• Search Coorg Media

BITTANGALA ಬಿಟ್ಟಂಗಾಲ

ಬಿಟ್ಟಂಗಾಲ - BITTANGALA

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಬಿಟ್ಟಂಗಾಲ ವಿರಾಜಪೇಟೆ ತಾಲ್ಲೂಕು
ಗ್ರಾಮ ಪಂಚಾಯಿತಿ ಆಡಳಿತಾತ್ಮಕ ಪರಿಚಯ
ದೋ …………… ಎಂದು ಒಂದೇ ಸಮನೆ ಸುರಿಯುವ ನಿರಂತರ ಮಳೆಯ ರಭಸಕ್ಕೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ, ಎತ್ತರವಾದ ಬೆಟ್ಟಗುಡ್ಡದಿಂದ ಭೋರ್ಗರೆಯುತ್ತಾ ಲಲನೆಯರಂತೆ ಕಣ್ಣ ಕುಕ್ಕುವ ಜಲಪಾತಗಳು, ಪ್ರಕೃತಿ ಸಿರಿಯ ಕೊಡಗಿನಲ್ಲಿ ಸರ್ವೆ ಸಾಮಾನ್ಯ ಮನೋಹರ ದೃಶ್ಯ ಅಪ್ಟೇ ಅಲ್ಲ ಪ್ರಕೃತಿ ಮಾತೆ ಹಸಿರು ಸೀರೆ ಉಟ್ಟು ಕಂಗೊಳಿಸುತ್ತಾಳೆ. ಬಳಕುತ್ತಾ ಹರಿದಾಡುವ ಹಾವುಗಳಂತೆ ಕಾಣುವ ರಸ್ತೆ, ಅಂತರಾಷ್ಟೀಯ ಮಟ್ಟದವರೆಗೆ ಹೆಸರು ಮಾಡಿರುವ ಕ್ರೀಡಾ ಪಟುಗಳು ಯೋಧರು, ಶಿಸ್ತು ಬದ್ದ ಜೀವನ ನಡೆಸುವ, ವಿಶಿಷ್ಟ ಸಂಸ್ಕ್ರತಿಯ ವೀರಾದಿ ವೀರ ಇಲ್ಲಿನ ಜನರ ಈ ಜೀವನ ಶೈಲಿ, ಆಚಾರ ವಿಚಾರವೇ ಒಂದು ವಿಸ್ಮಯ ಇದೇ ಕೊಡಗಿನ ಹೆಮ್ಮೆಯ ವಿಚಾರ.
ಇಲ್ಲಿ ಇರುವ ಮುರು ತಾಲ್ಲೂಕುಗಳಲ್ಲಿ ಒಂದು ತಾಲ್ಲೂಕು ವಿರಾಜಪೇಟೆ. ಇದು ಕೇರಳರಾಜ್ಯ, ಮೈಸೂರು ಜಿಲ್ಲೆಯ ಮೇರೆಗಳಿಂದ ಸುತ್ತುವರಿದಿದೆ. ಹಿಂದಿನ ಕಾಲದಿಂದಲೂ ಕೇರಳಕ್ಕೆ ವ್ಯಾಪಾರ ಕೇಂದ್ರವಾದರಿಂದ ಈ ವಿರಾಜಪೇಟೆಯಲ್ಲಿ ವೈವಿದ್ಯಮಯ ಜನ ಜೀವನ ನಡೆಸುವ ಎಲ್ಲಾ ರೀತಿಯ ಧರ್ಮದ ಜನರಿದ್ದಾರೆ, ಇಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳಿಗೆ ಕೇರಳದ ದೈವ ಮುಲ ಎಂದು ಹೇಳುವ ಪ್ರತೀತಿ ಹಿರಿಯರಿಂದ ತಿಳಿದದ್ದು,
ವಿರಾಜಪೆಟೆಯಿಂದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ವಿರಾಜಪೇಟೆಯಿಂದ 5 ಕಿ. ಮೀ ದೂರದಲ್ಲಿ ಸಿಗುವುದೇ ಬಿಟ್ಟಂಗಾಲ ಗ್ರಾ. ಪಂ ಇದರ ವ್ಯಾಪ್ತಿಯಲ್ಲಿ 6 ಸರಕಾರಿ ಶಾಲೆಗಳು ಮತ್ತು ಏಕಲವ್ಯ ವಸತಿ ಶಾಲೆ ಒಂದು ಖಾಸಗಿ ವಸತಿ ಶಾಲೆ (ದೇವಯ್ಯ ಮೆಮೋರಿಯಲ್ ಸ್ಕೂಲ್) ಮತ್ತು ರೋಟರಿ ಪ್ರೌಢ ಶಾಲೆಗಳು ಶಿಕ್ಷಣ ನೀಡುತ್ತವೆ,
ಬಿಟ್ಟಂಗಾಲ ಗ್ರಾಮಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 40 ಕಿ. ಮೀ ದೂರದಲ್ಲಿದೆ.ತಾಲ್ಲೂಕು ಕೇಂದ್ರವಾದ ವಿರಾಜಪೇಟೆ 5 ಕಿ. ಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಹಾತೂರು ಗ್ರಾಮ ಪಂಚಾಯಿತಿ. ಬಿ. ಶೆಟ್ಟಿಗೇರಿ ಪಂಚಾಯಿತಿ, ಬೇಟೋಳಿ ಗ್ರಾಮ ಪಂಚಾಯಿತಿ, ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿ ಇರುತ್ತದೆ. ಸದರಿ ಗ್ರಾಮ ಪಂಚಾಯಿತಿಯು ಒಟ್ಟು 22,116,39 ಎಕ್ಟರ್ ಭೂ ಪ್ರದೇಶವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯಿತಿಯು ಒಟ್ಟು 5472 ಜನ ಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಪ. ಜಾತಿಯ 423 ಪ.ಪಂ.ವಗಗಳ 629 ಹಾಗೂ ಇತರೆ ಜನಾಂಗದ 4420 ಜನಸಂಖ್ಯೆಯಾಗಿರುತ್ತದೆ. ಈ ಗ್ರಾಮ ಪಂಚಾಯಿತಿಯು 1376 ಕುಟುಂಬಗಳ ಪೈಕಿ ಇತರೆ ಜನಾಂಗದ 99 ಪ.ಜಾತಿ /ಪ.ಪಂ ವಗಗಳ 141 ಕುಟುಂಬಗಳಾಗಿವೆ.ಗ್ರಾಮ ಪಂಚಾಯಿತಿಯಲ್ಲಿ ಪ. ಜಾ/ಪ.ಪಂ ವಗದವರು,ಕೊಡವರು,ಕುರುಬರು,ಒಕ್ಕಲಿಗರು,ಮಡಿವಾಳರು,ಮುಸ್ಲಿ,ಕ್ರಿಶ್ಮಿನ್, ಮಲೆಯಾಳಿ, ಜನಾಂಗಕ್ಕೆ ಸೇರಿದವರಾಗಿರುತ್ತಾರೆ.ಇವರಲ್ಲಿ ಶೇ. 56 ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಶೇ 40% ಜನರು ಕೃಷಿ ಕೂಲಿಯನ್ನೇ ಅವಲಂಬಿಸಿರುತ್ತಾರೆ.ಉಳಿದ ಶೇ 5% ರಷ್ಟು ಜನರು ಸರಕಾರಿ ನೌಕರಿ ವಗಕ್ಕೆ ಹಾಗೂ ಇನ್ನಿತರೆ ಕುಶಲ ಕಮಿಗಳ ಕುಟುಂಬದವರಾಗಿರುತ್ತಾರೆ.ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಪುಚ್ಚಿಮಂಡ ಎಂ ಬೆಳ್ಯಪ್ಪ President 7760103623
 2. ಶ್ರೀಮತಿ ಅಲೇಂಗಡ ಜಾನಕ್ಕಿ Vice President 9008612962
 3. ಮುಕ್ಕಾಟೀರ ಎಂ ಬೋಪಯ್ಯ Member 9449122444
 4. ಶ್ರೀಮತಿ ಕಮಲ ಪಿ. ಆರ್ Member 9731921497
 5. ಕೊಂಗಂಡ ಎಂ ಕಾರ್ಯಪ್ಪ Member 9448190962
 6. ಬಿ ಆರ್ ದಿನೇಶ್ ಬಾಳುಗೋಡು Member 9448721130
 7. ಶ್ರೀ ಬೊಪ್ಪಂಡ ಎಂ ವಸಂತ Member 9448312174
 8. ಶ್ರೀಮತಿ ಪೊನ್ನಕಚ್ಚೀರ ಶಿಲ್ಪ Member 9686815871
 9. ಪುಷ್ಪವಲ್ಲಿ ಬಾಳುಗೋಡು Member 9449122444
 10. ಬಲ್ಲಡಿಚಂಡ ಜೆ ಕಾವೇರಮ್ಮ Member 9900500294
 11. ಶ್ರೀಮತಿ ದೇವಿ Member 8861962030
 12. ನಂಬುಡುಮಾಡ ಬಿ ಪೂವಯ್ಯ Member 9449632495
 13. ಶ್ರೀಮತಿ ಬಬ್ಬೀರ ವಾರಿಜ Member 9480234702
 14. ಎರವರ ಚಿಮ್ಮಿ Member
 15. ಶೋಭಾ ಸುಬ್ಬಮ್ಮ Member 9448262598

ಪಂಚಾಯ್ತಿ ಸಂಪರ್ಕ

ವಿಳಾಸ: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಬಿಟ್ಟಂಗಾಲ ಗ್ರಾಮ ಮತ್ತು ಬಿಟ್ಟಂಗಾಲ ಅಂಚೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274234384
Pdo:
Mob: 

Email: bittangala.vpet.kodg@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.