ಭಾರತೀಯ ಯುವರಾಣಿ ಆದಳು ಕೊರಿಯಾದ ಮಹಾರಾಣಿ! ಭಾರತ ಮತ್ತು ಕೊರಿಯಾಕ್ಕೆ ಇತ್ತು ಶತಮಾನಗಳ ಸಂಬಂಧ ಭಾರತದ ಭವ್ಯ ಪರಂಪರೆ ಹಾಗೂ ಇತಿಹಾಸ ಪುನಶ್ಚೇತನಕ್ಕಿದು ಪರ್ವ ಕಾಲ!

ಭಾರತೀಯ ಯುವರಾಣಿ ಆದಳು ಕೊರಿಯಾದ ಮಹಾರಾಣಿ! ಭಾರತ ಮತ್ತು ಕೊರಿಯಾಕ್ಕೆ ಇತ್ತು ಶತಮಾನಗಳ ಸಂಬಂಧ

ಇತ್ತೀಚಿಗೆ ದುಬಾಯಿಯ ಒಂದು ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಯಾದ ಬಿ.ಆರ್.ಶೆಟ್ಟಿಯವರು ಮಾತನಾಡುತ್ತಾ ‘ಗೌರವಾನ್ವಿತ ಮೋದಿಜೀಯವರೆ ನಾವು ಅನಿವಾಸಿ ಭಾರತೀಯರು ಹೊರ ದೇಶಗಳಿಗೆ ಹೋಗುವಾಗ ಬಹಳ ಹಿಂಜರಿಕೆಯಿಂದ ಹೋಗುತ್ತಿದ್ದೇವು. ಆದರೆ ಈಗ ಆಗಲ್ಲ, ಕಳೆದ ನಾಲ್ಕು ವರ್ಷಗಳಿಂದ ವಿದೇಶಗಳಿಗೆ ಹೋಗುವಾಗ ಧೈರ್ಯದಿಂದ ಬೀಗುತ್ತಾ, ಎದೆಯುಬ್ಬಿಸಿ ಹೋಗುತ್ತಿದ್ದೇವೆ’ ಎಂದು ಬೀಗುತ್ತಾ ನಡೆದು ತೋರಿಸಿದರು. ಕಾರಣವಿಷ್ಟೇ, ಇಂದಿನ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಜಿಯವರು ಪ್ರಧಾನಿಯಾದ ಮೇಲೆ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ. ಕೆಲವು ದೇಶಗಳೊಂದಿಗೆ ಆರ್ಥಿಕ ವ್ಯವಹಾರವಿದ್ದರೆ, ಇನ್ನೂ ಕೆಲವು ದೇಶಗಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರುವಲ್ಲಿ ಸಫಲರಾಗಿದ್ದಾರೆ.

11ನೆಯ ಶತಮಾನದಲ್ಲಿ ಭಾರತದ ರಾಜನ ಮಗಳೊಬ್ಬಳು ದಕ್ಷಿಣ ಕೊರಿಯಾದ ರಾಜಕುಮಾರನೊಬ್ಬನನ್ನು ಮದುವೆಯಾಗಿ ಅಲ್ಲಿ ರಾಣಿ ಯಾಗಿ ಮೆರೆದಂತಹ ಇತಿಹಾಸವಿದೆ. ಭಾರತದ ಅಯೋಧ್ಯದ ಕೋಸಲ ಪ್ರಾಂತ್ಯದ ರಾಜ ಪದ್ಮಸೇನ ಮತ್ತು ರಾಣಿ ಇಂದುಮತಿಯ ಪುತ್ರಿ ಶ್ರೀರತ್ನ ಎಂಬ ರಾಜಕುಮಾರಿಗೆ ಹೊರದೇಶದ ರಾಜಕುಮಾರನೊಬ್ಬನನ್ನು ಮದುವೆಯಾಗುವ ಕನಸು ಬೀಳುತ್ತದೆ. ಅದೇ ಸಮಯದಲ್ಲಿ ದಕ್ಷಿಣ ಕೊರಿಯಾದ ರಾಜ ಸುರೋ ಅವರಿಗೂ ಕನಸಿನಲ್ಲಿ ನವಿಲೊಂದು ಕಣ್ಣ ಮುಂದೆ ಬಂದು ರಾಜಕುಮಾರಿಯಾಗಿ ಕಾಣಿಸಿಕೊಂಡು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾಳೆ. “ನಾನು ಕೋಸಲ ರಾಜ್ಯದ ರಾಜಕುಮಾರಿ” ಎಂದಷ್ಟೇ ಹೇಳಿ ಆ ನವಿಲು ಹಾರಿ ಹೋಗುತ್ತದೆ. ಅಲ್ಲಿಂದ ಆ ರಾಜಕುಮಾರ ಮದುವೆಯಾದರೆ ಆಕೆಯನ್ನೆ ಮದುವೆಯಾಗುವುದು ಎಂದು ಯೋಚಿಸುತ್ತಾನೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಇತ್ತ ಕೋಸಲ ರಾಜ ಒಂದು ಹಡಗನ್ನು ತಯಾರಿಸಿ ಅದರಲ್ಲಿ ರಾಜಕುಮಾರಿ ಶ್ರೀರತ್ನಳನ್ನು ತನ್ನ ಕನಸಿನಲ್ಲಿ ಬಂದ ರಾಜಕುಮಾರನ್ನು ಭೇಟಿಯಾಗಲು ಸಮುದ್ರ ಮಾರ್ಗದಲ್ಲಿ ಕಳುಹಿಸಿತ್ತಾನೆ. ಆದರೆ ಆ ಹಡಗು ಸಮುದ್ರದ ಮಧ್ಯದಲ್ಲಿ ಮುಳುಗಿದಾಗ ಅವಘಡದಿಂದ ಪಾರಾಗಿ ಆ ರಾಜಕುಮಾರಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಾಳೆ. ತಂದೆ ಪದ್ಮಸೇನ ತನ್ನ ಮಗಳಿಗೆ ಮತ್ತೊಂದು ಉತ್ತಮವಾದ ಹಡಗನ್ನು ನಿರ್ಮಿಸಿ ಆ ಯುವರಾಣಿಯನ್ನು ಪುನಃ ಕನಸಿನಲ್ಲಿ ಕಂಡ ರಾಜಕುಮಾರನ ಅನ್ವೇಷನಕ್ಕೆ ಕಳುಹಿಸಿಕೊಡುತ್ತಾನೆ.
ರಾಜಕುಮಾರಿ ಶ್ರೀರತ್ನ ಸಮುದ್ರ ಮಾರ್ಗದ ಮುಖಾಂತರ ಕೊರಿಯಾ ದೇಶವನ್ನು ತಲುಪಿ ರಾಜಕುಮಾರ ಕಿಮ್‍ಸುರೋ ಅವರನ್ನು ಭೇಟಿಯಾಗಿ ಅವರಿಬ್ಬರ ನಡುವೆ ವಿಚಾರ ವಿನಿಮಯಗಳು ನಡೆದು, ಅವರಿಬ್ಬರ ಮದುವೆ ವಿಜ್ರಂಬಣೆಯಿಂದ ನೆರವೇರುತ್ತದೆ. ನಮ್ಮ ಭಾರತ ದೇಶದ ಅಯೋಧ್ಯದ ರಾಣಿ ಶ್ರೀರತ್ನಳು ಅಲ್ಲಿಂದ ಹಿಯೋ ವಾಂಗ್ ಯಾಕ್ ಎಂಬ ಹೆಸರಿನಿಂದ ಪ್ರಖ್ಯಾತಳಾಗುತ್ತಾಳೆ. ಅಲ್ಲಿನ ಜನರು ನಮಗೆ ಒಳ್ಳೆಯ ರಾಜಕುಮಾರಿ ದೊರೆತಳೆಂದು ಸಂತೋಷಪಡುತ್ತಾರೆ. ಈ ದಂಪತಿಗಳಿಗೆ 10ಜನ ಮಕ್ಕಳಾಗಿ ಅವರ ಸಂತತಿಯು ಇಂದು ಅಲ್ಲಿನ ಜನಸಂಖ್ಯೆಯ ಶೇ12ಷ್ಟು ಇದ್ದಾರೆಂದು ತಿಳಿದುಬರುತ್ತದೆ.

ಕಳೆದ 4 ದಶಕಗಳಿಂದ ದಕ್ಷಿಣ ಕೊರಿಯಾ ದೇಶದ ಕೆಲವು ಪುಸ್ತಕ ಪ್ರೇಮಿಗಳು ಈ ಇತಿಹಾಸದ ಜಾಡನ್ನು ಹಿಡಿದು ಉತ್ತರ ಪ್ರದೇಶದ ಅಯೋಧ್ಯೆಯ ಕೆಲವು ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಬಿಮಲೇಂದ್ರ ಪ್ರತಾಪ್ ಮಿಶ್ರ ಎಂಬ ಶ್ರೀಮಂತರರೊಬ್ಬರನ್ನು ಭೇಟಿಯಾಗುವ ಅವಕಾಶ ದೊರೆಯುತ್ತದೆ. ಆಗ ಅವರು ಥೈಲ್ಯಾಂಡಿನಲ್ಲಿ ಆಯುಥಾಯ ಎಂಬ ಸ್ಥಳದ ಬಗ್ಗೆ ಮಾಹಿತಿ ನೀಡಿದರೂ, ಅದಕ್ಕೂ ದಕ್ಷಿಣ ಕೊರಿಯಾದ ರಾಣಿ ಹಿಯೋ ವಾಂಗ್ ಯಾಕ್ ಗೂ ಯಾವುದೇ ಸಂಬಂಧವಿಲ್ಲದಿರುವುದು ಕಂಡುಬಂತು.
ರಾಣಿ ಹಿಯೋ ವಾಂಗ್ ಯಾಕ್‍ನ ಸಮಾಧಿಯಲ್ಲಿರಿಸಿದ ಕಲ್ಲನ್ನು ಪರಿಶೀಲಿಸಿದಾಗ ಅದು ಅಯೋಧ್ಯೆಯಿಂದ ತೆಗೆದುಕೊಂಡು ಹೊದಂತಿದ್ದುದು ಮಾತ್ರವಲ್ಲದೆ ಅದರಲ್ಲಿದ್ದ ರಾಜಮುದ್ರೆಯು ಅಯೋದ್ಯೆಯ ರಾಜಮನೆತನದವರು ಬಳಸುತ್ತಿದ್ದ ಮುದ್ರೆಯಂತಿರುವುದು ಕಂಡುಬಂತು. ನಂತರ ಆ.ಓ.ಂ. ಪರೀಕ್ಷೆಯಿಂದಲೂ ಇದು ಧೃಡಪಟ್ಟಿತು. ನಂತರ ಪ್ರಾರಂಭವಾದ ದಕ್ಷಿಣ ಕೊರಿಯಾ ಸಂಬಂಧ ಇತ್ತೀಚೆಗೆ ಉತ್ತರ ಪ್ರದೇಶದ ಅಯೋಧ್ಯೆಲ್ಲಿ ನಡೆಸಿದ ದೀಪಾವಳಿ ಹಬ್ಬಕ್ಕೂ ಅಲ್ಲಿನ ಪ್ರಥಮ ಮಹಿಳೆ ಬಂದು ಕಾರ್ಯಕ್ರಮವನ್ನು ಉಧ್ಘಾಟಿಸುವಲ್ಲಿಯವರೆಗೂ ಬಂದು ನಿಂತಿದೆ.

ಈ ರೀತಿಯ ನಿದರ್ಶನಗಳು ಹಲವು ಇದೆ. ಜಗತ್ತಿನ ಮೂಲೆಮೂಲೆಯಲ್ಲಿ ಭಾರತೀಯರು ತಮ್ಮ ಪ್ರಾಭಲ್ಯವನ್ನು ಮೆರೆದಿದ್ದರು. ಜಗತ್ತಿನ ಮೂಲೆ ಮೂಲೆಗಳಲ್ಲಿ ಅಂದಿನ ಭಾರತೀಯರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದರು. ಜಗತ್ತಿನ ಹಲವು ದೇಶಗಳಲ್ಲಿ ತಮ್ಮ ರಾಜತಾಂತ್ರಿಕ ಸಂಭಂದವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿದ್ದರು. ಮೊಗಲರು ಹಾಗೂ ಬ್ರಿಟಿಷರು ಭಾರತಕ್ಕೆ ದಾಳಿಯಿಟ್ಟ ನಂತರ ಭಾರತದ ಇತಿಹಾಸವೇ ಬುಡಮೇಲಾಯಿತು. ಇತಿಹಾಸವನ್ನು ತಿರುಚಲಾಯಿತು ಸಂಸ್ಕøತಿಯ ಮೇಲೆ ದಾಳಿ ಮಾಡಲಾಯಿತು. ಈಗ ಕಳೆದು ಹೋದ ಭಾರತದ ಭವ್ಯ ಪರಂಪರೆ ಹಾಗೂ ಇತಿಹಾಸವನ್ನು ಮರಳಿ ಪಡೆಯುವಲ್ಲಿ ಭಾರತದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹೆಜ್ಜೆಯಿಟ್ಟಿರುವುದು ಶ್ಲಾಘನೀಯ. ಅವರ ಕಾರ್ಯಕ್ಕೆ ನಮ್ಮೆಲ್ಲರ ಬೆಂಬೆಲವಿರಲಿ. ಭಾರತದ ಕೀರ್ತಿ ಪತಾಕೆ ವಿಶ್ವದಲ್ಲಿ ಹಾರಡಲು ನಮ್ಮೇಲ್ಲರ ಕೊಡುಗೆ ಜೊತೆಗೂಡಲಿ ಎಂಬುದೇ ನಮ್ಮ ಆಶಯ.

. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments