Dandina Mariyamma

Dandina Mariyamma Temple header
Dandina Mariyamma Temple gheader

ಮಡಿಕೇರಿ ಕೋಟೆಯ ಬಲ ಭಾಗದಲ್ಲಿರುವ ದೇಗುಲವೇ ಶ್ರೀ ದಂಡಿನ ಮಾರಿಯಮ್ಮ ದೇಗುಲ. ಇದಕ್ಕೆ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. ಅಂದು ಕೊಡಗಿನ ರಾಜ ಪ್ರತಿಷ್ಠಾಪಿಸಿದ ಶಕ್ತಿ ದೇವತೆಗಳ ಪೈಕಿ ಈ ದೇಗುಲವೂ ಒಂದು. ರಾಜನು ದಂಡಿಗೆ (ಯುದ್ಧಕ್ಕೆ) ಹೊರಡುವಾಗ ಈ ದೇವಿಯೊಡನೆ ಸಮಾಲೋಚಿಸಿ, ಆಕೆಯ ಆಶೀರ್ವಾದ ಪಡೆದುಕೊಂಡೇ ಹೊರಡುತ್ತಿದ್ದರು ಎಂಬ ಪ್ರತೀತಿ ಇದೆ. ಪಾರ್ವತಿಯ ಸ್ವರೂಪಿಯಾಗಿರುವ ದೇವಿಯ ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಮತ್ತು ಇನ್ನಿತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ರಾರಾಜಿಸುತ್ತಿದ್ದಾಳೆ. ಪ್ರಸ್ತುತ ಗರ್ಭಗುಡಿಯಲ್ಲಿರುವ ವಿಗ್ರಹವೇ ಮೂಲ ವಿಗ್ರಹವಾಗಿದೆ. ದೇಗುಲದ ಎದುರಿನಲ್ಲಿರುವ ಪವಿತ್ರ ಅರಳಿ ಮರವು ಪುರಾತನವಾದದ್ದು. ಇದಕ್ಕೆ ಅಶ್ವಥ ಉಪನಯನವನ್ನು ನೆರವೇರಿಸಲಾಗಿದೆ. ದೇಗುಲದ ಹಿಂಭಾಗದಲ್ಲಿ ನಾಗನ ವಿಗ್ರಹವಿದೆ. ಇಲ್ಲಿ ನಾಗನ ಸಂಚಾರವಿದೆ ಎನ್ನುತ್ತಾರೆ ಹಿರಿಯರು.
ಸುಮಾರು 10 ವರ್ಷಗಳ ಹಿಂದೆ ಈ ದೇಗುಲ ನವೀಕರಣಗೊಂಡು, ಇದರ ಗೋಪುರವು ತಿರುಪತಿ ದೇವಸ್ಥಾನದ ಶೈಲಿಯನ್ನು ಹೊಂದಿದೆ. ದೇವಸ್ಥಾನದ ಒಳಭಾಗವು ಮಾರ್ಬಲ್‍ನಿಂದ ಮಾಡಲ್ಪಟಿದಲ್ಲದೆ, `ನವಶಕ್ತಿ'ಯ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗಿದೆ. `ನವಶಕಿ'್ತ ಎಂದರೆ ದೇವಿಯ ವಿವಿಧ ರೂಪಗಳು. ನವಶಕ್ತಿ ವಿಗ್ರಹಗಳಿರುವ ಕೊಡಗಿನ ಏಕೈಕ ದೇಗುಲ ಇದಾಗಿದೆ. ದೇಗುಲದಲ್ಲಿ ನಿತ್ಯ ಪೂಜೆಯು ನೆರವೇರುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.