸ್ಟೇ ಮಾಲಕರಿಗೆ ಯಾವುದೇ ಲಾಭವಿಲ್ಲವೆಂದು ಅವರು ಪ್ರತಿಪಾದಿಸಿದರು.

ಆದರೆ ವಿನಾಕಾರಣ ಹೋಂಸ್ಟೇಗಳ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಮುಂದೊಂದು ದಿನ ಬಂದ ಅತಿಥಿಗಳ ಮೇಲೆ ದೌರ್ಜನ್ಯ ನಡೆದರೆ ಹೇಳಿಕೆ ನೀಡಿದವರೇ ಹೊಣೆ ಹೊರಬೇಕಾಗುತ್ತದೆ ಎಂದೂ ಅನಂತಶಯನ ಎಚ್ಚರಿಕೆ ನೀಡಿದರಲ್ಲದೆ, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಒಂದು ಕಾಲದಲ್ಲಿ ಕಾಫಿ ಬೆಲೆ ಕುಸಿದಾಗ ಕೆಲವು ಬೆಳೆಗಾರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಆರಂಭಿಸಿದ ಹೋಂ ಸ್ಟೇ ಉದ್ಯಮ ಬಹಳಷ್ಟು ಮಂದಿಯ ಬದುಕಿಗೆ ಆಸರೆಯಾಗಿತ್ತು. ಕೊಡಗಿನ ಆರ್ಥಿಕತೆ ನಿಂತಿರುವುದು ಕೇವಲ ಪ್ರವಾಸೋದ್ಯಮ ಹಾಗು ಕಾಫಿಯ ಮೇಲೆ. ಪ್ರವಾಸೋದ್ಯಮ ಅದೆಷ್ಟರ ಮಟ್ಟಿಗೆ ಕೊಡಗಿನ ಮಣ್ಣಿನಲ್ಲಿ ಹೊಕ್ಕಿದೆ ಎಂದರೆ, ಇಲ್ಲಿನ ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೋಂ ಸ್ಟೇ ಗಳು, ಕಾಣುತ್ತವೆ.

ಸುದ್ದಿಗೋಷ್ಟಿಯಲ್ಲಿ ಸದಸ್ಯೆ ಶಶಿಮೊಣ್ಣಪ್ಪ, ಪದಾಧಿಕಾರಿ ಅಂಬೆಕಲ್ಲು ನವೀನ್ ಕುಶಾಲಪ್ಪ, ಪದಾಧಿಕಾರಿ ಮೋಂತಿಗಣೇಶ್ ಹಾಜರಿದ್ದರು.

ಮಡಿಕೇರಿ ತಾಲ್ಲೂಕು ಎಪಿಎಂಸಿ ಚುನಾವಣೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ ಮತ್ತು ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧ ಆಯ್ಕೆ

ಮಡಿಕೇರಿ ತಾಲ್ಲೂಕು ಎಪಿಎಂಸಿ ಚುನಾವಣೆ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ ಮತ್ತು ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧ ಆಯ್ಕೆ

ಮಡಿಕೇರಿ ಜೂ.06: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಹೆರವನಾಡು ಗ್ರಾಮದ ಬೆಪ್ಪುರನ ಮೇದಪ್ಪ ಅಧ್ಯಕ್ಷರಾಗಿ ಹಾಗೂ ಹೊದ್ದೂರು ಗ್ರಾಮದ ವಾಂಚೀರ ಜಯ ನಂಜಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರು ಘೋಷಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ನಡೆದ ಮೂರನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಅವಿರೋಧ ಆಯ್ಕೆ ಸಂಬಂಧಿಸಿದಂತೆ ತಹಶೀಲ್ದಾರರು ಪ್ರಕಟಿಸಿದರು.

ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆರವನಾಡು ಗ್ರಾಮದ ಬೆಪ್ಪುರನ ಮೇದಪ್ಪ ಅವರು ನಾಮಪತ್ರ ಸಲ್ಲಿಸಿ ಮುಂದಿನ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜೊತೆಗೆ ಉಪಾಧ್ಯಕ್ಷರಾಗಿ ಹೊದ್ದೂರು ಗ್ರಾಮದ ವಾಂಚೀರ ಜಯ ನಂಜಪ್ಪ ಅವರು ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷರಾದ ಬೆಪ್ಪುರನ ಮೇದಪ್ಪ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗುವುದು. ಜೊತೆಗೆ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಲಾಗುವುದು. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲಾಗುವುದು ಎಂದು ಅವರು ತಿಳಿಸಿದರು.

ಉಪಾಧ್ಯಕ್ಷರಾದ ವಾಂಚೀರ ಜಯ ನಂಜಪ್ಪ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ರೈತರಿಗೆ ಅನುಕೂಲವಾಗುವಂತೆ ಕಾಯನಿರ್ವಹಿಸುವುದಾಗಿ ಅವರು ತಿಳಿಸಿದರು. ಜೊತೆಗೆ ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ವಿನೂತ ರೀತಿಯಲ್ಲಿ ಅನುಕೂಲ ಮಾಡಿಕೊಡುವುದಾಗಿ ವಾಂಚೀರ ಜಯ ನಂಜಪ್ಪ ಅವರು ತಿಳಿಸಿದರು.

ಮಡಿಕೇರಿ ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ಜಿ.ಪಂ.ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಗಿರೀಶ್ ಪೂಣಚ್ಚ, ಮೊಂಡಂಡ ಕುಟ್ಟಪ್ಪ, ಹೇಮಾ, ನಿರ್ಮಲಾ, ತಮ್ಮಯ್ಯ, ಚಂಡೀರ ಜಗದೀಶ್, ಎನ್.ಎ ಕಾವೇರಪ್ಪ, ಚೆರಿಯಮನೆ ರೋಹಿಣಿ, ದೇವಪ್ಪ, ಅನಂತೇಶ್ವರ, ಅಂಬಿ ಕಾರ್ಯಪ್ಪ ಇತರರು ಇದ್ದರು.

ಕಾಳುಮೆಣಸು ಸಸ್ಯ ಅರೋಗ್ಯ ನಿರ್ವಹಣೆಗೆ ಬಗ್ಗೆ ಕೆವಿಕೆ ಸಲಹೆ

ಕಾಳುಮೆಣಸು ಸಸ್ಯ ಅರೋಗ್ಯ ನಿರ್ವಹಣೆಗೆ ಬಗ್ಗೆ ಕೆವಿಕೆ ಸಲಹೆ

ಮುಂಗಾರು ಇನ್ನೇನು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿದೆ. ಮಣ್ಣು ತೇವಾಂಶದಿಂದ ಕೂಡಿರುತ್ತದೆ. ರೈತರುಗಳು ತಮ್ಮ ತಮ್ಮ ಬೆಳೆಗಳಿಗೆ ಗೊಬ್ಬರ ಕೊಡಲು ಸೂಕ್ತ ಸಮಯವಾಗಿದ್ದು, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರು ಕಾಳು ಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಸೂಕ್ಷ್ಮಾಣು ಜೀವಿಗಳ ಗೊಬ್ಬರವನ್ನು ಬಳಸಲು ಶಿಪಾರಸ್ಸು ಮಾಡಿದ್ದಾರೆ. ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿ ಮಾಡಿದೆ.

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯ ಪ್ರಾಮುಖ್ಯತೆ ಪಡೆದಿರುತ್ತವೆ. ಪ್ರಸ್ತುತ ಸೂಕ್ಷ್ಮಾಣು ಜೀವಿಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರೆತೆಯಿಂದಾಗಿ ಸೂಕ್ಷ್ಮಾಣು ಜೀವಿಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆ ನೀಗಿಸಲು ಮತ್ತು ಒಂದೇ ರೀತಿಯ ಸೂಕ್ಷ್ಮಾಣು ಜೀವಿಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರುರವರು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುತ್ತಾರೆ.

ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಲಭ್ಯವಿದ್ದು ಜಿಲ್ಲೆಯ ರೈತರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಕೋರಿದೆ.

ಸೂಕ್ಷ್ಮಾಣು ಜೀವಿಗಳ ಸಮೂಹದ ಉಪಯೋಗಗಳು: ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆ ಹೊಂದಿರುತ್ತದೆ.

ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ.

ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ, ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬೀಜೋಪಚಾರ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ರೈತರು ಸುಲಭವಾಗಿ ಬಳಸಬಹುದು.

ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲದೆ ರೈತರು ವಿವಿಧ ಬೆಳೆಗಳಿಗೆ ಬಳಸಬಹುದು. ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಬಳಸುವ ವಿಧಾನ: ಕೊಟ್ಟಿಗೆ ಗೊಬ್ಬರ ಅಥವಾ ಕಹಿಬೇವಿನ ಹಿಂಡಿಗೆ ಸೇರಿಸುವ ವಿಧಾನ: 5 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 2 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 100 ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು.

ಬೆಳೆಗಳಿಗೆ ನೇರವಾಗಿ ಉಪಯೋಗಿಸುವ ವಿಧಾನ: 4 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ, ಒಂದು ಕೆ.ಜಿ ಬೆಲ್ಲ, 10 ಲೀಟರ್ ಗಂಜಳ ಮತ್ತು 10 ಕೆ.ಜಿ ಸಗಣಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 12 ಗಂಟೆಗಳ ಕಾಲ ಇಟ್ಟು ಕಾಳುಮೆಣಸಿನ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್‍ನಷ್ಟು) ಮೇ-ಜೂನ್, ಆಗಸ್ಟ್-ಸೆಪ್ಟಂಬರ್ ಮತ್ತು ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಸುರಿಯಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು ದೂರವಾಣಿ: 08274-247274 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ

ಸರಕಾರದ ನೂತನ ಸುತ್ತೋಲೆ ಸಹಕಾರ ಸಂಘಗಳಿಗೆ ಮಾರಕ: ಬಲ್ಲಾರಂಡ ಮಣಿ ಉತ್ತಪ್ಪ

ಸಹಕಾರ ಸಂಘಗಳ ರೈತ ಸದಸ್ಯರಿಗೆ ನೀಡುವ ಸಾಲವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ರುಪೇ ಕಾರ್ಡ್ ಮೂಲಕವೇ ವಿತರಿಸಬೇಕೆಂದು ಸಹಕಾರ ಇಲಾಖೆ ಇತ್ತೀಚೆಗೆ ಹೊರಡಿಸಿರುವ ನೂತನ ಸುತ್ತೋಲೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಈ ನೂತನ ನೀತಿಯಿಂದ ಸಹಕಾರ ಸಂಘಗಳು ಕೇವಲ ಡಿಸಿಸಿ ಬ್ಯಾಂಕ್‌ನ ಏಜೆಂಟರಂತೆ ಕಾರ್ಯನಿರ್ವಹಣೆ ಮಾಡುವ ಪರಿಸ್ಥಿತಿ ಎದುರಾಗಿದ್ದು, ರೈತರ ಕೃಷಿ ಜೀವನಕ್ಕೆ ಸಹಕಾರಿಯಾಗಿರುವ ಸಹಕಾರ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ ತರಬಲ್ಲ ಸರಕಾರದ ಈ ಕ್ರಮಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.

ಈ ಸಂಬಂಧವಾಗಿ ಈಗಾಗಲೇ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಸೇರಿದಂತೆ ಸರಕಾರ ಪ್ರಮುಖರಿಗೆ ಮನವಿ ಸಲ್ಲಿಸಲಾಗಿದ್ದು, ರೈತರಿಗೆ ಹಾಗೂ ಸಹಕಾರ ಸಂಘಗಳಿಗೆ ಮಾರಕವಾಗಿರುವ ನೂತನ ಸುತ್ತೋಲೆಯನ್ನು ಕೈಬಿಟ್ಟು ಹಿಂದಿನ ನಿಯಮವನ್ನೇ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮೂಲತಃ ರೈತರ ಆರ್ಥಿಕ ಅನುಕೂಲಕ್ಕಾಗಿ ಪ್ರಾರಂಭಗೊಂಡಿದ್ದು, ಶೇ.೯೦ ರಷ್ಟು ರೈತರೇ ಸದಸ್ಯರಾಗಿರುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಪಡಿತರ ಹಾಗೂ ಇನ್ನಿತರ ಅಗತ್ಯ ಸಾಮಾಗ್ರಿಗಳನ್ನು ಒದಗಿಸುತ್ತಿರುವ ಸಂಘ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ ಸೇವೆಯಲ್ಲಿ ತೊಡಗಿದೆ.ಆದರೆ ಈಗ ಹೊರಡಿಸಿರುವ ಸುತ್ತೋಲೆಯಿಂದ ರೈತ ಸಮೂಹಕ್ಕೆ ಆರ್ಥಿಕ ಸಂಕಷ್ಟ ಎದುರಾಗುವುದಲ್ಲದೆ ಸಹಕಾರ ಸಂಘಗಳ ಉಳಿವಿನ ಬಗ್ಗೆಯೂ ಸಂಶಯಗಳು ಮೂಡುತ್ತವೆ ಎಂದು ಟೀಕಿಸಿದರು.

೨೦೧೮-೧೯ನೇ ಸಾಲಿನವರೆಗೆ ರೂ.೩ ಲಕ್ಷದವರೆಗೆ ಯಾವುದೇ ನಿರ್ಬಂಧಗಳಿಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲವನ್ನು ವಿತರಿಸಲಾಗುತ್ತಿತ್ತು. ಬಡ್ಡಿ ಸಹಾಯ ಧನದಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತಿತ್ತು. ಆದರೆ ಹೊಸ ಸುತ್ತೋಲೆ ಇದಕ್ಕೆ ತದ್ವಿರುದ್ಧವಾಗಿದ್ದು, ಸರ್ಕಾರ ರೈತರ ಹಿತ ಕಾಯುವ ಕೆಲಸವನ್ನು ಮೊದಲು ಮಾಡಲಿ ಎಂದರು.

ಒಂದೇ ಪಡಿತರ ಚೀಟಿ ಹೊಂದಿರುವ ರೈತರಿಗೆ ಮಾತ್ರ ಶೂನ್ಯ ಬಡ್ಡಿ ದರ ಅನ್ವಯವಾಗುವುದೆಂದು ತಿಳಿಸಲಾಗಿದೆ. ಆಧಾರ್ ಕಾರ್ಡ್ ಯಾವ ವಿಳಾಸದಲ್ಲಿದೆಯೋ ಆ ವಿಳಾಸದ ಕಾರ್ಯವ್ಯಾಪ್ತಿಯ ಪತ್ತಿನ ಸಹಕಾರ ಸಂಘದಿಂದ ಸಾಲ ಪಡೆಯಬೇಕೆಂದು ಹೇಳಲಾಗಿದೆ.

ಆದರೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಜಮ್ಮಾ ಆಸ್ತಿಯನ್ನು ಹೊಂದಿದ್ದು, ಒಂದೇ ಆರ್.ಟಿ.ಸಿ ಯಲ್ಲಿ ಸುಮಾರು ೧೦ ರಿಂದ ೨೦ ಮಂದಿ ಪಾಲು ಪತ್ರವನ್ನು ಮಾಡಿಸಿಕೊಂಡು ಅವರ ಅನುಭವದಲ್ಲಿರುವ ಆಸ್ತಿಯನ್ನು ಸಂಬಂಧ ಪಟ್ಟ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಮೂನೆ ೩ ರಂತೆ ನೋಂದಣಿ ಮಾಡಿ ಸಾಲ ಪಡೆಯುವ ಕ್ರಮವನ್ನು ಇಲ್ಲಿಯ ತನಕ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಪ್ರತ್ಯೇಕ ಪಡಿತರ ಚೀಟಿ ಹೊಂದಿಲ್ಲವೆಂಬ ಕಾರಣ ನೀಡಿ ಕೇವಲ ಒಬ್ಬರಿಗೆ ಮಾತ್ರ ಬಡ್ಡಿ ಸಹಾಯಧನ ನೀಡುವುದು ಎಷ್ಟು ಸರಿ ಎಂದು ಮಣಿ ಉತ್ತಪ್ಪ ಪ್ರಶ್ನಿಸಿದರು.

ಅವೈಜ್ಞಾನಿಕ ಸುತ್ತೋಲೆಯನ್ನು ತಡೆ ಹಿಡಿದು ಈ ಹಿಂದೆ ಅನುಸರಿಸುತ್ತಿದ್ದ ರೀತಿಯಲ್ಲೇ ಸಾಲ ಹಾಗೂ ಬಡ್ಡಿ, ಸಹಾಯಧನ ನೀಡಿದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲದೆ ಸಹಕಾರ ಸಂಘಗಗಳು ಕೂಡ ಉಳಿಯಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಲಾಕ್‌ಡೌನ್‌ನಿಂದಾಗಿ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ತರಾತುರಿಯಲ್ಲಿ ಸಾಲ ವಸೂಲಾತಿಗೆ ಮುಂದಾಗಬಾರದು ಎಂದೂ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಟಿ.ಎಸ್.ಧನಂಜಯ, ಬಿ.ಎಂ.ಕಾಶಿ ಹಾಗೂ ಪೇರಿಯನ ಪೂಣಚ್ಚ ಉಪಸ್ಥಿತರಿದ್ದರು.

ಕರೋನಾ ಕವಿಗೊಷ್ಠಿ – 2020 – ಸಿರಿಗನ್ನಡ ವೇದಿಕೆ – ಕೊಡಗು

ಕರೋನಾ ಕವಿಗೊಷ್ಠಿ - 2020
ಸಿರಿಗನ್ನಡ ವೇದಿಕೆ - ಕೊಡಗು

ದಿನಾಂಕ: 26-04-2020
ಸಮಯ: ಬೆಳಿಗ್ಗೆ; 10.45 ರಿಂದ ಮಧ್ಯಾಹ್ನ 1.00 ಗಂಟೆಯವರಗೆ
ಸ್ಥಳ: ನೀವಿದ್ದಲ್ಲೆ ZOOM App ಮುಖಾಂತರ

Join Zoom Meeting https://us04web.zoom.us/j/76868444937?pwd=MEM5cXcyallyUG8vR3FnN0Y2YWFrQT09

Meeting ID: 768 6844 4937 ; Password: 097415

ಪ್ರಾಸ್ತವಿಕ ನುಡಿಗಳು: ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು
ಉದ್ಘಾಟಕರು: ಶ್ರೀ ಕುಡೆಕಲ್ ಸಂತೋಷ್ ಮಡಿಕೇರಿ ತಾಲ್ಲೂಕು ಅಧ್ಯಕ್ಷರು: ಕನ್ನಡ ಸಾಹಿತ್ಯ ಪರಿಷತ್
ಅಧ್ಯಕ್ಷತೆ: ಎಂ.ಎಸ್. ವೆಂಕಟರಾಮಯ್ಯ, ರಾಜ್ಯಾಧ್ಯಕ್ಷರು: ಸಿರಿಗನ್ನಡ ವೇದಿಕೆ

ಮುಖ್ಯ ಅಥಿತಿಗಳು:

  • ಶ್ರೀ ಗೋಪಿ ಪೀಣ್ಯ, ಸಾಹಿತಿಗಳು ಹಾಗೂ ಸಿನಿಮಾ ನಿರ್ದೇಶಕರು
  • ಶ್ರೀ ಕೆ.ಆರ್. ವಿದ್ಯಾಧರ ಸಾಹಿತಿಗಳು ಹಾಗೂ ವಕೀಲರು-ಕೊಡಗು
  • ಶ್ರೀಮತಿ ಸುಜಾತ ತಳವಾರ್, ಸಾಹಿತಿಗಳು
  • ಶ್ರೀಮತಿ ಬಿ.ಆರ್. ಸವಿತಾ ರೈ, ಅಧ್ಯಕ್ಷರು: ಕೊಡಗು ಜಿಲ್ಲಾ ಪ್ರತ್ರಕರ್ತರ ಸಂW
  • ಶ್ರೀ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಧ್ಯಕ್ಷರು: ಕೊಡಗು ಪ್ರೆಸ್ ಕ್ಲಬ್

ಸರ್ವರಿಗೂ ಆದರದ ಸ್ವಾಗತವನ್ನು ಬಯಸುವ

  • ಶ್ರೀ ಅಲ್ಲಾರಂಡ ವಿಠಲ ನಂಜಪ್ಪ, ಅಧ್ಯಕ್ಷರು: ಸಿರಿಗನ್ನಡ ವೇದಿಕೆ ಕೊಡಗು ಮೊ: 9448312310
  • ಶ್ರೀ ಬೊಳ್ಳಜ್ಜಿರ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಗಳು: ಸಿರಿಗನ್ನಡ ವೇದಿಕೆ ಕೊಡಗು, ಮೊ: 9880778047

ಸಿರಿಗನ್ನಡ ವೇದಿಕೆ

ಮುಖ್ಯಾಂಶಗಳು

ಸ್ಥಾಪನೆ : 16.3.2003
ಅಂಗಸಂಸ್ಥೆ: ಸಿರಿಗನ್ನಡ ಮಹಿಳಾ ವೇದಿಕೆ
ಮಹಿಳಾ ವೇದಿಕೆ ಯ ರಾಜ್ಯಾಧ್ಯಕ್ಷರು: ಡಾ.ಮೈತ್ರೇಯಿಣಿ ಜಿ ಗದಿಗೆಪ್ಪಗೌಡರ್, ರಾಣಿ ಚೆನ್ನಮ್ಮ ವಿ.ವಿ.ಬೆಳಗಾವಿ

ಕಾರ್ಯಕ್ರಮ ಗಳು:
ಕವಿಗೋಷ್ಠಿ, ವಿಚಾರ ಸಂಕಿರಣಗಳು, ವಿಮರ್ಶೆ, ಕವನ ಸ್ಪರ್ಧೆ, ಕಥೆ, ಗೀತೆ ಸ್ಪರ್ಧೆ,
ಪ್ರಕಟಣೆ ಗಳು:
ಸಂಪಾದಿತ ಕವನ ಸಂಕಲನ ಗಳು – 5
ವಿಚಾರ ಸಂಕಿರಣ ಕೃತಿಗಳು- 3

ವ್ಯಾಪ್ತಿ. : ಕರ್ನಾಟಕ ದ 30 ಜಿಲ್ಲೆ ಗಳು/ ತಾಲ್ಲೂಕು ಗಳು
ಕೇರಳ ದ ಕಾಸರಗೋಡು
ತಮಿಳುನಾಡಿನ ತಿರಪೂರು
ಹೈದರಾಬಾದ್
ಮಹಾರಾಷ್ಟ್ರ ದ ಮುಂಬೈ, ಪುಣೆ,ಸಾಂಗ್ಲಿ, ಲಾತೂರ್ ಮತ್ತು ಸೊಲ್ಲಾಪುರ
ಇತ್ತೀಚೆಗೆ, ಆಸ್ಟ್ರೇಲಿಯಾ ದ ಸಿಡ್ನಿ ಯಲ್ಲಿ ಶ್ರೀ ಜಗದೀಶ್ ಐಮಂಡ ಅಲ್ಲಿನ ಅಧ್ಯಕ್ಷ ರು.
ಜಿಲ್ಲೆಯ ವಾಟ್ಸಾಪ್ ಗ್ರೂಪ್ ಗಳಿವೆ.
ಸರಳವಾದ, ಹೆಚ್ಚು ಖರ್ಚಿಲ್ಲದ ಕಾರ್ಯಕ್ರಮ ಗಳು ಅಪೇಕ್ಷಿತ
ಕಾರ್ಯಕ್ರಮ ಗಳ ವರದಿ ಪತ್ರಿಕೆ ಗಳಲ್ಲಿ ಬರಲು, ತಯಾರಿಸುವುದು ಆಯಾ ಘಟಕಗಳ ಕೆಲಸ.
ಸದಸ್ಯತ್ವ ಶುಲ್ಕ, ಜಾಹೀರಾತು, ಪ್ರಾಯೋಜಕತ್ವ ಗಳ ಹಣ ಆಯಾ ಜಿಲ್ಲೆಯ/ತಾಲ್ಲೂಕು ಗಳಲ್ಲಿರುತ್ತದೆ.
ರಾಜ್ಯ ಸಮಿತಿ ಗೆ ಹಣ ಕಳಿಸುವ ಅಗತ್ಯವಿಲ್ಲ.
ಜಿಲ್ಲೆ/ತಾಲ್ಲೂಕು ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರು, ಆಯಾ ಅಧ್ಯಕ್ಷ ರ ಆಯ್ಕೆ ಯ ಮೇರೆಗೆ ಆರಿಸಲ್ಲಡುವರು.
ಜಿಲ್ಲೆ/ತಾಲ್ಲೂಕು ಅಧ್ಯಕ್ಷರುಗಳನ್ನು ರಾಜ್ಯ ಸಮಿತಿ ಯ ಪರವಾಗಿ ರಾಜ್ಯಾಧ್ಯಕ್ಷರು ಆಯ್ಕೆ ಮಾಡುವರು.

ಭಾಗವಹಿಸುವ ಕವಿಗಳು

ಎಂ.ಎಸ್. ವೆಂಕಟರಾಮಯ್ಯ
ರಾಜ್ಯಾಧ್ಯಕ್ಷರು, ಸಿರಿಗನ್ನಡ ವೇದಿಕೆ, ಬೆಂಗಳೂರು
# 2 , 1 ನೇ ಅಡ್ಡ ರಸ್ತೆ, ಕಾಳಿದಾಸ ಲೇಔಟ್, ಶ್ರೀನಗರ, ಬೆಂಗಳೂರು-560050

ರವೀಂದ್ರ ಸಿಂಗ್ ಕೋಲಾರ, ಸಿರಿಗನ್ನಡವೇದಿಕೆ ರಾಜ್ಯ ಸದಸ್ಯರು

ರಜನಿ ಅಶೋಕ ಜೀರಗ್ಯಾಳ
ತತ್ವ ಶಾಸ್ತ್ರ ಪದವೀಧರೆ, ವೃತ್ತಿ ‌:-ನೃತ್ಯನಿರ್ದೇಶಕಿ ಬರಹಗಾರ್ತಿ,ಎರಡು ಕವನ ಸಂಕಲನ ಒಂದು ಕಥಾ ಸಂಕಲನ ಬಿಡುಗಡೆ ಯಾಗಿದೆ ವಿವಿಧ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ ಒಂದು ಕಥೆ ಭೃಂಗದ ಬೆನ್ನೆರಿ ಕಲಾತ್ಮಕ ಚಲನ ಚಿತ್ರವಾಗಿದೆ.
ಎರಡು ಚಲನಚಿತ್ರದಲ್ಲಿ ಪೊಷಕನಟಿಯಾಗಿ ಪಾತ್ರ ವಹಿಸಿದ್ದೆನೆ.ಚಂದನ ಟಿವಿ ಯಲ್ಲಿ ನನ್ನ ಶಿಷ್ಯ ರು ಮತ್ತು ನಾನು ಮಧುರ ಮಧುರವೀ ಮಂಜುಳಗಾನ ದಲ್ಲಿ ನೃತ್ಯ ಕಾರ್ಯಕ್ರಮ ಮತ್ತು ಹಾಡಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೆನೆ ನಾನು ಕಲೆಸಿದ ನೃತ್ಯ ಗಳು ನಮ್ಮ ಶಿಷ್ಯ ರು ಬಸವ ಚಾನಲ್, ಈ ಟಿವಿ ,ಉದಯಟಿವಿ ಸುವರ್ಣ ಚಾನಲ್ ನಲ್ಲಿ ಭಾಗವಹಿಸಿದ್ದಾರೆ.
ತಾಲ್ಲೂಕು ಸಾಹಿತ್ಯ ಸಮ್ಮೆಳನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಭಾಗವಹಿಸಿದ್ದೆನೆ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿಯಲ್ಲಿ ಭಾಗವಹಿಸಿದ್ದೆನೆ ,ವೇಣುಧ್ವನಿ ರೇಡಿಯೊ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದೆನೆ.
ಎಲ್ಲಾ ಮಠಾಧೀಶರಿಂದ ಸನ್ಮಾನಿತಗೊಂಡಿದ್ದೆನೆ ಸದ್ಯ ಸಿರಿಗನ್ನಡ ಮಹಿಳಾ ವೇದಿಕೆಯ ಜಿಲ್ಲಾ ಧ್ಯಕ್ಷ ಮತ್ತು ರಾಜ್ಯ ಉಪಾಧ್ಯಕ್ಷಳಾಗಿ ಕೆಲಸ ನಿರ್ವಹಿಸುತ್ತಿದ್ದೆನೆ.ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆನೆ.
ರೊಟರಿ ಇನ್ನರ್ ವ್ಹಿಲ್ ನ ಮಾಜಿ ಕಾರ್ಯದರ್ಶಿಯಾಗಿ ಸಹಜ ಶಿವಯೋಗದ ಮಾಜಿ ಖಜಾಂಜಿಯಾಗಿ
ಭಾವ ಸಂಗಮದ ಕಾಯದರ್ಶಿಯಾಗಿ ಕೆಲಸ ಮಾಡಿದ್ದೆ ನೆ.

ಬೆಳಕು ಸಂಸ್ಥೆ ಯಲ್ಲಿ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದಾರೆ.
ಸ್ನೇಹ ಸಂಗಮಸಾಹಿತ್ಯ ಬಳಗ ತುಮಕೂರು ಇವರುಕೂಡ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದಾರೆ.
ಪ್ರಶಸ್ತಿ ಗಳು.ನಾಟ್ಯ ಮಯೂರಿ, ನಾಟ್ಯ ವಿಶಾರದೆ ನಾಟ್ಯ ಪಾರ್ವತಿ,ಕಾವ್ಯ ವಿಭೂಷಣ,ಸಾಹಿತ್ಯ ಭೂಷಣ, ಸಮಾಜ ಸೇವಾ ಭಾರ್ಗವ, ನೃತ್ಯ ರತ್ನ, ಮಾತೃ ಸಂಪದ ಸಮ್ಮಾನ್, ಸ್ಪೂರ್ತಿ ರತ್ನ ತಾಲ್ಲೂಕು ಗಣರಾಜ್ಯೋತ್ಸವ ಪ್ರಶಸ್ತಿ
ಇನ್ನೂ ಮುಂತಾದ ಪ್ರಶಸ್ತಿ ಯಿಂದ ಸನ್ಮಾನಿತ ಗೊಂಡಿದ್ದೆನೆ.
😁😂ರಜನಿ

ಹಾ.ತಿ.ಜಯಪ್ರಕಾಶ್.
ಕಾವೇರಿ ಬಡಾವಣೆ,ಕುಶಾಲನಗರ
ಕೊಡಗು ಜಿಲ್ಲೆ

ಸಾಹಿತ್ಯದಲ್ಲಿ ಆಸಕ್ತಿ.. ಕಥೆ,ಕವನ ಓದುವಿಕೆ,
ಅಲ್ಲೊಮ್ಮೆ ಇಲ್ಲೊಮ್ಮೆ ಬರೆದು 800 ಚುಟುಕು,500ಹನಿಗವನಗಳಿವೆ…

ಉಳುವಂಗಡ ಕಾವೇರಿ ಉದಯ
ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿ ಕಾವೇರಿ ಪುತ್ತೂರಿನ ಸೆಂಟ್ ಫಿಲೋಮಿನ ಕಾಲೇಜಿನಲ್ಲಿ ಬಿ.ಕಾಂ ಓದಿರುವರು .
ಉಳುವಂಗಡ ಯು ಉದಯ ಅವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು.
ಚತುರ್ಬಾಷಾ ಸಾಹಿತಿ , ಬಹುಬಾಷಾ ಕವಿ ಹಾಗು ಮುಕ್ತಕ ಕವಿಗಳಾಗಿರುವ ಕಾವೇರಿ ಚಿತ್ರಕಲಾವಿದೆಯು ಆಗಿರುವರು.
ಕೊಡಗಿನಲ್ಲಿ ನೆಲೆಸಿರುವ ಕಾವೇರಿಯವರು ಬರೆದಿರುವ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಬರವಣಿಗೆಗೆ ಪ್ರಶಸ್ತಿ ದೊರೆತಿದೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿದೆ .
ಇವರು ಬರೆದ ಕಾದಂಬರಿ ಸಿನಿಮಾ ಆಗಿದೆ. ಹಾಗು ಇವರು ಬರೆದ ಕಥೆ ಕಿರುಸಿನೆಮ ಆಗಿದೆ.
ಇವರು ಬರೆದ ೧೮ ಪುಸ್ತಕಗಳು ಪ್ರಕಟಗೊಂಡಿವೆ. ಕಾದಂಬರಿ, ಕಥಾಸಂಕಲನ, ಕವನಮಾಲೆ , ಅದ್ಯಯನ ಗ್ರಂಥ, ನಾಟಕ, ಭಕ್ತಿ ಪ್ರಧಾನ ಕೃತಿ, ಪ್ರಭಂದ , ಹೀಗೆ ಹಲವಾರು ಪುಸ್ತಕಗಳನ್ನು ಕೊಡವ , ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಬರೆದಿರುವರು .
ಇವರ ವಿಳಾಸ
ಉಳುವಂಗಡ ಕಾವೇರಿ ಉದಯ
ಟಿ.ಶೆಟ್ಟಿಗೇರಿ
ಪೊನ್ನಂಪೇಟೆ ತಾಲ್ಲೂಕು
ದಕ್ಷಿಣ ಕೊಡಗು.
ಕರ್ನಾಟಕ

ಪ್ರಗತಿ ಕೆಎಸ್
ಹತ್ತನೇ ತರಗತಿ ಶಾಲೆ:ಶಾಂತಿನಿಕೇತನ
ತಂದೆ ಹೆಸರು: ಸೋಮಣ್ಣ ಕೆಜಿ
ತಾಯಿಯ ಹೆಸರು: ವಿಶಾಲಾಕ್ಷಿ ಸಿಎಸ್
ಸ್ಥಳ :ಕೆಎಸ್ಆರ್ಟಿಸಿ ಬಡವಣೆ ಮಾದಾಪಟ್ಟಣ ಕುಶಾಲನಗರ.

ವಸಂತ ಲಕ್ಷ್ಮಿ.. ಬಿ. ಎನ್.

ಗಂಡನ ಹೆಸರು; ಶಶಿಧರ್. ಬಿ. ಎನ್.
“ರಜತಾದ್ರಿ”ಮುಕ್ರಂಪಾಡಿ.. ಮನೆ.
ಊರು: ಪುತ್ತೂರು. ದ. ಕ. ಜಿಲ್ಲೆ.
ವಯಸ್ಸು: 38
ಎತ್ತರ: 5.8.

ವೃತ್ತಿ… ಸೌಂಧರ್ಯ.. ತಜ್ಞೆ.
ತನ್ನದೇ ಆದ ಸ್ವಂತ ಕಟ್ಟಡದೊಂದಿಗೆ
ನುರಿತ ತಜ್ಞರ ಸಲಹೆಯ ಮೇರೆಗೆ…
ತನ್ನದೇ ಶೈಲಿಯಲ್ಲಿ…. ಕರ್ತವ್ಯ ನಿರ್ವಹಿಸುತ್ತಾ.

ಹವ್ಯಾಸವಾಗಿ… ಕವನ.. ರಚಿಸುವುದು ವಿಶ್ವೇಶ್ವರ ಭಟ್ ಸೇರಿದಂತೆ ಹಲವಾರು ಗಣ್ಯರ ವೇದಿಕೆಯಲ್ಲಿ ಸ್ವಾ ರಚನೆಯನ್ನು ವಾಚಿಸಿ ,ಮೆಚ್ಚುಗೆಗೆ ಪಾತ್ರವಾದ ಹಾಗೂ
ಇನ್ನೂರಕ್ಕೂ ಹೆಚ್ಚು ಕವನಗಳು ಸಂಚಿಕೆಯ ಹಂತದಲ್ಲಿ ಹೊರಬರಲು ಸಿದ್ದ ವಾಗಿವೆ.

ಕಿರು ನಾಟಕ ರಚನೆ.. ನಿರ್ದೇಶನ… ಹಾಗೂ ರಂಗಾಭಿನಯ
ರಂಗ ಗೀತಾ ತಂಡ ದೊಂದಿಗೆ ರಂಗಾಸಕ್ತಿ ಬೆಳೆಸಿಕೊಂಡಿದ್ದು
ತನ್ನಿಂದಾದ ಕೊಡುಗೆಯನ್ನು ನೀಡುತ್ತಾ.

ಹಲವಾರು…ಚಲನಚಿತ್ರ, ಕಿರುತೆರೆ. ಹಾಗೂ ಜಾಹಿರಾತುಗಳಿಗೆ
ಅಭಿನಯಿಸಿ ಜನರ ಮೆಚ್ಚುಗೆ… ಹಾಗೂ ನಿರ್ದೇಶಕರ ಮೆಚ್ಚುಗೆಗೆ ಅರ್ಹವಾಗುತ್ತಾ.

ಸಮಾಜಮುಖಿ.. ಚಿಂತನಾ ಕಾರ್ಯಗಳಾದ.. ಭಜನಾ ತಂಡ ಸ್ಥಾಪಿಸಿ… ಹಲವಾರು ಮಹಿಳೆಯರು ಸೇರಿಕೊಂಡು ಅವಕಾಶವಿದ್ದ ಕಡೆ ಭಜನಾ ಸೇವೆ ಕೊಡುತ್ತಾ…
ಜೆ. ಸಿ. ಸಂಸ್ಥೆಯಲ್ಲಿಯೂ ಕೂಡ ಹಲವಾರು ಸಮಾಜ ಸೇವೆಯ ಮೂಲಕ ಜೀವನದ ಸಮಯವನ್ನು ಸಾರ್ಥಕದೆಡೆಗೆ ಪಯಣಿಸುವತ್ತ ಕರ್ತವ್ಯ ನಿರ್ವಹಿಸುತ್ತಾ ಮುಂದಡಿ ಯಿಡುತ್ತಾ ಸಾಗಿದೆ.

📮 _ 💌. .. ಸಿರಿಗನ್ನಡ ಜಿಲ್ಲಾ ಮಹಿಳಾಧ್ಯಕ್ಷರಾಗಿ ಕನ್ನಡ ಸೇವೆಯೊಂದಿಗೆ ಸಾಗಿದೆ. 📮 _ 💌

ನನ್ನ ಕಿರು ಪರಿಚಯ.,

ಕಲೇಸಂ,ಜಿಲ್ಲಾಧ್ಯಕ್ಷೆ, ದಾವಣಗೆರೆ
ನಂ. ೬೯೨/೩, ೧ ನೇ ತಿರುವು,
ಲೆನಿನ್ ನಗರ, ನಿಟುವಳ್ಳಿ ಹೊಸ ಬಡಾವಣೆ, ದಾವಣಗೆರೆ—೪.

ಸಾಹಿತ್ಯ ಕೃಷಿ:
———————
೧. ಕವನ ರಚನೆ ಸುಮಾರು–೩೦೦
೨. ಚುಟುಕುಗಳು—೧೦೦೦
೩. ಆಧುನಿಕ ಕಗ್ಗ—೭೫
೪. ಶಿಶು ಗೀತೆಗಳು—೬೫
೫.ಲೇಖನ ಗಳು—೪೮
೬. ನಾಟಕ ಗಳು—೩
ತತ್ವ ಗೀತೆಗಳು—೫
ಕಿರು ಲೇಖನ—೧೨
ನ್ಯಾನೊ ಕತೆಗಳು—೧೦
೧೦. ಬಂಧ–ಸಂಬಂಧ ಕವನಮಾಲೆ ೧.
ಬಿಡುಗಡೆಯಾದ ಪುಸ್ತಕ ಗಳು
—————————————–
೧. ಭಕ್ತಿ ಭಾವ ತತ್ವ
೨. ಭಾವಬಿಂಬ
೩. ಭಾವಾನುಬಂಧ
ಸಿದ್ಧತೆಯಲ್ಲಿ—ಮಲೆನಾಡಿನ ಮಡಿಲಲ್ಲಿ– ಹೊರನಾಡಿನ ಹೊನಲ‌ಲ್ಲಿ.
ಸಮಾಜದಲ್ಲಿ:–
ಸಂಘಟಕಿ, ನಿರೂಪಕಿ, ತಿರ್ಪುಗಾರಳಾಗಿ, ಸಂಪನ್ಮೂಲ ವ್ಯಕ್ತಿ ಯಾಗಿ.
ವಿದ್ಯಾಭ್ಯಾಸ:- ಬಿ.ಕಾಂ. ಪದವೀಧರೆ.😌

ಮಾರುತಿ ದಾಸಣ್ಣವರ
ಊರು – ಬೆಳಗಾವಿ ಜಿಲ್ಲೆಯ ಹೊಸಟ್ಟಿ ಎಂಬ ಗ್ರಾಮ.
ವೃತ್ತಿ – ಕೊಡಗಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕ.
ಪ್ರಕಟಿತ ಕೃತಿಗಳು
೧. ನಾನೂರುವ ಹೆಜ್ಜೆಗಳು (ಕವನ ಸಂಕಲನ)
೨. ನಡೆದೂ ಮುಗಿಯದ ಹಾದಿ ( ಕವನ ಸಂಕಲನ)
೩. ಮಬ್ಬುಗತ್ತಲ ಮಣ್ಣ ಹಣತೆ ( ಕಥಾ ಸಂಕಲನ)

ಚಂಗಚಂಡ ರಶ್ಮಿ ನಿತಿನ್
 ಕೊಡಗು ಜಿಲ್ಲೆ … ಬೆಂಗಳೂರಿನಲ್ಲಿ ವಾಸ …
ನಾನು ಕೊಡವ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕವನ , ಕತೆ , ಲೇಖನಗಳನ್ನು ಬರೆಯುವ ಹವ್ಯಾಸ …
ಪ್ರಸ್ತುತ ಟಾಟಾ ಸಂಸ್ಥೆಯ ಉದ್ಯೋಗಿ …೫೦೦ಕ್ಕೂ ಹೆಚ್ಚು ರಾಜ್ಯಮಟ್ಟದ ಕವಿಗೋಷ್ಠಿಗಳು, ದಸರಾ ಕವಿಗೋಷ್ಠಿಗಳು , ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತೆನೆ.
ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಕಾವ್ಯ ಪ್ರತಿಭಾ ಪ್ರಶಸ್ತಿ ಸೇರಿದಂತೆ , ಬೆಳಕು ಸಾಧಕ ರತ್ನ _, ಸಿರಿಗನ್ನಡ ಸೌರಭ_ ,ಕರುನಾಡು ಚೇತನ ಪ್ರಶಸ್ತಿ , ಕಾವ್ಯ ಭೂಷಣ_ ಪ್ರಶಸ್ತಿಗಳನ್ನು ಪಡೆದಿರುತೇನೆ …

ಚೆಟ್ಟೋಳಿರ ಶರತ್ ಸೋಮಣ್ಣ

ಕೊಡಗು ಜಿಲ್ಲೆ .. ಪ್ರಸ್ತುತ ಮೈಸೂರಿನಲ್ಲಿ ವಾಸ
ಕೊಡವ ಮತ್ತು ಕನ್ನಡ ಕವನಗಳನ್ನು ಬರೆಯುವುದು ಮತ್ತು ಕೊಡವ ಆಲ್ಬಮ್ ಹಾಡುಗಳನ್ನು ಬರೆಯುವುದು ನನ್ನ ಹವ್ಯಾಸ
“ ಒಡ್ಪಂಗತೆರ ಒಡ್ದ್ “ ಎನ್ನುವ ಕೊಡವ ಪುಸ್ತಕವನ್ನು ಬರೆದಿದ್ದೇನೆ …ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದೇನೆ …
ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತಿದ್ದೇನೆ …

ಧನ್ಯವಾದಗಳು …

ವರದೇಂದ್ರ ಕೆ ಮಸ್ಕಿ
ಪ್ರಾಥಮಿಕ ಶಾಲಾ ಶಿಕ್ಷಕ
ಸಿರಿಗನ್ನಡ ವೇದಿಕೆ ಮಸ್ಕಿ ತಾಲೂಕಿನ ಅಧ್ಯಕ್ಷರು
ಕಥೆ, ಕವನ ಬರೆಯುವ ಹವ್ಯಾಸ ಹೊಂದಿದ್ದೇನೆ.
ಧನ್ಯವಾದಗಳು

ವೀಣಾ. ಎನ್. ರಾವ್.

ಕುಶಾಲನಗರ
ಕೊಡಗು ಜಿಲ್ಲೆ .

ಹವ್ಯಾಸ –ಕಥೆ, ಕವನ, ಲೇಖನ, ಗಝಲ್, ರುಬಾಯಿಗಳನ್ನು ಬರೆಯುತ್ತೇನೆ.

ಕಳೆದ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡ ಕವಿವಾಣಿ ಮಾಸಪತ್ರಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದಲ್ಲದೆ “ಚುಟುಕು ರತ್ನ ಶ್ರೀ ” ಎನ್ನುವ ಪ್ರಶಸ್ತಿಯನ್ನು ಪಡೆದಿದ್ದೇನೆ.

 ಬಿ. ವಿ. ಅಂಬುಜ.
ಗೃಹಿಣಿ
ಸಾಹಿತ್ಯ ಕ್ಷೇತ್ರದ ಕಲಿಕಾರ್ಥಿ
ಕವನ, ಕವಿತೆ, ಚುಟುಕು, ಶಾಯರಿ, ಭಾವಗೀತೆ, ಹಾಯ್ಕುಗಳು, ಹನಿಗವನ, ವಚನ,ಹಾಗೂ ಒಂದಿಷ್ಟು ನ್ಯಾನೋ ಕಥೆಗಳು ಬರೆದಿದ್ದೇನೆ.ಮತ್ತು ಮತ್ತಷ್ಟು ಕಲಿತು ಬರೆಯುತ್ತಿದ್ದೇನೆ.
ಹಲವು ಸಾಹಿತ್ಯ ವೇದಿಕೆಯಲ್ಲಿ ಭಾಗವಹಿಸಿದ್ದೇನೆ
ಮತ್ತು ಕವನ ವಾಚನ ಮಾಡಿದ್ದೇನೆ.
ಮೂರ್ನಾಲ್ಕು ಕವನ ಸಂಕಲನದೊಳಗೆ ನನ್ನ ಕವನವೂ ಸೇರಿ ಬಿಡುಗಡೆಯಾಗಿದೆ.

ಸುಮ ರಂಗರಾವ್
ಪದನಾಮ – ಮುಖ್ಯಸ್ಥರು ಕನ್ನಡ ವಿಭಾಗ, ಶ್ರೀ ಮೇಧಾ ಪದವಿ ಕಾಲೇಜು, ಬಳ್ಳಾರಿ; ಮಹಿಳಾ ಅಧ್ಯಕ್ಷರು, ಸಿರಿಗನ್ನಡ ವೇದಿಕೆ, ಬಳ್ಳಾರಿ.
ವಿಳಾಸ – ಕೌಸ್ತುಭ ನಿಲಯ, ಶಾಂತವೀರಪ್ಪ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ.

 ಎಸ್ ಕೌಸ್ತುಭ ಭಾರದ್ವಾಜ್
ಪದನಾಮ – ವಿದ್ಯಾರ್ಥಿ, ಬಿ.ಸಿ.ಎ ಪ್ರಥಮ ವರ್ಷ.
ವಿಳಾಸ – ಕೌಸ್ತುಭ ನಿಲಯ, ಶಾಂತವೀರಪ್ಪ ಕಾಲೋನಿ, ತಾಳೂರು ರಸ್ತೆ, ಬಳ್ಳಾರಿ.

Yaladalu Kumuda Jayaprashanth

ಪಿ ಎಸ್ ವೈಲೇಶ ಕೊಡಗು
ವಿರಾಜಪೇಟೆ

ಗೌರವಾಧ್ಯಕ್ಷರು
ಸಿರಿಗನ್ನಡ ವೇದಿಕೆ
ವಿರಾಜಪೇಟೆ ತಾಲ್ಲೂಕು
ಕೊಡಗು ಜಿಲ್ಲೆ

ಸಂಚಾಲಕರು ಮತ್ತು ಅಧ್ಯಕ್ಷರು
ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ವಿರಾಜಪೇಟೆ
ಕೊಡಗು ಜಿಲ್ಲೆ

ಕಾವ್ಯ ಕಮ್ಮಟ ಬಳಗ
ಅಧ್ಯಕ್ಷರು
ವಿರಾಜಪೇಟೆ ಕೊಡಗು ಜಿಲ್ಲೆ

ಚಾಲಕರು
ಕರಾರಸಾಸಂಸ್ಥೆ ಮಡಿಕೇರಿ ಘಟಕ
ಪುತ್ತೂರು ವಿಭಾಗ
ಮಡಿಕೇರಿ.

RJ archive

Dec - 27

Dec - 20

Dec - 06

Nov - 29

Nov - 22

Nov - 15

Nov - 08

Oct - 04

Sept - 13

Sept - 06

Aug - 30

Aug - 23

Aug - 16

Aug - 09

Aug - 02

July - 26

July - 12

July - 05

June - 21

June - 14

May - 31

April - 12

March - 29

March - 15

March - 01

Feb - 22

Feb - 08

Feb - 01

Jan - 25

Jan - 11

Jan - 04

2018

Dec - 25

Nov - 30

Nov - 23

Nov - 09

Nov - 02

Oct - 12

Oct - 05

Sep - 27

Sep - 21

Sep - 07

August - 31

August - 24

August - 10

August - 03

July - 27

July - 20

May - 15

Hello world!