Bhagamandala ಭಾಗಮಂಡಲ

ಭಾಗಮಂಡಲ - Bhagamandala

ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ಶ್ರೀ ಭಗಂಡೇಶ್ವರನ ದಿವ್ಯ ಸನ್ನಿಧಿಯಲ್ಲಿನ ಒಂದು ಸುಪ್ರಸಿದ್ಧ ಗ್ರಾಮವೇ ಭಾಗಮಂಡಲ. ಈ ಗ್ರಾಮ ಪಂಚಾಯಿತಿಯು 3 ಗ್ರಾಮ ಮತ್ತು ಎರಡು ಉಪಗ್ರಾಮಗಳನ್ನು ಒಳಗೊಂಡಿರುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟಗಳನೊಳಗೊಂಡ ಮಲೆನಾಡು ಪ್ರದೇಶದಲ್ಲಿ ಈ ಗ್ರಾಮ ಪಂಚಾಯಿತಿಯು ಸಮುದ್ರ ಮಟ್ಟದಿಂದ 2,875 ಎಂ.ಎಸ್.ಎಲ್. ಎತ್ತರದಲ್ಲಿ ಇದೆ.
ಭಾಗಮಂಡಲ ಗ್ರಾಮಪಂಚಾಯಿತಿಯು ಕೊಡಗು ಜಿಲ್ಲೆಯಲ್ಲಿ ಇದ್ದು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರವಾದ ಮಡಿಕೇರಿಯಿಂದ 38 ಕಿ.ಮೀ. ದೂರದಲ್ಲಿ ಇರುತ್ತದೆ.ಪ್ರಸಿದ್ಧವಾದ ಕಾವೇರಿ ನದಿಯ ಉಗಮಗೊಂಡಿರುವ ತಲಕಾವೇರಿಯು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.
ಗ್ರಾಮ ಪಂಚಾಯತ್ ಭೌಗೋಳಿಕ ವಿವರ: ಭಾಗಮಂಡಲ ಗ್ರಾಮ ಪಂಚಾಯಿತಿಯು 3 ಗ್ರಾಮಗಳು ಮತ್ತು ಎರಡು ಉಪಗ್ರಾಮಗಳನೊಳಗೊಂಡಿರುತ್ತದೆ.ಇದರ ಭೌಗೋಳಿಕ ವಿಸ್ತೀರ್ಣ 15,368 ಎಕರೆ ಈ ವಿಸ್ತೀರ್ಣದಲ್ಲಿ ಕೃಷಿ ಯೋಗ್ಯ ಭೂಮಿ ಮತ್ತು ಮೀಸಲು ಅರಣ್ಯ ಸೇರಿದೆ. 2001ರ ಜನಗಣತಿಯ ಪ್ರಕಾರ ಒಟ್ಟು 1133 ಕುಟುಂಬಗಳನ್ನು ಹೊಂದಿದ್ದು.4142 ಜನಸಂಖ್ಯೆಯನ್ನು ಹೊಂದಿದೆ. ಬಹುಪಾಲು ಕುಟ್ಟುಂಬಗಳು ಕೃಷಿಯನ್ನು ಕಸುಬನ್ನಾಗಿಸಿಕೊಂಡಿದೆ. ಪ್ರಸಿದ್ಧವಾದ ಭಗಂಡೇಶ್ವರ ದೇವಾಲಯ ತ್ರಿವೇಣಿ ಸಂಗಮ ಮತ್ತು ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ್ಳಪಟ್ಟಿರುತ್ತದೆ. ಶ್ರೀ ತಲಕಾವೇರಿ,ತಾವೂರಿನ ಮಹಿಷಾಮರ್ದಿನಿ ದೇವಸ್ಥಾನ, ಕೋರಂಗಾಲದ ಸುಬ್ರಮಣ್ಯ ದೇವಸ್ಥಾನ, ಚೇರಂಗಾಲ,ಸಣ್ಣಪುಲಿಕೋಟು, ತಣ್ಣಿಮಾನಿಯ ಭಗವತಿ ದೇವಸ್ಥಾನಗಳು ಈ ಕ್ಷೇತ್ರದ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿವೆ. ಪ್ರತಿ ವರ್ಷ 230ರಿಂದ 240 ಇಂಚು ಸರಾಸರಿ ಮಳೆಯನ್ನು ಹೊಂದುವ ಈ ಪ್ರದೇಶ ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದೆ.
ಗ್ರಾಮ ಪಂಚಾಯತ್ ನ ಸಾಮಾಜಿಕ ಹಿನ್ನಲೆ: ಭಾಗಮಂಡಲ ಗ್ರಾಮ ಪಂಚಾಯಿತಿಯು ಪ್ರಸಿದ್ಧ ಯಾತ್ರ ಸ್ಥಳಗಳನ್ನೊಳಗೊಂಡು ಅನೇಕ ರೀತಿಯ ಜನಾಂಗಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಜನಾಂಗಗಲು ಗೌಡ,ಗೊಲ್ಲರು, ಅಗಸರು,ಐರಿ, ಕೊಡವರು,ಬ್ರಾಹ್ಮಣರು,ಮರಾಠಿ, ಜೋಗಿ,ಮುಸ್ಲಿಂ ಮತ್ತು ಪ.ಜಾತಿ. ಪರಿಶಿಷ್ಷ ಪಂಗಂಡಕ್ಕೆ ಸಂಬಂದ ಪಟ್ಟ ಜನಾಂಗದವರು ಇದ್ದಾರೆ. ಅನೇಕ ಜನಾಂಗಗಳು ಇದ್ದರು ಕೂಡ ಸಾಮರಸ್ಯ ಭಾವನೆಯಿಂದ ಈ ಗ್ರಾಮ ಪಂಚಾಯಿತಿಯು ಅಭಿವೃದ್ಧಿಯಡೆಗೆ ಸಾಗಿದೆ.
ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯನ್ನು ಹೊಂದುವ ಈ ಪ್ರದೇಸವು ವರ್ಷದ ಮಳೆಗಾಲದಲ್ಲಿ 15 ರಿಂದ 20 ದಿನಗಳ ಕಾಲ ಪ್ರವಾಹ ಪೀಡಿತವಾಗಿರುತ್ತದೆ. ಉಕ್ಕಿ ಹರಿಯುವ ಕಾವೇರಿ ತ್ರಿವೇಣಿ ಸಂಗಮದಲ್ಲಿ ದ್ವೀಪವನ್ನು ಸೃಷ್ಟಿಸುತ್ತದೆ. ಹಲವಾರು ಇಲಾಖೆಗಳ ನೆರವಿನಿಂದ ಮತ್ತೆ ಜನ ಜೀವನ ಯತಾಸ್ಥಿತಿಗೆ ಮರಳುತ್ತದೆ.
ಗ್ರಾಮ ಪಂಚಾಯತ್ ನ ಜನಜೀವನ ಪರಿಚಯ
ಭಾಗಮಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ 3 ಗ್ರಾಮಗಳು ಕೃಷಿ ಪ್ರದಾನವಾಗಿದ್ದು 670 ಸಾಗುವಳಿದಾರರು ಕೃಷಿ ಚಟುವಟಿಕೆಯನ್ನೆ ಜೀವನಾದಾರವನ್ನಾಗಿಸಿಕೊಂಡಿದಾರೆ. 46ಜನರು ಗುಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿದಾರೆ. 180 ಜನರು ಸಾಗುವಳಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ತರಗತಿವರೆಗೆ ಹಲವಾರು ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉತ್ತಮ ವಿದ್ಯಾಬ್ಯಾಸ ದೊರೆಯುತ್ತದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸುಬುಗಳು: ಕೃಷಿ ಪ್ರಧಾನವಾಗಿರುವ ಈ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಾಣಿಜ್ಯ ಬೆಳೆಗಳಾದ ಏಲಕ್ಕಿ ಮತ್ತು ಕಾಪಿ ಮತ್ತು ಕಪ್ಪು ಮೆಣಸು ಕೃಷಿ ಹೆಚ್ಚು ಜನಪ್ರಿಯವಾಗಿದೆ.ಮೀಸಲು ಅರಣ್ಯ ಪ್ರದೇಸ ಇರುವುದರಿಂದ ಸ್ಥಳೀಯ ಸಂಪನ್ಮೂಲ ಬಿದಿರನ್ನು ಉಪಯೋಗಿಸಿಕೊಂಡು ಬುಟ್ಟಿ ತಯಾರಿಸುತ್ತಾರೆ.ನಿತ್ಯ ಹರಿದ್ವರ್ಣ ಅರಣ್ಯ ಪ್ರದೇಶವಿರುವುದರಿಂದ ಜೇನು ಕೃಷಿಯನ್ನು ಹೆಚ್ಚಿನ ಪ್ರಗತಿಪರ ರೈತರು ಕೈಗೊಂಡಿದ್ದಾರೆ.
ಗ್ರಾಮಪಂಚಾಯಿತಿ ವ್ಯಾಪ್ತಿಯ ನೈಸರ್ಗಿಕ ಸಂಪನ್ಮೂಲಗಳು
ಭಾಗಮಂಡಲ ಗ್ರಾಮ ಪಂಚಾಯತ್ ಕಾವೇರಿ ನದಿಯ ುಗಮ ಸ್ಥಾನದಲ್ಲಿ ಇದ್ದು ನಿತ್ಯಹರಿದ್ವರ್ಣ ಕಾಡುಗಳಿಂದ ಕಂಗೊಳಿಸುತ್ತಿದ್ದೆ. ಸ್ಥಳೀಯರಿಗೆ ಗುಡಿ ಕೈಗಾರಿಕೆ ನಿರ್ವಹಿಸಲು ಅಗತ್ಯೆವಿರುವ ಬಿದಿರು ದೊರೆಯುತ್ತಿದೆ. ಹಾಗೇಯೇ ವಿವಿಧ ಅರಣ್ಯೋತ್ಪನಗಳಾದ ಸೀಗೆ,ಬೆತ್ತ ಇತ್ಯಾದಿಗಳು ಜನರಿಗೆ ದೊರಕುತ್ತದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಕುಟುಂಬಗಳಿಗೆ ನೈಸರ್ಗಿಕ ಮೂಲಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದೆ.

ಗ್ರಾಮಪಂಚಾಯಿತಿ ವ್ಯಾಪ್ತಿಯ ಜನಸಂಖ್ಯಾ ವಿವರ:  2001 ಜನಗಣತಿಯ ಪ್ರಕಾರ 4142 ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಪುರುಷರು 2082 ಹಾಗೂ ಸ್ತೀಯರು2060 ಪ.ಜಾತಿಯಲ್ಲಿ317 ಜನಸಖ್ಯೆ ಇದ್ದು ಅದರಲ್ಲಿ ಪುರುಷರು 150 ಸ್ತೀಯರು 167 ಪ.ವರ್ಗ 345 ಜನಸಂಖ್ಯೆ ಇದ್ದು ಪುರುಷರು 162 ಸ್ತೀಯರು 183 ಮಂದಿ ಇದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳು
ಭಾಗಮಂಡಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮೂರು ಕಂದಾಯ ಗ್ರಾಮಗಳು ಇವೆ. ಭಾಗಮಂಡಲ,ಚೇರಂಗಾಲ ಮತ್ತು ತಣ್ಣಿಮಾನಿ. ಹಾಗೂ ತಾವೂರು ಕೋರಂಗಾಲ ಉಪಗ್ರಾಮಗಳಿವೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಶ್ರೀ ಕಾಳನ ಎ ರವಿ President 7090948361
  2. ಶ್ರೀಮತಿ ಅಡಿಯರ ಗಂಗಮ್ಮ Vice President 8762934319
  3. ಪೆಮಿತ ಸಿ ಎಸ್ Member 7019081703
  4. ಶ್ರೀ ಹೆಚ್ ಜೆ ಸತೀಶ್ ಕುಮಾರ್ Member  9448422291
  5. ಶ್ರೀ ದಂಡಿನ ಕೆ ಜಯಂತ Member 9449402351
  6. ಶ್ರೀ ಎಸ್ ಎಸ್ ನಾಗೇಶ Member 9483118202
  7. ಶ್ರೀ ನಿತ್ಯಾನಂದ ಎ ಎಸ್ Member 9449915546
  8. ಶ್ರೀಮತಿ ಎ ಈ ದುರ್ಗಾವತಿ Member 9481574082
  9. ಶ್ರೀಮತಿ ಶಶಿಕಲಾ ವಸಂತಾಚಾರ್ಯ Member 8867022476
  10. ಶ್ರೀಮತಿ ವೀಣಾ ಎನ್ ಜೆ Member 9483176758
  11. ಶ್ರೀಮತಿ ಎಂ ಎಸ್ ಪೂವಮ್ಮ Member 8971417254

ಪಂಚಾಯ್ತಿ ಸಂಪರ್ಕ
ವಿಳಾಸ: ಭಾಗಮಂಡಲ ಗ್ರಾಮ & ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ ಕರ್ನಾಟಕ ರಾಜ್ಯ
Tel:  9480869203
Pdo: 
Mob: 

Email:bhagamandalagp@yahoo.in

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಭಾಗಮಂಡಲ: 08272 243212

ಪೊಲೀಸ್ ಠಾಣೆ

  • Bhagamandala PS
    Mob: 9480804949 Tel: 08272 243270
    Address: bhagamandalamcr@ksp.gov.in PSI, Bhagamandala PS, Karike Road, Bhagamandala, Madikeri Taluk, Kodagu, District – 571247

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಪಶು ಚಿಕಿತ್ಸಾಲಯ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

  • ಭಗಂಡೇಶ್ವರ ದೇವಾಲಯ
  • ತ್ರಿವೇಣಿ ಸಂಗಮ
  • ಶ್ರೀ ಭಗವತಿ ದೇವಾಲಯ, ಪದಕಲ್ಲು ಗ್ರಾಮ, ಚೆಟ್ಟಿಮಾನಿ

ವ್ಯಕ್ತಿ ಪರಿಚಯ

ವಿಶೇಷ

  • ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಯಮಿತ, ಭಾಗಮಂಡಲ
  • ಜೇನು ಕೃಷಿ ತಾಂತ್ರಿಕ ತರಬೇತಿ ಕೇಂದ್ರ, ಭಾಗಮಂಡಲ (ತೋಟಗಾರಿಕೆ ಇಲಾಖೆ)

ಶುಭಕೋರುವವರು

2015 – 2020

  1. ಸುಮಿತ್ರ ಜೆ President 8277778714
  2. ಕಾಳನ ಭವಾನಿ ಹರೀಶ್ Vice President 8277130842
  3. ಪೆರುಬಾಯಿ ಪ್ರಮೀಳಾ ವಿಜಯ Member 7760141893
  4. ಪುರೋಷೋತ್ತಮ ಕೆ ಸಿ Member 9449532289
  5. ಭಾಸ್ಕರ್ ತಣ್ಣಿಮಾನಿ Member 9342839647
  6. ಕುದುಕುಳಿ ಯೋಗಾನಂದ Member 9449475832
  7. ಮತ್ತಾರಿ ಎಂ ರಾಜ Member 9480364692
  8. ಸುನಿತ ಕೆ ಬಿ Member 9483716380
  9. ಹರಣಿ ಬಿ ಎಸ್ Member 9481132059
  10. ರಾಜ ರೈ ಬಿ ಕೆ  Member 9449169864
  11. ಮುನೀರಾ ಸಿ ಎ Member 9483115243
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.