ಶ್ರೀ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ
ಮಡಿಕೇರಿ, ಕೊಡಗು
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಕರಗಗಳನ್ನು ಹೊರಡಿಸುವ ಪ್ರಮುಖ ದೇವಾಲಯವಾಗಿರುವ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯದ ದಸರಾ ಸಮಿತಿಯು ಕಳೆದ 47 ವರ್ಷಗಳಿಂದ ದಸರಾ ಉತ್ಸವವನ್ನಾಚರಿಸಿಕೊಂಡು ಬರುತ್ತಿದ್ದು, ಇದೀಗ 48ನೇ ವರ್ಷದ ಸಂಭ್ರಮದಲ್ಲಿದ್ದಾರೆ.
ಹಿನ್ನಲೆ – ಇತಿಹಾಸ
ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾ ಸೀಟ್ನ ಸಮೀಪವೇ ಇರುವ ದೇವಾಲಯ ಇದಾಗಿದ್ದು, ಉಗ್ರ ಸ್ವರೂಪಿಣಿಯೂ, ಉದ್ದವಾದ ಕೋರೆಹಲ್ಲನ್ನು ಹೊಂದಿರುವುದು ಈ ದೇವಿಯ ವೈಶಿಷ್ಟತೆ. 4 ಶಕ್ತಿ ದೇವತೆಗಳಲ್ಲಿ ಹಿರಿಯವಳೆನಿಸಿದ ದೇವಿಯೇ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ. ಈ ದೇವಿಯು ಅಪಾರ ಶಕ್ತಿಯನ್ನು ಹೊಂದಿದ್ದು, ಇಂದಿಗೂ ಹಿರಿಯರು ಈ ದೇವಿಯ ಶಕ್ತಿಯ ಬÉಗೆಗಿನ ಹಲವಾರು ಕಥೆಗಳನ್ನು ನೆನೆಪಿಸಿಕೊಳ್ಳುತ್ತಾರೆ. ವೀರನು ಹಾಗೆಯೇ ಅಹಂಕಾರಿಯೂ ಆಗಿದ್ದ ರಾಜನ ಸೇನಾಧಿಕಾರಿಯೊಬ್ಬನನ್ನು ಅವನ ಅಹಂಕಾರವನ್ನು ಮಟ್ಟಹಾಕಲು ದೇವಿಯು ಪುಟ್ಟ ಪಕ್ಷಿಯೊಂದರ ರೂಪಧರಿಸಿ ಸಂಹಾರ ಮಾಡಿದ್ದು ಅಂತಹ ರೋಚಕ ಕಥೆಗಳಲ್ಲೊಂದು. ಗರ್ಭ ಗುಡಿಯಲ್ಲಿರುವ ವಿಗ್ರಹ ಮೂಲ ವಿಗ್ರಹವಾಗಿದ್ದು, ನೋಡುಗನಿಗೆ ಪ್ರಥಮ ನೋಟದಲ್ಲಿಯೇ ಭಯ, ಭಕ್ತಿ ಭಾವವನ್ನು ಮೂಡಿಸುತ್ತದೆ. ಗರ್ಭ ಗುಡಿಯ ವಿಗ್ರಹದ ಜೊತೆಯಲ್ಲಿಯೇ ಉದ್ಭವ ನುಣುಪಾದ ಶಿಲೆಯೊಂದಿದ್ದು, ಅದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದು ವಿಶೇಷವಾಗಿದೆ. ಈ ಪುರಾತನ ದೇಗುಲವು ಇಂದು ಸುಂದರ ವಿಶಿಷ್ಟ, ಬೃಹತ್ ದೇಗುಲವಾಗಿ ನಿರ್ಮಾಣಗೊಂಡಿದೆ. ದೇಗುಲದ ಹಿಂಭಾಗದಲ್ಲಿ ನಾಗದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೆಯೇ ಇಲ್ಲಿ ಬಲಿಪೀಠವೂ ಇದೆ. ವಾರಕ್ಕೆರೆಡು ದಿನ ಬಲಿ ಅರ್ಪಣೆ, ವಾರ್ಷಿಕವಾಗಿ ಹಲವಾರು ಪೂಜಾ ಕಾರ್ಯ ಕ್ರಮಗಳು ಜರುಗುತ್ತವೆ. ಇವುಗಳಲ್ಲಿ ದೈವ ಕೋಲ, ನವರಾತ್ರಿ, ಷಷ್ಠಿ, ಹಬ್ಬ ಹರಿದಿನಗಳಂದು ವಿಶೇಷ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.
ಮಂಟಪದ ವಿವರಗಳು – 2021
48 ನೇ ವರ್ಷ ಆಚರಣೆ
ಕಥೆ: “ಈಶ್ವರ ಪಾರ್ವತಿ ಗಣಪತಿ ಸುಬ್ರಹ್ಮಣ್ಯ ಕಥಾ ಸಾರಾಂಶ ಕಲಾಕೃತಿ”
ಅಧ್ಯಕ್ಷರು:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಆರ್ಚ್ ಲೈಟಿಂಗ್ಸ್ ಬೋರ್ಡ್:
ಸೌಂಡ್ಸ್:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಚಲನವಲನ:
ಪ್ಲಾರ್ಟ್ಫಾರಂ ಸೆಟ್ಟಿಂಗ್ಸ್:
ಕಲಾಕೃತಿ ನಿರ್ಮಾಣ:
ಸ್ಪೆಷಲ್ ಎಫೆಕ್ಟ್ಸ್:
ಟ್ರ್ಯಾಕ್ಟರ್ ಸೆಟ್ಟಿಂಗ್ಸ್:
ಕಲಾಕೃತಿ ಅಲಂಕಾರ:
ಒಟ್ಟು ಸದಸ್ಯರು: 200
ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಮತ್ತು ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಸ್ಥಾನ ದಸರಾ ಉತ್ಸವ ಸಮಿತಿ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
2019
ಮಂಟಪದ ವಿವರಗಳು – 2019
46 ನೇ ವರ್ಷ ಆಚರಣೆ
ಕಥೆ: “ತಾರಕಾಸುರನ ವಧೆ”
ಅಧ್ಯಕ್ಷರು: ವಿ.ಆರ್ ಮಂಜುನಾಥ್
ಕಥಾ ನಿರ್ವಹಣೆ: ಎ.ಆರ್. ಮಂಜುನಾಥ್
ಸ್ಟುಡಿಯೋ ಸೆಟ್ಟಿಂಗ್ಸ್: ಈವೆಂಟ್ಸ್ ಟೆಕ್ ಮತ್ತು ಅವಿನ್ ಮಡಿಕೇರಿ
ಆರ್ಚ್ ಲೈಟಿಂಗ್ಸ್ ಬೋರ್ಡ್: ಶ್ರೀ ಮಾತಾ ಎಲೆಕ್ಟ್ರಿಕಲ್ಸ್
ಸೌಂಡ್ಸ್: ಈವೆಂಟ್ಸ್ ಟೆಕ್
ಒಟ್ಟು ಕಲಾಕೃತಿಗಳು: 22
ಒಟ್ಟು ವೆಚ್ಚ: 16 ಲಕ್ಷ
ಚಲನವಲನ: ದೀಕ್ಷ ಫ್ಯಾಬ್ರಿಕೇಷನ್ಸ್
ಪ್ಲಾರ್ಟ್ಫಾರಂ ಸೆಟ್ಟಿಂಗ್ಸ್: ಪ್ರಭು ಮತ್ತು ತಂಡ
ಕಲಾಕೃತಿ ನಿರ್ಮಾಣ: ಮಹದೇವಪ್ಪ ಆಂಡ್ ಸನ್ಸ್ ಹುದ್ಬೂರು
ಸ್ಪೆಷಲ್ ಎಫೆಕ್ಟ್ಸ್: ಆರ್.ಜೆ. ಫೈರ್ಟೆಕ್, ಬೆಂಗಳೂರು
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಮಂಜುನಾಥ್ ಮತ್ತು ತಂಡ
ಕಲಾಕೃತಿ ಅಲಂಕಾರ: ಶಿವರಾಂ, ಚುಮ್ಮ, ಜಾನ್ಸ್ನ್ ಮತ್ತು ತಂಡ
ಒಟ್ಟು ಸದಸ್ಯರು: 200
2018
ಮಂಟಪದ ವಿವರಗಳು – 2018
45 ನೇ ವರ್ಷ ಆಚರಣೆ
ಕಥೆ: ಶಿವ ಪುರಾಣದ ಕುಮಾರ ಕಾಂಡ
ಅಧ್ಯಕ್ಷರು: ನವೀನ್ ಪೂಜಾರಿ
ಆರ್ಚ್ ಲೈಟಿಂಗ್ಸ್ ಬೋರ್ಡ್: ನ್ಯೂ ಮಾತಾ ದಿಂಡ್ಗಲ್
ಒಟ್ಟು ಕಲಾಕೃತಿಗಳು: 5
ಒಟ್ಟು ವೆಚ್ಚ: 6 ಲಕ್ಷ
ಕಥಾ ನಿರ್ವಹಣೆ: ಮಂಜುನಾಥ ಎ.ಆರ್
ಸೌಂಡ್ಸ್ ಮತ್ತು ಸ್ಟುಡಿಯೋ ಸೆಟ್ಟಿಂಗ್ಸ್: ಸತ್ಯ ಪ್ರೋ ಸೌಂಡ್ಸ್
ಫ್ಲಾಟ್ಫಾರಂ ಸೆಟ್ಟಿಂಗ್: ಗಜ್ಜು , ಪಾಡು ಮತ್ತು ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಮಂಜು ಮತ್ತು ತಂಡ
ಚಲನವಲನ: ದೀಕ್ಷ ಫ್ಯಾಬ್ರಿಕೇಶನ್ಸ್ (ಮಂಜುನಾಥ ಎ.ಆರ್)
ಕಲಾಕೃತಿ ನಿರ್ಮಾಣ: ಖಾದರ್
ಒಟ್ಟು ಸದಸ್ಯರು: 200
2017
ಮಂಟಪದ ವಿವರಗಳು – 2017
ಕಥೆ: ನರಕಾಸುರನ ವಧೆ
ಅಧ್ಯಕ್ಷರು: ನವೀನ್ ಪೂಜಾರಿ
ಆರ್ಚ್ ಲೈಟಿಂಗ್ಸ್ ಬೋರ್ಡ್: ನ್ಯೂ ಮಾತಾ, ದಿಂಡ್ಕಲ್
ಒಟ್ಟು ಕಲಾಕೃತಿಗಳು: 15
ಒಟ್ಟು ವೆಚ್ಚ: 12 ಲಕ್ಷ
ಕಥಾ ನಿರ್ವಹಣೆ: ಎ.ಆರ್.ಮಂಜುನಾಥ್
ಸ್ಟುಡಿಯೋ ಸೆಟ್ಟಿಂಗ್ಸ್: ಸತ್ಯ ಪ್ರೋ ಲೈಟ್, ಮಡಿಕೇರಿ
ಫ್ಲಾಟ್ಫಾರಂ ಸೆಟ್ಟಿಂಗ್: ಪದು, ಗಜ್ಜು ಮತ್ತು ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಎಂ.ಬಿ.ಮಂಜುನಾಥ್
ಚಲನವಲನ: ಎ.ಆರ್.ಮಂಜುನಾಥ್, ಲಾರೆನ್ಸ್, ವಿಜಯ
ಸೌಂಡ್ಸ್: ಸತ್ಯ ಪ್ರೋ ಲೈಟ್, ಮಡಿಕೇರಿ
ಕಲಾಕೃತಿ ನಿರ್ಮಾಣ: ವಿಠಲ್, ಖಾದರ್ ಮತ್ತು ತಂಡ
ಒಟ್ಟು ಸದಸ್ಯರು: 300
ಸಂದರ್ಶನ