• Search Coorg Media

Kanchi Kamakshi Balaka Mandali Temple Dasara 2018 ಕಂಚಿ ಕಾಮಾಕ್ಷಿ ಬಾಲಕ ಮಂಡಳಿ ದಸರಾ ಸಮಿತಿ

ಶ್ರೀ ಕಂಚಿ ಕಾಮಾಕ್ಷಿ ದೇವಾಲಯ

ಮಡಿಕೇರಿ, ಕೊಡಗು

ಪ್ರಾಸ್ತಾವಿಕ

ಐತಿಹಾಸಿಕ ಮಡಿಕೇರಿ ದಸರಾದ 4 ಶಕ್ತಿ ದೇವತೆಗಳಲ್ಲಿ ಕೊನೆಯವಳೆನಿಸಿಕೊಂಡಿರುವ ಜನತೆಗೆ ಐಶ್ವರ್ಯ- ಸುಖ-ಶಾಂತಿ ನೀಡಲೆಂದೇ ರಾಜರ ಕಾಲದಲ್ಲಿ ಸ್ಥಾಪನೆಗೊಂಡ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ  ಶ್ರೀ ಕಂಚಿ ಕಾಮಾಕ್ಷಿ ಬಾಲಕ ಮಂಡಳಿಯು ಕಳೆದ 57 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಇದೀಗ 58ನೇ ದಸರಾ ಉತ್ಸವದ ಸಂಭ್ರಮದಲ್ಲಿದೆ

ಹಿನ್ನಲೆ – ಇತಿಹಾಸ

ಈ ದೇವಾಲಯವು ಮಡಿಕೇರಿಯ ಗೌಳಿ ಬೀದಿಯಲ್ಲಿದ್ದು, ಸೌಮ್ಯ ಸ್ವರೂಪಿಣಿಯಾದ ಕಂಚಿಕಾಮಾಕ್ಷಿದೇವಿಯೂ, ಉಗ್ರ ಸ್ವರೂಪಿಣಿಯಾದ ಮುತ್ತು ಮಾರಿಯಮ್ಮ ದೇವಿಯನ್ನು ಈ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಗರ್ಭಗುಡಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಶಕ್ತಿ ದೇವಿಗಳಲ್ಲಿ ಒಂದಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಿಯು ಪ್ರಜೆಗಳ ಕಷ್ಟ-ಕಾರ್ಪಣ್ಯಗಳ ನಿವಾರಕಿಯೆನಿಸಿಕೊಂಡಿದ್ದಾಳೆ. ಕೈಯಲ್ಲಿ ಗಿಣಿಯನ್ನು ಹಿಡಿದುಕೊಂಡಿರುವುದು ಈ ಶಾಂತ ಸ್ವರೂಪಿಣಿಯ ವೈಶಿಷ್ಟತೆ. ಈ ಪುರಾತನ ದೇಗುಲವು ಕಾಲಾಂತರದಿಂದ ಹಲವಾರು ಮಾರ್ಪಾಟುಗಳನ್ನು ಹೊಂದುತ್ತಾ ಬಂದು ಪ್ರಸ್ತುತ ನಗರದ ಬೃಹತ್ ದೇವಾಲಯಗಳಲ್ಲಿ ಒಂದೆನಿಸಿದೆ. ಗರ್ಭಗುಡಿಯಲ್ಲಿ ಪುರಾತನ ಮೂಲ ವಿಗ್ರಹವಿದೆ. ನವೀಕರಣಗೊಂಡಿರುವ ಬೃಹತ್ ದೇಗುಲಕ್ಕೆ ವಿಶಿಷ್ಟವಾದ ರಾಜಗೋಪುರ ನಿರ್ಮಾಣವಾಗಿದೆ. ಈ ರಾಜಗೋಪುರ ಹೊಯ್ಸಳ ಶೈಲಿಯಲ್ಲಿದೆ. ಈ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಠಮಿ, ಅಯ್ಯಪ್ಪ ಸ್ವಾಮಿ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುವದರ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಮಾರಿಯಮ್ಮ ಉತ್ಸವ ಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ವ್ಯತ್ಯಾಸವೆಂದರೆ ಮಾರಿಯಮ್ಮ ಕರಗವನ್ನು ಹೂವಿನ ಬದಲು ಬೇವಿನ ಎಲೆಯಿಂದ ಅಲಂಕರಿಸಲಾಗುತ್ತದೆ. ಈ ದೇವಾಲಯದ ಪೂಜೆಯನ್ನು ಗೌಳಿ (ಯಾದವ) ಜನಾಂಗದವರು ನೆರವೇರಿಸುತ್ತಾರೆ.

ಮಂಟಪದ ವಿವರಗಳು – 2021

58 ನೇ ವರ್ಷದ ಆಚರಣೆ

ಕಥೆ: “ಆಂಜನೇಯ ಸ್ವಾಮಿಯ ಕಥಾ ಸಾರಾಂಶ ಕಲಾಕೃತಿ”
ಪ್ರದರ್ಶನ ಸಮಯ ಮತ್ತು ಸ್ಥಳ: 

ಅಧ್ಯಕ್ಷರು
ಸ್ಟುಡಿಯೋ ಸೆಟ್ಟಿಂಗ್ಸ್‌:
ಆರ್ಚ್‌ಲೈಟಿಂಗ್ಸ್‌ ಬೋರ್ಡ್‌:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಚಲನವಲನ: 
ಪ್ಲಾರ್ಟ್‌ಫಾರಂ ಸೆಟ್ಟಿಂಗ್ಸ್‌: 
ಕಲಾಕೃತಿ ನಿರ್ಮಾಣ: 
ಒಟ್ಟು ಸದಸ್ಯರು: 250

ಕಂಚಿ ಕಾಮಾಕ್ಷಿ ಬಾಲಕ ಮಂಡಳಿ ದಸರಾ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.

2019

ಮಂಟಪದ ವಿವರಗಳು – 2018

56 ನೇ ವರ್ಷದ ಆಚರಣೆ

ಕಥೆ: “ಉಗ್ರ ನರಸಿಂಹ”
ಪ್ರದರ್ಶನ ಸಮಯ ಮತ್ತು ಸ್ಥಳ: ರಾತ್ರಿ

ಅಧ್ಯಕ್ಷರು: ಜಿ.ಸಿ. ರಮೇಶ್
ಸ್ಟುಡಿಯೋ ಸೆಟ್ಟಿಂಗ್ಸ್‌: ರಾಮೋಜಿರಾವ್‌, ಹೈದರಾಬಾದ್‌ ಮತ್ತು ಏಷಿಯಾನೆಟ್‌, ಕೇರಳ
ಆರ್ಚ್‌ಲೈಟಿಂಗ್ಸ್‌ ಬೋರ್ಡ್‌: ಡೇವಿಡ್‌
ಒಟ್ಟು ಕಲಾಕೃತಿಗಳು: 18
ಒಟ್ಟು ವೆಚ್ಚ: 17 ಲಕ್ಷ
ಚಲನವಲನ: ಶೋ ಮ್ಯಾನ್‌ ಕ್ರಿಯೇಶನ್ಸ್‌
ಪ್ಲಾರ್ಟ್‌ಫಾರಂ ಸೆಟ್ಟಿಂಗ್ಸ್‌: ಸಮಿತಿ ಸದಸ್ಯರು
ಕಲಾಕೃತಿ ನಿರ್ಮಾಣ: ಶೋ ಮ್ಯಾನ್‌ ಕ್ರಿಯೇಶನ್ಸ್‌
ಒಟ್ಟು ಸದಸ್ಯರು: 250

2018

ಮಂಟಪದ ವಿವರಗಳು – 2018

55ನೇ ವರ್ಷದ ಆಚರಣೆ
ಕಥೆ: ಗಣಪತಿಯಿಂದ ಗಜಾಸುರನ ವಧೆ
ಅಧ್ಯಕ್ಷರು: ರಮೇಶ್
ಆರ್ಚ್ ಲೈಟಿಂಗ್ಸ್ ಬೋರ್ಡ್: ಪ್ರಮೋದ್ ಲೈಟಿಂಗ್ಸ್, ಮಡಿಕೇರಿ
ಒಟ್ಟು ಕಲಾಕೃತಿಗಳು: 10
ಒಟ್ಟು ವೆಚ್ಚ: 5 ಲಕ್ಷ
ಕಥಾ ನಿರ್ವಹಣೆ: ಶೋ ಮ್ಯಾನ್ ಕ್ರಿಯೇಶನ್
ಸ್ಟುಡಿಯೋ ಸೆಟ್ಟಿಂಗ್ಸ್: ರಾಗ ಮಡಿಕೇರಿ
ಫ್ಲಾಟ್‍ಫಾರಂ ಸೆಟ್ಟಿಂಗ್: ಸುಜಿ ಮತ್ತು ತಂಡ
ಚಲನವಲನ: ಶೋ ಮ್ಯಾನ್ ಕ್ರಿಯೇಶನ್
ಒಟ್ಟು ಸದಸ್ಯರು: 500

2017

ಮಂಟಪದ ವಿವರಗಳು – 2017

ಅಧ್ಯಕ್ಷರು: ಕನ್ನಂಡ ಸಂಜು ಸೋಮಯ್ಯ
ಕಥೆ: ರಾಮಾಂಜನೇಯರಿಂದ ರಾವಣನ ಸಂಹಾರ
ಆರ್ಚ್ ಲೈಟಿಂಗ್ಸ್ ಬೋರ್ಡ್: ಜಾನ್ ಎಲೆಕ್ಟ್ರೋನಿಕ್ಸ್, ದಿಂಡ್‍ಕಲ್
ಒಟ್ಟು ಕಲಾಕೃತಿಗಳು: 21
ಒಟ್ಟು ವೆಚ್ಚ: 23 ಲಕ್ಷ
ಕಥಾ ನಿರ್ವಹಣೆ: ಶೋ ಮ್ಯಾನ್ ಕ್ರಿಯೇಶನ್ಸ್, ಮಡಿಕೇರಿ
ಸ್ಟುಡಿಯೋ ಸೆಟ್ಟಿಂಗ್ಸ್: ವಿಷ್ಣು, ಏಷ್ಯಾನೆಟ್ ಟಿವಿ, ಕೊಚ್ಚಿನ್
ಫ್ಲಾಟ್‍ಫಾರಂ ಸೆಟ್ಟಿಂಗ್: ಗಿರೀಶ್ ಮತ್ತು ತಂಡ, ಮಡಿಕೇರಿ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಶೋ ಮ್ಯಾನ್ ಕ್ರಿಯೇಶನ್ಸ್, ಮಡಿಕೇರಿ
ಚಲನವಲನ: ಶೋ ಮ್ಯಾನ್ ಕ್ರಿಯೇಶನ್ಸ್, ಮಡಿಕೇರಿ
ಸೌಂಡ್ಸ್: ವಿಷ್ಣು, ಏಷ್ಯಾನೆಟ್ ಟಿವಿ, ಕೊಚ್ಚಿನ್
ಕಲಾಕೃತಿ ನಿರ್ಮಾಣ: ಶೋ ಮ್ಯಾನ್ ಕ್ರಿಯೇಶನ್ಸ್, ಮಡಿಕೇರಿ
ಒಟ್ಟು ಸದಸ್ಯರು: 200

ಸಂದರ್ಶನ

Leave a Reply

Your email address will not be published. Required fields are marked *