ಭಾರತಾಂಭೆಯ ಹೆಮ್ಮೆಯ ಪುತ್ರ ಕ್ರಾಂತಿ ವೀರ ಅಲ್ಲೂರಿ ಸೀತಾರಾಮರಾಜು

 ಭಾರತಾಂಭೆಯ ಹೆಮ್ಮೆಯ ಪುತ್ರ ಕ್ರಾಂತಿ ವೀರ ಅಲ್ಲೂರಿ ಸೀತಾರಾಮರಾಜು

ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಪಾಲ್ಗೊಂಡ ಲಕ್ಷಾಂತರ ದೇಶಪ್ರೆÃಮಿ ಹಿರಿಯರು ತೋರಿದ ವಿವೇಕ, ತ್ಯಾಗ ಬಲಿದಾನ, ಶೌರ್ಯ ಮತ್ತು ಆದರ್ಶಗಳನ್ನು ಕಡೆಗಣಿಸಿ, ಈಗಿನ ಕೆಲವು ಆಡಳಿತ ವ್ಯವಸ್ಥೆಯು ಜನ ಸಾಮಾನ್ಯರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿದರೆ ಹೃದಯ ಒದ್ದೆಯಾಗುತ್ತದೆ. ಅದರಲ್ಲೂ ಮಾತೃದೇಶದ ವಿಮೋಚನೆಗಾಗಿ ಕೆಲವರು ಸಂಘಟನೆ ಕಟ್ಟಿಕೊಂಡು ಹೋರಾಡಿದರೆ ಇನ್ನು ಕೆಲವರು ಸಮೂದಾಯವನ್ನೂ, ಗಳೆಯರ ಬಳಗವನ್ನೂ, ಇನ್ನೂ ಕೆಲವರು ಏಕಾಂಗಿಯಾಗಿಯೂ ಹೋರಾಡಿ ತಮ್ಮ ಪ್ರಾಣವನ್ನು ಬಲಿದಾನಗೈದು ಸ್ವತಂತ್ರö್ಯ ಯಜ್ಞಕ್ಕೆ ಹವಿಸ್ಸನ್ನು ಸಮರ್ಪಿಸಿದ್ದಾರೆ. ಅಂತಹವರಲ್ಲಿ ಅಲ್ಲೂರಿ ಸೀತಾರಾಮರಾಜು ಕೂಡ ಒಬ್ಬರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

1897ನೇ ಜುಲೈ ತಿಂಗಳ 4ರಂದು ಆಂಧ್ರಪ್ರದೇಶದ ನರಸಾಪುರ ಜಿಲ್ಲೆಯ ಮೊಗಲ್ಲು ಗ್ರಾಮದ ವೆಂಕಟರಾಮ ರಾಜು ಮತ್ತು ನಾರಾಯಣಮ್ಮ ದಂಪತಿಗಳ ಮಗನಾಗಿ ಹುಟ್ಟಿದರು. ಹಲವರು ಹುಟ್ಟು ದೇಶಪ್ರೆÃಮಿಗಳಾಗಿ ಹುಟ್ಟಿದರೆ, ಮತ್ತೆ ಕೆಲವರು ಸಮಯ, ಸಂದರ್ಭ ಅಥವಾ ಕೆಲವು ಘಟನೆಗಳು ಅವರನ್ನು ದೇಶಪ್ರೆÃಮಿಯನ್ನಾಗಿಸುತ್ತದೆ. ಹಾಗೆ ಸೀತಾರಾಮರಾಜು ತನ್ನ ತಂದೆಯೊಡನೆ ಗೋದಾವರಿ ನದಿ ತೀರದಲ್ಲಿ ವಾಯು ವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ನಡೆದ ಘಟನೆಯೊಂದು ಸೀತಾರಾಮರಾಜು ಜೀವನದ ಧಿಕ್ಕನ್ನೆ ಬದಲಾಯಿಸಿತು. ಅಂದು ನದಿ ತೀರಕ್ಕೆ ಕೆಂಪು ಮೂತಿಯ ಆಂಗ್ಲ ಅಧಿಕಾರಿಯೊಬ್ಬ ಠಾಕು-ಟೀಕು ಪೋಷಾಕಿನಲ್ಲಿ ಕುದುರೆ ಮೇಲೆ ಬಂದುದನ್ನು ನೋಡಿದ ಕೂಡಲೆ ಅಲ್ಲಿದ್ದ ಜನರೆಲ್ಲಾ ಆತನಿಗೆ ಕೈಯೆತ್ತಿ ಸಲಾಂ ಮಾಡುತ್ತಿದ್ದರು, ಇದನ್ನು ನೋಡಿದ ಸೀತಾರಾಮರಾಜು ಕೂಡಾ ಕೈಯೆತ್ತಿ ಸಲಾಂ ಹೊಡೆದೆ ಬಿಟ್ಟ. ತಕ್ಷಣ ಜೊತೆಯಲ್ಲಿದ್ದ ವೆಂಕಟರಾಮರಾಜು ತನ್ನ ಮಗನ ಕೆನ್ನೆಗೆ ಫಟೀರ್ ಎಂದು ಭಾರಿಸಿಬಿಟ್ಟರು. ತನಗೆ ಯಾತಕ್ಕಾಗಿ ತಂದೆ ಹೊಡೆದಿದ್ದಾರೆ ಎಂದು ತಿಳಿಯದೆ ಅವಕ್ಕಾಗಿ ಅಳುತ್ತಾ ನಿಂತುಬಿಟ್ಟ. ಆಗ ತಂದೆ ವೆಂಕಟರಾಮರಾಜು ತನ್ನ ಮಗನಿಗೆ ಕೆಂಪು ಮೂತಿಯ ಆಂಗ್ಲರಿಗೆ ಸಲ್ಯೂಟ್ ಮಾಡಬೇಡ, ಅವರು ನಮ್ಮ ದೇಶಕ್ಕೆ ಬಂದು ನಮ್ಮನ್ನೆ ಆಳುತ್ತಿದ್ದಾರೆ, ನಮ್ಮ ದಿವ್ಯ ಸಂಸ್ಕೃತಿ, ಪರಂಪರೆ, ಹಾಳುಮಾಡುತ್ತಿದ್ದಾರೆ, ಮತ್ತು ನಮ್ಮ ದೇಶದ ಜನರನ್ನು, ಮಾತೆಯರನ್ನು ನಿರ್ಧಾಕ್ಷಿಣ್ಯವಾಗಿ ಹಿಂಸಿಸುತ್ತಿದ್ದಾರೆ, ಅಂತಹವನಿಗೆ ನೀನ್ಯಾಕೆ ಸಲ್ಯೂಟ್ ಮಾಡಿದೆ, ಇನ್ನು ಮುಂದೆ ಎಂದಿಗೂ ಇಂತಹ ತಪ್ಪನ್ನು ಮಾಡಬೇಡ ಎಂದು ಬುದ್ಧಿವಾದ ಹೇಳಿದರು. ಅಂದಿನಿಂದ ಸೀತಾರಾಮರಾಜು “ಬ್ರಿÃಟೀಷರನ್ನು ದೇಶದಿಂದ ಓಡಿಸುವವರೆಗೆ ವಿರಮಿಸಲಾರೆ” ಎಂದು ಶಪಥ ಮಾಡಿದ.

ಆ ವೇಳೆಗಾಗಲೆ ತಂದೆ ತೀರಿಕೊಂಡಿದ್ದರಿಂದ ಧಿಕ್ಕಿಲ್ಲದೆ ಅಲೆದಾಡುವಂತಾದ ಬಾಲಕ ಸೀತಾರಾಮರಾಜು. ಆದರೇನಂತೆ ದೇಶಕ್ಕಾಗಿಯೇ ತನ್ನ ಜೀವ ಎಂದು ತೀರ್ಮಾನಿಸಿದ್ದರಿಂದ ದೇಶಾದ್ಯಂತ ಪ್ರವಾಸ ಹೊರಟು ದೇಶದ ಸಂಸ್ಕçತಿ, ವೇದ, ಉಪನಿಷತ್, ವ್ಯಾಕರಣ, ಜ್ಯೊÃತಿಷ್ಯ ಶಾಸ್ರö್ತ, ಮುಂತಾದವುಗಳನ್ನು ತಿಳಿದುಕೊಂಡು ಮುಂದೇನು? ಎಂದು ಯೋಚಿಸುತ್ತಿರುವಾಗಲೇ ಬಂಗಾಳ-ಪಂಜಾಬ್‌ಗಳಲ್ಲಿ ದೇಶಭಕ್ತ, ಕ್ರಾಂತಿಕಾರಿಗಳ ಚಟುವಟಿಕೆ ತೀವ್ರವಾಗಿ ನಡೆಯುತ್ತಿರುವ ವಿಷಯ ತಿಳಿಯಿತು. ಅನೇಕ ಹಿರಿಯ ಸ್ವಾತಂತ್ರö್ಯ ಹೋರಾಟಗಾರ ನಾಯಕರುಗಳು ಅಲ್ಲಿ ಬಂದು ಭಾಷಣ ಮಾಡಿ ಹೋಗುತ್ತಿದ್ದರು. ಇದರಿಂದ ಉತ್ತೆÃಜನಗೊಂಡ ಸೀತಾರಾಮರಾಜು ಸಶÀತ್ತç ಹೋರಾಟದಿಂದ ಮಾತ್ರ ಆಂಗ್ಲರನ್ನು ಎದುರಿಸಲು ಸಾಧ್ಯ! ಎಂದು ತಿಳಿದು ಕೂಡಲೆ ಸನ್ಯಾಸ ಸ್ವಿÃಕರಿಸಿ ತನ್ನ ಜೀವನವನ್ನು ಭಾರತ ಮಾತೆಯ ಸೇವೆಗೆಂದು ಸಮರ್ಪಿಸಿಕೊಂಡರು. ಮುಂದೆÉ ದೇವರಪೂಜೆ, ಧ್ಯಾನ, ಜಪ-ತಪ ಕಠೋರ ತಪಸ್ಸು, ಮಾಡಿ ಕಾವಿಯುಟ್ಟು ಅಪ್ಪಟ ಸನ್ಯಾಸಿಯಾಗಿಬಿಟ್ಟ.

ವಿಶಾಖಪಟ್ಟಣದ ಮನ್ಯಂ ಗುಡ್ಡಗಾಡಿನ ಕೋಯ ಸಮೂದಾಯದ ವನವಾಸಿಗಳಿಗೆ ರಾಜು ಪ್ರಿÃತಿಪಾತ್ರರಾಗಿದ್ದರು. ಅವರಲ್ಲಿರುವ ಮೂಢನಂಬಿಕೆಗಳಾದ ನರಬಲಿ, ತಪ್ಪು ಮಾಡಿದವರÀನ್ನು ನಿರ್ಧಾಕ್ಷಿಣ್ಯವಾಗಿ ಬಾಣಗಳನ್ನು ಬಿಟ್ಟು ಕೊಂದು ಹಾಕುವುದು, ಇವೆಲ್ಲಾ ತಲತಲಾಂತರಗಳಿಂದ ಬಂದಿದ್ದು, ಇವರು ಸರಾಯಿಯ ಗುಲಾಮರಾಗಿದ್ದರು. ರಾಜುವಿನ ಒಳ್ಳೆಯ ಮೃದು ಮಾತುಗಳಿಂದ ತಿದ್ದಿ-ತೀಡಿ ಸಚ್ಛಾರಿತ್ರö್ಯವಂತರನ್ನಾಗಿಸಿದ್ದನು. ಇದರಿಂದ ಕೋಯರು ಸೀತಾರಾಮ ರಾಜುವನ್ನು ಅತಿಯಾಗಿ ಪ್ರಿÃತಿಸುತ್ತಿದ್ದರಲ್ಲದೆ ಅವನಿಗಾಗಿ ಪ್ರಾಣ ಬಿಡಲು ತಯಾರಾಗಿದ್ದರು. ಇದೇ ಸಮಯದಲ್ಲಿ ಮನ್ಯಂ ಪ್ರದೇಶದಲ್ಲಿ ಆಂಗ್ಲ ಪ್ರತಿನಿಧಿಯಾಗಿದ್ದ ಬ್ಯಾಸ್ಟಿನ್, ಕೋಯ ಜನಾಂಗವನ್ನು ಪೀಡಿಸುತಿದ್ದನಲ್ಲದೆ, ಅವರ ಜಮೀನನ್ನು ಕಿತ್ತುಕೊಂಡು, ಮಾಡುತ್ತಿದ್ದ ಕೆಲಸಗಳಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಕೋಯರು ಅಲ್ಲೂರಿಸೀತಾರಾಮರಾಜು ಮುಂದೆ ತಮ್ಮ ನೋವನ್ನು ತೋಡಿಕೊಂಡರು. ಅಗ ಅಲ್ಲೂರಿ ಆ ಜನಾಂಗದ ಮುಖಂಡತ್ವವನ್ನು ವಹಿಸಿ ಬ್ರಿÃಟೀಷರ ವಿರುದ್ಧ ಹೋರಾಡಲು ಸನ್ನದ್ಧರಾದರು. ಇವರಿಗೆ ಯಾವುದೇ ಮದ್ದು-ಗುಂಡುಗಳಾಗಲಿ, ಕೋವಿಯಾಗಲಿ ಇರಲಿಲ್ಲ. ಅದಕ್ಕಾಗಿ ಅಲ್ಲೂರಿ ಮತ್ತು ಸಂಗಡಿಗರು ಸೇರಿ ಪೋಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಅಲ್ಪ-ಸ್ವಲ್ಪ ಶಸ್ತಾçಸ್ತçಗಳನ್ನು ಶೇಖರಿಸಿದರು.

ಇದನ್ನು ತಿಳಿದ ಬ್ರಿÃಟೀಷರು ಹೇಗಾದರೂ ಮಾಡಿ ಕೋಯ ಮತ್ತು ಆತನ ಮುಖಂಡನಾದ ಅಲ್ಲೂರಿ ಸೀತಾರಾಮರಾಜುವನ್ನು ಹಿಡಿಯಲು ಆಕಾಶ ಭೂಮಿ ಒಂದುಮಾಡಿದರು. ಇವರನ್ನು ಹಿಡಿದುಕೊಡುವವರಿಗೆ 1500 ರೂ. ಮತ್ತು ಆತನ ಬಂಟರಾದ ಮಲ್ಲುದೊರೈ, ಗಂಟಂ, ಮತ್ತು ವೀರಯ್ಯರವರ ತಲೆಗೆ 1000ರೂ.ಗಳನ್ನು ಹಾಗೂ ಸ್ವಾತಂತ್ರö್ಯ ಹೋರಾಟಗಾರರ ತಲೆಗೆ 50 ರೂ. ನೀಡುವುದಾಗಿ ಡಂಗುರ ಸಾರಿದರು. ಸಧ್ಯದ ಮಟ್ಟ್ಟಿಗೆ ಸುಮ್ಮನಿದ್ದ ಅಲ್ಲೂರಿ ಮತ್ತು ಸಂಗಡಿಗರು, 1923 ಎಪ್ರಿಲ್‌ನಲ್ಲಿ ಅನ್ನವರಂ ಎಂಬಲ್ಲಿ ಕಾಣಿಸಿಕೊಂಡರು. ಅಷ್ಟರಾಗಲೇ ಸೀತಾರಾಮರಾಜುವಿನ ಧೈರ್ಯ ಸಾಮರ್ಥ್ಯವನ್ನು ಮೆಚ್ಚಿ ಜನರು ಪಾದ ಪೂಜೆಮಾಡಿ ಪುನೀತರಾಗುತ್ತಿದ್ದರು. ಹೋದೆಡೆಯಲ್ಲೆಲ್ಲಾ ಅಲ್ಲೂರಿ ಕ್ರಾಂತಿಹೋರಾಟಕ್ಕೆ ಸಹಕರಿಸಬೇಕೆಂದು ಕರೆ ನೀಡುತ್ತಿದ್ದರು ಇದರಿಂದ ಪ್ರೆÃರಿತಗೊಂಡ ಜನಸಾಮಾನ್ಯರು ಇವರ ಕ್ರಾಂತಿ ಹೋರಾಟಕ್ಕೆÉ ಹಣ ಧಾನ್ಯ, ವಸ್ತುಗಳನ್ನು ನೀಡಿ ಸಹಕರಿಸುತ್ತಿದ್ದರು. ಇದರಿಂದ ಕ್ರೊÃಧಿತಗೊಂಡ ಬ್ರಿಟೀಷ್ ಅಧಿಕಾರಿಗಳು ಸಹಾಯ ನೀಡುವ ಊರವರಿಗೆ 4000 ಸಾವಿರ ರೂ.ಗಳ ಸಾಮೂಹಿಕ ತೆರಿಗೆ ವಿಧಿಸುತ್ತಿದ್ದರು. ಇದೇ ಸಮಯಕ್ಕೆ ಸರಿಯಾಗಿ ರಾಜು ಬಲಗೈಬಂಟ ಪೋಲೀಸ್ ಕೈಗೆ ಸಿಕ್ಕಿಬಿದ್ದ, ರಾಜುವಿನ ಕಷ್ಟಕಾಲ ಪ್ರಾರಂಭವಾಯಿತು. ಮನ್ಯಂ ಪ್ರದೇಶದ ಅಂದಿನ ಡಿ.ಸಿ.ಯು ಅಮಾನುಷ್ಯ, ಮತ್ತು ದೌರ್ಜನ್ಯಕ್ಕೆ ಜಗದ್ವಿÃಖ್ಯಾತನಾಗಿದ್ದ. ಅವನು ಮಲಬಾರ್ ಮತ್ತು ಅಸಾಂ ರೈಫಲ್ಸ್ ಪೊಲೀಸ್ ಪಡೆಯನ್ನು ನಿಯುಕ್ತಿ ಮಾಡಿದ. ಭಾರಿ ಫಿರಂಗಿ, ಕೋವಿಗಳೊಂದಿಗೆ ಬಂದಿಳಿದ ಪೊಲೀಸರು ಸೀತಾರಾಮರಾಜು ಮತ್ತು ಕೋಯ ಜನಾಂಗದ ಮೇಲೆ ಯುದ್ಧ ಹೂಡಿಯೇ ಬಿಟ್ಟರು. ಸೀತಾರಾಮರಾಜು ಧೈರ್ಯದಿಂದ ಕುದುರೆಯೇರಿ ವೀರಾವೇಶದಿಂದ (ಮಹಾಭಾರತದ ಯುದ್ಧದಲ್ಲಿ ಅಭಿಮನ್ಯುವಿನ ಹೋರಾಟವನ್ನು ನೆನೆಪಿಸುವಂತೆ) ತನ್ನ ಸೈನ್ಯಕ್ಕೆ ಹುರುಪು ತುಂಬುತ್ತಾ ಹೋರಾಡುತ್ತಿದ್ದರೆ ಬ್ರಿಟೀಷ್ ಪಡೆಗಳು ಫಿರಂಗಿಯಿಂದ ಬೆಂಕಿಯುಗುಳುತ್ತಾ ಮುನ್ನುಗ್ಗುತ್ತಿದ್ದವು. ಸೀತಾರಾಮರಾಜು ಪಡೆಗಳು ತನ್ನ ಸ್ವಾಮಿ ನಿಷ್ಠೆಯಿಂದ ಹೋರಾಡಿ ಮಾತೃ ಭೂಮಿಯ ಬಿಡುಗಡೆಯ ಮಹಾ ಯಜ್ಙಕುಂಡದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು.

ಮಲಬಾರ್ ಮತ್ತು ಅಸಾಂ ರೈಫಲ್ಸ್ ಪಡೆಯು ಕೊಲೆ, ಲೂಟಿ, ದರೋಡೆ, ಬಲಾತ್ಕಾರದಂತಹ ಹೇಯ ಕೃತ್ಯಗಳನ್ನು ಆರಂಭಿಸಿದರು. ಮನ್ಯಂ ಪ್ರದೇಶಕ್ಕೆ ಯಾವುದೇ ಸಾಮಾನುಗಳು ಸರಬರಾಜು ಆಗದಂತೆ ತಡೆದರು. ಕೋಯ ಜನಾಂಗ ಹಸಿವಿನಿಂದ ತತ್ತರಿಸಿ ಸಾಯಲಾರಂಭಿಸಿದರು. ರಾತ್ರಿಸಮಯ ದೀಪ ಕಾಣುವ ಮನೆಗಳನ್ನು ಸುಟ್ಟು ಹಾಕಿದರು. ಮಹಿಳೆಯರು, ಮಕ್ಕಳು, ವೃದ್ಧರು ಓಡಲಾರದೆ ಬೆಂಕಿಯಲ್ಲಿ ಸುಟ್ಟು ಕರಕಲಾದರು. ಇದರಿಂದ ಸೀತಾರಾಮರಾಜುವಿನ ದುಖ: ನೂರ್ಮಡಿಯಾಯಿತು. ತನ್ನನ್ನು ನಂಬಿ ಪೂಜಿಸುತ್ತಿದ್ದ, ಕೋಯರ ದುರ್ಗತಿಯಿಂದ ನೊಂದು ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೆಕೆಂದು ತೀರ್ಮಾನಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಂಗ್ಲ ಅಧಿಕಾರಿಯೊಬ್ಬ ಸಂಧಿಗೆ ಬರುವುದಾದರೆ ತಾವೂ ಸಿದ್ಧವೆಂದು ಸಂದೇಶ ಮುಟ್ಟಿಸಿದ. ಇದನ್ನು ನಂಬಿದ ಅಲ್ಲೂರಿವ ಸೀತಾರಾಮರಾಜು ಸಂದ್ಧಿಗೆ ತಾವೂ ಸಿದ್ದನಾಗಿ 1924 ಮೇ 6 ರಂದು ನಿರಾಯುಧನಾಗಿ ಮನ್ಯಂ ಪ್ರದೇಶಕ್ಕೆ ನಮಸ್ಕರಿಸಿ, ಮಂಪಾ ಗ್ರಾಮಕ್ಕೆ ಬರುವ ದಾರಿಯಲ್ಲಿ ಮೇಜರ್ ಗುಡಾಲ್ ಎಂಬ ಆಂಗ್ಲ ಅಧಿಕಾರಿ ತನ್ನ ಸೈನಿಕರೊಂದಿಗೆ ಸಿದ್ಧನಾದ. ಕಾಷಾಯಧಾರಿಯಾಗಿ ಬಂದಿದ್ದ ಸೀತಾರಾಮರಾಜುನÀನ್ನು ಆತ ಕೋಳ ತೊಡಿಸಿ ಹುಣಸೆ ಮರಕ್ಕೆ ಕಟ್ಟಹಾಕಿದ. ಮಲಬಾರಿ ಪೋಲೀಸ್ ಅಧಿಕಾರಿಯಾಗಿದ್ದ ಕುಜ್ಞುಮೇನನ್‌ಗೆ ಪಿಸ್ತೂಲ್ ಬಾರ್ ಮಾಡುವಂತೆ ಆದೇಶಿಸಿದ. “ನಾನು ಸಂಧಿಗಾಗಿ ಬಂದಿದ್ದೆÃನೆ ನನ್ನನ್ನು ಕಲೆಕ್ಟರ್ ಮುಂದೆ ಕರೆದೊಯ್ಯಿರಿ ಎಂದು ಕೇಳಿಕೊಂಡರೂ, ಕಿವುಡನಂತೆ ವರ್ತಿಸುತ್ತಿರುವುದನ್ನು ನೋಡಿ, ಅಲ್ಲೂರಿ ಸೀತಾರಾಮರಾಜು ಹಿಗೆಂದು ಉದ್ಗರಿಸಿದನು “ನನ್ನ ತಾಯಿ ಭಾರತ ಮಾತೆ ಬಂಜೆಯಲ್ಲ, ಆಕೆಯ ಗರ್ಭದಿಂದ ನನ್ನಂತಹ ಸಾವಿರಾರು ರಾಜುಗಳು ಹುಟ್ಟುತ್ತಾರೆ, ರಕ್ತಕ್ಕೆ ಪ್ರತಿಯಾಗಿ ರಕ್ತ, ಜೀವಕ್ಕೆÉ ಪ್ರತಿಯಾಗಿ ಜೀವ ತೆಗೆಯುತ್ತಾರೆ! ನೀವಾಗ ಗಂಟುಮೂಟೆ ಕಟ್ಟಿಕೊಂಡು ಪೆಚ್ಚುಮೋರೆ ಹಾಕಿಕೊಂಡು ಹೊರಡುತ್ತಿÃರಿ (1947 ಆಗಷ್ಟ್15ರಂದು ಮೌಂಟ್ ಬ್ಯಾಟನ್ ಹಾಗೆಯೇ ಹೋಗಿದ್ದಾನೆ) ಎನ್ನುವಷ್ಟರಲ್ಲಿ ಕುಜ್ಞುಮೆನನ್ ಪಿಸ್ತೂಲಿನಿಂದ ಬಾರ್ ಮಾಡಿಯೇ ಬಿಟ್ಟ. “ವಂದೇ ಮಾತರಂ” ಎನ್ನುತ್ತಾ ಅಲ್ಲೂರಿ ಸೀತಾರಾಮರಾಜು ಕುಸಿದುಬಿಟ್ಟ. ಇಂತಹ ಸಾವಿರಾರು ದೇಶಪ್ರೆÃಮಿ ಬಲಿದಾನಿಗಳ ಫಲವಾಗಿ ಇಂದು ನಾವುಗಳು ಸ್ವತಂತ್ರರಾಗಿದ್ದೆÃವೆ ಇಂತಹ ಹಿರಿಯರ ಜೀವನ ಕಥೆಗಳನ್ನು ಹೇಳಿಕೊಡುವುದರ ಮೂಲಕ ಅವರನ್ನು ಅಮರರಾಗಿಸೋಣ.

. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments