• Search Coorg Media

ಸರ್ಚ್‌ ಕೂರ್ಗ್:‌ ದೀಪಾವಳಿ ವಿಶೇಷ ಸಂಚಿಕೆ -2021

ಸರ್ಚ್‌ ಕೂರ್ಗ್: ದೀಪಾವಳಿ ವಿಶೇಷ ಸಂಚಿಕೆ -2021

ದೀಪ ಬೆಳಗೋಣ; ಬೆಳಗುತ್ತಾ…. ಮನೆಯೊಳಗಿನ ಮನದೊಳಗಿನ ಅಂಧಕಾರವನ್ನು ಹೋಗಲಾಡಿಸೋಣ….

ಭಾರತೀಯ ಹಬ್ಬಗಳೆಲ್ಲವೂ ಹರ್ಷದಾಯಕವಾಗಿವೆ. ಹಬ್ಬಗಳ ಹೆಸರೇ ಮನುಷ್ಯನನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ಹಾಕಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲ ರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವವಾಗುತ್ತಿಲ್ಲ.

ನವರಾತ್ರಿ ಉಕ್ಕಿಸಿದ ನವೋಲ್ಲಾಸ ಮನಸ್ಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆಯೇ ಮುಸ್ಸಂಜೆಯ ಮುದ್ದಾದ ಮಳೆ, ಚೂರುಚೂರೇ ಆವರಿಸಿಕೊಳ್ಳುತ್ತಾ ಖುಷಿ ಕೊಡುವ ಚಳಿಯ ನಡುವೆ ಮತ್ತೊಂದು ಸಂಭ್ರಮ ಮೈದಳೆದಿದೆ. ಅದು ಬೆಳಕಿನ ಹಬ್ಬ, ಬದುಕಿನ ಹಬ್ಬ, ಕುಟುಂಬದ ಹಬ್ಬ, ಊರ ಹಬ್ಬವಾದ ದೀಪಾವಳಿ. ನವರಾತ್ರಿಯ ವಿಜಯದಶಮಿಗೂ ದೀಪಾವಳಿ ಆರಂಭದ ಚತುರ್ದಶಿಗೂ ನಡುವೆ ಇರುವುದು ಹದಿನೆಂಟೇ ದಿನದ ಅಂತರ. ಅದರ ನಡುವೆಯೇ ಹಾಲು ಪೈರಿನ ಮೊಳಕೆ ಬೆಳೆದು ಭತ್ತವಾಗುತ್ತದೆ, ಪ್ರಕೃತಿಯಲ್ಲಿ ಹೊಸ ಹೂವು ಅರಳುತ್ತದೆ, ಬದುಕು ಸಡಗರದ ಮತ್ತೊಂದು ಶಿಖರದೆಡೆಗೆ ಹೊರಳುತ್ತದೆ.

ದೀಪಾವಳಿಯು ಹಿಂದುಗಳ ಮತ್ತು ಜೈನರ ಜನಪ್ರಿಯ ಹಬ್ಬ. ದೀಪಾವಳಿಯು ಕತ್ತಲೆಯ ವಿರುದ್ಧ ಜಯಗಳಿಸಿದ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕುಬೇರ ದೇವರುಗಳನ್ನು ಪೂಜಿಸುವರು. ತಮ್ಮ ಎಲ್ಲಾ ಬಂಧುಗಳನ್ನು, ಗೆಳೆಯರನ್ನು ಕರೆದು, ಸಿಹಿ ಹಂಚಿ, ಕಾಣಿಕೆಗಳನ್ನು ಕೊಟ್ಟು ಸಂತೋಷ ಪಡುವರು. ತಾವು ಕೂಡ ಒಳ್ಳೆಯ ಮತ್ತು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಹಬ್ಬದ ದಿವಸ ಮನೆಯ ಮುಂದೆ ಮತ್ತು ಅಂಗಡಿಯ ಮುಂದೆ ಪಟಾಕಿ (ಮದ್ದು-ಗುಂಡುಗಳು) ಸಿಡಿಸಿ ಸಂಭ್ರಮಿಸುವರು.

ದೀಪಾವಳಿ ಕೆಲವರಿಗೆ ಪಂಚ ದಿನಗಳ ಹಬ್ಬ. ಕೆಲವರಿಗೆ ನಾಲ್ಕಾದರೆ, ಉಳಿದವರಿಗೆ ಮೂರು ದಿನದ ವೈಭವ. ಧನ ತ್ರಯೋದಶಿಯಿಂದ ಆರಂಭಿಸಿ ಅಮಾವಾಸ್ಯೆ ದಾಟಿ ಬಿದಿಗೆವರೆಗೂ ಸಡಗರ ವಿಸ್ತರಿಸುತ್ತದೆ. ಈ ಎಲ್ಲ ದಿನಗಳಲ್ಲಿ ಮೆರೆಯವುದು ಭಕ್ತಿ, ಪ್ರೀತಿ ಮತ್ತು ಪ್ರಕೃತಿ. ಇದು ಬದುಕಿಗೆ ಆಧಾರವಾದ ಜೀವ ಶಕ್ತಿಯ ವೈವಿಧ್ಯಮಯ ಸ್ವರೂಪಗಳ ಆರಾಧನೆ, ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ದೀಪಾವಳಿ ಎಂದರೆ ಮನೆ-ಮನ ಎಲ್ಲವೂ ಒಮ್ಮೆ ಸ್ವಚ್ಛವಾಗಿ ಲಕಲಕಿಸುತ್ತದೆ. ಅಂತೆಯೇ ಹಳೆ ನೆನಪು, ನೋವುಗಳ ಕೊಳೆಯೂ ಗುಡಿಸಿ ಹೋಗುತ್ತದೆ. ಹೊಸ ಬಣ್ಣ, ಹೊಸ ಬೆಳಕು, ಹೊಸ ಬಟ್ಟೆಗಳ ಮಿರಿಮಿರಿ ಮಿಂಚು ಹಿತವಾಗುತ್ತದೆ. ದೇವರೊಂದಿಗೆ, ಕುಟುಂಬದೊಂದಿಗೆ, ಪ್ರಕೃತಿಯೊಂದಿಗಿನ ಸಂಬಂಧ ಮತ್ತೆ ನವೀಕರಣಗೊಳ್ಳುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವ ಇದೆ. ದೀಪದಾನವು ಈ ಹಬ್ಬದಲ್ಲಿ ಮಾಡುವ ವಾಡಿಕೆ ಇದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿ ಒಂದು ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದ್ದು, ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳುಬೇಕು ಎಂಬುವುದು, ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.

ದೀಪಾವಳಿ ಬಂದ ಕೂಡಲೇ ಎಲ್ಲವೂ ದೇವರಾಗಿ ಬಿಡುತ್ತದೆ. ಎಣ್ಣೆ ಸ್ನಾನಕ್ಕೆ ಮುನ್ನ ಹಂಡೆಯೂ ಹೂವಿನಿಂದ ಅಲಂಕಾರಗೊಳ್ಳುತ್ತದೆ, ದೀಪದ ಬೆಳಕಲ್ಲಿ ದೇವರಾಗುತ್ತದೆ. ಗದ್ದೆಯ ನಡುವೆ ದೀಪವಿಟ್ಟು ಸಲ್ಲಿಸುವ ಪ್ರಾರ್ಥನೆ, ಎಲ್ಲ ಕೃಷಿ ಪರಿಕರಗಳಿಗೆ ನಡೆಯುವ ಪೂಜೆ ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ರೂಪಕಗಳಾಗುತ್ತವೆ. ಬದುಕಿನ ಭಾಗವಾಗಿ ಜತೆಯಾಗಿ ಬಾಳುವ ಗೋವುಗಳ ಮೇಲಿನ ಪ್ರೀತಿ ಉತ್ತುಂಗಕ್ಕೇರುವ ಕಾಲ ಇದು. ಹಿತವಾದ ಸ್ನಾನ, ಬಣ್ಣ ಬಣ್ಣದ ಹೂವುಗಳ ಅಲಂಕಾರ, ರುಚಿಕರ ತಿನಿಸಿನ ಜತೆಗೆ ಬೆಳಗುವ ದೀಪಾರತಿಯಲ್ಲಿ ಒಲವಿನ ಧಾರೆಯೇ ಹರಿಯುತ್ತದೆ.

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ… ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

ದೀಪಾವಳಿ – ಹೆಸರೇ ಹೇಳುವಂತೆ ದೀಪಗಳ ಸಮೂಹ. ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು. “ದೀಪಯತಿ ಸ್ವಂ ಪರ ಚ ಇತಿ ದೀಪ:”– ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ತಮಸೋಮಾ ಜ್ಯೋತಿರ್ಗಮಯ” ಎಂಬ ಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ… ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ, ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ ‘ನಹಿ ಜ್ಞಾನೇನ ಸದೃಶಂ’(ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ‘ಜ್ಞಾನ ವಿನಃ ಪಶು:’(ಜ್ಞಾನವಿಲ್ಲದವನು ಪಶು) ಎನ್ನಲಾಗುತ್ತದೆ. ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಆದ್ದರಿಂದ ಪ್ರತಿ ಮನೆಯಲ್ಲೂ ಪ್ರತಿಯೊಬ್ಬನ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಮೂಲ ಸಂದೇಶವಾಗಿದೆ.

ದೀಪಾವಳಿಯ ಇತಿಹಾಸ
  1. ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ: ಪುರಾತನ ಕಾಲದಿಂದಲೂ ಭಾರತೀಯರು ದೀಪಾವಳಿ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ದೀಪಾವಳಿ ಹಬ್ಬದ ಮಹತ್ವವನ್ನು ಪದ್ಮ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ. ನಚಿಕೇತ ಋಷಿಕುಮಾರನು ತನ್ನ ತಂದೆಗೆ ಸದ್ಗತಿ ಸಿಗಲಿ ಎಂಬ ಒಂದೇ ಕೋರಿಕೆಯೊಂದಿಗೆ ಯಮಧರ್ಮನನ್ನು ಭೇಟಿಯಾಗಲು ಯಮಲೋಕಕ್ಕೆ ತೆರಳುವನು.  “ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವ ಕೆಲಸವನ್ನು ನಾವು ಮಾಡುವುದರಿಂದ ನಮಗೆ ಮುಕ್ತಿ ಸಿಗುತ್ತದೆ, ನಾವು ಸ್ವರ್ಗಕ್ಕೆ ಹೋಗುತ್ತೇವೆ, ಯಾವುದು ನಿಜವಾದ ಸಂಪತ್ತು ಮತ್ತು ಯಾವುದು ಕ್ಷಣಿಕ ಸಂಪತ್ತು, ನಾವು ಸತ್ತಮೇಲೆ ನಮ್ಮ ಭೌತಿಕ ಶರೀರಕ್ಕೆ ಏನು ಆಗುತ್ತದೆ ಮತ್ತು ನಮ್ಮ ಆತ್ಮವು ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ. ನರಕದಲ್ಲಿ ಮತ್ತು ಸ್ವರ್ಗದಲ್ಲಿ ಅದಕ್ಕೆ ಆಗುವ ಅನುಭವಗಳು ಏನು” ಎಂಬಿತ್ಯಾದಿ ವಿಷಯಗಳನ್ನು ಯಮಧರ್ಮನೊಂದಿಗೆ ನಚಿಕೇತ ಸಂವಾದ, ಚರ್ಚೆ ಮಾಡಿದ್ದು ದೀಪಾವಳಿಯ ದಿವಸ.
  2. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಪ್ರವೇಶಿಸಿದ್ದು ದೀಪಾವಳಿಯ ದಿವಸ: ಶ್ರೀರಾಮಚಂದ್ರನು, ಸೀತಾಮಾತಾ, ಲಕ್ಷ್ಮಣ, ಆಂಜನೇಯ ಮತ್ತು ಕಪಿ ಸೇನೆಯೊಂದಿಗೆ ರಾವಣಾಸುರನ ಅಸುರ ಸೈನಿಕರನ್ನು ಸೋಲಿಸಿ ವಿಜಯ ಪತಾಕೆಯ ಜೊತೆ ದೀಪಾವಳಿ ಹಬ್ಬದ ದಿವಸ ಅಯೋದ್ಯೆಯನ್ನು ಪ್ರವೇಶಿಸುತ್ತಾನೆ. ಶ್ರೀ ರಾಮಚಂದ್ರನು ವನವಾಸ ಮುಗಿಸಿ, ಅಸುರ ಸೇನೆಯನ್ನು ಸೋಲಿಸಿ ಅಯೋಧ್ಯೆಗೆ ಬರುವುದನ್ನು ಆಯೋಧ್ಯೆವಾಸಿಗಳು ತಮ್ಮ ಪಟ್ಟಣವನ್ನು ಸಿಂಗರಿಸಿ ಬರಮಾಡಿಕೊಳ್ಳುತ್ತಾರೆ. ಅಂದಿನಿಂದ ಇವತ್ತಿನವರೆಗೆ ದೀಪಾವಳಿಯನ್ನು ಭಾರತದಲ್ಲಿ ಆಚರಿಸುತ್ತಾರೆ ಎಂದು ಪ್ರತೀತಿ.
  3. ಶ್ರೀಲಕ್ಷ್ಮಿಯು ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ: ಸುರರು ಮತ್ತು ಅಸುರರು ಕ್ಷೀರ ಸಮುದ್ರವನ್ನು ಮಂದಾರ ಪರ್ವತ ಮತ್ತು ವಾಸುಕಿಯ ಸಹಾಯದಿಂದ ಸಮುದ್ರ ಮಂಥನ ಮಾಡಿದಾಗ, ಶ್ರೀಲಕ್ಷ್ಮಿಯು ಹುಟ್ಟುತ್ತಾಳೆ. ದೀಪಾವಳಿ ಹಬ್ಬದ ದಿವಸ, ಶ್ರೀವಿಷ್ಣುವನ್ನು ಮದುವೆಯಾಗುತ್ತಾಳೆ. ಆದ್ದರಿಂದ ಜಗತ್ತು ದೀಪಾವಳಿಯನ್ನು ಸಡಗರದಿಂದ ಆಚರಿಸುವುದು ಪ್ರತೀತಿ.
  4. ದುರ್ಗಾದೇವಿಯು  ಅಸುರರನ್ನು ಕೊಂದ ದಿವಸ ದೀಪಾವಳಿ: ದುರ್ಗಾದೇವಿಯು ತನ್ನ ಕಾಳಿಕ ಅವತಾರದಿಂದ ದುಷ್ಟ ಮತ್ತು ಲೋಕ ಕಂಠಕ ಅಸುರರನ್ನು ಕೊಂದ ದಿವಸ. ಆದ್ದರಿಂದ ದೀಪಾವಳಿಯನ್ನು ಒಳ್ಳೆಯ ಜನರು ಸಡಗರದಿಂದ ಆಚರಿಸುವರು ಎಂದು ಪ್ರತೀತಿ.
  5. ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮನು ಸಂಹರಿಸಿದ ದಿವಸ ದೀಪಾವಳಿ: ಶ್ರೀ ಕೃಷ್ಣ ಪರಮಾತ್ಮನು ನರಕಾಸುರನನ್ನು ಸಂಹರಿಸಿದ ದಿವಸ ದೀಪಾವಳಿ. ಅಂಧಕಾರವನ್ನು ಮೀರಿ ಪ್ರಕಾಶಮಯ ಜ್ಞಾನದ ವಿಜಯ ಸಂಕೇತ. ಆದ್ದರಿಂದ ಅಮಾವಾಸ್ಯೆಯ ಕತ್ತಲನ್ನು ಹಿಮ್ಮೆಟ್ಟಿಸಲು ದೀಪಗಳನ್ನು ಬೆಳಗಿಸುವ ಹಬ್ಬ ದೀಪಾವಳಿ.
  6. ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದ ದಿವಸ ದೀಪಾವಳಿ: ಶ್ರೀ ವಿಷ್ಣುವು ತನ್ನ ಐದನೆಯ ಅವತಾರವಾದ ವಾಮನ ಅವತಾರದಿಂದ ಬಲಿಚಕ್ರವರ್ತಿಯನ್ನು ಪಾತಾಳ ಲೋಕಕ್ಕೆ ಕಳುಹಿಸುವ ದಿವಸ ದೀಪಾವಳಿಯ ಪಾಡ್ಯದ ದಿವಸ.
  7. ಭಗವಾನ್ ಮಹಾವೀರರಿಗೆ ಜ್ಞಾನೋದಯವಾದ ದಿವಸ ದೀಪಾವಳಿ: ಜೈನ ಸಮುದಾಯದ ತೀರ್ಥಂಕರ ಭಗವಾನ್ ಮಹಾವೀರರಿಗೆ ದೀಪಾವಳಿ ಹಬ್ಬದ ದಿವಸ  ಜ್ಞಾನೋದಯವಾಯಿತು.
  8. ಸಿಖ್  ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆತ ದಿವಸ ದೀಪಾವಳಿ: ದೀಪಾವಳಿಯ ದಿವಸ ಸಿಖ್ ಸಮುದಾಯದ ಗುರು ಹರಗೋವಿಂದಜೀಯವರಿಗೆ ಮುಕ್ತಿ ದೊರೆಯಿತು. ವ್ಯಾಪಾರ ಮಾಡುವ ಜನರು ದೀಪಾವಳಿಯ ದಿವಸವನ್ನು ಹೊಸ ವರ್ಷವೆಂದು ಹಳೆಯ ಎಲ್ಲ ಲೆಕ್ಕವನ್ನು ಚುಕ್ತಾಮಾಡಿ ಹೊಸವರ್ಷಕ್ಕೆ ಹೊಸ ಲೆಕ್ಕ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ. ಲೆಕ್ಕಗಳ ದೇವತೆ ಕುಬೇರ, ಜ್ಞಾನದ ದೇವತೆ ಗಣೇಶ, ವಿದ್ಯಾದೇವತೆ ಸರಸ್ವತಿ ಮತ್ತು ಐಶ್ವರ್ಯ ದೇವತೆ ಲಕ್ಷ್ಮಿಯ ಪೂಜೆ ಮಾಡಿ ದೀಪಾಲಂಕಾರವನ್ನು ಮಾಡಿ ಸಂಭ್ರಮಿಸುತ್ತಾರೆ.

Kodagu District co-operative Bank

( ಉದ್ದೇಶಿತ ಹೊಸ ಕಟ್ಟಡ )
( ಹಾಲಿ ಕಟ್ಟಡ )

ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ

ಸ್ವಾತಂತ್ರ್ಯ ಹೋರಾಟಗಾರ

ಹುತಾತ್ಮ

ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ

 

ಅಕ್ಟೋಬರ್‌ 31, 2020 ರಂದು, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಅಮಾನುಷವಾಗಿ ಗಲ್ಲಿಗೇರಿಸಿದ 184ನೇ ವರ್ಷದ ಸಂಸ್ಮರಣೆ.

ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ.
   ಅಪ್ಪಯ್ಯಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಮಗ. ಕ್ರಿ.ಶ.1792ರಲ್ಲಿ ಜನಿಸಿದ ಅಪ್ಪಯ್ಯನವರಿಗೆ ಇಬ್ಬರು ಸಹೋದರರಿದ್ದರು, ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಅಪ್ಪಯ್ಯನವರಿಗೆ ಓಡಾಡಲು ಕುದುರೆಯನ್ನು ನೀಡಲಾಗಿತ್ತು. ಲಿಂಗರಾಜರ ನಂತರ ಅಧಿಕಾರಕ್ಕೆ ಬಂದ ಚಿಕ್ಕವೀರರಾಜರ ಆಳ್ವಿಕೆಯಲ್ಲಿ ಅಪ್ಪಯ್ಯನವರು ಸುಬೇದಾರರಾಗಿ ಬಡ್ತಿ ಹೊಂದಿದು. 1834ರಲ್ಲಿ ಆಂಗ್ಲರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ್ಕವೀರರಾಜನನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಯಿತು. 1834ರ ಏಪ್ರಿಲ್ 6ರಿಂದ ಮಡಿಕೇರಿ ಕೋಟೆಯ ಮೇಲೆ ಆಂಗ್ಲರ ಧ್ವಜ ಹಾರಾಡತೊಡಗಿತು. ರಾಜನನ್ನು ಗಡಿಪಾರು ಮಾಡಿ ಕಾಶಿಕೆ ಕಳುಹಿಸಲಾಯಿತು. ಇದರಿಂದ ಸ್ವಾಮಿನಿಷ್ಠೆಯ ಸ್ವಾಭಿಮಾನಿ ಅಪ್ಪಯ್ಯನವರ ರಕ್ತ ಕುದಿಯತೊಡಗಿತು.
   ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು ಹಣದ ರೂಪದಲ್ಲಿ ಕಟ್ಟಬೇಕೆಂಬ ಕಟ್ಟಪ್ಪಣೆ ಹಾಗೂ ರೈತರು ಹೊಗೆಸೊಪ್ಪನ್ನು ಬೆಳೆಸಲು ತಮ್ಮ ಅನುಮತಿ ಪಡೆಯುವಂತೆ ಆಂಗ್ಲರು ಆದೇಶಿಸಿದರು.
   ತನ್ನೊಡೆಯನನ್ನು ಗಡಿಪಾರು ಮಾಡಿದ್ದು, ತೆರಿಗೆ ವಸೂಲಾತಿ ಮತ್ತು ಹೊಗೆಸೊಪ್ಪನ್ನು ಬೆಳೆಸಲು ಅನುಮತಿ ಪಡೆಯುವಂತೆ ನೀಡಿದ ಆದೇಶದ ಬಗ್ಗೆ ಆಂಗ್ಲರ ವಿರುದ್ದ ಅಪ್ಪಯ್ಯನವರು ಸಿಡಿದೆದ್ದರು. ಅಧಿಕಾರವನ್ನು ಧಿಕ್ಕರಿಸಿ ಸ್ವಂತ ಸೇನೆ ಕಟ್ಟಿ ಸಂಘರ್ಷಕ್ಕಿಳಿದರು. ಮಹಾದಂಡನಾಯಕನಾಗಿ ಘರ್ಜಿಸಿದ ಅಪ್ಪಯ್ಯನವರು ಮಂಗಳೂರಿನ ಬಾವುಟಗುಡ್ಡ ಎಂಬಲ್ಲಿ ಸ್ವತಂತ್ರ್ಯ ಧ್ವಜ ಹಾರಿಸಿದರು. ಅವರ ನಾಗರಿಕ ಸೇನೆ 13 ದಿನಗಳ ಕಾಲ ರಾಜ್ಯಭಾರ ಮಾಡಿತು. ಕೆಚ್ಚೆದೆಯ ವೀರ ಅಪ್ಪಯ್ಯನವರ ಸೇನೆ ಮಡಿಕೇರಿ ಕೋಟೆಯನ್ನು ಸಮೀಪಿಸುತ್ತಿರಲು ಅಪ್ಪಯ್ಯನವರನ್ನು ನಮ್ಮ ನಾಡಿನ ದೇಶ ದ್ರೋಹಿಗಳ ಸಹಾಯದಿಂದ ಆಂಗ್ಲರು ಸೆರೆಹಿಡಿದರು. ಸೆರೆಸಿಕ್ಕ ದೇಶಾಭಿಮಾನಿ 45ರ ಹರೆಯದ ಅಪ್ಪಯ್ಯನವರನ್ನು ಆಂಗ್ಲರು 1837 ಅಕ್ಟೋಬರ್ 31ರಂದು ಬೆಳ್ಳಿಗ್ಗೆ 10.45ರ ಸಮಯದಲ್ಲಿ ಮಡಿಕೇರಿ ಕೋಟೆ ಮುಂಬಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಿದರು. ತನ್ನ ನಾಡನ್ನು ಉಳಿಸಲು ಹೋರಾಟ ಮಾಡಿದ ಧೀಮಂತ ನಾಯಕನನ್ನು ಕಳೆದುಕೊಂಡ ಕೊಡಗು ಮಮ್ಮಲ ಮರುಗಿತ್ತು, ಶೋಕಾಬ್ದಿಯಲ್ಲಿ ಮುಳಿಗಿತ್ತು.
ಅಮರ ವೀರ ಸೇನಾನಿ ಅಪ್ಪಯ್ಯಗೌಡರಿಗೆ ನಾಡಿನ ಕೋಟಿ ಕೋಟಿ ಭಾವಪೂರ್ಣ ನಮನಗಳು

ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ.
   ಅಪ್ಪಯ್ಯಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಮಗ. ಕ್ರಿ.ಶ.1792ರಲ್ಲಿ ಜನಿಸಿದ ಅಪ್ಪಯ್ಯನವರಿಗೆ ಇಬ್ಬರು ಸಹೋದರರಿದ್ದರು, ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಅಪ್ಪಯ್ಯನವರಿಗೆ ಓಡಾಡಲು ಕುದುರೆಯನ್ನು ನೀಡಲಾಗಿತ್ತು. ಲಿಂಗರಾಜರ ನಂತರ ಅಧಿಕಾರಕ್ಕೆ ಬಂದ ಚಿಕ್ಕವೀರರಾಜರ ಆಳ್ವಿಕೆಯಲ್ಲಿ ಅಪ್ಪಯ್ಯನವರು ಸುಬೇದಾರರಾಗಿ ಬಡ್ತಿ ಹೊಂದಿದು. 1834ರಲ್ಲಿ ಆಂಗ್ಲರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ್ಕವೀರರಾಜನನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಯಿತು. 1834ರ ಏಪ್ರಿಲ್ 6ರಿಂದ ಮಡಿಕೇರಿ ಕೋಟೆಯ ಮೇಲೆ ಆಂಗ್ಲರ ಧ್ವಜ ಹಾರಾಡತೊಡಗಿತು. ರಾಜನನ್ನು ಗಡಿಪಾರು ಮಾಡಿ ಕಾಶಿಕೆ ಕಳುಹಿಸಲಾಯಿತು. ಇದರಿಂದ ಸ್ವಾಮಿನಿಷ್ಠೆಯ ಸ್ವಾಭಿಮಾನಿ ಅಪ್ಪಯ್ಯನವರ ರಕ್ತ ಕುದಿಯತೊಡಗಿತು.
   ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು ಹಣದ ರೂಪದಲ್ಲಿ ಕಟ್ಟಬೇಕೆಂಬ ಕಟ್ಟಪ್ಪಣೆ ಹಾಗೂ ರೈತರು ಹೊಗೆಸೊಪ್ಪನ್ನು ಬೆಳೆಸಲು ತಮ್ಮ ಅನುಮತಿ ಪಡೆಯುವಂತೆ ಆಂಗ್ಲರು ಆದೇಶಿಸಿದರು.
   ತನ್ನೊಡೆಯನನ್ನು ಗಡಿಪಾರು ಮಾಡಿದ್ದು, ತೆರಿಗೆ ವಸೂಲಾತಿ ಮತ್ತು ಹೊಗೆಸೊಪ್ಪನ್ನು ಬೆಳೆಸಲು ಅನುಮತಿ ಪಡೆಯುವಂತೆ ನೀಡಿದ ಆದೇಶದ ಬಗ್ಗೆ ಆಂಗ್ಲರ ವಿರುದ್ದ ಅಪ್ಪಯ್ಯನವರು ಸಿಡಿದೆದ್ದರು. ಅಧಿಕಾರವನ್ನು ಧಿಕ್ಕರಿಸಿ ಸ್ವಂತ ಸೇನೆ ಕಟ್ಟಿ ಸಂಘರ್ಷಕ್ಕಿಳಿದರು. ಮಹಾದಂಡನಾಯಕನಾಗಿ ಘರ್ಜಿಸಿದ ಅಪ್ಪಯ್ಯನವರು ಮಂಗಳೂರಿನ ಬಾವುಟಗುಡ್ಡ ಎಂಬಲ್ಲಿ ಸ್ವತಂತ್ರ್ಯ ಧ್ವಜ ಹಾರಿಸಿದರು. ಅವರ ನಾಗರಿಕ ಸೇನೆ 13 ದಿನಗಳ ಕಾಲ ರಾಜ್ಯಭಾರ ಮಾಡಿತು. ಕೆಚ್ಚೆದೆಯ ವೀರ ಅಪ್ಪಯ್ಯನವರ ಸೇನೆ ಮಡಿಕೇರಿ ಕೋಟೆಯನ್ನು ಸಮೀಪಿಸುತ್ತಿರಲು ಅಪ್ಪಯ್ಯನವರನ್ನು ನಮ್ಮ ನಾಡಿನ ದೇಶ ದ್ರೋಹಿಗಳ ಸಹಾಯದಿಂದ ಆಂಗ್ಲರು ಸೆರೆಹಿಡಿದರು. ಸೆರೆಸಿಕ್ಕ ದೇಶಾಭಿಮಾನಿ 45ರ ಹರೆಯದ ಅಪ್ಪಯ್ಯನವರನ್ನು ಆಂಗ್ಲರು 1837 ಅಕ್ಟೋಬರ್ 31ರಂದು ಬೆಳ್ಳಿಗ್ಗೆ 10.45ರ ಸಮಯದಲ್ಲಿ ಮಡಿಕೇರಿ ಕೋಟೆ ಮುಂಬಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಿದರು. ತನ್ನ ನಾಡನ್ನು ಉಳಿಸಲು ಹೋರಾಟ ಮಾಡಿದ ಧೀಮಂತ ನಾಯಕನನ್ನು ಕಳೆದುಕೊಂಡ ಕೊಡಗು ಮಮ್ಮಲ ಮರುಗಿತ್ತು, ಶೋಕಾಬ್ದಿಯಲ್ಲಿ ಮುಳಿಗಿತ್ತು.
ಅಮರ ವೀರ ಸೇನಾನಿ ಅಪ್ಪಯ್ಯಗೌಡರಿಗೆ ನಾಡಿನ ಕೋಟಿ ಕೋಟಿ ಭಾವಪೂರ್ಣ ನಮನಗಳು

ಗುಡ್ಡೆಮನೆ ಅಪ್ಪಯ್ಯ ಗೌಡರ ಕಂಚಿನ ಪ್ರತಿಮೆ

ಚಿತ್ರಶಾಲೆ

2017ರ ಕಾರ್ಯಕ್ರಮ

Muliya Jewels (Shyama Jewels Madikeri Pvt.Ltd), Mahadevpet Rd, Mahadevpet, Madikeri, Karnataka 571201

Muliya Jewels (Shyama Jewels Madikeri Pvt.Ltd), Mahadevpet Rd, Mahadevpet, Madikeri, Karnataka 571201

ಮುಳಿಯ ಜ್ಯುವೆಲ್ಸ್‌ನ ವಿನೂತನ ಹೆಜ್ಜೆ: ಗ್ರಾಹಕರಿಗೆ ಮನೆಯಿಂದಲೇ ಲೈವ್ ಆಭರಣ ಖರೀದಿ ವ್ಯವಸ್ಥೆ

Search Coorg Media“ಸರ್ಚ್‌ ಕೂರ್ಗ್‌ ಮೀಡಿಯಾ” ಗ್ರಾಮೀಣ ಪತ್ರಿಕೋದ್ಯಮದಲ್ಲಿ‌ ಕೃಷಿ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಸಾವಿರಾರು ಚಂದಾದಾರರೊಂದಿಗೆ, searchcoorg.com ಈಗ ಅತಿದೊಡ್ಡ ಹಾಗೂ ಅತಿ ವಿಸ್ತರಾವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿ ಪರಿಣಮಿಸಿದೆ.

For More Details Log on to https://muliya.in/

RJ archive

Dec - 27

Dec - 20

Dec - 06

Nov - 29

Nov - 22

Nov - 15

Nov - 08

Oct - 04

Sept - 13

Sept - 06

Aug - 30

Aug - 23

Aug - 16

Aug - 09

Aug - 02

July - 26

July - 12

July - 05

June - 21

June - 14

May - 31

April - 12

March - 29

March - 15

March - 01

Feb - 22

Feb - 08

Feb - 01

Jan - 25

Jan - 11

Jan - 04

2018

Dec - 25

Nov - 30

Nov - 23

Nov - 09

Nov - 02

Oct - 12

Oct - 05

Sep - 27

Sep - 21

Sep - 07

August - 31

August - 24

August - 10

August - 03

July - 27

July - 20

May - 15

Shanthinikethana Youth Club, Madikeri ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ

ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ
Shanthinikethana Youth Club, Madikeri

ಸಂದರ್ಶನ:

ಪ್ರಾಸ್ತಾವಿಕ

ಮಡಿಕೇರಿ ನಗರದ ಮೈಸೂರು ರಸ್ತೆಯ ಕೆ.ಎಸ್.ಆರ್.ಟಿ.ಸಿ ಬಸ್‌ ಡಿಪೋದ ಬದಿಯಲ್ಲಿರುವ ಶಾಂತಿನಿಕೇತನ ಬಡಾವಣೆಯಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘವು ಈ ವರ್ಷ ಮಡಿಕೇರಿ ದಸರಾ ದಶಮಂಟಪಗಳಿಗೆ ಸರಿ ಸಮನಾದ ಮಂಟಪವನ್ನು ಹೊರಡಿಸುವ ಸಿದ್ದತೆಯಲ್ಲಿದೆ.
ವರ್ಷದಿಂದ ವರ್ಷಕ್ಕೆ ಭಿನ್ನ-ವಿಭಿನ್ನ ರೀತಿಯಲ್ಲಿ ಗಣೇಶನ ಮತ್ತು ಇತರ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ‘ಶಾಂತಿನಿಕೇತನ ಯುವಕ ಸಂಘ’ವು ಈ ಬಾರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮಂಟಪವನ್ನು ಇಳಿಸಿ ದಸರಾ ದಶಮಂಟಪಗಳ ಹುಬ್ಬೆರಿಸುವಂತೆ ಮಾಡುವ ತವಕದಲ್ಲಿದೆ.
ಈ ಬಾರಿ ಶ್ರಿ ಗಣೇಶ ಪುರಾಣದಿಂದ ಆಯ್ದ “ಗಣಪತಿಯಿಂದ ಲೋಕ ಕಲ್ಯಾಣಕ್ಕಾಗಿ ಗಜಾಸುರ ಸಂಹಾರ” ಎಂಬ ಕಥಾ ಭಾಗವನ್ನು ಅಳವಡಿಸಲಾಗಿದೆ. ಈ ಭವ್ಯವಾದ ಮಂಟಪವನ್ನು ಸಂಘದ ಅಧ್ಯಕ್ಷ ಚೇತನ್‌ರವರ ಮಾರ್ಗದರ್ಶನದಲ್ಲಿ ಕಲಾವಿದರಾಗಿದ್ದ ದಿ.ಅಣ್ಣುರವರ ಪುತ್ರ ರವಿಯವರು ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಕಲಾವಿದ ರವಿಯರ ಕೈಚಳಕದಲ್ಲಿ ಇಲ್ಲಿಯವರೆಗೆ ದಸರಾ, ಗಣೇಶೋತ್ಸವ, ಕಾವೇರಿ ಸಂಕ್ರಮಣದ ಮಂಟಪ, ಮಡಿಕೇರಿ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಶಿವಾಲಯ ಮುಂತಾದ ಹತ್ತು ಹಲವು ಕಲಾಕೃತಿಗಳು ನಿರ್ಮಾಣಗೊಂಡಿದೆ. ರವಿಯವರೊಂದಿಗೆ ಸಹ ಕಲಾವಿದರ ತಂಡ ಸತತ 2 ತಿಂಗಳಿಂದ ಶ್ರಮ ವಹಿಸಿ “ಗಣಪತಿಯಿಂದ ಲೋಕ ಕಲ್ಯಾಣಕ್ಕಾಗಿ ಗಜಾಸುರ ಸಂಹಾರ” ಎಂಬ ಕಥಾ ಹಂದರದ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಮಂಟಪದ ಸ್ಟುಡಿಯೋ ಸೆಟ್ಟಿಂಗ್ ಹಾಗೂ ಸೌಂಡ್‌ ಸಿಸ್ಟಂನ್ನು ಬೆಂಗಳೂರಿನ ಗುರು ಲೈಟಿಂಗ್ಸ್ ನ ಲೋಕೇಶ್ ರವರು ಮಾಡಲಿದ್ದಾರೆ. ಪೂಜಾ ಲೈಟಿಂಗ್ಸ್‌ ರವರಿಂದ ಆರ್ಚ್‌ ಲೈಟಿಂಗ್ಸ್ ಬೋರ್ಡ್ ಅಳವಡಿಸಲಾಗುತ್ತದೆ. ಮಂಟಪದ ಚಲನವಲನವನ್ನು ವಿಜಯ ಹಾಗೂ ವಿನು ತಂಡದವರು ನಿರ್ವಹಿಸಲ್ಲಿದ್ದಾರೆ. ಕೂಲ್‌ ಪೈರ್‌ ಸಿಸ್ಟಂನ್ನು ಬೆಂಗಳೂರಿನ ಆರ್.ಜೆ.‌ ವರ್ಲ್ಡ್ ರವರು ನಿರ್ವಹಿಸಲಿದ್ದಾರೆ.
ಶಾಂತಿನಿಕೇತನ ಯುವಕ ಸಂಘದ ಕಳೆದ 40 ವರ್ಷಗಳ ಭವ್ಯ ಕಲಾಕೃತಿಯ ಮಂಟಪವು ಜನ-ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾಗಿದ್ದು, ಒಂದು ರೀತಿಯಲ್ಲಿ ಶಾಂತಿನಿಕೇತನ ಯುವಕ ಸಂಘದ ಗಣೇಶೋತ್ಸವ ಕೂಡಾ ಮಡಿಕೇರಿಯ ದಸರಾ ಜನೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವುದರತ್ತ ತನ್ನ ಹೆಜ್ಜೆಯನ್ನಿರಿಸುವುದು ಶ್ಲಾಘನೀಯ. ಇದೆಲ್ಲದಕ್ಕೂ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾದ ಶ್ರಿ ಚೇತನ್ ಮತ್ತು ಬಳಗದ ಪ್ರತಿಯೊಬ್ಬ ಸದಸ್ಯರ ಶ್ರಮವಿದೆ. ಇವರ ಈ ಜನ ಮನೋರಂಜನೆಯ ಗಣೇಶೋತ್ಸವವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಮೂಡಿ ಬಂದು ಜನರ ಮನೋರಂಜನೆಗೆ ಸಾಕ್ಷಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.

ಆಡಳಿತ ಮಂಡಳಿ – ಪದಾದಿಕಾರಿಗಳು ಹಾಗು ಸದಸ್ಯರುಗಳು

ಚೇತನ್‌ ಕೆ.ಎಚ್‌
ಕೀರ್ತನ್‌ ಕುಮಾರ್‌
ಗಂಗಾಧರ್‌
ಗಿರೀಶ್‌
ಗಿಲ್ಬರ್ಟ್‌ ಲೋಬೋ
ಗೌತಮ್‌ .ಕೆ.ಎಸ್‌
ಗೌತಮ್‌
ಚಂದ್ರ
ಚಂದ್ರಶೇಖರ್‌
ಚರಣ್‌
ಚಷ್ಮಿತ .ಕೆ.ಸಿ
ಚಿರಂತ್‌ ಟಿ.ಸಿ
ಚಿರಾಗ್‌ ಟಿ.ಸಿ
ಜಗದೀಶ್‌ ಪೂಜಾರಿ
ಜಾನ್‌
ಡಿಯಾನ
ಉದಯ ಕುಮಾರ್‌
ತಿಮ್ಮಯ್ಯ ಎಂ.ಬಿ
ತಮ್ಮಿ
ದರ್ಶನ್‌ .ಎ
ಓಂ ಪ್ರಕಾಶ್‌
ಪಿ.ಜಿ. ಕಮಲ್‌
ದಿನೇಶ್‌ .ಆರ್‌
ದಿನೇಶ್‌
ದಿನೇಶ್‌ ಕೆ.ಕೆ
ನಂದೀಶ್‌ .ಎಚ್‌.ವಿ
ದಿವಿತ್‌ ಸಿ.ವೈ
ದುರ್ಗೇಶ್‌ ಭಜರಂಗಿ
ದೇವದಾಸ್‌ ಪಾಟ್ಕರ್‌
ನವೀನ್‌
ನಂದ
ಪಿ.ಜಿ. ಸುಕುಮಾರ್‌
ಪ್ರದೀಪ್‌ ಕುಟ್ಟಪ್ಪ
ಪ್ರಭು .ಎಸ್‌.ಎಂ.
ನವೀನ್‌
ಪ್ರಮೋದ್‌
ಪ್ರವೀಣ್‌ ಆಲ್ವಿನ್‌
ಪ್ರಸನ್ನ .ಎಚ್‌.ಪಿ
ನವೀನ್‌ ರೈ
ಅನಿಲ್‌
ಪ್ಯಾಟ್ರಿಕ್‌ ಲೋಬೋ
ಅನುರಾಗ್‌ ಕೆ.ಆರ್‌
ಅನುಷಾ ಮಂಜುನಾಥ್‌
ನಾಗೇಶ್‌
ಅಭಿಜಿತ್‌
ಅರುಣ್‌ .ಎಸ್‌.ಪಿ
ಅಶ್ವಿತ್‌ ಸಿ.ಟಿ
ನಾಚಪ್ಪ .ಸಿ.ಎನ್‌
ಅಶೋಕ್‌ ಬಿ.ಎಸ್‌ S
ಅಹನ್‌ ಎ.ಜೆ
ಪ್ರಕಾಶ್‌ ಶೆಟ್ಟಿ
ಆಕಾಶ್‌ ಎಂ.ಎಸ್‌
ನಾರಾಯಣ
ಆನಂದ
ಆರೋಗ್ಯನಾಥನ್‌
ಭರತ್‌ ಕುಮಾರ್‌
ನಿಧಿ ಬೋಜಮ್ಮ ಕೆ.ಡಿ
ಮಂಜು .ಎಂ.ಬಿ
ಮಂಜುನಾಥ್‌. ರೈ
ಅಂಜಿತ್‌ .ಎಂ.ವಿ.
ಮಧು ಕುಮಾರ್‌
ಮನೋಜ್‌ .ಕೆ.ಎ
ನೀರಜ್‌ ಕುಮಾರ್‌. ವಿ
ಶೇಖರ
ಮಂಜೇಶ್‌
ಮನೋಜ್‌ ಎಸ್‌
ಸಂತೋಶ್‌ ರೈ
ಮನು
ಮಹೇಶ್‌ .ಆರ್‌
ಸಚಿನ್‌
ಮನು .ಪಿ.ಎಸ್‌
ಮಹೇಶ್‌ .ಎಲ್‌
ಸತೀಶ್‌ ರೈ
ಮನು ಮಂಜುನಾಥ್‌
ಮುರುಳಿ. ಕೆ.ಆರ್‌
ಸನ್ನಿಧಿ ನೀಲಮ್ಮ
ಮಿಥೇಶ್‌ ಕೆ.ವಿ
ಸುಜಿತ್‌
ಸುದರ್ಶನ್‌ .ಎಂ.ಸಿ
ಅಂಕೇಗೌಡ
ಮೇಕ್ಸಿ ಕ್ರಾಸ್ತ
ಹರೀಶ್‌ ರೈ
ಮೋಹಿತ್‌ .ಕೆ.ಡಿ
ಹೇಮಂತ್‌
ಯೋಗೇಶ್‌ ಕುಮಾರ್‌
ರಘುಪತಿ
ರಮೇಶ್‌
ರಮೇಶ್‌ (ಪೆಪ್ಪಿ)
ರಮೇಶ್‌
ರಮೇಶ್‌ ಎ
ರವೀಂದ್ರ .ಪಿ.ಎ
ರಾಜೇಶ್‌ .ಎನ್‌.ಬಿ
ರೋಶನ್‌ (ಚಿಕ್ಕು)
ಲಾಲು
ಲೋಕೇಶ್‌ .ಎಚ್‌.ಪಿ
ಲೋಕೇಶ್‌ ಎ
ಲೋಕೇಶ್‌ ರೈ
ಲೋಹಿತ್‌
ವಾಸುದೇವ .ಎಂ.ಪಿ
ವಿಜಯ ಭಂಡಾರಿ
ವಿಜಯ್‌ ಕೆ.ಬಿ.
ವಿಜಯ್‌ ಬಿ.ಬಿ
ವಿಠಲ .ಕೆ.ಡಿ
ವಿನಯ್‌ ಕುಮಾರ್‌
ವಿನು .ಕೆ.ಎಸ್‌
ವಿನೋದ್‌ ರಾಜ್‌
ವಿವೇಕ್‌ .ಪಿಕೆ.
ವೆಲೇರಿಯನ್‌ ಲೋಬೋ
ವೇಣುಗೋಪಾಲ್‌
ಶರಣ್‌ .ಎನ್‌.ಎಸ್‌
ವೆಂಕಟೇಶ್‌ .ಪಿ.ಎಸ್‌
ಶರತ್‌
ಶಶಿಧರ್‌ ಕೆ.ಆರ್‌
ಶಶಿ .ಪಿ.ಜಿ

Virajpet Ganeshav Utsava 2019

ತಾರೀಖು: 02-09-2019ನೇ ಸೋಮವಾರ ಪೂರ್ವಾಹ್ನ 10.30ಗಂಟೆಗೆ ಶ್ರೀ ಗಣಪತಿ ಉತ್ಸವ ಮೂರ್ತಿ ಪ್ರತಿಷ್ಠಾಪನಾಪೂರ್ವಕ ಪ್ರಾರಂಭವಾಗಿ ತಾರೀಖು: 12-09-2019ನೇ ಗುರುವಾರ ವಿಸರ್ಜನಾಪರ್ಯಂತ ಜರುಗಲಿದೆ. ಸರ್ವರೂ ಬಂಧು ಮಿತ್ರರೊಡಗೂಡಿ ವಿರಾಜಪೇಟೆ ಗಣೇಶೊತ್ಸವಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ನಮ್ಮೆಲ್ಲರ ಅಪೇಕ್ಷೆ.

Sample Page

This is an example page. It’s different from a blog post because it will stay in one place and will show up in your site navigation (in most themes). Most people start with an About page that introduces them to potential site visitors. It might say something like this:

Hi there! I’m a bike messenger by day, aspiring actor by night, and this is my website. I live in Los Angeles, have a great dog named Jack, and I like piña coladas. (And gettin’ caught in the rain.)

…or something like this:

The XYZ Doohickey Company was founded in 1971, and has been providing quality doohickeys to the public ever since. Located in Gotham City, XYZ employs over 2,000 people and does all kinds of awesome things for the Gotham community.

As a new WordPress user, you should go to your dashboard to delete this page and create new pages for your content. Have fun!