• Search Coorg Media

Gonikoppalu Dasara Dasha Mantapa

1. ಶ್ರೀ ಕಾವೇರಿ ದಸರಾ ಸಮಿತಿ
41 ನೇ ವರ್ಷ

1979ರ ಸ್ಥಾಪಕ ಅಧ್ಯಕ್ಷರು: ಎಂ.ಜಿ.ಪದ್ಮನಾಭ ಕಾಮತ್
2019ರ ಪ್ರಸ್ತುತ ಅಧ್ಯಕ್ಷರು: ರಾಮಕೃಷ್ಣ ಕಣ್ಣರಾಯ
1979 ರಲ್ಲಿ ಗೋಣಿಕೊಪ್ಪಲಿನ ಎಂ.ಜಿ.ಪದ್ಮನಾಭ ಕಾಮತ್ ಮತ್ತು ಕೆಲವು ಸ್ನೇಹಿತರು ಸೇರಿ ಶ್ರೀ ಕಾವೇರಿ ದಸರಾ ಸಮಿತಿ ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷರಾಗಿ ಕಾರ್ಯರ್ನಿವಹಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

2. ನಾಡಹಬ್ಬ ದಸರಾ ಸಮಿತಿ

1989ರ ಸ್ಥಾಪಕ ಅಧ್ಯಕ್ಷರು: ಬಿ.ಎ. ಗಣಪತಿ
2019ರ ಪ್ರಸ್ತುತ ಅಧ್ಯಕ್ಷರು:
1989ರಲ್ಲಿ ಗೋಣಿಕೊಪ್ಪಲಿನ ಮೊದಲನೇ ವಿಭಾಗದ ಹಲವು ಸ್ನೇಹಿತರು ಬಿ.ಎ. ಗಣಪತಿಯವರ ನೇತೃತ್ವದಲ್ಲಿ ದಸರಾ ನಾಡಹಬ್ಬ ಸಮಿತಿ ಎಂಬ ಹೆಸರಿನ ಸಂಸ್ಥೆಯನ್ನು ಹುಟ್ಟು ಹಾಕುವುದರೊಂದಿಗೆ ದಸರಾ ಸಮಿತಿಗಳನ್ನು ಹೆಚ್ಚಿಸುವಲ್ಲಿ ಹೆಜ್ಜೆ ಹಾಕಿದರು.
ದಸರಾ ಹಬ್ಬ ನಾಡಹಬ್ಬ
ಭೇದ ಭಾವ ಮರೆವ ಹಬ್ಬ
ಸ್ನೇಹ ಪ್ರೀತಿ ಮೆರವ ಹಬ್ಬ
ದಸರಾ ಹಬ್ಬ ನಾಡಹಬ್ಬ
ಎನ್ನುವ ದ್ಯೇಯದೊಂದಿಗೆ ಮೊದಲನೇ ವಿಭಾಗದ ಎಸ್.ವಿ. ನಾರಾಯಣ್, ಎಂ.ಜೆ. ಮೈಕಲ್, ಕೆ.ಬಿ. ವೇಣು, ಎಂ.ಪಿ. ಕೇಶವ ಕಾಮತ್, ಪ್ರಭಾಕರ ನೆಲ್ಲಿತ್ತಾಯ, ಸಿ.ಪಿ. ಮುತ್ತಪ್ಪ, ಇಲಿಯಾಸ್, ಇಬ್ರಾಹಿಂ, ಬೇಬಿ ಹಾಗೂ ಇತರ ಹಲವು ಸ್ನೇಹಿತರು ಹೆಜ್ಜೆ ಹಾಕಿದರು. ನಂತರದ ದಿನಗಳಲ್ಲಿ ಕೆ.ಬಿ.ಗಿರೀಶ್ ಗಣಪತಿ, ಕೆ.ಎಂ.ಅಯ್ಯಪ್ಪ, ಪುನಃ ಬಿ.ಎ.ಗಣಪತಿ, ಎಂ.ಜೆ.ಮೈಕಲ್, ಕೊಲ್ಲಿರ ಗೋಪಿ ಚಿಣ್ಣಪ್ಪರವರು ಅಧ್ಯಕ್ಷರಾಗಿ ಈ ಸಂಸ್ಥೆಯನ್ನು ಮುಂದುವರೆಸಿದ್ದು, 2014ರಲ್ಲಿ ಪೊನ್ನಿಮಾಡ ಸುರೇಶ್‍ರವರ ಅಧ್ಯಕ್ಷತೆಯಲ್ಲಿ ವಿಜ್ರಂಭಣೆಯ ಬೆಳ್ಳಿಹಬ್ಬವನ್ನು ಆಚರಿಸದ್ದಾರೆ. ಪ್ರಸ್ತುತ ಅಜ್ಜಿಕುಟ್ಟಿರ ರಿಶಿ ರವರು ಅಧ್ಯಕ್ಷರಾಗಿದ್ದಾರೆ.
ದಸರಾ ಉತ್ಸವಕ್ಕೆ ಮೆರಗು ನೀಡಿದ್ದು ಗೋಣಿಕೊಪ್ಪಲಿನ ಸ್ಥಬ್ಧಚಿತ್ರ ಮೆರವಣಿಗೆ. ಶ್ರೀ ಕಾವೇರಿ ದಸರಾ ಸಮಿತಿ ಪ್ರಾರಂಭಿಸಿದ ಸ್ಥಬ್ಧಚಿತ್ರ ಮೆರವಣಿಗೆಯನ್ನು ಈಗ ನಾಡಹಬ್ಬ ದಸರಾ ಸಮಿತಿಯು ಯಶಸ್ವಿಯಾಗಿ 27ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಗೋಣಿಕೊಪ್ಪಲಿನ ಕಾಮತ್ ಗ್ರೂಪ್ ನಿರಂತರವಾಗಿ 20 ವರ್ಷಗಳ ಕಾಲ ಬಹುಮಾನ ಪ್ರಾಯೋಜಿಸಿರುತ್ತಾರೆ. ದಸರಾ ನಾಡಹಬ್ಬ ಸಮಿತಿಯು ಹಲವು ವರ್ಷಗಳಿಂದ ಅನ್ನದಾನ ಕಾರ್ಯಕ್ರಮ ಕೂಡ ನಡೆಸಿಕೊಂಡು ಬಂದಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

3. ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿ

1989ರ ಸ್ಥಾಪಕ ಅಧ್ಯಕ್ಷರು: ಸಿ.ಟಿ.ಪ್ರೇಮ್ ಗಣಪತಿ
2019ರ ಪ್ರಸ್ತುತ ಅಧ್ಯಕ್ಷರು:
ದಸರಾ ನಾಡಹಬ್ಬ ಸಮಿತಿ ರಚನೆಗೊಂಡ ವರ್ಷ ಪಾಲಿಬೆಟ್ಟ ರಸ್ತೆಯ ಹಲವು ಸ್ನೇಹಿತರು ಒಟ್ಟುಗೂಡಿ ಸಿ.ಟಿ.ಪ್ರೇಮ್ ಗಣಪತಿರವರ ನೇತೃತ್ವದಲ್ಲಿ ಸ್ನೇಹಿತರ ಬಳಗ ಕೊಪ್ಪ ಎಂಬ ಹೆಸರಿನಲ್ಲಿ ಇನ್ನೊಂದು ದಸರಾ ಸಮಿತಿಯನ್ನು ಪ್ರಾರಂಭಿಸಿದರು. ಪ್ರೇಮ್ ಗಣಪತಿಯವರೊಂದಿಗೆ ಡಿ.ವಿ.ಪ್ರೇಮ್ ಮಣಿ, ಗೋಪಿ, ರಾಜಶೇಖರ್ ಮುಂತಾದವರು ಪ್ರಮುಖರು. ಈಗ ಈ ಸಂಸ್ಥೆಗೆ ಎನ್.ಪಿ.ಅಪ್ಪಣ್ಣ ಅಧ್ಯಕ್ಷರಾಗಿದ್ದಾರೆ. 2014ರಲ್ಲಿ ಪೊನ್ನಿಮಾಡ ಸುರೇಶ್‍ರವರ ಅಧ್ಯಕ್ಷತೆಯಲ್ಲಿ ವಿಜ್ರಂಬಣೆಯ ಬೆಳ್ಳಿಹಬ್ಬವನ್ನು ಆಚರಿಸಿದ್ದಾರೆ.

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

4. ನವಚೇತನ ದಸರಾ ಸಮಿತಿ

1990ರ ಸ್ಥಾಪಕ ಅಧ್ಯಕ್ಷರು: ಕೆ.ಎಂ. ಗಣೇಶ್ ತಿಮ್ಮಯ್ಯ
2019ರ ಪ್ರಸ್ತುತ ಅಧ್ಯಕ್ಷರು:
1990ರಲ್ಲಿ ಗೋಣಿಕೊಪ್ಪಲಿನ ಮಾರುಕಟ್ಟೆಯ ವ್ಯಾಪಾರಿಗಳು ಆಗಿನ ಪುರಸಭಾ ಉಪಾಧ್ಯಕ್ಷ ಕೆ.ಎಂ.ಗಣೇಶ್ ತಿಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನವಚೇತನ ದಸರಾ ಸಮಿತಿ ಎಂಬ ಹೆಸರಿನ ಸಂಸ್ಥೆ ಪ್ರಾರಂಭಿಸಿ ಆಯುಧಪೂಜೆ ದಿನದಂದು ಅನ್ನಸಂತರ್ಪಣೆ ನಡೆಸಿ ವಿಜಯದಶಮಿಯಂದು ವಿಜೃಂಭಣೆಯ ಉತ್ಸವ ನಡೆಸುತ್ತಿದ್ದಾರೆ. ಕೆ.ಎಂ.ಗಣೇಶ್‍ರವರೊಂದಿಗೆ ಶಾಂತಾರಾಂ ಕಾಮತ್, ಹಂಸ ಬಾಬು ಚಾಕೊ ಮತ್ತಿತ್ತರರು ಸೇರಿ ಪ್ರಾರಂಭಿಸಿದ ಈ ಸಂಸ್ಥೆಗೆ ಪ್ರಸ್ತುತ ತಂಬಿ ಅಧ್ಯಕ್ಷರು. ಅಲ್ಲದೇ ಬಾಬುಚಾಕೊರವರು ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ವಿಜ್ರಂಭಣೆಯ ಬೆಳ್ಳಿಹಬ್ಬವನ್ನು ಆಚರಿಸಿದ್ದಾರೆ.

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

5. ಶ್ರೀ ಶಾರದಾಂಬ ದಸರಾ ಸಮಿತಿ

ಸ್ಥಾಪಕ ಅಧ್ಯಕ್ಷರು: ಟಿ.ಕೆ.ಪುರುಷೋತ್ತಮ್
2019ರ ಪ್ರಸ್ತುತ ಅಧ್ಯಕ್ಷರು:
ಅರುವತ್ತೊಕ್ಕಲು ಗ್ರಾಮದಿಂದ ಗೋಣಿಕೊಪ್ಪಲಿನ ದಸರಾ ಉತ್ಸವಕ್ಕೆ ಸಹಕಾರಿಯಾಗಿ ಶ್ರೀ ಶಾರದಾಂಬ ದಸರಾ ಸಂಸ್ಥೆಯನ್ನು ಎ.ಜೆ.ಬಾಬು, ಫಿಲಿಫೋಸ್ ಮ್ಯಾಥ್ಯು, ಜಗನ್ನಿವಾಸ್ ಇನ್ನಿತರ ಸ್ನೇಹಿತರು ಟಿ.ಕೆ.ಪುರುಷೋತ್ತಮ್‍ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು. ಈಗ ಈ ಸಮಿತಿಯನ್ನು ಅಧ್ಯಕ್ಷರಾಗಿ ಕಿರಣ್ ಕುಮಾರ್ ರವರು ಮುಂದುವರೆಸುತ್ತಿದ್ದಾರೆ.

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

6. ನಮ್ಮ ದಸರಾ ಸಮಿತಿ

ಅಧ್ಯಕ್ಷರು: ಕುಪ್ಪಂಡ ಅಶೋಕ್
2019ರ ಪ್ರಸ್ತುತ ಅಧ್ಯಕ್ಷರು:
ಣ ಅದೇ ವರ್ಷ ಹರಿಶ್ಚಂದ್ರ ಪುರದ ಹಲವು ಸ್ನೇಹಿತರು ಸೇರಿ ನಮ್ಮ ದಸರಾ ಸಮಿತಿ ಎಂಬ ಹೆಸರಿನಲ್ಲಿ ಕುಪ್ಪಂಡ ಅಶೋಕ್‍ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿ, ನಂತರ ಸುಂದರ್‍ರವರ ಆದ್ಯಕ್ಷತೆಯಲ್ಲಿ ಹಲವು ವರ್ಷಗಳ ಕಾಲ ನಡೆದುಕೊಂಡು ಬಂದ ಈ ಸಂಸ್ಥೆಯನ್ನು ಕೊಪ್ಪಿರ ಸೋಮಯ್ಯ, ದಾಮೋದರ ಹಾಗೂ ಇನ್ನಿತರರ ಪ್ರಯತ್ನ ಅಭಿನಂದನಾರ್ಹವಾದದ್ದು. ಪ್ರಸ್ತುತ ಕರ್ತಂಡ ಸೊಮಣ್ಣ ಇದರ ಅಧ್ಯಕ್ಷರಾಗಿರುತ್ತಾರೆ.

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

7. ಸರ್ವರ ದಸರಾ ಸಮಿತಿ

ಸ್ಥಾಪಕ ಅಧ್ಯಕ್ಷರು: ಅಬ್ದುಲ್ ಸಲಾಂ
2019ರ ಪ್ರಸ್ತುತ ಅಧ್ಯಕ್ಷರು: 
ಮುಂದಿನ ವರ್ಷಗಳಲ್ಲಿ ಗೋಣಿಕೊಪ್ಪಲಿನ ಎರಡನೇ ವಿಭಾಗದ ಸ್ನೇಹಿತರು ಸರ್ವರ ದಸರಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರ ಸ್ಥಾಪಕ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಕಾರ್ಯನಿರ್ವಹಿಸಿದ್ದರೆ, ಮುಂದೆ ಮಳವಂಡ ಪೃಥ್ವಿರವರು ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಪ್ರಸ್ತುತ ಅನೀಶ್ ಅಧ್ಯಕ್ಷರಾಗಿದ್ದಾರೆ.

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

8. ಯುವ ದಸರಾ ಸಮಿತಿ

ಸ್ಥಾಪಕ ಅಧ್ಯಕ್ಷರು:
2019ರ ಪ್ರಸ್ತುತ ಅಧ್ಯಕ್ಷರು:

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

9. ಭಗವತಿ ದಸರಾ ಸಮಿತಿ

ಸ್ಥಾಪಕ ಅಧ್ಯಕ್ಷರು:
2019ರ ಪ್ರಸ್ತುತ ಅಧ್ಯಕ್ಷರು:

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

10. ಕಾಡ್ಲ ಅಯ್ಯಪ್ಪ ದಸರಾ ಸಮಿತಿ

ಸ್ಥಾಪಕ ಅಧ್ಯಕ್ಷರು:
2019ರ ಪ್ರಸ್ತುತ ಅಧ್ಯಕ್ಷರು:

ನೇ ವರ್ಷ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *